Subscribe to Updates
Get the latest creative news from FooBar about art, design and business.
- ಕೊರಟಗೆರೆ: ಜೂ.28 ರಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ
- ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್ ಐ ತೀರ್ಥೇಶ್
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
- ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ
- ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ
- ಜೂ. 28ರಂದು ಪಲ್ಸ್ ಪೋಲಿಯೋ ಲಸಿಕೆ, ಜಿಲ್ಲೆಯಾದ್ಯಂತ 1,86,831 ಮಕ್ಕಳಿಗೆ ಲಸಿಕೆ ಗುರಿ: ಡಾ.ಚಂದ್ರಶೇಖರ್
- ಬಿಜೆಪಿ ಶಾಸಕರ ವಿರುದ್ಧ ಅಡ್ಡಮತದಾನದ ಅಪಪ್ರಚಾರ: ಎಸ್ ಪಿ ಕಚೇರಿ ಬಳಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
- ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್ ಜಿ ಯೋಜನೆ ಜಾರಿ : ಜಿಪಂ ಸಿಇಒ
Author: admin
ಸರಗೂರು: ತಾಲೂಕಿನ ಅದಿ ದೇವತೆ ಚಿಕ್ಕದೇವಮ್ಮನ ಬೆಟ್ಟದಲ್ಲಿ ಶುಕ್ರವಾರ ನಾಲ್ಕನೇ ಆಷಾಡ ಮಾಸದ ವಿಶೇಷ ಪೂಜೆ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ಬೆಟ್ಟದ ಚಿಕ್ಕದೇವಮ್ಮ ದೇವಿಯನ್ನು ಮುತ್ತಿನ ಅಲಂಕಾರಗೊಳಿಸಿ, ನಿಂಬೆಹಣ್ಣು, ವಿವಿಧ ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ದೇವಿಗೆ ಮಹಾನ್ಯಾಸ ಪೂರ್ವಕ, ಶ್ರೀಸೂಕ್ತ ಪಾರಾಯಣ, ಸಹಸ್ರನಾಮರ್ಚನೆ, ಪಂಚಾಮೃತಾಭಿಷೇಕ, ಹೋಮ–ಹವನ ಸೇರಿದಂತೆ ನಾನಾ ಪೂಜಾ ಕಾರ್ಯಕ್ರಮ ನೆರವೇರಿಸಿ ನಂತರ ದೇವಾಲಯದ ಸುತ್ತ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಆಷಾಡದ ನಾಲ್ಕನೇ ಕೊನೆಯ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ನವ ವಧು–ವರರು ಬೆಟ್ಟಕ್ಕೆ ಆಗಮಿಸಿ, ಮುಂದಿನ ಬದುಕು ಬಂಗಾರವಾಗಲಿ ಎಂದು ಹರಸಿ, ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆಯೇ ದೇವರ ಉತ್ಸವಮೂರ್ತಿಯನ್ನು ಪ್ರಕಾರೋತ್ಸವ ಮಾಡಲಾಯಿತು. ಕುಂಕುಮಾರ್ಚನೆ ನೆರವೇರಿಸಲಾಯಿತು. ನಂತರ ರಾಜೋಪಚಾರ ಪೂಜೆ ನಡೆಯಿತು. ಭಕ್ತರಿಗೆ ಸಿಹಿ ವಿತರಣೆ ಮಾಡಲಾಯಿತು. ಇದಲ್ಲದೆ ದೇವಿಯ ಎದುರುಗಡೆ ಇರುವ ಕಾಲಭೈರವೇಶ್ವರಸ್ವಾಮಿಗೆ…
ಸರಗೂರು: ಭೂಮಿ ಪ್ರತಿಯೊಂದು ವಸ್ತುವಿನ ಉತ್ಪಾದನಾ ಸಾಧನವಾಗಿದೆ. ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ತಲತಲಾಂತರಗಳಿಂದ ರೈತರು ಹಾಗೂ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವೈದಿಕ ಧರ್ಮ ವಂಚಿಸುತ್ತಲೇ ಬಂದಿದೆ ಎಂದು ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗದಲ್ಲಿ ಶುಕ್ರವಾರದಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆ ವತಿಯಿಂದ ಕಂದಾಯ ಇಲಾಖೆ ಸಾಗುವಾಳಿ ಪತ್ರ ವಿಲೇವಾರಿ ಮಾಡಿರುವ ಬಗ್ಗೆ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರ ಮತ್ತು ತಾಲೂಕು ಆಡಳಿತ ವಿರುದ್ಧ ವಿವಿಧ ಘೋಷಣೆ ಕೂಗಿ ಅವರು ಮಾತನಾಡಿದರು. ಸ್ವಾತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಂದೋಲನದಿಂದಾಗಿ ದಲಿತ ಮತ್ತು ಧಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗ ಪ್ರಜ್ಞೆಯಿಂದ ಬ್ರಾಹ್ಮಣಶಾಹಿ ಮತ್ತು ಬಂಡವಾಳ ಶಾಹಿಗೆ ನುಂಗಲಾರದ ತುತ್ತಾಗಿದೆ. ಕಳೆದ ನಾಲ್ಕು ದಶಕಗಳಿಂದ ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತ…
ಸರಗೂರು: ದೇಶದಲ್ಲಿ ಸಾಮಾಜಿಕ ವ್ಯವಸ್ಥೆ ಹದೆಗೆಟ್ಟಿದೆ. ವಿದೇಶಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಬೇಕಾದರೆ ಶಾಲೆಯಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ಇರುವ ಕುರಿತು ವಿಚಾರಿಸಿ ಬಳಿಕ ಮಕ್ಕಳನ್ನು ಶಾಲೆ ದಾಖಲಿಸುತ್ತಾರೆ. ಇದು ವಿದೇಶಿಗರು ಮಕ್ಕಳ ರಕ್ಷಣೆ ಬಗ್ಗೆ ಹೊಂದಿರುವ ವಿಶೇಷ ಒಲವು ತೋರಿಸುತ್ತದೆ. ಆದರೆ ನಮ್ಮಲ್ಲಿ ಅಂತಹ ಕಾಳಜಿ ಇಲ್ಲ’ ಎಂದು ಸರಗೂರು ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಆರ್.ಕಿರಣ್ ಹೇಳಿದರು. ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಗುರುವಾರದಂದು ವಿವೇಕಾನಂದ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೋಲೀಸ್ ಇಲಾಖೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶೌಚಾಲಯ, ತರಗತಿಗಳು ನಡೆಯದ ಕೊಠಡಿಗಳು, ಆಟದ ಮೈದಾನದಲ್ಲಿ ಮಕ್ಕಳ ಮೇಲೆ ಅತ್ಯಾಚಾರ ನಡೆಯುವ ಸಂಭವ ಹೆಚ್ಚು ಇರುತ್ತದೆ. ಹೀಗಾಗಿ ಶಿಕ್ಷಕರು ಅಂತಹ ಸ್ಥಳಗಳಿಗೆ ಆಗಾಗ ಭೇಟಿ ನೀಡಿ ಗಮನಿಸುತ್ತಿರಬೇಕು. ಒಂದೊಮ್ಮೆ ಲೈಂಗಿಕ ದೌರ್ಜನ್ಯ…
ಔರಾದ: ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರುವ ವಿನೂತನ ಪರಿಕಲ್ಪನೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಬುಧವಾರ ಸಂತಪುರನಲ್ಲಿ ಚಾಲನೆ ನೀಡಲಾಯಿತು. ಸಂತಪುರ ಪೊಲೀಸ್ ಠಾಣೆ ಪಿ ಎಸ್ ಐ ನಂದಕುಮಾರ್, ಮೂಳೆ ಮತ್ತು ಸಿಬ್ಬಂದಿ ಸಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರು. ನಂತರ ಸೈಬರ್ ಅಪರಾಧ, ಮಾದಕ ವಸ್ತು, ಪೋಕೋ ಕಾಯ್ದೆ, ಮನೆಗಳ್ಳತನ, ಸರಗಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಇದೇ ವೇಳೆ ವಾರ್ಡ್ ಸದ್ಯಸರು, ಗ್ರಾಮಸ್ಥರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತಿಪಟೂರು: ಕರ್ನಾಟಕ ಆರ್ಯವೈಶ್ಯ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ತಿಪಟೂರು ನಗರದ ಕಲ್ಪತರು ಇಂಜಿನಿಯರಿಂಗ್ ಕಾಲೇಜು ಆಡಿಟೋರಿಯಂನಲ್ಲಿ ಜಿಲ್ಲಾ ಸಮಾವೇಶವನ್ನು ಜುಲೈ 20ರ ಬೆಳಗ್ಗೆ 10 ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಲ್. ಆರ್. ಚಂದ್ರಶೇಖರ್ ತಿಳಿಸಿದರು ನಮ್ಮ ಸಮಾಜ ಸುಮಾರು 100 ವರ್ಷಗಳ ಇತಿಹಾಸ ಹೊಂದಿದ್ದು, ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆರ್ಯವೈಶ್ಯ ಸಮಾಜದ ಅಭಿವೃದ್ಧಿ ಸಂಘಟನೆಗಾಗಿ ಹತ್ತಾರು ಯೋಜನೆಗಳನ್ನು ತಂದು ಬಡವರು, ಅಶಕ್ತರು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಇದರಲ್ಲಿ ವೃದ್ಧಾಪ್ಯ ವೇತನ ಸಂಧ್ಯಾ ಶ್ರೀ ಯೋಜನೆ ಅಂಗವಿಕಲರಿಗೆ ಮಾಸಾಸನ ಅಸಹಾಯಕ ವಿದ್ಯಾರ್ಥಿಗಳಿಗೆ ಅಮೃತ ಯೋಜನೆಯನ್ನು ಉದ್ಯೋಗ ಮಿತ್ರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಯೋಜನೆ ಮಾಡಿಕೊಂಡು ಬಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಸಾವಿರ ಜನ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು. ತಿಪಟೂರು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಾಗೇಪಲ್ಲಿ ನಟರಾಜ ಮಾತನಾಡಿ, ನಮ್ಮ ಸಮಾಜದ ಜಿಲ್ಲಾ ಸಮಾವೇಶವನ್ನು ತಿಪಟೂರಿನಲ್ಲಿ…
ತಿಪಟೂರು: ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಮಾಡಿರುವುದು ಸಾರ್ವಜನಿಕರ ಅನುಕೂಲಕ್ಕಾಗಿ, ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು, ಪ್ರಯಾಣಿಕರಿಂದ ಯಾವುದೇ ದೂರು ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಎಂ.ಎನ್.ಕಾಂತರಾಜು ತಿಳಿಸಿದರು. ಶಕ್ತಿ ಯೋಜನೆಯಿಂದ ಮಹಿಳೆಯರು 500 ಕೋಟಿ ಉಚಿತ ಪ್ರಯಾಣ ನಡೆಸಿದ್ದಾರೆ, ಸಿಬ್ಬಂದಿಯಿಂದ ಪ್ರಯಾಣ ಮಾಡುವಾಗ ಕಿರಿಕಿರಿಯಾಗುತ್ತಿರುವ ದೂರುಗಳು ಬಂದಿದೆ. ಇಂಥ ವರ್ತನೆ ನಿಲ್ಲಬೇಕು. ದೂರು ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಕಾಂತರಾಜು ತಿಳಿಸಿದರು. ಇದುವರೆಗೂ ತಾಲೂಕು ಒಟ್ಟು 1.60 ಕೋಟಿ ಜನರು ಶಕ್ತಿ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಈ ವರ್ಷ ಜನವರಿಯಿಂದ ಜೂನ್ ಅಂತ್ಯದವರೆಗೆ 43 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಟಿ.ಎನ್. ಪ್ರಕಾಶ್ ಅಧಿಕಾರಿಗಳಾದ ರೂಪಶ್ರೀ ಬಸ್ ನಿಲ್ದಾಣದ ನಿರ್ವಹಣಾಧಿಕಾರಿ ಪ್ರಸನ್ನ, ಹರೀಶ್ ಮುಂತಾದವರು ಇದ್ದರು ಹಾಗೂ ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಹಾಜರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ…
ಸರಗೂರು: ಶಾಸಕ ಅನೀಲ್ ಚಿಕ್ಕಮಾದು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಿರುವ ಬಗ್ಗೆ ತಾಲೂಕಿನ ಜನತೆ ಮತ್ತು ಸಾರ್ವಜನಿಕರಿಗೆ ಗೊತ್ತು. ಶಾಸಕರ ವಿರುದ್ಧ ಟೀಕೆ ಮಾಡುವವರಿಗೆ ಏನು ಗೊತ್ತು, ತಾಲ್ಲೂಕಿನಲ್ಲಿ ವಿರೋಧ ಮಾಡುವರು ಇದ್ದರೆ ಮಾತ್ರ ಶಾಸಕರಿಗೆ ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲು ಸಾಧ್ಯ ಎಂದು ಕೋತ್ತೆಗಾಲ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿರೋಧ ಪಕ್ಷಗಳು ಟೀಕೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಅವರು ಏನೂ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ತಾಲೂಕಿನಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಅವರು ಹೇಳಿದರು. ಅನೀಲ್ ಚಿಕ್ಕಮಾದು ರವರು ತಂದೆ ಕಾಲದಿಂದಲೂ ಜಾತಿ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಅವರು ಪಕ್ಷಾತೀತವಾಗಿ ಜನರ ಸೇವೆಯಲ್ಲಿ ಹೆಚ್ಚಿನ ತೊಡಗಿಸಿಕೊಂಡು ಬರುತ್ತಿದ್ದಾರೆ. ತಾಲ್ಲೂಕಿನ ಜನರಿಗೆ ಯಾವುದೇ ಸಮಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಗಮನಕ್ಕೆ ಬಂದ ಕೂಡಲೇ…
ಸರಗೂರು: ತಾಲೂಕಿನ ಬಿ.ಮಟಕರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಹಿರೇಹಳ್ಳಿ ದೇವದಾಸ್ ಅವರು ಅವಿರೋಧವಾಗಿ ಆಯ್ಕೆಯಾದರು. ಗುರುವಾರ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ದೇವದಾಸ್ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಹಿರೇಹಳ್ಳಿ ದೇವದಾಸ್ ಅವರು, ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಉಷಾ ಘೋಷಿಸಿದರು. ಪಿಡಿಒ ಭಾಗ್ಯಮ್ಮ, ಸಹಕರಿಸಿದರು. ಪಂಚಾಯಿತಿ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಮಧಾರಿಗೌಡದ ಸಮುದಾಯದ ಮುಖಂಡರು ಸಿಹಿ ಹಂಚಿ ಹಾಗೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಉಪಾಧ್ಯಕ್ಷೆ ಗೌರಿಬಾಯಿ, ಸದಸ್ಯರಾದ ಅಜಿತ್‌ಕುಮಾರ್, ಎಂ.ನಾಗೇಂದ್ರ, ಕುರ್ಣೇಗಾಲ ಬೆಟ್ಟಸ್ವಾಮಿ, ಬೊಮ್ಮ, ವೀಣಾಕುಮಾರ್, ಎಚ್.ಕೃಷ್ಣ, ನಾಗೇಶ್, ನಾಗರತ್ನ, ರೂಪಾಬಾಯಿ, ರಾಣಿಬಾಯಿ, ಸುನೀತಾಬಾಯಿ, ಮೀನಾ ಕುಮಾರಿ, ಚಿನ್ನಮ್ಮ ಮಾದಪ್ಪ, ವಿನೋದ್, ನಾಗಯ್ಯ, ರತ್ನಮ್ಮ, ಎನ್.ಆರ್.ಅಶ್ವಿನಿ, ಸುಮತಿ, ಬಿಲ್ ಕಲೆಕ್ಟರ್ ಮಹೇಶ್, ಸರಸ್ವತಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ದೇವದಾಸ್ ಅವರು, ಪಂಚಾಯಿತಿಯು ಕಾಡಂಚಿನ ಗ್ರಾಮಗಳನ್ನು…
ಸರಗೂರು: ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಹಕಾರ ಸಚಿವ ಎನ್.ಕೆ.ರಾಜಣ್ಣ ಕುಟುಂಬ ಸದಸ್ಯರಾದ ಮಗಳು ರಶ್ಮಿ ಮತ್ತು ಸೊಸೆ ಭಾವನಾ ಹಾಗೂ ಕುಟುಂಬದವರು ಗುರುವಾರದಂದು ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದತಾಪಂ ಮಾಜಿ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ, ರಾಜ್ಯ ಸರ್ಕಾರ ಸಹಕಾರ ಸಚಿವರಾದ ಎನ್.ಕೆ.ರಾಜಣ್ಣರವರು ನಮ್ಮ ತಾಲೂಕಿನ ನಾಡದೇವಿ ಚಿಕ್ಕಮ್ಮ ತಾಯಿ ಭೇಟಿ ನೀಡಿ ಸಂದರ್ಭದಲ್ಲಿ ತಾಲ್ಲೂಕಿನ ಅಭಿವೃದ್ಧಿ ಕೆಲಸ ಬಗ್ಗೆ ಮಾಹಿತಿಯನ್ನು ನೀಡಿದರು. ತಾಯಿಯ ಬೆಟ್ಟಕ್ಕೆ ಪ್ರವಾಸೋದ್ಯಮ ಮಾಡಲು ನಮ್ಮ ಶಾಸಕರು ಹಗಲು ಇರುಳು ಶ್ರಮ ಪಡುತ್ತಿದ್ದಾರೆ. ವನಜಲಸಿರಿ ನಾಡು ಎಂದು ಪ್ರಸಿದ್ಧವಾಗಿರುವ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ರಾಜಣ್ಣರವರು, ನಮ್ಮ ತಾಲೂಕಿನ ಸಹಕಾರ ಬ್ಯಾಂಕ್ ಗಳಿಗೆ ಅನುದಾನವನ್ನು ನೀಡಿದರೆ, ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರ ಮಗಳಿಗೆ ರಶ್ಮಿರವರಿಗೆ ತಿಳಿಸಿದರು. ನಂತರ ಮಾತನಾಡಿದ ಎನ್.ಕೆ.ರಾಜಣ್ಣ ರವರ ಮಗಳು ರಶ್ಮಿ ಮಾತನಾಡಿ, ನಾವು ಮೈಸೂರಿನ ಚಾಮುಂಡಿ ಆಷಾಡ ಮಾಸದಲ್ಲಿ ತಾಯಿಗೆ ಪೂಜೆ ಮಾಡಿಸಲು ಬಂದಿದ್ದೆವು. ತಾಲ್ಲೂಕಿನ…
ಸರಗೂರು: ಪಟ್ಟಣದ 10 ವಾರ್ಡಿನಲ್ಲಿ ಗುರುವಾರ ದಂದು ಬೆಳ್ಳಂಬೆಳಗ್ಗೆ ಕೋತಿಗಳ ಹಾವಳಿಯಿಂದ ಹೊರಗಡೆ ಹೋಗಲು ಭಯವಾಗುತ್ತಿದೆ. ಕೂಡಲೇ ಕೋತಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ವಾರ್ಡಿನ ಜನರು ಒತ್ತಾಯಿಸಿದರು. ಪಟ್ಟಣದಲ್ಲಿ ಸುಮಾರು ವಾರ್ಡುಗಳಲ್ಲಿ ಹತ್ತು-–ಹನ್ನೆರಡು ಮಹಿಳೆಯರು ಹಾಗೂ ಸಣ್ಣ ಮಕ್ಕಳ ಮೇಲೆ ಕೋತಿಗಳು ದಾಳಿ ಮಾಡಿ, ಗಾಯಗೊಳಿಸಿದ್ದ ಘಟನೆಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯವರು ಕೂಡಲೇ ಇದಕ್ಕೊಂದು ಪರಹಾರ ಕಂಡುಹಿಡಿಯಬೇಕು ಎಂದು ವಾರ್ಡಿನ ಶಾಂತಿ ಆರೋಪ ಮಾಡಿದ್ದಾರೆ. ಅರಣ್ಯ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಅವರು ನಮಗೆ ಬರುವುದಿಲ್ಲ.ಇವರಿಂದ ಅವರಿಗೆ ಹೇಳುತ್ತಿದ್ದಾರೆ.ಇದರ ಬಗ್ಗೆ ಯಾರಿಗೂ ಹೇಳಬೇಕು ಎನ್ನುವುದು ಗೊತ್ತಿಲ್ಲ.ಕೋತಿಗಳ ಹಾವಳಿಯಿಂದ ವಾರ್ಡಿನ ಜನರು ಕಂಗಾಲಾಗಿದ್ದು, ರಸ್ತೆಯಲ್ಲಿ ಮತ್ತು ಮನೆಯ ಮುಂಭಾಗದಲ್ಲಿ ಒಬ್ಬೊಬ್ಬರೇ ತಿರುಗಾಡುವಂತಿಲ್ಲ. ಮನುಷ್ಯರ ಮೇಲೆ ದಾಳಿ ಮಾಡುವುತ್ತಿದ್ದವೆ ಅಂಗವಿಕಲರ ಮಹಿಳೆ ಮನೆ ಮುಂಭಾಗದಲ್ಲಿ ಕುಳಿತಿರುವಾಗ ದಾಳಿ…