Subscribe to Updates
Get the latest creative news from FooBar about art, design and business.
- ಕೊರಟಗೆರೆ: ಜೂ.28 ರಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ
- ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್ ಐ ತೀರ್ಥೇಶ್
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
- ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ
- ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ
- ಜೂ. 28ರಂದು ಪಲ್ಸ್ ಪೋಲಿಯೋ ಲಸಿಕೆ, ಜಿಲ್ಲೆಯಾದ್ಯಂತ 1,86,831 ಮಕ್ಕಳಿಗೆ ಲಸಿಕೆ ಗುರಿ: ಡಾ.ಚಂದ್ರಶೇಖರ್
- ಬಿಜೆಪಿ ಶಾಸಕರ ವಿರುದ್ಧ ಅಡ್ಡಮತದಾನದ ಅಪಪ್ರಚಾರ: ಎಸ್ ಪಿ ಕಚೇರಿ ಬಳಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
- ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್ ಜಿ ಯೋಜನೆ ಜಾರಿ : ಜಿಪಂ ಸಿಇಒ
Author: admin
ಸರಗೂರು: ಜುಲೈ 1ರಂದು ಬಿ.ಸಿ.ರಾಯ್ ರವರ ಜನ್ಮ ದಿನಾಚರಣೆ ಮತ್ತು ಮರಣ ಹೊಂದಿದ ದಿನ ಈ ದಿನವನ್ನು ನಾವು ವೈದ್ಯರ ದಿನಾಚರಣೆ ಎಂದು ಆಚರಣೆ ಮಾಡುತ್ತಿದ್ದೇವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು. ತಾಲ್ಲೂಕಿನ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಕಾಟವಾಳು ಹಾಡಿಯಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು, ಸಂಶೋಧನಾ ಸಂಸ್ಥೆ, ಮೈಸೂರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ.ಮಟಕೆರೆ ಪುರ ಇವರ ಸಹಯೋಗದೊಂದಿಗೆ ಹಾಡಿಯಲ್ಲಿ ವೈದ್ಯರ ದಿನಾಚರಣೆ ಮತ್ತು ಜನರಿಗೆ ಸಿಕಲ್ ಸೆಲ್ ಅನೀಮಿಯ ಅರಿವು ಮೂಡಿಸುವ ಕಾರ್ಯ ಕ್ರಮವನ್ನು ಮಂಗಳವಾರ ದಂದು ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಿ.ಸಿ.ರಾಯರವರು ವೈದ್ಯ ವೃತ್ತಿಯಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು. ಸಿಕ್ಕಲ್ ಸೆಲ್ ಅನಿಮಿಯ ಕಾಯಿಲೆ ಎಂಬುದು ಕುಡುಗೋಲು ಅಥವಾ ಕುಡ್ಲು ಕಾಯಿದೆ ಎಂದು ಕರೆಯುತ್ತಾರೆ, ಈ ಕಾಯಿಲೆಯಲ್ಲಿ ಕೆಂಪು ರಕ್ತಕಣಗಳು ಕುಡುಗೋಲು ಆಕಾರಕ್ಕೆ ಪರಿವರ್ತನೆಗೊಂಡು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ…
ತುಮಕೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ ಸಿ.ಸಿ. ಬಾರಕೇರ ಅವರ ವಯೋನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಹಾಗೂ ಬಿ.ವಿ.ಎ.–ಚಿತ್ರಕಲೆ ಪದವಿ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಾ.ಕರಿಯಣ್ಣ ಬಿ. ಹಿರಿಯ ಅಧ್ಯಾಪಕರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಸಿ.ಸಿ.ಬಾರಕೇರ ಅವರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಟ್ಟಿ–ಬೆಳೆಸಿದ ಗಟ್ಟಿಗರು, ಸಾಕಷ್ಟು ಏಳು–ಬೀಳುಗಳನ್ನು ಕಂಡಂತಹರು ಇಡೀ ತಮ್ಮ 37 ವರ್ಷಗಳ ಸುದೀರ್ಘ ಸೇವೆಯಲ್ಲಿ ಚಿತ್ರಕಲಾ ಕಾಲೇಜಿನ ಅಭಿವೃದ್ಧಿ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಅಚ್ಚು ಮೆಚ್ಚಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಚಿತ್ರಕಲಾ ಕಾಲೇಜು ಇಂದು ಉತ್ತಮ ಸ್ಥಿತಿಯಲ್ಲಿ ಮುನ್ನೆಡೆಯುತ್ತಿರುವುದಕ್ಕೆ ಸಿ.ಸಿ.ಬಾರಕೇರ ಅವರ ಬೆವರು ಹನಿ, ಶ್ರಮ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಎಲ್ಲ ಇಲ್ಲಗಳ ನಡುವೆ ಎಲ್ಲವನ್ನು ಸಾಧಿಸಿದ ಸಾಧಕರು ಇವರಾಗಿದ್ದಾರೆ. ಇವರ ಪ್ರಾಮಾಣಿಕತೆಯು ಈ…
ಬಿಗ್ ಬಜೆಟ್ ಚಿತ್ರಗಳ ನಾಯಕಿಯಾಗಿ ಮಿಂಚುತ್ತಿರುವ ಕನ್ನಡ ಹುಡುಗಿ ರಶ್ಮಿಕಾ ಮಂದಣ್ಣ ಸಾಮಾಜಿಕ ಪ್ರಜ್ಞೆ ಮೆರೆದಿದ್ದು, ಎಷ್ಟು ಹಣ ಕೊಟ್ಟರೂ, ಸಿನಿಮಾವನ್ನೇ ಬಿಟ್ಟರೂ ಆ ಒಂದು ಕೆಲಸ ನಾನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಸಿನಿಮಾದಲ್ಲಿ ಧೂಮಪಾನ ಮಾಡುವ ದೃಶ್ಯದಲ್ಲಿ ನಾನು ನಟಿಸಲು ಇಷ್ಟು ಪಡುವುದಿಲ್ಲ, ಅಂತಹ ದೃಶ್ಯವನ್ನು ತೆರೆಯ ಮೇಲೆ ವಿಜ್ರಂಭಿಸಲು ಇಷ್ಟ ಪಡುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಒಂದು ವೇಳೆ ಅಂತಹ ಪಾತ್ರವನ್ನು ಎದುರಿಸುವ ಅನಿವಾರ್ಯತೆ ಎದುರಾದರೆ, ಆ ಪಾತ್ರವನ್ನು ತಿರಸ್ಕರಿಸಲು ನಾನು ಸಿದ್ಧ. ಧೂಮಪಾನ ಮಾಡದಿರುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ರಶ್ಮಿಕಾ ಹೇಳಿದ್ದಾರೆ. ಮಹಿಳೆಯರ ಪ್ರಾಭಲ್ಯದ ಕುರಿತಾಗಿ ಏರ್ಪಡಿಲಾಗಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೋಗಿದ್ದ ವೇಳೆ ರಶ್ಮಿಕಾ ಈ ವಿಚಾರವನ್ನ ಘೋಷಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಬೀದರ್ : ಬಸವಕಲ್ಯಾಣದ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ರಾಹುಲ್ ಹೊಸಮನಿ ಎಂಬ ಸಿಬ್ಬಂದಿಯನ್ನು ಭ್ರಷ್ಟಾಚಾರದ ಆರೋಪದಡಿ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮದಲ್ಲಿ ಜಮೀನು ಒಂದರ ಹಕ್ಕು ಬದಲಾವಣೆ ಹಾಗೂ ಇತರೆ ಸರ್ಕಾರಿ ಕಚೇರಿ ಕೆಲಸ ಕಾರ್ಯಗಳಿಗೆ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ವರದಿಯಾಗಿದ್ದು, ಮೇಲ್ನೋಟಕ್ಕೆ ಭ್ರಷ್ಟಾಚಾರ ಮಾಡಿರುವುದು ಕಂಡು ಬರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯತನ ತೋರುತ್ತಿರುವುದರಿಂದ ಕಚೇರಿ ಆಡಳಿತದಲ್ಲಿ ಹಾಗೂ ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಡುತ್ತಿರುವುದರಿಂದ ಇವರ ವಿರುದ್ಧ ಶಿಸ್ತು ಕ್ರಮ ಕೈಕೊಂಡು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ತುಮಕೂರು: ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದ್ದು, ಪ್ರಥಮ ವರ್ಷದ ಈ ಮೇಲ್ಕಂಡ ಕೋರ್ಸ್ ಗಳ ಪ್ರವೇಶಾತಿಗೆ 2025ರ ಜುಲೈ 1 ರಿಂದ ಪ್ರವೇಶಾತಿ ಪ್ರಾರಂಭವಾಗಿದೆ. ಈ ಮೇಲ್ಕಂಡ ಪದವಿಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಭರ್ತಿಮಾಡಿ ನಂತರ ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್ ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು. “ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಕೆಎಸ್‌ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ (ಯುಜಿಸಿ) ಮಾನ್ಯತೆ ಪಡೆದಿದೆ…
ನಾಡಿನ ಸಮಸ್ತ ಪತ್ರಕರ್ತ ಹಾಗೂ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ, 1843 ಜುಲೈ 1ರಂದು ಪ್ರಾರಂಭವಾಯಿತು, ಹಾಗಾಗಿ ಕರ್ನಾಟಕದಲ್ಲಿ ಸ್ಮರಣಾರ್ಥವಾಗಿ ಈ ದಿನವನ್ನು ಭಾರತದ ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ.ಪತ್ರಿಕಾ ದಿನವನ್ನು ಜುಲೈ 1ರಂದು ಆಚರಿಸಲಾಗುತ್ತದೆ. ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳನ್ನು,ಕ್ಷಣ ಕ್ಷಣದ ಮಾಹಿತಿಗಳನ್ನು ಜನರಿಗೆ ತಲುಪಿಸಿ, ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪತ್ರಿಕಾ ಮಾಧ್ಯಮದ ಎಲ್ಲಾ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ದಮನಿತರ ನೋವಿಗೆ ಧ್ವನಿಯಾಗಿ ನ್ಯಾಯ ಒದಗಿಸಿಕೊಡುವ ಅಕ್ಷರ ಲೋಕ, ಸಮಾಜದ ಅಂಕುಡೊಂಕುಗಳನ್ನು ಜಗದ ಮುಂದಿಡುವ ನಿರ್ಭೀತ ರಂಗದ ಸೇವೆಗೆ ಶರಣು ಎನ್ನೋಣ. ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿದ್ದು, ಜನಸಾಮಾನ್ಯರು ಮತ್ತು ಸರ್ಕಾರಗಳ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ನವೆಂಬರ್ 1966 ರಲ್ಲಿ, ಭಾರತೀಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮದ ಸರಿಯಾದ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು, ವರದಿಯ ಗುಣಮಟ್ಟವನ್ನು ಪರಿಶೀಲಿಸಲು ನ್ಯಾಯಮೂರ್ತಿ ಜೆ.ಆರ್.ಮುಧೋಲ್ಕರ್ ಅವರ…
ಶಿವಮೊಗ್ಗ: ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದಕ್ಕೆ 67 ವರ್ಷದ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ ನಡೆದಿದೆ. ಹುಚ್ಚಮ್ಮ ಎಂಬ ವೃದ್ಧೆ ಹಲ್ಲೆಗೊಳಗಾದವರಾಗಿದ್ದಾರೆ. ಇವರ ನೆರೆಯಮನೆಯ ಪ್ರೇಮಾ ಎಂಬವರು ಕಸ ತಂದು ಹುಚ್ಚಮ್ಮ ಅವರ ಮನೆಯ ಮುಂದೆ ಸುರಿದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಪ್ರೇಮ, ಜೊತೆಗೆ ಮಂಜುನಾಥ್ ಮತ್ತು ದರ್ಶನ್ ಎಂಬ ಇಬ್ಬರು ಯುವಕರು, ಹುಚ್ಚಮ್ಮನವರನ್ನು ನಿಂದಿಸಿ, ಮನೆಯಿಂದ ಎಳೆದುಕೊಂಡು ಹೋಗಿ ಮರಕ್ಕೆ ಹಗ್ಗದಿಂದ ಕಟ್ಟಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹುಚ್ಚಮ್ಮ ಅವರ ಮಗ ಕಣ್ಣಪ್ಪ, ತನ್ನ ವೃದ್ಧ ಪೋಷಕರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಬಿಗ್‌ಬಾಸ್ ಕನ್ನಡ 11 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿದೆ. ಇದೀಗ ಸೀಸನ್ 12ಕ್ಕೆ ಕೆಲವೇ ತಿಂಗಳು ಬಾಕಿ ಇದೆ. ಈ ನಡುವೆ ಬಿಗ್ ಬಾಸ್ ತಂಡ ಬಿಗ್ ಅಪ್ ಡೇಟ್ ನೀಡಿದೆ. 11ನೇ ಸೀಸನ್ ಸಂದರ್ಭದಲ್ಲಿ ನಿರೂಪಕ ಕಿಚ್ಚ ಸುದೀಪ್ ವಿದಾಯ ಹೇಳಿದ್ದರು. ಈ ವೇಳೆ ಯಾರು ಮುಂದಿನ ನಿರೂಪಕರು ಎನ್ನುವ ಚರ್ಚೆ ಜೋರಾಗಿಯೇ ನಡೆದಿತ್ತು. ಇದೀಗ 12ನೇ ಸೀಸನ್ ಗೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ ಎಂದು ಬಿಗ್ ಬಾಸ್ ಸಂಯೋಜಕರು ಹೇಳಿದ್ದಾರೆ. ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ನೋಡಲು ಸಾಧ್ಯವಿಲ್ಲ ಎನ್ನುವ ವೀಕ್ಷಕರ ಒತ್ತಡಕ್ಕೆ ಕೊನೆಗೂ ಬಿಗ್ ಬಾಸ್ ತಂಡ ಮಣಿದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಹೈದರಾಬಾದ್: ರಾಸಾಯನಿಕ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟದಿಂದ 8 ಮಂದಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪಾಶಮಿಲಾರಂನ ಸಿಗಾಚಿ ರಾಸಾಯನಿಕ ಕಾರ್ಖಾನೆಯಲ್ಲಿ ನಡೆದಿದೆ. ರಿಯಾಕ್ಟರ್ ಸ್ಫೋಟಗೊಳ್ಳುತ್ತಿದ್ದಂತೆ, ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದ ತೀವ್ರತೆಯಿಂದಾಗಿ ಕಾರ್ಮಿಕರ ಮೃತದೇಹಗಳು 100 ಮೀಟರ್ ದೂರಕ್ಕೆ ಹಾರಿಬಿದ್ದಿವೆ. ಈ ವೇಳೆ, ಕೆಲವರು ಕಾರ್ಖಾನೆಯ ಒಳಗೆ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ, ಸಿಲುಕಿದ್ದವರ ರಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳದಿಂದ ಆರು ಶವಗಳನ್ನು ಹೊರತೆಗೆಯಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಕೆಲವು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಒಂದು ಔಷಧೀಯ ಕಂಪನಿಯಾಗಿದ್ದು, ಔಷಧಿ, ಚಿಕಿತ್ಸೆಗೆ ಬೇಕಾದ ಸಹಾಯಕ ವಸ್ತುಗಳನ್ನು ಉತ್ಪಾದಿಸುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ತುಮಕೂರು: DIGITAL ARREST ಬಗ್ಗೆ ತುಮಕೂರು ಪೊಲೀಸರು ಜಾಗೃತಿ ಮೂಡಿಸಿದ್ದು, ಸಾರ್ವಜನಿಕರಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ವಂಚಕರು Fedex ಕೊರಿಯರ್, Income Tax Officer, E.D, TRAI, ಅಧಿಕಾರಿಗಳೆಂದು ಹೇಳಿಕೊಂಡು ಅನಾಮಧೇಯ ಕರೆ ಅಥವಾ ವಿಡಿಯೋ ಕಾಲ್‌ಗಳನ್ನು ಮಾಡುತ್ತಾರೆ. ಈ ವಂಚಕರು ಅನಾಮಧೇಯ ಕರೆಗಳನ್ನು ಮಾಡಲು ಪ್ರಮುಖವಾಗಿ Whatsapp ಅಥವಾ Skype ನಂತಹ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ. ಸಾರ್ವಜನಿಕರನ್ನು ವಂಚಕರು ನಂಬಿಸುವ ವಿಧಾನ: * ಮೇಲ್ಕಂಡಂತೆ ಕರೆ ಮಾಡುವಾಗ ಸದರಿ ನಂಬರ್ ಗಳಿಗೆ ಪೊಲೀಸ್ ಅಥವಾ ಸಂಬಂಧಪಟ್ಟ ಇಲಾಖೆಯ ಚಿತ್ರಗಳನ್ನೇ D.P.ಯಾಗಿ ಬಳಸಿ ಸಾರ್ವಜನಿಕರು ನಂಬುವಂತೆ ಮಾಡುತ್ತಾರೆ. ವಿಡಿಯೋ ಕರೆ ಮಾಡುವಾಗ ಪೊಲೀಸ್ ಇಲಾಖೆಯ ಸಮವಸ್ತ್ರ ಹಾಗೂ ಹಿಂಬದಿಯಲ್ಲಿ ಇಲಾಖೆಯ ಬೋರ್ಡ್ ಅನ್ನು ಬಳಸಿ ನಂಬುವಂತೆ ಮಾಡುತ್ತಾರೆ. * ನೀವು ನಂಬಬಹುದಾದ ಯಾವುದೋ ಒಂದು ಅಪರಾಧವನ್ನು, ನೀವು ಮಾಡಿರುವುದಾಗಿ ನಂಬಿಸಿ ನಿಮ್ಮ ವಿರುದ್ಧ ವಾರೆಂಟ್ ಹೊರಡಿಸಿ ನಿಮ್ಮನ್ನು Digital Arrest ಮಾಡಿರುವುದಾಗಿ ಹೆದರಿಸುತ್ತಾರೆ. * ವಂಚಕರು ನೀವು ಯಾರೊಂದಿಗೂ ಅವರು ಕರೆ…