Subscribe to Updates
Get the latest creative news from FooBar about art, design and business.
- ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
- ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
- ಆ.29: ಪಾವಗಡದಲ್ಲಿ ಉದ್ಯೋಗ ಮೇಳ
- ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
- ಮೇಕೆ ಮೇಲೆ ದಾಳಿ ಮಾಡಲು ಬಂದ ಚಿರತೆ ಸೆರೆ
- ವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್: ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ!
- ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ
- ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಪ್ರಾಮಾಣಿಕತೆ ಬೆಳೆಸಿಕೊಳ್ಳುವುದು ಮುಖ್ಯ: ಸಾಹಿತಿ ರಿಜ್ವಾನ್ ಪಾಷಾ
Author: admin
ಶಿವಮೊಗ್ಗ: ಶಿಷ್ಟಾಚಾರ ಉಲ್ಲಂಘನೆ ಮತ್ತು ಕಾರ್ಯಕ್ರಮವನ್ನು ರಾಜ್ಯ ಸಚಿವರು ಮತ್ತು ಶಾಸಕರು ಬಹಿಷ್ಕರಿಸಿದ್ದಾರೆ ಎಂಬ ಆರೋಪದ ನಡುವೆಯೇ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ದೇಶದ ಎರಡನೇ ಅತಿ ಉದ್ದದ ಮತ್ತು ರಾಜ್ಯದ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆಯನ್ನು ಉದ್ಘಾಟಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬರಗೋಡ್ಲು ಮತ್ತು ಕಳಸವಳ್ಳಿ ಗ್ರಾಮಗಳ ನಡುವೆ 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯು, ಒಟ್ಟು 2.44 ಕಿ.ಮೀ. ಉದ್ದವಿದೆ. ಹೊಸ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರನ್ನಿಟ್ಟ ಗಡ್ಕರಿ, ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಮತ್ತು ಯೋಜಿಸಲಾಗಿರುವ ಹೆದ್ದಾರಿ ಯೋಜನೆಗಳನ್ನು ಪಟ್ಟಿ ಮಾಡಿದರು. 5 ಲಕ್ಷ ಕೋಟಿ ರೂ. ಮೌಲ್ಯದ ಈ ಯೋಜನೆಗಳು ಕೇಂದ್ರ ಸರ್ಕಾರದ ಅಧಿಕಾರಾವಧಿಯ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಭರವಸೆ ನೀಡಿದರು. 2,041 ಕೋಟಿ ರೂ. ಮೌಲ್ಯದ ಒಂಬತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ನಿತಿನ್ ಗಡ್ಕರಿಯವರು ಚಾಲನೆ…
ಚಂಡೀಗಢ: ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅಪಘಾತದಲ್ಲಿ ನಿಧನರಾಗಿರುವ ಘಟನೆ ಸೋಮವಾರ ನಡೆದಿದ್ದು, ಜಲಂಧರ್ ನಲ್ಲಿರುವ ತಮ್ಮ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಫೌಜಾ ಸಿಂಗ್ 2000ನೇ ಇಸವಿಯಲ್ಲಿ ತಮ್ಮ ಮ್ಯಾರಥಾನ್ ಪ್ರಯಾಣವನ್ನು ಆರಂಭಿಸಿದ್ದರು. ಅಂತಿಮವಾಗಿ ಎಂಟು ರೇಸ್ ಗಳಲ್ಲಿ ಅವರು ಭಾಗವಹಿಸಿದ್ದರು. 2011ರಲ್ಲಿ ಅವರು ಟೊರಂಟೊ ಮ್ಯಾರಥಾನ್ ನಲ್ಲಿ ಭಾಗವಹಿಸುವ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾದರು. ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎಂದು ಗುರುತಿಸಲ್ಪಟ್ಟರು. ಆದರೆ ಜನನ ಪ್ರಮಾಣಪತ್ರ ಇಲ್ಲದ ಕಾರಣ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಅಧಿಕೃತವಾಗಿ ನೋಂದಾಯಿಸಲು ಸಾಧ್ಯವಾಗಲಿಲ್ಲ. 2012ರಲ್ಲಿ ಅವರು ಲಂಡನ್ ಮ್ಯಾರಥಾನ್ ಸಮಯದಲ್ಲಿ 20 ಕಿ.ಮೀ ಪೂರ್ಣಗೊಳಿಸುವ ಮೂಲಕ ಮತ್ತೊಮ್ಮೆ ಜಗತ್ತನ್ನು ಬೆರಗುಗೊಳಿಸಿದ್ದರು. ಅವರ ಕೊನೆಯ ವೃತ್ತಿಪರ ಓಟವು 2013ರಲ್ಲಿ 101ನೇ ವಯಸ್ಸಿನಲ್ಲಿ ಹಾಂಗ್ ಕಾಂಗ್ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. 89 ವರ್ಷವಾಗಿದ್ದಾಗ ಅವರ ಪತ್ನಿ ಮತ್ತು ಮಗ ಅಪಘಾತದಲ್ಲಿ…
ತುಮಕೂರು: ಹೃದಯಾಘಾತಕ್ಕೆ 23 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಗುಬ್ಬಿ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಶ್ (23) ಮೃತ ಯುವಕನಾಗಿದ್ದಾನೆ. ಚಿಕ್ಕನಾಯಕನಹಳ್ಳಿಯಲ್ಲಿ ಸ್ನೇಹಿತನ ಮನೆಗೆ ಹೋಗಿ ಊಟಕ್ಕೆ ಹೋಗಿ ವಾಪಸ್ ಬರುವಾಗ ದಾರಿ ಮಧ್ಯದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಅವರನ್ನು ಗುಬ್ಬಿ ಆಸ್ಪತ್ರೆಗೆ ಸ್ನೇಹಿತರು ಕರೆತಂದಿದ್ದಾರೆ. ಆದರೆ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಹಠಾತ್ ಹೃದಯಾಘಾತದಿಂದ, ಆಸ್ಪತ್ರೆಗೆ ತರುವ ವೇಳೆ ಆತ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಂಗಳೂರು: ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು, ನೊಂದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಗೊಂಡನಹಳ್ಳಿಯಲ್ಲಿ ನಡೆದಿದೆ. 22 ವರ್ಷ ವಯಸ್ಸಿನ ಶ್ರೀಜಾ ರೆಡ್ಡಿ, ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಆತ್ಮಹತ್ಯೆಯನ್ನು ಕಂಡು ನೊಂದ ತಾಯಿ ರಕ್ಷಿತಾ(48), ತನ್ನ ಪತಿಗೆ ಕರೆ ಮಾಡಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ, ಮಗಳ ಮೃತದೇಹ ಫ್ಯಾನ್ ನಿಂದ ಇಳಿಸಿ, ಅದೇ ಫ್ಯಾನ್ ಗೆ ತಾನೂ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ಆಂಧ್ರಪ್ರದೇಶ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರೀಜಾ ರೆಡ್ಡಿ ಖಾಸಗಿ ಕಂಪನಿಯಲ್ಲಿ ಡೇಟಾ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸ್ತಿದ್ದಳು. ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವೈಟ್ ಫೀಲ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಹಾಸನ: ಸಂತೆಯಿಂದ ಮನೆಯ ಕಡೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೇಲೂರಿನ ಯಗಚಿ ಸೇತುವೆ ಬಳಿ ನಡೆದಿದೆ. ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ಆನಂದ್ (52) ಮೃತ ದುದೈವಿ ಎಂದು ಗುರುತಿಸಲಾಗಿದೆ. ಅವರು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ ಬೇಲೂರು ಸಂತೆಗೆ ಬಂದಿದ್ದರು. ಸಂತೆಯಲ್ಲಿ ತರಕಾರಿ, ದಿನಸಿ ಖರೀದಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಯಗಚಿ ಸೇತುವೆ ಬಳಿ ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಬೇಲೂರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ರಾಯಚೂರು: ಕಸ ವಿಲೇವಾರಿ ವಾಹನಗಳನ್ನು ಕದ್ದಿರುವ ಘಟನೆ ಕವಿತಾಳ ಪಟ್ಟಣ ಪಂಚಾಯತಿ ಕಚೇರಿ ಆವರಣದಲ್ಲಿ ನಡೆದಿದೆ. ಪಟ್ಟಣ ಪಂಚಾಯತಿ ಕಚೇರಿ ಆವರಣದ ಗೇಟ್ ಮುರಿದು ಕಳ್ಳರು ವಾಹನವನ್ನು ಕದ್ದು ಪರಾರಿಯಾಗಿದ್ದಾರೆ. ವಾಹನ ಕದಿಯುವ ಧಾವಂತದಲ್ಲಿ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಳ್ಳರು ವಾಹನದೊಂದಿಗೆ ಪರಾರಿಯಾಗಿದ್ದಾರೆ. ಡೀಸೆಲ್ ಸಮಸ್ಯೆಯಿಂದ ಕಚೇರಿ ಆವರಣದಲ್ಲೇ ನಿಂತಿದ್ದ ವಾಹನಗಳಿಗೆ ಇತ್ತೀಚೆಗಷ್ಟೇ ಹಣ ಬಿಡುಗಡೆ ಮಾಡಿ ಎಲ್ಲಾ ವಾಹನಗಳಿಗೆ ಇನ್ಶೂರೆನ್ಸ್ ಮಾಡಿಸಲಾಗಿತ್ತು. 4 ಕಸ ವಿಲೇವಾರಿ ವಾಹನಗಳಲ್ಲಿ ಒಂದು ಗಾಡಿಯನ್ನ ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು 8 ಲಕ್ಷ ರೂ. ಮೌಲ್ಯದ ಕಸ ವಿಲೇವಾರಿ ವಾಹನ ಕಳ್ಳತನವಾಗಿದೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಶಿವಮೊಗ್ಗ: ದೇಶದ 2ನೇ ಅತಿ ಉದ್ದದ ಕೇಬಲ್ ಸೇತುವೆಯಾದ ಸಿಗಂದೂರು ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯ ಲೋಕಾರ್ಪಣೆಗೊಳಿಸಿದರು. ಲೋಕಾರ್ಪಣೆ ವೇಳೆ ನಡೆದ ಹೋಮದಲ್ಲಿ ಸಚಿವರು ಪಾಲ್ಗೊಂಡರು. ಲೋಕಾರ್ಪಣೆ ನಂತರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಸಾಥ್ ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಔರಾದ್: ಬೀದರ್ ಹೆದ್ದಾರಿಯಲ್ಲಿ ಬರುವ ಕೌಠಾ ಬಿ ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ಬಲೂರ್ ಜೆ ಹಾಗೂ ಕೌಠಾ ಕೆ ಗ್ರಾಮದಲ್ಲಿ ದಿನೇ ದಿನೇ ಅಪಘಾತ ಹೆಚ್ಚುತ್ತಿವೆ. ಅದನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೌಠಾ ಗ್ರಾಮ ಪಂಚಾಯತ್ ವತಿಯಿಂದ ಬಲೂರ್ ಜೆ ಹಾಗೂ ಕೌಠಾ ಕೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬ್ಯಾರಿಕೆಟ್ ಅಳವಡಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಕುಮಾರ್ ಘಾಟೆ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ರವೀನಾ ಗೌತಮ್ ಮೇತ್ರೆ, ಉಪಾಧ್ಯಕ್ಷರಾದ ಪ್ರಭು ಬಳತೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಗುನಾಥ್ ರಡ್ಡಿ,ಸಂತಪುರ ಪೊಲೀಸ್ ಅಧಿಕಾರಿಗಾದ ASI ಶೇಷಾರವಾ T.A.