Subscribe to Updates
Get the latest creative news from FooBar about art, design and business.
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
- ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ
- ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ
- ಜೂ. 28ರಂದು ಪಲ್ಸ್ ಪೋಲಿಯೋ ಲಸಿಕೆ, ಜಿಲ್ಲೆಯಾದ್ಯಂತ 1,86,831 ಮಕ್ಕಳಿಗೆ ಲಸಿಕೆ ಗುರಿ: ಡಾ.ಚಂದ್ರಶೇಖರ್
- ಬಿಜೆಪಿ ಶಾಸಕರ ವಿರುದ್ಧ ಅಡ್ಡಮತದಾನದ ಅಪಪ್ರಚಾರ: ಎಸ್ ಪಿ ಕಚೇರಿ ಬಳಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
- ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್ ಜಿ ಯೋಜನೆ ಜಾರಿ : ಜಿಪಂ ಸಿಇಒ
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿನ ಹಾಹಾಕಾರ: ಸ್ಥಳಕ್ಕೆ ತಾಲೂಕು ಅಧಿಕಾರಿಗಳ ಭೇಟಿ, ಭರವಸೆ
- ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ.ಪಿ. ಮಂಜುನಾಥ್ ನೇಮಕ
Author: admin
ಬೀದರ್: ನನ್ನ ಮಗನ ಜೊತೆ ನಿಶ್ಚಿತಾರ್ಥವಾದ ಹುಡುಗಿ ಇನ್ನೊಬ್ಬ ಹುಡುಗನ ಜೊತೆ ಚಾಟ್, ವಿಡಿಯೋ ಕಾಲ್ ಮಾಡುತ್ತಿದ್ದಳು. ಇದರಿಂದ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಆ ಹುಡುಗಿಯ ಅಪ್ಪ, ಅಮ್ಮ ಹಾಗೂ ಹಿರಿಯರೆಲ್ಲ ಸೇರಿಯೇ ನಿಶ್ಚಿತಾರ್ಥವನ್ನು ಮುರಿಯುವ ನಿರ್ಧಾರ ಮಾಡಲಾಗಿದೆ. ಆದರೆ ಇದೇ ವಿಷಯವನ್ನಿಟ್ಟುಕೊಂಡು ಮಾಜಿ ಸಂಸದ ಭಗವಂತ್ ಖುಬಾ ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಔರಾದ್ ನ ಶಾಸಕ ಪ್ರಭು ಚೌವ್ಹಾಣ್ ಅವರು ಆರೋಪಿಸಿದರು. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಒಂದು ತಂಡ ಇದೆ. ಆ ತಂಡದ ನಾಯಕ ಮಾಜಿ ಸಂಸದ ಭಗವಂತ್ ಖುಬಾ ಅವರು. ಈ ತಂಡ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ನಿರ್ಧಾರ ಮಾಡಿದೆ. ಆದ್ದರಿಂದ ನನ್ನ ವೈಯಕ್ತಿಕ ವಿಷಯದಲ್ಲಿಯೂ ಕೂಡ ಭಾಗವಹಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು. ನನ್ನ ಮಗ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿಯು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಇದರ ಹಿಂದೆ ನನ್ನ…
