Author: admin

ಸರಗೂರು:  ಪಟ್ಟಣದ 10 ವಾರ್ಡಿನಲ್ಲಿ ಗುರುವಾರ ದಂದು ಬೆಳ್ಳಂಬೆಳಗ್ಗೆ ಕೋತಿಗಳ ಹಾವಳಿಯಿಂದ ಹೊರಗಡೆ ಹೋಗಲು ಭಯವಾಗುತ್ತಿದೆ. ಕೂಡಲೇ ಕೋತಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ವಾರ್ಡಿನ ಜನರು ಒತ್ತಾಯಿಸಿದರು. ಪಟ್ಟಣದಲ್ಲಿ ಸುಮಾರು ವಾರ್ಡುಗಳಲ್ಲಿ ಹತ್ತು-–ಹನ್ನೆರಡು ಮಹಿಳೆಯರು ಹಾಗೂ ಸಣ್ಣ ಮಕ್ಕಳ ಮೇಲೆ ಕೋತಿಗಳು ದಾಳಿ ಮಾಡಿ, ಗಾಯಗೊಳಿಸಿದ್ದ ಘಟನೆಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯವರು ಕೂಡಲೇ ಇದಕ್ಕೊಂದು ಪರಹಾರ ಕಂಡುಹಿಡಿಯಬೇಕು ಎಂದು ವಾರ್ಡಿನ ಶಾಂತಿ ಆರೋಪ ಮಾಡಿದ್ದಾರೆ. ಅರಣ್ಯ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಅವರು ನಮಗೆ ಬರುವುದಿಲ್ಲ.ಇವರಿಂದ ಅವರಿಗೆ ಹೇಳುತ್ತಿದ್ದಾರೆ.ಇದರ ಬಗ್ಗೆ ಯಾರಿಗೂ ಹೇಳಬೇಕು ಎನ್ನುವುದು ಗೊತ್ತಿಲ್ಲ.ಕೋತಿಗಳ ಹಾವಳಿಯಿಂದ ವಾರ್ಡಿನ ಜನರು ಕಂಗಾಲಾಗಿದ್ದು, ರಸ್ತೆಯಲ್ಲಿ ಮತ್ತು ಮನೆಯ ಮುಂಭಾಗದಲ್ಲಿ ಒಬ್ಬೊಬ್ಬರೇ ತಿರುಗಾಡುವಂತಿಲ್ಲ. ಮನುಷ್ಯರ ಮೇಲೆ ದಾಳಿ ಮಾಡುವುತ್ತಿದ್ದವೆ ಅಂಗವಿಕಲರ ಮಹಿಳೆ ಮನೆ ಮುಂಭಾಗದಲ್ಲಿ ಕುಳಿತಿರುವಾಗ ದಾಳಿ…

Read More

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಶೇಂಬೆಳ್ಳಿ ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸಿನಲ್ಲಿ ಅವ್ಯವಹಾರ ನಡೆಸಿದ್ದು, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಪದಾಧಿಕಾರಿಗಳು ಮಂಗಳವಾರ ಔರಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಪಂಚಾಯಿತಿ ಪಿಡಿಒ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು ಇದೆ ವೇಳೆ ಕಮಲಹಾಸನ್, ಎಶೇಪ್ಪ ಶೇಂಬೆಳ್ಳಿ, ಆನಂದ ಶೇಂಬೆಳ್ಳಿ, ಶಿರೋಮಣಿ, ಸಿದ್ಧಾರ್ಥ್ ಯೋಗಿ, ದಾವಿದ ಎಕ್ಲಾರ್, ರಾಜಕುಮಾರ ಶೇಂಬೆಳ್ಳಿ ಇದ್ದರು. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೀದರ್ : ಔರಾದ್ ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಹಿನ್ನೆಲೆ ಜಿಲ್ಲೆಯ ವಸತಿ ನಿಲಯಗಳ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸುವ ದಿಸೆಯಲ್ಲಿ ಅವರೊಂದಿಗೆ ಮನೋವೈದ್ಯರ ಮೂಲಕ ಪ್ರತಿ ವಾರ ಸಮಾಲೋಚನೆ ನಡೆಸಲು ಕ್ರಮವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ಅಧಿಕಾರಿಗೆ ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನಿರಗುಡೆ ಮತ್ತು ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ ಪಾಟೀಲ್ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಅಗತ್ಯ ಸಲಹೆಗಳು ನೀಡಿದ್ದಾರೆ. ಜಿಲ್ಲೆಯ ಸಿಎಚ್‌ ಸಿ ಮತ್ತು ಪಿಎಚ್‌ ಸಿ ಕೇಂದ್ರಗಳಲ್ಲಿನ ವೈದ್ಯಾಧಿಕಾರಿಗಳು ಪ್ರತಿ ವಾರಕ್ಕೊಮ್ಮೆ ತಮ್ಮ ವ್ಯಾಪ್ತಿಯ ವಸತಿ ನಿಲಯಗಳಿಗೆ ಭೇಟಿ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಅವರ ಚಲನವಲನಗಳಲ್ಲಿ…

Read More

ಆಂಧ್ರಪ್ರದೇಶ: ವೇಶ್ಯಾವಾಟಿಕೆ ಮಾಡಲು ಒಪ್ಪದ ಲಿವ್–ಇನ್ ಸಂಗಾತಿಯನ್ನು ಗೆಳೆಯನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಪುಷ್ಪಾ ಎಂಬಾಕೆ ಮೃತಪಟ್ಟ ಮಹಿಳೆಯಾಗಿದ್ದಾರೆ. ಆಕೆಗೆ ಈ ಹಿಂದೆಯೇ ಬೇರೊಬ್ಬರ ಜತೆ ವಿವಾಹವಾಗಿತ್ತು. ಪತಿಯಿಂದ ಬೇರ್ಪಟ್ಟು ಕಳೆದ ಆರು ತಿಂಗಳಿನಿಂದ ಶೇಖ್ ಶಮ್ಮಾ ಎಂಬಾತನೊಂದಿಗೆ ವಾಸಿಸುತ್ತಿದ್ದಳು. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಮ್ಮಾ ಆಕೆಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ. ತನ್ನೊಂದಿಗೆ ತಾನು ಹೇಳಿದ್ದ ಜಾಗಕ್ಕೆ ಬರಬೇಕೆಂದು ಕೇಳಿದ್ದಾನೆ ತೀವ್ರ ವಾಗ್ವಾದ ನಡೆದಿದೆ, ಆಕೆ ನಿರಾಕರಿಸಿದ್ದಾಳೆ. ಬಳಿಕ ಆತ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಆಕೆಯ ಎದೆಯ ಎಡಭಾಗ ಮತ್ತು ಕಾಲಿಗೆ ಇರಿದಿದ್ದಾನೆ. ಆತನನ್ನು ತಡೆಯಲು ಯತ್ನಿಸಿದ್ದ ಪುಷ್ಪಾ ತಾಯಿ ಹಾಗೂ ಆಕೆಯ ಸಹೋದರನ ಮೇಲೂ ಶಮ್ಮಾ ಹಲ್ಲೆ ನಡೆಸಿದ್ದಾನೆ. ಅತಿಯಾದ ರಕ್ತಸ್ರಾವದಿಂದ ಪುಷ್ಪಾ ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಹುಡುಕಾಟಕ್ಕೆ…

Read More

ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಲಗೊಂಡ ಗ್ರಾಮದ ಬಳಿ  ಶಾಲಾ ಬಸ್ ಚಾಲನೆ ಮಾಡುತ್ತಿದ್ದ ವೇಳೆಯೇ ಚಾಲಕ  ಹೃದಯಾಘಾತದಿಂದ ಚಾಲಕ ಮೃತಪಟ್ಟ ನಡೆದಿದೆ. ಪಕ್ಕಿರೇಶ ಮಲ್ಲೇಶಣ್ಣನವರ್ (25) ಖಾಸಗಿ ಶಾಲೆಯ ಬಸ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇವರು ಸಂಜೆ ಶಾಲೆಯಿಂದ ಮಕ್ಕಳನ್ನು ಮನೆಗೆ ಡ್ರಾಪ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ರಸ್ತೆ ಬದಿಯಲ್ಲಿ ಅವರು ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಮಕ್ಕಳು ಚೀರಾಡಿ ಸ್ಥಳೀಯರನ್ನು ಸಹಾಯಕ್ಕಾಗಿ ಕರೆದಿದ್ದಾರೆ, ತಕ್ಷಣ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಗಾಂಧೀನಗರ:  ಮೀನು ನೋಡಲು 7 ವರ್ಷದ ಮಗಳನ್ನು ಕರೆದುಕೊಂಡು ಹೋದ ತಂದೆ ಮಗಳನ್ನು ಕಾಲುವೆಗೆ ತಳ್ಳಿ ಹಾಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಗುಜರಾತ್‌ ನಲ್ಲಿ ನಡೆದಿದೆ. ಭೂಮಿಕಾ ಮೃತ ಬಾಲಕಿಯಾಗಿದ್ದು,  ಖೇಡಾ ನಿವಾಸಿ ವಿಜಯ್‌ ಸೋಲಂಕಿ ತನ್ನ ಮಗಳನ್ನು ಹತ್ಯೆ ಮಾಡಿದ ತಂದೆಯಾಗಿದ್ದಾನೆ.  ಘಟನೆ ಸಂಬಂಧ ಪತಿ ವಿರುದ್ಧ ಅಂಜನಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ. ಪತಿ ಗುಜರಾತ್‌ ನ ನರ್ಮದಾ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಸೋಲಂಕಿ ದಂಪತಿ ತಮ್ಮ ಮಗಳ ಜೊತೆ ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೂವರು ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತವರು ಮನೆಗೆ ಹೋಗುವ ಬಯಕೆಯನ್ನು ಅಂಜನಾ ವ್ಯಕ್ತಪಡಿಸಿದರು. ಅದಕ್ಕೆ ಪತಿ ನಿರಾಕರಿಸಿದ. ‘ನನಗೆ ಗಂಡು ಮಗು ಬೇಕಿತ್ತು. ಆದರೆ, ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೀಯಾ’ ಎಂದು ಪತ್ನಿಯನ್ನು ನಿಂದಿಸಿದ್ದ. ಕೆಲವು ನಿಮಿಷಗಳ ನಂತರ, ರಾತ್ರಿ 8 ಗಂಟೆ ಸುಮಾರಿಗೆ, ಆ…

Read More

‘ಜಸ್ಟಿಸ್ ಫಾರ್ ಸೌಮ್ಯ’(Justice for Soumya) ಎಂಬ ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ನೈಜ ಘಟನೆಯೊಂದನ್ನು ಆಧರಿಸಿದ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಲಾಗಿದೆ. ಚಿತ್ರದ ನಿರ್ದೇಶಕರಾದ ಟೈಗರ್ ನಾಗ್  ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು “ಧಗ ಧಗ ಉರಿಯುತ್ತಿವೆ ಜ್ವಾಲೆ” ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಟೈಗರ್ ನಾಗ್ ತಾವೇ ಬರೆದು ಹಾಡಿದ್ದಾರೆ. ಚಿತ್ರಕ್ಕೆ  ವಿಪಿನ್ ಛಾಯಾಗ್ರಹಣ ಮಾಡಿದ್ದಾರೆ. ಕೆ.ಮಂಜು ಕೋಟೆಕೆರೆ ಸಂಭಾಷಣೆ ಇದೆ. ಟೈಗರ್ ನಾಗ್ ಸಂಗೀತ ನೀಡಿ, ಗೀತೆ ರಚನೆ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು: ಹೈಕಮಾಂಡ್ ನಿರ್ಧಾರವನ್ನು ನಾನು, ಡಿ.ಕೆ.ಶಿವಕುಮಾರ್ ಇಬ್ಬರೂ ಪಾಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಒಬಿಸಿ ಸಲಹಾ ಮಂಡಳಿ ಸಭೆಯ ಸುದ್ದಿಗೋಷ್ಟಿ ವೇಳೆ, ಒಬಿಸಿ ನಾಯಕ ಇರುವ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುತ್ತಾ? ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರಶ್ನೆ ಕೇಳಿದ ವೇಳೆ ಎಐಸಿಸಿ ಒಬಿಸಿ ಅಧ್ಯಕ್ಷ ಅನಿಲ್ ಜೈ ಹಿಂದ್ ಅವರು ತಬ್ಬಿಬ್ಬಾದರು. ಪ್ರಶ್ನೆಗೆ ತಡವರಿಸಿದಾಗ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಂದು ಅನಿಲ್ ಜೈ ಹಿಂದ್ ಕಿವಿಯಲ್ಲಿ ಏನೋ ಹೇಳಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನೀತಿ, ಸಿದ್ಧಾಂತ ನಿಮಗೆ ಗೊತ್ತಿದೆ, ಹಿಂದುಳಿದ ವರ್ಗಗಳ ಭಾಗೀದಾರರನ್ನ ಉತ್ತೇಜಿಸುತ್ತದೆ. ನಿಮ್ಮ ಪ್ರಶ್ನೆ ಆಶ್ಚರ್ಯ ತಂದಿದೆ ಜಾರಿಕೊಂಡರು. ಇದೇ ವೇಳೆ ಅನಿಲ್ ಜೈ ಹಿಂದ್‌ ಗೆ ಅದು ಹೈಕಮಾಂಡ್ ತೀರ್ಮಾನ ಅಂತೇಳಿ ಎಂದು ಸಿದ್ದರಾಮಯ್ಯ ಅವರೇ ಹೇಳಿಕೊಟ್ಟ ಘಟನೆಯೂ ನಡೆಯಿತು. ಬಳಿಕ ಹೈಕಮಾಂಡ್ ತೀರ್ಮಾನ ಎಂದು ಹೇಳಿ ಅವರು ಸುಮ್ಮನಾದರು. ಆದರೆ ಅಷ್ಟಕ್ಕೆ ಬಿಡದ ಸಿಎಂ ಸಿದ್ದರಾಮಯ್ಯ, ತಾವೇ ಮೈಕ್ ತೆಗೆದುಕೊಂಡು ಮತ್ತೊಮ್ಮೆ…

Read More

ಸರಗೂರು:  ಜುಲೈ ತಿಂಗಳ ಪಡಿತರ ಆಹಾರ ಧಾನ್ಯ ಅರ್ಧ ತಿಂಗಳು ದಾಟಿದರೂ ಪಡಿತರ ಚೀಟಿದಾರಿಗೆ ಇನ್ನೂ ತಲುಪಿಲ್ಲ. ಅಂಗಡಿ ಮುಂದೆ ಎಷ್ಟು ಹೊತ್ತು ಕಾದರೂ ಬಾಗಿಲು ತೆರೆಯದೇ ಇರುವ ಕಾರಣದಿಂದ ಜನರು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.  ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಪಡಿತರ ಆಹಾರ ಧಾನ್ಯವನ್ನು ನ್ಯಾಯ ಬೆಲೆ ಅಂಗಡಿ ಮಾಲಿಕರು ತಲುಪಿಸುತ್ತಿಲ್ಲ,  ಅಂಗಡಿಯನ್ನು ಮುಚ್ಚಿಕೊಂಡಿರುವುದು  ಬುಧವಾರದಂದೂ ಕಂಡು ಬಂದಿದೆ. ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ನೀಡದೆ ಅಂಗಡಿ ಮಾಲಿಕರು ನಿರ್ಲಕ್ಷ ಮಾಡುತ್ತಿದ್ದಾರೆ ವಾರ್ಡಿನ ಜನರು ಆರೋಪಿಸಿದರು. ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಒಟ್ಟು 10 ಕೆ.ಜಿ. ಅಕ್ಕಿಯನ್ನು ಪ್ರತಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಪ್ರಸಕ್ತ ಜುಲೈ ತಿಂಗಳಿನ ಅರ್ಧ ಭಾಗ ಮುಗಿದರೂ ಇನ್ನೂ ಪಡಿತರ ಚೀಟಿದಾರರಿಗೆ ಅಕ್ಕಿ ದೊರೆತಿಲ್ಲ. ಪಟ್ಟಣದಲ್ಲಿ 12 ನ್ಯಾಯಬೆಲೆ…

Read More

ಸರಗೂರು:  ಶಾಸಕರು ತಾಲೂಕಿನಲ್ಲಿ ಒಂದು ಗುಂಟೆ ಜಾಗ ಹಾಗೂ ರೆಸ್ಟಾರ್ಟ್ ನ್ನು ತೆಗೆದುಕೊಂಡಿಲ್ಲ. ಯಾರಿಗೂ ಅವಕಾಶವನ್ನೂ ನೀಡಿಲ್ಲ, ತಾಲ್ಲೂಕಿನ ಸಂಪತ್ತು ಹಾಳು ಮಾಡಲು ಮುಂದಾಗಿಲ್ಲ. ಆದರೆ ಮಾದ್ಯಮ ಮತ್ತು ಪತ್ರಿಕೆಯಲ್ಲಿ ಶಾಸಕರ ವಿರುದ್ಧ ತಾಲೂಕಿನ ಸಂಪತ್ತು ಹಾಳು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕೃಷ್ಣನಾಯಕರವರು ಹೇಳಿಕೆ ನೀಡಿದ್ದಾರೆ. ಅವರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿರ್ವಾಳ್ ಚಿಕ್ಕಣ್ಣ ಕಿಡಿಕಾರಿದರು. ತಾಲ್ಲೂಕಿಗೆ ಕೃಷ್ಣನಾಯಕ ಅಮಾವಾಸ್ಯೆ ಮತ್ತು ಪೂರ್ಣಿಮೆಗೆ ಬರುತ್ತಿದ್ದಾರೆ. ನಮ್ಮ ಶಾಸಕ ಅನಿಲ್ ಚಿಕ್ಕಮಾದುರವರ ಬಗ್ಗೆ ಅವರಿಗೆ ಏನು ಗೊತ್ತು? ತಾಲೂಕಿನ ಬಗ್ಗೆ ಸಾರ್ವಜನಿಕರು ಹಾಗೂ ರೈತರ ಕಷ್ಟ ಕೇಳುವುದಕ್ಕೆ ಬರಲ್ಲ. ಇನ್ನೂ ತಾಲೂಕಿನ ಅಭಿವೃದ್ಧಿ ಕೆಲಸದ ಬಗ್ಗೆ ಆ ವ್ಯಕ್ತಿಗೇನು ಗೊತ್ತು? ಎಲ್ಲೋ ಕುಳಿತುಕೊಂಡು ಮಾಧ್ಯಮಗಳಲ್ಲಿ ಆರೋಪ ಮಾತನಾಡುವುದು ತಪ್ಪು.  ತಾಲ್ಲೂಕಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ನೇರವಾಗಿ ಆರೋಪ ಮಾಡಿ, ಅದನ್ನು ಬಿಟ್ಟು ಅಲ್ಲಿ ಇಲ್ಲಿ ಕುಳಿತು ಮಾತನಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ…

Read More