Author: admin

ಬೆಳಗಾವಿ: ತಂದೆ ಮಗ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ. ತಂದೆ ಬಸವರಾಜ್ ಕೆಂಗೇರಿ (40), ಮಗ ಧರೆಪ್ಪ ಕೆಂಗೇರಿ (14) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬಸವರಾಜ್ ಕೆಂಗೇರಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿ ಊರಲ್ಲಿರುವ ಜಮೀನಿಗೆ ಕೀಟನಾಶಕ ಹೊಡೆಯಲು ಹೋಗಿದ್ದ. ಈ ವೇಳೆ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಕಾಲು ಜಾರಿ ಬಿದ್ದ ಮಗ ಧರೆಪ್ಪ ಮತ್ತೋರ್ವ ಬಾಲಕ ಬಾಗಪ್ಪ ಸಣ್ಣಕ್ಕಿಯನ್ನು ರಕ್ಷಣೆ ಮಾಡಲು ಬಸವರಾಜ್ ಧಾವಿಸಿದ್ದ. ಈ ವೇಳೆ ಕೃಷಿ ಹೊಂಡದಲ್ಲಿ ಮುಳುಗಿ ಬಸವರಾಜ್ ಮತ್ತು ಧರೆಪ್ಪ ಸಾವನ್ನಪ್ಪಿದ್ದಾರೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಾಗಪ್ಪನ ರಕ್ಷಣೆ ಮಾಡಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಸರಗೂರು:  ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಯೂಥ್  ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಕಂದೇಗಾಲ ಶಿವರಾಜು ಹಾಗೂ ಪಕ್ಷದ ಜಾಲತಾಣ ಅಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ಯಶವಂತಪುರ ಶಿವಲಿಂಗಯ್ಯರವರ ಹುಟ್ಟು ಹಬ್ಬವನ್ನು ವಿವಿಧ ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ವಿಶಿಷ್ಟವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಿಸಿದರು. ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದ ಬಳಿಕ ನಿರ್ಗತಿಕರಿಗೆ ಹಣ್ಣು ಹಂಪಲು ವಿತರಿಸಲಾಯಿತು. ನಂತರ ಸರಗೂರಿನ‌ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಮಾಜದ ಮುಖಂಡರೊಂದಿಗೆ ಕೇಕ್ ಕತ್ತರಿಸಿ, ಗಿಡ ನೆಡುವುದರ ಮೂಲಕ ಜನ್ಮ ದಿನವನ್ನು ಆಚರಿಸಿಕೊಂಡರು. ಬಳಿಕ ಮಾತನಾಡಿದ ಕಂದೇಗಾಲ ಶಿವರಾಜು ಅವರು, ಸರಗೂರು ತಾಲೂಕಿನ ಜನತೆಯು ಬಹಳ ವಿಶಿಷ್ಟ, ವಿಜೃಂಭಣೆಯಿಂದ ವಿವಿಧ ಸೇವಾ ಕಾರ್ಯಗಳ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿರುವುದು ಬಹಳ ಸಂತಸ ತಂದಿದೆ. ಜನತೆಯ ಅಭಿಮಾನಕ್ಕೆ ಸದಾ ಚಿರ ಋಣಿಯಾಗಿರುತ್ತೇನೆ. ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ ನನ್ನ ಯುವಕರಿಗೆ…

Read More

ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಸಿದ್ದಲಿಂಗ ಸಿಂಗಶೆಟ್ಟೆ ಇವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪಿಎಸ್ ಐ ಚಂದ್ರಶೇಖರ ನಿರ್ಣೆ ಅವರಿಗೆ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು. ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಸಿದ್ದಲಿಂಗ ಕಾರ್ಯ ನಿರ್ವಹಿಸಿ ಜನರ ಮನಸ್ಸನ್ನು ಗೆದ್ದಿದ್ದು ಹಾಗೂ ಅಪರವಾದ ಸೇವೆಯನ್ನು ಸಲ್ಲಿಸಿದ ಸಿದ್ದಲಿಂಗ ಅವರು  ಚಿಂತಾಕಿ   ಠಾಣೆಯಿಂದ ವರ್ಗಾವಣೆಗೊಂಡಿದ್ದಾರೆ. ಅವರು ಎಲ್ಲೇ ಇರಲಿ ಪ್ರಾಮಾಣಿಕವಾದ ಸೇವೆಯನ್ನ ಮಾಡಲು ಆ ದೇವರು ಅವರಿಗೆ ಶಕ್ತಿಯನ್ನು ಕೊಡಲಿ,  ಸಮಾಜಕ್ಕೆ ಒಳ್ಳೆಯ ನ್ಯಾಯ ಸಿಗುವಂತಾಗಲಿ ಎಂದು  ಹಾರೈಸಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶಿವಾನಂದ ಪವಾಡ ಶೆಟ್ಟಿ, ಪಿಎಸ್ ಐ ಶೇಕಶಾಹ ಪಟೇಲ್ ಹಾಗೂ ಪೊಲೀಸ್ ಸಿಬ್ಬಂದಿ ಚಿಂತಾಕಿ ಗ್ರಾಮಸ್ಥರು ಇದ್ದರು. ವರದಿ: ಅರವಿಂದ ಮಲ್ಲಿಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೀದರ್: ನನ್ನ ಮಗನ ಜೊತೆ ನಿಶ್ಚಿತಾರ್ಥವಾದ ಹುಡುಗಿ ಇನ್ನೊಬ್ಬ ಹುಡುಗನ ಜೊತೆ ಚಾಟ್, ವಿಡಿಯೋ ಕಾಲ್ ಮಾಡುತ್ತಿದ್ದಳು. ಇದರಿಂದ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಆ ಹುಡುಗಿಯ ಅಪ್ಪ, ಅಮ್ಮ ಹಾಗೂ ಹಿರಿಯರೆಲ್ಲ ಸೇರಿಯೇ ನಿಶ್ಚಿತಾರ್ಥವನ್ನು ಮುರಿಯುವ ನಿರ್ಧಾರ ಮಾಡಲಾಗಿದೆ. ಆದರೆ ಇದೇ ವಿಷಯವನ್ನಿಟ್ಟುಕೊಂಡು ಮಾಜಿ ಸಂಸದ ಭಗವಂತ್ ಖುಬಾ ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಔರಾದ್ ನ ಶಾಸಕ ಪ್ರಭು ಚೌವ್ಹಾಣ್ ಅವರು ಆರೋಪಿಸಿದರು. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಒಂದು ತಂಡ ಇದೆ. ಆ ತಂಡದ ನಾಯಕ ಮಾಜಿ ಸಂಸದ ಭಗವಂತ್ ಖುಬಾ ಅವರು. ಈ ತಂಡ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ನಿರ್ಧಾರ ಮಾಡಿದೆ. ಆದ್ದರಿಂದ ನನ್ನ ವೈಯಕ್ತಿಕ ವಿಷಯದಲ್ಲಿಯೂ ಕೂಡ ಭಾಗವಹಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು. ನನ್ನ ಮಗ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿಯು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಇದರ ಹಿಂದೆ ನನ್ನ…

Read More

ಸರಗೂರು:  ತಾಲ್ಲೂಕು ಚಿಕ್ಕದೇವಮ್ಮನ ಬೆಟ್ಟದ ಸುತ್ತಮುತ್ತಲು ಕಳೆದ ಅನೇಕ ವರ್ಷಗಳಿಂದ ಕಾಡಾನೆಗಳ ಹಾವಳಿ ಹಾಗೂ ಕಾಡು ಪ್ರಾಣಿಗಳಿಂದ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿದ್ದರೂ,  ಅರಣ್ಯಾಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಪುಟ್ಟು  ಆಕ್ರೋಶ ವ್ಯಕ್ತಪಡಿಸಿದರು. ಸುತ್ತಮುತ್ತಲ ಗ್ರಾಮಗಳಾದ ಲಂಕೆ, ಮನುಗನಹಳ್ಳಿ, ಹುಣಸಹಳ್ಳಿ, ಹೂವಿನಕೊಳ, ಅಲ್ಲಯ್ಯನಪುರ, ಬಸಾಪುರ, ಚಂದ್ರವಾಡಿ, ನಲ್ಲಿತಾಳಪುರ, ರಾಜೂರು, ಕಟ್ಟೆಹುಣಸೂರು, ನಂಜೀಪುರ, ಕುಂದೂರು, ಕಲ್ಲಂಬಾಳು ಹಾಗೂ ದಡದಹಳ್ಳಿ ಗ್ರಾಮದ ರೈತರು ಬೆಳೆದಂತಹ ಬೆಳೆ ಕಾಡುಪ್ರಾಣಿಗಳಿಂದಾಗಿ ನಾಶವಾಗುತ್ತಿದೆ. ಇತ್ತ ಅರಣ್ಯಾಧಿಕಾರಿಗಳು ಬೆಳೆನಾಶಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಬೆಳೆ ನಷ್ಟ ನೀಡದೆ ಪರಿಹಾರವೂ ವರ್ಷಾನುಗಟ್ಟಲೆ ಕಾಯಿಸಿದ ನಂತರ ಬೆಳೆ ನಷ್ಟದ ಶೇ. 5% ನಷ್ಟನ್ನು ಮಾತ್ರ ಪರಿ ರೈತರಿಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅರಣ್ಯಾಧಿಕಾರಿಗಳ ಈ ಬೇಜವಬ್ದಾರಿತನ ಹಾಗೂ ನಿರ್ಲಕ್ಷವನ್ನು ಖಂಡಿಸಿ ಎಲ್ಲಾ ಗ್ರಾಮಗಳ ಮುಖಂಡರ  ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಗ್ರಾಪಂ ಸದಸ್ಯ ಪುಟ್ಟು ಎಚ್ಚರಿಕೆ ನೀಡಿದರು. ವರದಿ: ಹಾದನೂರು ಚಂದ್ರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಸರಗೂರು:  ಪಟ್ಟಣ 11 ವಾರ್ಡಿನ ಬಿಡಗಲು ಗ್ರಾಮದ ಪಡವಲು ವೀರಕ್ತ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ  ತಾಲೂಕು ಘಟಕದಿಂದ ಅಭಾವೀಲಿಂ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ರವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು, ಪೋಟೋಗೆ ಪುಷ್ಪಾರ್ಚನೆ ಶ್ರದ್ಧಾಂಜಲಿ ಗೌರವ ಸಲ್ಲಿಸಲಾಯಿತು. ನಂತರ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ,  ಎನ್.ತಿಪ್ಪಣ್ಣನವರು ರಾಷ್ಟ್ರೀಯ ಮಹಾಸಭಾ ಉಪಾಧ್ಯಕ್ಷರಾಗಿ ಮಹಾಸಭಾಕ್ಕೆ ಕೆಲಸ ಕಾರ್ಯಗಳು ಮಾಡಿಕೊಂಡು ಬಂದರು. ಅವರು ಇಲ್ಲ ಎಂದು ತಾಲ್ಲೂಕು ಘಟಕದಿಂದ ಸಂತಾಪ ಸೂಚಿಸಿದ್ದಾರೆ. ಶ್ರದ್ಧಾಂಜಲಿ ಸಭೆಯನ್ನು ಸಮಾಜದ ಕಚೇರಿಯಲ್ಲಿ ಮಾಡಲಾಗಿತ್ತು. ಇವರು  ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಅಧ್ಯಕ್ಷರಾಗಿ ಸೇವಿಸಲ್ಲಿಸಿದ್ದು, ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ್ದಾರೆ ಎಂದರು ಪಡವಲು ಮಠ ಮಹಾದೇವಸ್ವಾಮಿಗಳು, ಹಂಚಿಪುರ ಕಿರಿಯ ತೋಂಟದಾರ್ಯ ಶ್ರೀಗಳು,  ಅಧ್ಯಕ್ಷರು  ಪದಾಧಿಕಾರಿಗಳು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಹಾಸಭಾದ ಅಧ್ಯಕ್ಷ ವೀರಭದ್ರಪ್ಪ, ಕೋಶಾಧ್ಯಕ್ಷ ಸಿ.ಕೆ.ಗಿರೀಶ್, ಟೌನ್ ಅಧ್ಯಕ್ಷ ಮೋಹನ್ ಕುಮಾರ್, ನಿರ್ದೇಶಕರು…

Read More

ಬೆಂಗಳೂರು: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ 4 ಸದಸ್ಯರ ಐಪಿಎಸ್ ಅಧಿಕಾರಿಗಳ ಎಸ್‌ಐಟಿಯನ್ನು ರಚಿಸಿದೆ. ಎಸ್‌ ಐಟಿಯ ನೇತೃತ್ವವನ್ನು ಪ್ರಣವ್ ಮೊಹಂತಿ ವಹಿಸಿಕೊಂಡಿದ್ದಾರೆ. SIT ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಲಾಗುತ್ತದೆ ಎಂದು ಆದೇಶದಲ್ಲಿ ಸೇರಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ (BNS) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ ಅಪರಾಧ ಮತ್ತು “ಕರ್ನಾಟಕದಾದ್ಯಂತ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗಲಿರುವ ಎಲ್ಲಾ ಇತರ ಕ್ರಿಮಿನಲ್ ಪ್ರಕರಣಗಳನ್ನು” ತನಿಖೆ ಮಾಡಲು “ವಿಶೇಷ ತನಿಖಾ ತಂಡವನ್ನು ರಚಿಸುವುದು ಸೂಕ್ತ” ಎಂದು ಶನಿವಾರ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತಿಪಟೂರು: ತಾಲ್ಲೂಕಿನ ರಂಗಾಪುರ ವಲಯದ ಬನ್ನೀಹಳ್ಳಿ ಹಾಲಿನ ಡೈರಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.2 ಲಕ್ಷ ಮೊತ್ತದ ಡಿ ಡಿ ಮಂಜೂರಾಗಿದ್ದು ತಾಲ್ಲೂಕಿನ ಯೋಜನಾಧಿಕಾರಿ ಉದಯ್ ಕೆ. ಶುಭಹಾರೈಸಿ ಗ್ರಾಮಸ್ಥರಿಗೆ ಡಿಡಿ ವಿತರಿಸಿದರು. ಈ ಸಂಧರ್ಭದಲ್ಲಿ ಬನ್ನಿಹಳ್ಳಿ ಹಾಲು ಒಕ್ಕೂಟ ಸಹಕಾರ ಸಂಘದ ಅಧ್ಯಕ್ಷರಾದ ಪರಮೇಶ್ವರಯ್ಯ, ನಿರ್ದೇಶಕರಾದ ಬಿ.ಎಮ್.ಶಶಿಧರ್, ಮಂಜುನಾಥಸ್ವಾಮಿ, ಕುಮಾರಸ್ವಾಮಿ, ಬಿ.ಎಸ್.ಉಮೇಶ್, ರವಿಕುಮಾರ್, ನಾಗರಾಜು ಮುಖ್ಯಕಾರ್ಯನಿರ್ವಾಹಕರಾದ ಬಿ.ಎಮ್.ಪ್ರಕಾಶ್, ಹಾಲು ಪರೀಕ್ಷಕರಾದ ಬಿ.ಎಸ್.ಕಲ್ಯಾಣ್ ಕುಮಾರ್,  ವಲಯ ಮೇಲ್ವಿಚಾರಕ ದಿನೇಶ್, ಸೇವಾಪ್ರತಿನಿಧಿ ಪ್ರೀತಿ ಸಂಘದ ಪಾಲುದಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ:  ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಚಿತ್ರದುರ್ಗ: ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ನೊಂದು ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜೆ.ಬಿ.ಹಳ್ಳಿಯಲ್ಲಿ ನಡೆದಿದೆ. ತಿರುಮಲ ರಾಂಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಿರುಮಲ (31) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ತಿರುಮಲ ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದು, ವಯಸ್ಸಾಗ್ತಿದೆ ಮದುವೆ ಮಾಡಿಕೊಳ್ಳಬೇಕು ಎನ್ನುವ ಚಿಂತೆಗೆ ಬಿದ್ದಿದ್ದರು ಎನ್ನಲಾಗಿದೆ. ಅಲ್ಲದೇ ಇತ್ತೀಚಿಗೆ ಮೂರು ಕಡೆ ಹೆಣ್ಣು ನೋಡಲು ತೆರಳಿದ್ದು, ಹೆಣ್ಣಿನ ಕಡೆಯವರಿಂದ ತಿರಸ್ಕಾರಗೊಂಡ ಪರಿಣಾಮ ಮನಸ್ಸಿಗೆ ಹೆಚ್ಚು ಘಾಸಿಯಾಗಿತ್ತು ಎನ್ನಲಾಗಿದೆ. ಮದುವೆ ಬಗ್ಗೆಯೇ ತೀವ್ರ ಯೋಚಿಸುತ್ತಿದ್ದ ತಿರುಮಲ ಮನನೊಂದು, ಮನೆಯಲ್ಲಿ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೃತನ ತಂದೆ ಸೋಮರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ನಟ ದರ್ಶನ್‌ ಅವರ ಬಹು ನಿರೀಕ್ಷಿತ ಚಿತ್ರ ʻದಿ ಡೆವಿಲ್‌ʼ ಸಿನಿಮಾ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಥಾಯ್ಲೆಂಡ್‌ ನಲ್ಲಿ ಶೂಟಿಂಗ್‌ ನಲ್ಲಿ ಬಿಝಿ ಚಿತ್ರತಂಡ ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ಇದರ ವಿಡಿಯೋ ತುಣುಕನ್ನು ನಟ ದರ್ಶನ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅತೀ ಶೀಘ್ರವೇ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವ ಸುದ್ದಿಯನ್ನೂ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ ಖಾತೆಯಲ್ಲಿ ಮೋಷನ್‌ ಪೋಸ್ಟರ್‌ ನ 1:05 ನಿಮಿಷದ ವಿಡಿಯೋ ಹಂಚಿಕೊಂಡಿರುವ ದರ್ಶನ್,  ನಲ್ಮೆಯ ಸೆಲಬ್ರಿಟಿಗಳಿಗೆ… ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಮೋಷನ್‌ ಪೋಸ್ಟರ್‌ನಲ್ಲಿ ದರ್ಶನ್‌ ಖದರ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More