ಸರಗೂರು: ತಾಲ್ಲೂಕು ಚಿಕ್ಕದೇವಮ್ಮನ ಬೆಟ್ಟದ ಸುತ್ತಮುತ್ತಲು ಕಳೆದ ಅನೇಕ ವರ್ಷಗಳಿಂದ ಕಾಡಾನೆಗಳ ಹಾವಳಿ ಹಾಗೂ ಕಾಡು ಪ್ರಾಣಿಗಳಿಂದ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿದ್ದರೂ, ಅರಣ್ಯಾಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಪುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸುತ್ತಮುತ್ತಲ ಗ್ರಾಮಗಳಾದ ಲಂಕೆ, ಮನುಗನಹಳ್ಳಿ, ಹುಣಸಹಳ್ಳಿ, ಹೂವಿನಕೊಳ, ಅಲ್ಲಯ್ಯನಪುರ, ಬಸಾಪುರ, ಚಂದ್ರವಾಡಿ, ನಲ್ಲಿತಾಳಪುರ, ರಾಜೂರು, ಕಟ್ಟೆಹುಣಸೂರು, ನಂಜೀಪುರ, ಕುಂದೂರು, ಕಲ್ಲಂಬಾಳು ಹಾಗೂ ದಡದಹಳ್ಳಿ ಗ್ರಾಮದ ರೈತರು ಬೆಳೆದಂತಹ ಬೆಳೆ ಕಾಡುಪ್ರಾಣಿಗಳಿಂದಾಗಿ ನಾಶವಾಗುತ್ತಿದೆ. ಇತ್ತ ಅರಣ್ಯಾಧಿಕಾರಿಗಳು ಬೆಳೆನಾಶಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಬೆಳೆ ನಷ್ಟ ನೀಡದೆ ಪರಿಹಾರವೂ ವರ್ಷಾನುಗಟ್ಟಲೆ ಕಾಯಿಸಿದ ನಂತರ ಬೆಳೆ ನಷ್ಟದ ಶೇ. 5% ನಷ್ಟನ್ನು ಮಾತ್ರ ಪರಿ ರೈತರಿಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅರಣ್ಯಾಧಿಕಾರಿಗಳ ಈ ಬೇಜವಬ್ದಾರಿತನ ಹಾಗೂ ನಿರ್ಲಕ್ಷವನ್ನು ಖಂಡಿಸಿ ಎಲ್ಲಾ ಗ್ರಾಮಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಗ್ರಾಪಂ ಸದಸ್ಯ ಪುಟ್ಟು ಎಚ್ಚರಿಕೆ ನೀಡಿದರು. ವರದಿ: ಹಾದನೂರು ಚಂದ್ರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಸರಗೂರು: ಪಟ್ಟಣ 11 ವಾರ್ಡಿನ ಬಿಡಗಲು ಗ್ರಾಮದ ಪಡವಲು ವೀರಕ್ತ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದಿಂದ ಅಭಾವೀಲಿಂ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ರವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು, ಪೋಟೋಗೆ ಪುಷ್ಪಾರ್ಚನೆ ಶ್ರದ್ಧಾಂಜಲಿ ಗೌರವ ಸಲ್ಲಿಸಲಾಯಿತು. ನಂತರ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಎನ್.ತಿಪ್ಪಣ್ಣನವರು ರಾಷ್ಟ್ರೀಯ ಮಹಾಸಭಾ ಉಪಾಧ್ಯಕ್ಷರಾಗಿ ಮಹಾಸಭಾಕ್ಕೆ ಕೆಲಸ ಕಾರ್ಯಗಳು ಮಾಡಿಕೊಂಡು ಬಂದರು. ಅವರು ಇಲ್ಲ ಎಂದು ತಾಲ್ಲೂಕು ಘಟಕದಿಂದ ಸಂತಾಪ ಸೂಚಿಸಿದ್ದಾರೆ. ಶ್ರದ್ಧಾಂಜಲಿ ಸಭೆಯನ್ನು ಸಮಾಜದ ಕಚೇರಿಯಲ್ಲಿ ಮಾಡಲಾಗಿತ್ತು. ಇವರು ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಅಧ್ಯಕ್ಷರಾಗಿ ಸೇವಿಸಲ್ಲಿಸಿದ್ದು, ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ್ದಾರೆ ಎಂದರು ಪಡವಲು ಮಠ ಮಹಾದೇವಸ್ವಾಮಿಗಳು, ಹಂಚಿಪುರ ಕಿರಿಯ ತೋಂಟದಾರ್ಯ ಶ್ರೀಗಳು, ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಹಾಸಭಾದ ಅಧ್ಯಕ್ಷ ವೀರಭದ್ರಪ್ಪ, ಕೋಶಾಧ್ಯಕ್ಷ ಸಿ.ಕೆ.ಗಿರೀಶ್, ಟೌನ್ ಅಧ್ಯಕ್ಷ ಮೋಹನ್ ಕುಮಾರ್, ನಿರ್ದೇಶಕರು…
ಬೆಂಗಳೂರು: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ 4 ಸದಸ್ಯರ ಐಪಿಎಸ್ ಅಧಿಕಾರಿಗಳ ಎಸ್‌ಐಟಿಯನ್ನು ರಚಿಸಿದೆ. ಎಸ್ ಐಟಿಯ ನೇತೃತ್ವವನ್ನು ಪ್ರಣವ್ ಮೊಹಂತಿ ವಹಿಸಿಕೊಂಡಿದ್ದಾರೆ. SIT ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಲಾಗುತ್ತದೆ ಎಂದು ಆದೇಶದಲ್ಲಿ ಸೇರಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ (BNS) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ ಅಪರಾಧ ಮತ್ತು “ಕರ್ನಾಟಕದಾದ್ಯಂತ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗಲಿರುವ ಎಲ್ಲಾ ಇತರ ಕ್ರಿಮಿನಲ್ ಪ್ರಕರಣಗಳನ್ನು” ತನಿಖೆ ಮಾಡಲು “ವಿಶೇಷ ತನಿಖಾ ತಂಡವನ್ನು ರಚಿಸುವುದು ಸೂಕ್ತ” ಎಂದು ಶನಿವಾರ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ತಿಪಟೂರು: ತಾಲ್ಲೂಕಿನ ರಂಗಾಪುರ ವಲಯದ ಬನ್ನೀಹಳ್ಳಿ ಹಾಲಿನ ಡೈರಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.2 ಲಕ್ಷ ಮೊತ್ತದ ಡಿ ಡಿ ಮಂಜೂರಾಗಿದ್ದು ತಾಲ್ಲೂಕಿನ ಯೋಜನಾಧಿಕಾರಿ ಉದಯ್ ಕೆ. ಶುಭಹಾರೈಸಿ ಗ್ರಾಮಸ್ಥರಿಗೆ ಡಿಡಿ ವಿತರಿಸಿದರು. ಈ ಸಂಧರ್ಭದಲ್ಲಿ ಬನ್ನಿಹಳ್ಳಿ ಹಾಲು ಒಕ್ಕೂಟ ಸಹಕಾರ ಸಂಘದ ಅಧ್ಯಕ್ಷರಾದ ಪರಮೇಶ್ವರಯ್ಯ, ನಿರ್ದೇಶಕರಾದ ಬಿ.ಎಮ್.ಶಶಿಧರ್, ಮಂಜುನಾಥಸ್ವಾಮಿ, ಕುಮಾರಸ್ವಾಮಿ, ಬಿ.ಎಸ್.ಉಮೇಶ್, ರವಿಕುಮಾರ್, ನಾಗರಾಜು ಮುಖ್ಯಕಾರ್ಯನಿರ್ವಾಹಕರಾದ ಬಿ.ಎಮ್.ಪ್ರಕಾಶ್, ಹಾಲು ಪರೀಕ್ಷಕರಾದ ಬಿ.ಎಸ್.ಕಲ್ಯಾಣ್ ಕುಮಾರ್, ವಲಯ ಮೇಲ್ವಿಚಾರಕ ದಿನೇಶ್, ಸೇವಾಪ್ರತಿನಿಧಿ ಪ್ರೀತಿ ಸಂಘದ ಪಾಲುದಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಚಿತ್ರದುರ್ಗ: ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ನೊಂದು ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜೆ.ಬಿ.ಹಳ್ಳಿಯಲ್ಲಿ ನಡೆದಿದೆ. ತಿರುಮಲ ರಾಂಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಿರುಮಲ (31) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ತಿರುಮಲ ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದು, ವಯಸ್ಸಾಗ್ತಿದೆ ಮದುವೆ ಮಾಡಿಕೊಳ್ಳಬೇಕು ಎನ್ನುವ ಚಿಂತೆಗೆ ಬಿದ್ದಿದ್ದರು ಎನ್ನಲಾಗಿದೆ. ಅಲ್ಲದೇ ಇತ್ತೀಚಿಗೆ ಮೂರು ಕಡೆ ಹೆಣ್ಣು ನೋಡಲು ತೆರಳಿದ್ದು, ಹೆಣ್ಣಿನ ಕಡೆಯವರಿಂದ ತಿರಸ್ಕಾರಗೊಂಡ ಪರಿಣಾಮ ಮನಸ್ಸಿಗೆ ಹೆಚ್ಚು ಘಾಸಿಯಾಗಿತ್ತು ಎನ್ನಲಾಗಿದೆ. ಮದುವೆ ಬಗ್ಗೆಯೇ ತೀವ್ರ ಯೋಚಿಸುತ್ತಿದ್ದ ತಿರುಮಲ ಮನನೊಂದು, ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೃತನ ತಂದೆ ಸೋಮರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ನಟ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ʻದಿ ಡೆವಿಲ್ʼ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಥಾಯ್ಲೆಂಡ್ ನಲ್ಲಿ ಶೂಟಿಂಗ್ ನಲ್ಲಿ ಬಿಝಿ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಇದರ ವಿಡಿಯೋ ತುಣುಕನ್ನು ನಟ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅತೀ ಶೀಘ್ರವೇ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವ ಸುದ್ದಿಯನ್ನೂ ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಖಾತೆಯಲ್ಲಿ ಮೋಷನ್ ಪೋಸ್ಟರ್ ನ 1:05 ನಿಮಿಷದ ವಿಡಿಯೋ ಹಂಚಿಕೊಂಡಿರುವ ದರ್ಶನ್, ನಲ್ಮೆಯ ಸೆಲಬ್ರಿಟಿಗಳಿಗೆ… ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಮೋಷನ್ ಪೋಸ್ಟರ್‌ನಲ್ಲಿ ದರ್ಶನ್ ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಬೆಂಗಳೂರು: ಬಿಹಾರ ಎಲೆಕ್ಷನ್ ಗಾಗಿ ಹಣ ಸಂಗ್ರಹಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಬಂದಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಸರ್ಕಾರ ಹೂವು, ತರಕಾರಿ, ಟೀ ಅಂಗಡಿ, ಬೇಕರಿಗಳಿಗೆಲ್ಲಾ ನೋಟಿಸ್ ಕೊಟ್ಟು ಹಗಲು ದರೋಡೆ ಮಾಡ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದ್ದಾರೆ. ರಾಜ್ಯದ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಕೊಟ್ಟಿರೋ ಜಿಎಸ್ ಟಿ ನೊಟೀಸ್ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ತೆರಿಗೆ ಇಲಾಖೆ ಮೂಲಕ ನೋಟಿಸ್ ಕೊಡ್ತಿದ್ದಾರೆ ಕಿಡಿಕಾರಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಈ ಬಗ್ಗೆ ಚರ್ಚೆ ಆಗ್ಬೇಕು. ಹಣಕಾಸು ಸಚಿವರು ಉತ್ತರ ಕೊಡ್ತಾರೆ ಅಂತ ಎಂದಿದ್ದಾರೆ. ಆದರೆ, ನೋಟಿಸ್ ಕೊಡೋದೇ ಕೇಂದ್ರ ಸರ್ಕಾರ ಅಂತ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಈ ಮಧ್ಯೆ, ವ್ಯಾಪಾರಿಗಳಿಗೆ ಜಿಎಸ್ ಟಿ ಜಂಜಾಟ ಮುಂದುವರಿದಿದೆ. ಯುಪಿಐ ಬೇಡ, ಕ್ಯಾಶ್ ಕೊಡಿ ಅನ್ನೋ ವ್ಯಾಪಾರಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಸರಗೂರು: ತಾಲ್ಲೂಕು ಚಿಕ್ಕದೇವಮ್ಮನ ಬೆಟ್ಟದ ಸುತ್ತಮುತ್ತಲು ಕಳೆದ ಅನೇಕ ವರ್ಷಗಳಿಂದ ಕಾಡಾನೆಗಳ ಹಾವಳಿ ಹಾಗೂ ಕಾಡು ಪ್ರಾಣಿಗಳಿಂದ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿದ್ದರೂ ಸಹ ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷದಿಂದ ಪ್ರತಿಯೊಬ್ಬ ರೈತರೂ ಸಹ ಲಕ್ಷಾಂತರ ರುಪಾಯಿ ಸಾಲಗಾರನಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲ ಗ್ರಾಮಗಳಾದ ಲಂಕೆ, ಮನುಗನಹಳ್ಳಿ, ಹುಣಸಹಳ್ಳಿ, ಹೂವಿನಕೊಳ, ಅಲ್ಲಯ್ಯನಪುರ, ಬಸಾಪುರ, ಚಂದ್ರವಾಡಿ, ನಲ್ಲಿತಾಳಪುರ, ರಾಜೂರು, ಕಟ್ಟೆಹುಣಸೂರು, ನಂಜೀಪುರ, ಕುಂದೂರು, ಕಲ್ಲಂಬಾಳು ಹಾಗೂ ದಡದಹಳ್ಳಿ ಗ್ರಾಮದ ರೈತರು ಬೆಳೆದಂತಹ ಬೆಳೆ ಕಾಡುಪ್ರಾಣಿಗಳಿಂದ, ಕೈಗೆ ಬಂದತಹ ತುತ್ತು ಬಾಯಿಗೆ ಇಲ್ಲದಂತಾಗಿದೆ. ಇತ್ತ ಅರಣ್ಯಾಧಿಕಾರಿಗಳು ಬೆಳೆನಾಶಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಬೆಳೆ ನಷ್ಟ ನೀಡದೆ ಪರಿಹಾರವಾಗಿ ವರ್ಷಾನುಗಟ್ಟಲೆ ಕಾಯಿಸಿದ ನಂತರ ಬೆಳೆ ನಷ್ಟದ ಶೇ. 5% ನಷ್ಟನ್ನು ಮಾತ್ರ ಪರಿಹಾರದ ರೂಪವಾಗಿ ರೈತರಿಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅರಣ್ಯಾಧಿಕಾರಿಗಳ ಈ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷವನ್ನು ಖಂಡಿಸಿ ಎಲ್ಲಾ…
ಸರಗೂರು: ತಾಲ್ಲೂಕಿನ ಪ. ಜಾತಿ ಮತ್ತು ಪ. ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷರಾಗಿ ಕ್ಲಾರ್ಕ್ ಕಂ ಡಿಇಒರಾದ ಎಂ.ಬಿ.ಮಹದೇವ ಮತ್ತು ಬಿ ಮಟಕರೆ ಗ್ರಾಪಂ ಪಿಡಿಒ ಉಪಾಧ್ಯಕ್ಷೆಯಾಗಿ ಭಾಗ್ಯಮ್ಮ ಆಯ್ಕೆಯಾದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರದಂದು ಪ.ಜಾತಿ ಮತ್ತು ಪ.ಪಂಗಡ ಅಧಿಕಾರಿಗಳು ಹಾಗೂ ನೌಕರರ ಸಭೆ ನಡೆಸಿ ನಂತರ ಜಿಲ್ಲಾಧ್ಯಕ್ಷ ಪ್ರಕಾಶ್ ಹಾಗೂ ರಾಜ್ಯ ಹಾಗೂ ಜಿಲ್ಲಾ ಖಜಾಂಚಿ ಮಹದೇವ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅನಿಲ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರಕಾಶ್, ನಮ್ಮ ಪ.ಜಾತಿ ಮತ್ತು ಪ.ಪಂಗಡ ಸರ್ಕಾರಿ ನೌಕರರು ಶಿಸ್ತು, ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ನಡೆದುಕೊಂಡು, ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರಿಗೆ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು. ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಸರ್ಕಾರಿ ನೌಕರರದ್ದು. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ನೂತನ…