ಕಿರಣ್ ರಾಥೋಡ್, ಸದಸ್ಯರಾದ ಪಂಡಿತ್, ದೇವರಾಜ್, ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಂಗಳೂರು: ರಾಜ್ಯ ಸರಕಾರದ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಹೊಸ ಮೈಲಿಗಲ್ಲಿ ಸ್ಥಾಪಿಸಿದ್ದು, ಇಂದು 500ನೇ ಕೋಟಿ ಟಿಕೆಟ್ ಉಚಿತ ವಿತರಣೆ ತಲುಪಲಿದೆ. ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ 2023ರ ಜೂನ್ 11ರಂದು ಅನುಷ್ಠಾನಕ್ಕೆ ಬಂದ ಶಕ್ತಿ ಗ್ಯಾರಂಟಿ ಯೋಜನೆಯಡಿ, ಕಳೆದ 2 ವರ್ಷ ಒಂದು ತಿಂಗಳ ಅವಧಿಯಲ್ಲಿ ಕೆಎಸ್ ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಸರಕಾರಿ ಸಾರಿಗೆ ಸಂಸ್ಥೆಯ 4 ನಿಗಮಗಳ ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಇದುವರೆಗೆ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಿದ ಉಚಿತ ಟಿಕೆಟ್ ಗಳ ಸಂಖ್ಯೆ ಇಂದು 500 ಕೋಟಿ ತಲುಪಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 500ನೇ ಕೋಟಿ ಉಚಿತ ಟಿಕೆಟ್ ವಿತರಣೆಗೆ ಸಾಕ್ಷಿಯಾಗಲಿದ್ದಾರೆ. ಕೆಎಸ್ ಆರ್ ಟಿಸಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಸಾರಿಗೆ ಸಂಸ್ಥೆಯ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಇದುವರೆಗೆ…
ಆಂಧ್ರಪ್ರದೇಶ: ಮಾವಿನ ಹಣ್ಣುಗಳ ಲೋಡ್ ಸಾಗಿಸುತ್ತಿದ್ದ ಲಾರಿ ಮುಗುಚಿ ಬಿದ್ದ ಪರಿಣಾಮ 9 ಕಾರ್ಮಿಕರು ಸಾವನ್ನಪ್ಪಿ, 10 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ. ಚಿಟ್ಟೆಮ್ಮ (25), ಸುಬ್ಬರತ್ನಮ್ಮ (45), ಗಜ್ಜಲ ದುರ್ಗಯ್ಯ (32), ಗಜ್ಜಲ ಶ್ರೀನು (33), ಗಜ್ಜಲ ಲಕ್ಷ್ಮಿ ದೇವಿ (36), ರಾಧಾ (39), ಗಜ್ಜಲ ರಮಣ (42), ವೆಂಕಟ ಸುಬ್ಬಮ್ಮ (37) ಸ್ಥಳದಲ್ಲೇ ಮೃತಪಟ್ಟರು. ವಡ್ಡಿವೇಡು ಗ್ರಾಮದ ಮುನಿಚಂದ್ರ (38) ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ 10 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಾಜಂಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನ್ನಮಯ್ಯ ಜಿಲ್ಲೆಯ ರೈಲ್ವೆಕೊಡೂರು ತಾಲೂಕಿನ ಸೆಟ್ಟಿಗುಂಟ ಎಸ್ ಟಿ ಕಾಲೋನಿಯಲ್ಲಿ ದಿನಗೂಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುವ ಬುಡಕಟ್ಟು ಜನರು ಮಾವಿನ ಹಣ್ಣುಗಳನ್ನು ಕೀಳಲು ರಾಜಂಪೇಟೆ ಬಳಿಯ ಇಸುಕುಪಲ್ಲಿಗೆ ತೆರಳಿದ್ದರು. ಅವರು ಕೊಯ್ದ ಮಾವಿನ ಹಣ್ಣುಗಳನ್ನು ಲಾರಿಯಲ್ಲಿ ತುಂಬಿಸಿ ರೈಲ್ವೆಕೊಡೂರು ಮಾರುಕಟ್ಟೆ ಅಂಗಳಕ್ಕೆ ಸಾಗಿಸುತ್ತಿದ್ದರು. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು…