Subscribe to Updates
Get the latest creative news from FooBar about art, design and business.
- ಇಪಿಎಫ್ ಒದಿಂದ ಉದ್ಯೋಗದಾತರಿಗೆ ಬಿಗ್ ರಿಲೀಫ್: ‘EEC 2026’ ಮತ್ತು ‘ವಿಶ್ವಾಸ್ 2026’ ಯೋಜನೆಗಳು ಜಾರಿ
- ಶಾಂತಿ—ಕ್ರಾಂತಿ ರೀ ರಿಲೀಸ್ ಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ: ಸದ್ಯಕ್ಕಿಲ್ಲ ರೀ ರಿಲೀಸ್! | ಕಾರಣ ಏನು?
- ಶಿವಮೊಗ್ಗ: ಕಡಜ ಹುಳ ಕಡಿದು 8 ವರ್ಷದ ಬಾಲಕ ಸಾವು
- ಸರಗೂರು: 9ನೇ ವಾರ್ಡ್ನಲ್ಲಿ ₹35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ – ಪಪಂ ಸದಸ್ಯ ಶ್ರೀನಿವಾಸ್ ಪರಿಶೀಲನೆ
- ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್
- ಮಹಿಳಾ ಪಿಎಸ್ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ
- ಕರ್ತವ್ಯನಿರತ ಮಹಿಳಾ ಪಿಎಸ್ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್ ಐಆರ್ ದಾಖಲು!
- ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡುವುದೇ ಗುರಿ | ಪಿ.ಎನ್. ಕೃಷ್ಣಮೂರ್ತಿ
Author: admin
ಸರಗೂರು: ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯೇ ಜ್ಞಾನ ವಿಕಾಸ ಕಾರ್ಯಕ್ರಮ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಳ್ಳೂರು ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ ತಿಳಿಸಿದರು. ತಾಲೂಕಿನ ಮುಳ್ಳೂರು ವಲಯದ ಹೊಸಕಡಜಟ್ಟಿ ಕಾರ್ಯಕ್ಷೇತ್ರದಲ್ಲಿ ಪ್ರಕ್ರತಿ ಜ್ಞಾನ ವಿಕಾಸ 5 ವರ್ಷದ ವಾರ್ಷಿಕೋತ್ಸವ ಶನಿವಾರ ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಜಾತಿ, ಮತ, ಭೇದ ಇಲ್ಲದೆ ಪ್ರತಿಯೊಂದು ಕುಟುಂಬವೂ ಸಂಸ್ಕಾರಯುತ ಕುಟುಂಬವಾಗಿಸುವತ್ತ ಜ್ಞಾನ ವಿಕಾಸ ಕೇಂದ್ರದ ಮೂಲಕ ಆರೋಗ್ಯ, ಕಾನೂನು, ತರಬೇತಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. 4 ವರ್ಷಗಳ ಹಿಂದೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಪಾದಾರ್ಪಣೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನಾದ್ಯಂತ ಸಹಸ್ರಾರು ಸಂಘಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೇವಲ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಗುರಿ ನಮ್ಮದಲ್ಲ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಕುಟುಂಬ ನಿರ್ವಹಣೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ…
ಬೀದರ್: ಜಿಲ್ಲೆಯ ಹೀರಾಲಾಲ್ ಮತ್ತು ಪನ್ನಾಲಾಲ್ ಪದವಿಪೂರ್ವ ಕಾಲೇಜಿನ ಪ್ರಥಮ ದ್ವಿತೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಷಕತ್ವ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ಪಾಲನೆ, ಘೋಷಣೆ, ರಕ್ಷಣೆಗಾಗಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪೂಜ್ಯ ಪೋಷಕತ್ವ ಯೋಜನೆ ಎಂದರೆ, ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವಧಿಯವರೆಗೆ 2 ವರ್ಷಕ್ಕೆ ಮೀರದ ಅವಧಿಯವರೆಗೆ ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ ಮಗುವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಪೋಷಕತ್ವ ಯೋಜನೆಯ ಬೀದರ್ ಜಿಲ್ಲೆಯ ಸಂಯೋಜಕರಾದ ರಮೇಶ್ ಅವರು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ದತ್ತು ಮತ್ತು ಪೋಷಕತ್ವ ಯೋಜನೆ ಕುರಿತು ಅರಿವು ಮೂಡಿಸಿದರು. ಪೋಷಕತ್ವ ಎಂದರೆ ಕಾನೂನು ಪ್ರಕಾರ ಅನಾಥವಾಗಿರುವ ಮಕ್ಕಳಿಗೆ ಲಾಲನೆ ಪಾಲನೆ ಪೋಷಣೆ ಇಂದ…
ಸರಗೂರು: ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ಅವರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಚಿವ ಸ್ಥಾನ ನೀಡಬೇಕೆಂದು ಯೂತ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಮಸಹಳ್ಳಿ ನವೀನ್ ಒತ್ತಾಯಿಸಿದ್ದಾರೆ. ಕ್ಷೇತ್ರದಲ್ಲಿ ಎರಡು ಬಾರಿ ಸತತವಾಗಿ ಗೆಲುವು ಸಾಧಿಸಿ, ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಇಂಥವರಿಗೆ ಸಚಿವ ಸ್ಥಾನ ನೀಡಿದರೆ, ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟೆಯನ್ನು ತೊಲಗಿಸಲು ಸಹಾಯಕವಾಗಬಹುದು. ಸಂಪುಟ ಸಭೆಯಲ್ಲಿ ರಾಜಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಅನಿಲ್ ಚಿಕ್ಕಮಾಧು ಅವರಿಗೆ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಮೈಸೂರು ಮತ್ತು ಚಾಮರಾಜನಗರ ವ್ಯಾಪ್ತಿಯ ನಾಯಕ ಸಮುದಾಯದ ಪ್ರಭಾವಿ ಮುಖಂಡರು ಹಾಗೂ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪಕ್ಷದ ವರಿಷ್ಠರು ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡುತ್ತಿರುವುದನ್ನು ಮನಗಂಡು ಸಚಿವ…
ಕೊರಟಗೆರೆ: ರಾಷ್ಟ್ರೀಯ ಲೋಕಾ ಅದಾಲತ್ ವರ್ಷಕ್ಕೆ 4 ಬಾರಿ ನಡೆಸಲಾಗುತ್ತದೆ. ಸೆ.13ರಂದು ನಡೆಯುತ್ತಿರುವ ರಾಷ್ಟ್ರೀಯ ಲೋಕಾ ಅದಾಲತ್ 2025ರ ಮೂರನೇ ಅದಾಲತ್ ಆಗಿದೆ, ಈ ಅದಾಲತ್ ತುಮಕೂರಿನಲ್ಲಿ ಮಾತ್ರವಲ್ಲ ರಾಷ್ಟ್ರ ವ್ಯಾಪ್ತಿಯಲ್ಲಿ ನಡೆಯುತ್ತದೆ ಎಂದು ತುಮಕೂರಿನ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ತಿಳಿಸಿದರು. ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಲೋಕ ಅದಾಲತ್, ಮಧ್ಯಸ್ಥಿಕೆ ಖಾಯಂ ಜನತಾ ನ್ಯಾಯಲಯ ವ್ಯವಸ್ಥೆ ಮೂಲಕ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥ ಮಾಡಿಕೊಳ್ಳಬಹುದು ಎಂದರು. ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ವಿದ್ಯುತ್, ಕಳ್ಳತನ, ರಾಜಿ ಆಗಬಲ್ಲ ಅಪರಾಧ, ವೈವಾಹಿಕ, ಸಿವಿಲ್, ರಿಯಲ್ ಎಸ್ಟೇಟ್ ಹಾಗೂ ಜಿಲ್ಲಾ ಗ್ರಾಹಕರ ಪ್ರಕರಣಗಳನ್ನು ಅದಾಲತ್ ನಲ್ಲಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ‘ಅದಾಲತ್‌ನಿಂದ ನ್ಯಾಯಾಲಯದ…
ಬೀದರ್ : ಮನೆ ಬೀಗ ಮುರಿದು 6.80 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನಗೈದಿರುವ ಘಟನೆ ಬೀದರ್ ನಗರದ ಶಿವನಗರ ಬಡಾವಣೆಯಲ್ಲಿ ನಡೆದಿದೆ. ಮೂಲತಃ ಆಂಧ್ರ ಪ್ರದೇಶದ ಒಡ್ದುಪಾಲಂ ಗ್ರಾಮದ ನಿವಾಸಿ ಶ್ರೀನಿವಾಸಲು ಅವರು ಕುಟುಂಬದೊಂದಿಗೆ ಸುಮಾರು 10 ವರ್ಷದಿಂದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆ.16ರಂದು ಆಂಧ್ರ ಪ್ರದೇಶಕ್ಕೆ ಹೋದಾಗ ಶಿವನಗರದ ಬಾಡಿಗೆ ಮನೆಯ ಬಾಗಿಲು ಒಡೆದು 6. 84 ಲಕ್ಷ ಸಾವಿರ ರೂ. ಮೌಲ್ಯದ 76 ಚಿನ್ನದ ಆಭರಣಗಳು ಮತ್ತು 2 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಸರಗೂರು: ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಅವಕಾಶ ನೀಡಿದರೆ ಸಹಕಾರ ಸಂಘಗಳ ಬಾಗಿಲನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿರುವ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆಯನ್ನು ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ದೇವಲಾಪುರ ಸಿದ್ದರಾಜು ಖಂಡಿಸುತ್ತೇವೆ ಎಂದರು. ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾದ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ–2025ರ ಮೇಲಿನ ಚರ್ಚೆಯ ವೇಳೆ ಜೆಡಿಎಸ್ ನ ಜಿ.ಟಿ.ದೇವೇಗೌಡ ಅವರು, ‘ಸಹಕಾರ ಸಂಘಗಳ ನಿರ್ದೇಶಕರ ಹುದ್ದೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಮೀಸಲಾತಿ ಅಡಿ ನಾಮನಿರ್ದೇಶನ ಮಾಡುವ ಕ್ರಮ ಸರಿಯಲ್ಲ. ಇದರಿಂದ ಸಹಕಾರ ಸಂಘಗಳನ್ನು ಮುಚ್ಚುವ ಸ್ಥಿತಿ ಬರುತ್ತದೆ’ ಎಂದಿದ್ದಾರೆ.ಅದರೆ ಜಿಟಿ ದೇವೇಗೌಡ ಎಸ್ಸಿ ಎಸ್ಟಿ ಸಮುದಾಯದಗಳಿಂದ ಮತಗಳಿಂದ ಇವರು ವಿಧಾನಸಭಾ ಸೇರಿರುವುದು ಜಿಟಿ ದೇವೇಗೌಡ ರವರಿಗೆ ಆತ್ಮ ಸಾಕ್ಷಿ ಎಂಬಂತೆ ಮಾತನಾಡಿರುವುದು ಸರಿಯಲ್ಲ ಎಂದರು. ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ನಾಮ ನಿರ್ದೇಶಿತ ಸದಸ್ಯರ ಸ್ಥಾನ ನೀಡುವುದು ಸರಿಯಲ್ಲ ಎಂಬ ಹೇಳಿಕೆ ಖಂಡನೀಯ ‘ಜಿ.ಟಿ.ದೇವೇಗೌಡ ಅವರ ಮಾತುಗಳು…
ಮಧುಗಿರಿ: ಅದೃಷ್ಠ ಭೈರವಿ ದೇವಸ್ಥಾನ ಉದ್ಘಾಟನಾ ಸಮಾರಂಭ ಅ.24 ಭಾನುವಾರ ಹಾಗೂ 25 ಸೋಮವಾರ ನೆಡೆಯಲಿದ್ದು ಭಕ್ತಾದಿಗಳು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಡಾ.ಮನೋಹರ್ ಗುರೂಜಿ ತಿಳಿಸಿದರು. ತಾಲ್ಲೂಕಿನ ಕಸಬಾ ಹೋಬಳಿಯ ಪುಟ್ಟೇನಹಳ್ಳಿ ಗ್ರಾಮದಲ್ಲಿ ಅದೃಷ್ಠ ಭೈರವಿ ದೇವಸ್ಥಾನ ಉದ್ಘಾಟನೆ, ಗಣಪತಿ, ಶಿವ, ಮತ್ತು ಅದೃಷ್ಠ ಭೈರವಿದೇವಿ ದೇವರುಗಳ ಪ್ರತಿಷ್ಟಾಪನೆ ಮತ್ತು ಕುಂಬಾಭಿಷೇಕ ಕಾರ್ಯಕ್ರಮ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕು ಎಂದರು. ಭಕ್ತಾಧಿಗಳಿಗೆ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದ್ದು ಸಕಾಲಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ. ವರದಿ: ಅಬೀದ್, ಮಧುಗಿರಿ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಳ್ತಂಗಡಿ: ಧರ್ಮಸ್ಥಳ ಸುತ್ತಮುತ್ತ ಹಲವು ಶವಗಳನ್ನು ಹೂತಿದ್ದಾಗಿ ಅನಾಮಿಕ ವ್ಯಕ್ತಿಯೊಬ್ಬ ಹೇಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ದೊರಕಿದೆ. ಅನಾಮಿಕ ದೂರುದಾರ ಸಿ ಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಇಂದು ಬೆಳಗ್ಗೆ ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದು ಆ ಮೂಲಕ ಸಾಕ್ಷಿ ಸಂರಕ್ಷಣಾ ಕಾಯ್ದೆಯಿಂದ ವಿಮುಖಗೊಳಿಸಲಾಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್ಗೆ ಮಾಸ್ಕ್ ಮ್ಯಾನ್ ನನ್ನ ಎಸ್ ಐಟಿ ಅಧಿಕಾರಿಗಳು ಹಾಜರುಪಡಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಾಸ್ಕ್ ಮ್ಯಾನ್ ಗೆ ಎಸ್ ಐಟಿ ಅಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆದಿದೆ. ಬಳಿಕ ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ SIT ಮನವಿ ಮಾಡಲಿದ್ದು, ಆ ಮೂಲಕ ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಯಿಂದ ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟಂತಹ ಘಟನೆಯಿದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳಿಗೆ ಅವರು ಉತ್ತರಿಸುತ್ತಿದ್ದರು. ಈ ಪ್ರಕರಣದಲ್ಲಿ ಸರ್ಕಾರದ ಪಾತ್ರ ಇಲ್ಲ, ಇದಕ್ಕೆ ಸರ್ಕಾರ ಕಾರಣ ಅಲ್ಲ, ಯಾರೂ ರಾಜೀನಾಮೆ ಕೊಡಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು. ಬಿಜೆಪಿಯವರ ಸಾರ್ವಜನಿಕ ಕ್ಷಮಾಪಣೆಯ ಆಗ್ರಹ ತಳ್ಳಿಹಾಕಿದ ಸಿಎಂ ಸದನದಲ್ಲಿ ಮತ್ತೊಮ್ಮೆ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಸಿಎಂ ಅವರು, ನನಗೆ ಈ ಘಟನೆ ತುಂಬಾ ಡಿಸ್ಟರ್ಬ್ ಮಾಡಿದೆ. ಇಂಥ ದುರಂತ ಆಗಬಾರದಿತ್ತು, ಆಗಿಹೋಗಿದೆ. ನಾನು ಘಟನೆ ನಡೆದ ದಿನವೇ ವಿಷಾದ ವ್ಯಕ್ತಪಡಿಸಿದ್ದೆ. ನನ್ನ ರಾಜಕೀಯ ಜೀವನದಲ್ಲಿ ಇಂಥ ಕಹಿ ಘಟನೆ ಯಾವತ್ತೂ ಆಗಿರಲಿಲ್ಲ. ಕಾಲ್ತುಳಿತದಿಂದ 11 ಜನರ ಸಾವನ್ನು ನಾನು ನೋಡೇ ಇರಲಿಲ್ಲ. ದುರ್ಘಟನೆಗೆ ನಾನು ತುಂಬಾ…
ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ಈ ಬಾರಿಯ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕದ ಒಬ್ಬ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತೋಷ. ಹೋರಾಟದ ಹಿನ್ನೆಲೆಯಿಂದ ಬಂದವರು ಬಾನು. ಕನ್ನಡ ಚಳವಳಿಯಲ್ಲಿ ಕೆಲಸ ಮಾಡಿರುವ ಪ್ರಗತಿ ಪರ ಚಿಂತಕರು. ಹಾಗಾಗಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ ಎಂದರು. ಈ ಬಾರಿ 11 ದಿನ ದಸರಾ ನಡೆಯಲಿದೆ. ಸೆಪ್ಟೆಂಬರ್ 22ರಿಂದ ದಸರಾ ಆರಂಭ ಆಗಲಿದ್ದು, ಅಕ್ಟೋಬರ್ 2 ರಂದು ವಿಜಯದಶಮಿ ಇದೆ. ಬಾನು ಮುಷ್ತಾಕ್ ಅವರಿಗೆ ಗೌರವದಿಂದ ಜಿಲ್ಲಾಡಳಿತ ಅಧಿಕೃತವಾಗಿ ಆಹ್ವಾನಿಸಲಿದೆ ಎಂದು ಸ್ಪಷ್ಟಪಡಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC