Author: admin

ಸರಗೂರು: ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ನೀಡಬೇಕು, ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಲಂಕೆ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸೋಮವಾರ ಪಟ್ಟಣದ ಸರಗೂರು ವಲಯ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಕಾರರು, ರೈತರ ಜಮೀನುಗಳು ಕಾಡಂಚಿನ ಭಾಗಗಳಲ್ಲಿದ್ದು, ಈ ಭಾಗದಲ್ಲಿ ಬೆಳೆಯುವ ಹತ್ತಿ, ಜೋಳ, ಬಾಳೆ, ಕಬ್ಬು, ರಾಗಿ, ಭತ್ತ, ತೊಗರಿ, ತೋಟಗಾರಿಕ ಬೆಳೆಗಳು, ತರಕಾರಿ ಬೆಳೆಗಳಿಗೆ ಕಾಡುಪ್ರಾಣಿಗಳು ಹಾನಿ ಮಾಡುತ್ತಿವೆ. ಚಿಕ್ಕದೇವಮ್ಮನ ಬೆಟ್ಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಾವಳಿ ತಡೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾವಲು ಕಾಯಬೇಕು. ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು.…

Read More

ಯುವ ರಾಜ್ ಕುಮಾರ್  ನಟನೆಯ ‘ಎಕ್ಕ’ ಚಿತ್ರ ಕಳೆದ ವಾರ ತೆರೆಗಪ್ಪಳಿಸಿದೆ. ಈ ಚಿತ್ರ ಈ ಸಾಲಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪಿಆರ್‌ ಕೆ ಪ್ರೊಡಕ್ಷನ್ಸ್​​ ನ ಅಶ್ವಿನಿ ಪುನೀತ್ ರಾಜ್‌ ಕುಮಾರ್, ಜಯಣ್ಣ ಫಿಲ್ಮ್ಸ್​​​ನ ಜಯಣ್ಣ ಮತ್ತು ಭೋಗೇಂದ್ರ ಹಾಗೂ ಕೆಆರ್‌ ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ಕಳೆದ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ 6.12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  ಶುಕ್ರವಾರ 1.45 ಕೋಟಿ ರೂ., ಶನಿವಾರ 1.35 ಕೋಟಿ ರೂ., ಭಾನುವಾರ 1.65 ಕೋಟಿ ರೂ., ಸೋಮವಾರ 0.78 ರೂಪಾಯಿ ಒಟ್ಟು 5.23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಒಳ್ಳೆಯ ಚಿತ್ರಗಳನ್ನು ಮಾಡಿದರೆ ಜನ ಖಂಡಿತವಾಗಿಯೂ  ಸಿನಿಮಾ ಮಂದಿರಕ್ಕೆ ಬರುತ್ತಾರೆ ಎನ್ನುವುದು ಸಾಬೀತಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಮಾದೇವ ಚಿತ್ರ ಕೂಡ ದೊಡ್ಡ ಯಶಸ್ಸನ್ನು ಪಡೆದಿದೆ. ಸಿನಿಮಾ…

Read More

ಮಂಡ್ಯ: ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಮೂಲದ ಭರತ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಓದಿನ ಬಗ್ಗೆ ನಿರಾಸಕ್ತಿ ಹೊಂದಿದ್ದ ಭರತ್ ಮೊದಲ ವರ್ಷದ ಪರೀಕ್ಷೆಗಳಿಗೆ ಗೈರಾಗಿದ್ದ. ಅಲ್ಲದೇ ಕಾಲೇಜಿಗೂ ಸಹ ಭರತ್ ಸರಿಯಾಗಿ ಹೋಗುತ್ತಿರಲಿಲ್ಲ. ಫುಟ್ಬಾಲ್ ಆಟದಲ್ಲಿ ಭರತ್ ಹೆಚ್ಚಿನ ಆಸಕ್ತಿ ಹೊಂದಿದ್ದ. ಮೊದಲ ವರ್ಷ ಗೈರು ಆಗಿದ್ದ ಪರೀಕ್ಷೆಗಳನ್ನು ಈ ಬಾರಿ ಪಾಸ್ ಮಾಡಿಕೊಳ್ಳಬೇಕೆಂದು ಪರೀಕ್ಷಾ ಶುಲ್ಕವನ್ನು ಕಟ್ಟಲು ಭರತ್ ಮುಂದಾಗಿದ್ದ ಎನ್ನಲಾಗಿದೆ. ಭಾನುವಾರ ರಾತ್ರಿ 12 ಗಂಟೆವರೆಗೆ ಹಾಸ್ಟೆಲ್‌ ನ ವಿದ್ಯಾರ್ಥಿಗಳೊಂದಿಗೆ ಭರತ್ ಮಾತನಾಡಿದ್ದಾನೆ. ಬಳಿಕ ತನ್ನ ಕೊಠಡಿಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ  ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ಕೊರಟಗೆರೆ : ಪಾವಗಡದಿಂದ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವರ ಕ್ಷೇತ್ರ ಕೊರಟಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ಪಾವಗಡ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಳೆ ಹಾಗೂ ಮೋಡಕವಿದ ವಾತಾವರಣ ಇರುವ ಕಾರಣ ರಸ್ತೆ ಮೂಲಕ ಸಂಚಾರ ಮಾಡಿದರು. ಗೃಹಸಚಿವ ಕ್ಷೇತ್ರವಾದ ಕೊರಟಗೆರೆ ಬೈಪಾಸ್ ಬಳಿ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಶ್ವಥ್‌ ನಾರಾಯಣ್, ಅರಕೆರೆ ಶಂಕರ್, ವಾಲೆಚಂದ್ರಯ್ಯ, ಮಾಜಿ ಜಿಪಂ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ, ಜಯಮ್ಮ, ಬೈರೇಶ್, ಕಾರ್ ಮಹೇಶ್, ಟಿ.ಸಿ.ರಾಮಯ್ಯ, ಮೈಲಾರಪ್ಪ, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ತಾರಕಕ್ಕೇರುತ್ತಿದೆ. ಎರಡು ಬಣಗಳು ದೆಹಲಿಯಲ್ಲಿ ತಂತ್ರ, ಪ್ರತಿ ತಂತ್ರ ಹೆಣೆಯುತ್ತಿದೆ. ಒಂದೆಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಬಲಿಗರು ದೆಹಲಿಗೆ ತೆರಳಿ ವಿರೋಧಿ ಬಣದ ವಿರುದ್ಧ ದೂರು ನೀಡಿದೆ. ಇನ್ನೊಂದೆಡೆ ವಿಜಯೇಂದ್ರ ವಿರೋಧಿ ಬಣ ದೆಹಲಿ ಯಾತ್ರೆಗೆ ಸಜ್ಜಾಗಿದೆ. ಕಳೆದ ವಾರ ದೆಹಲಿಗೆ ತೆರಳಿದ್ದ ಎಂಪಿ ರೇಣುಕಾಚಾರ್ಯ ತಂಡ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಅವರನ್ನು ಭೇಟಿಯಾಗಿ, ದಾವಣಗೆರೆಯಲ್ಲಿ ಪ್ರತ್ಯೇಕ ಸಮಾವೇಶ ನಡೆಸಿದ ಬಗ್ಗೆ ದೂರು ಸಲ್ಲಿಸಿತ್ತು. ಇದೀಗ ವಿಜಯೇಂದ್ರ ವಿರುದ್ಧದ ಬಣ ಮುಂದಿನ ವಾರ ದೆಹಲಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಭಿನ್ನರ ತಂಡದ ಸದಸ್ಯರು ಈ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಬಿ.ಪಿ. ಹರೀಶ್ ಕೂಡ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ. ವಿಜಯೇಂದ್ರ ವಿರೋಧಿ ಬಣ ಬಿಜೆಪಿ ರಾಜ್ಯಾಧ್ಯಕ್ಷ…

Read More

ವಿಜಯಪುರ: 2 ತಿಂಗಳಲ್ಲಿ ಮತ್ತೆ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಆಗಿರೋದು ನಾನು. ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು. ಆದ್ರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ನನ್ನನ್ನ ಸೇರಿಸಿಕೊಳ್ತಾರೆ ಎಂದರು. ನಮ್ಮ ಶಕ್ತಿ ಇದ್ದರೆ ಎಲ್ಲರೂ ಕರೆಯುತ್ತಾರೆ. ಇಲ್ಲ ಅಂದ್ರೆ ಅಪ್ಪಾಜಿ ಎನ್ನುತ್ತ ಯಡ್ಡಿಯೂರಪ್ಪ, ವಿಜಯೇಂದ್ರ ಕೈ, ಕಾಲು ಹಿಡಿಯಬೇಕಾಗುತ್ತೆ ಎಂದು ವಾಗ್ದಾಳಿ ನಡೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು: ಮ್ಯಾನ್​ ಹೋಲ್ ಗೆ ಇಳಿದು ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನ RMC ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಆಶ್ರಯನಗರದ ನಿವಾಸಿ ಪುಟ್ಟಸ್ವಾಮಿ ಮೃತ ದುರ್ವೈವಿ. ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಆಂಥೋನಿ ಹಾಗೂ ಪುಟ್ಟಸ್ವಾಮಿ ಒಳಚರಂಡಿಗೆ ಇಳಿದಿದ್ದರು. ಸುಮಾರು ಅರ್ಧ ಗಂಟೆ ಒಳಗಡೆ ಕೆಲಸ ಮಾಡಿದ್ದಾರೆ. ಬಳಿಕ ಉಸಿರುಗಟ್ಟಿದಂತಾಗಿದೆ ಮೇಲೆ ಅಂಥೋನಿ ಹಾಗೂ ಪುಟ್ಟಸ್ವಾಮಿ ಆಚೆ ಬಂದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಾಗದೆ ಪುಟ್ಟಸ್ವಾಮಿ ಮನೆಗೆ ತೆರಳಿದ್ದ ವೇಳೆ ಸಾವನ್ನಪ್ಪಿದ್ದಾನೆ. ಇನ್ನು ಅಸ್ವಸ್ಥಗೊಂಡಿದ್ದ ಆಂಥೋನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಣದ ಆಸೆ ತೋರಿಸಿ ಒಳಚರಂಡಿಗೆ ಇಳಿಸಿರುವ ಶಂಕೆ ವ್ಯಕ್ತವಾಗಿದ್ದು, ಯಾರು ಇಳಿಸಿದ್ದು ಸೇರಿದಂತೆ ಈ ಬಗ್ಗೆ ಇನ್ನಿತರ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತಿಪಟೂರು: ಆರ್ಯವೈಶ್ಯ ಸಮಾಜಕ್ಕೆ ಮುಂದುವರೆದ ಜನಾಂಗ ಎಂದು ಸರ್ಕಾರದ ಯಾವುದೇ ನೆರವು ಸಿಗುತ್ತಿಲ್ಲ, ನಮ್ಮ ಸಮಾಜದ ಕಡುಬಡವರಿಗೂ ಒಂದು ಮನೆ ಸಿಗುತ್ತಿಲ್ಲ, ಜಾತಿ ಆಧಾರಿತವಾದ ಈ ಕಾರ್ಯಕ್ರಮದಿಂದ ನಮ್ಮ ಸಮಾಜದ ಬಡವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರ್ಯವೈಶ್ಯ ಸಮಾಜದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ತಿಳಿಸಿದರು. ನಮ್ಮ ಸಮಾಜದ ಬಡವರಿಗೆ ನಮ್ಮ ಸಮಾಜದ ಮೂಲಕವೇ ನೆರವು ನೀಡುತ್ತಿದೆ. ಇದರ ಭಾಗವಾಗಿ ತಿಪಟೂರಿನಲ್ಲಿ ತುಮಕೂರು ಜಿಲ್ಲಾ ಆರ್ಯವೈಶ್ಯ ಸಮಾಜದ ನಡೆಯುತ್ತಿದೆ. ಸಮಾಜದ ಕುಂದುಕೊರತೆ ತಿಳಿದು ಸಮಾಜದ ಈ ಕಾರ್ಯಕ್ರಮವನ್ನ ಮನೆ ಮನೆಗೆ ತಲುಪಿಸುತ್ತಿದ್ದೇನೆ ಎಂದರು. ನಮ್ಮ ಸಮಾಜದಿಂದ ಕಳೆದ ಆರು ವರ್ಷಗಳಲ್ಲಿ ಸಾವು 400 ಲ್ಯಾಪ್ ಟಾಪ್ ವಿತರಿಸಿದ್ದು, ಲ್ಯಾಪ್ ಟಾಪ್ ಗಳನ್ನು ಇತರೆ ಸಮಾಜಕ್ಕೆ ನೀಡಿದ್ದೇವೆ. ಆರ್ಯ ವೈಶ್ಯರಿಗಷ್ಟೇ ಅಲ್ಲ ಎಲ್ಲಾ ಸಮಾಜದವರಿಗೂ ನೀಡುತ್ತಾ ಬಂದಿದ್ದೇವೆ ಎಂದರು. ದಾಬಸ್ಪೇಟೆ ಹತ್ತಿರ ಸುಮಾರು ಎಂಟು ಎಕ್ಕರೆ ಭೂಮಿಯನ್ನು 70 ಕೋಟಿ ವೆಚ್ಚದಲ್ಲಿ ಎಲ್ ಕೆ ಜಿಯಿಂದ ಉನ್ನತ ಪದವಿವರೆಗೂ ವಿದ್ಯಾಭ್ಯಾಸಕ್ಕೆ ರೆಸಿಡೆನ್ಸಿಯಲ್ ಶಾಲೆ ವಾಸವಿ…

Read More

ಮುಂಬೈ: ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿರುವ ಘಟನೆ ಮುಂಬೈ ಏರ್ ​ಪೋರ್ಟ್​​ನಲ್ಲಿ ನಡೆದಿದೆ. ವಿಮಾನಯಾನ ಸಂಸ್ಥೆಯ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಅಪಾಯವಿಲ್ಲದೇ ಪರಾರಾಗಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ವಿಮಾನವನ್ನು ಹೆಚ್ಚಿನ ಬಳಕೆಗೆ ಅನುಮತಿಸುವ ಮೊದಲು ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಶಿವಮೊಗ್ಗ: ಅಬ್ಬಿ ಫಾಲ್ಸ್‌ ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ನೀರುಪಾಲಾಗಿರುವ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಮೇಶ್ (35) ಮೃತಪಟ್ಟವರು ಎಂದು ತಿಳಿದು ಬಂದಿದೆ. ಇವರು  ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.  ತಮ್ಮ ಐವರು ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್‌ನಲ್ಲಿ ಫೋಟೋಗೆ ಪೋಸ್ ನೀಡುವಾಗ ಫಾಲ್ಸ್‌ಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಫಾಲ್ಸ್‌ನಲ್ಲಿ ರಮೇಶ್‌ ಕಣ್ಮರೆಯಾಗುವ 20 ಸೆಕೆಂಡ್‌ನ ವಿಡಿಯೋ ವೈರಲ್‌ ಆಗಿದೆ. ಘಟನೆಯ ಬಳಿಕ ರಮೇಶ್ ಮೃತದೇಹವು ಫಾಲ್ಸ್‌ನ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More