Subscribe to Updates
Get the latest creative news from FooBar about art, design and business.
- ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಅಸ್ತು!
- ನೂತನ ಸಚಿವರಿಗೆ ಶೀಘ್ರವೇ ಖಾತೆ ಹಂಚಿಕೆ: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ : ಡಿಸಿಎಂ ಜಿ. ಪರಮೇಶ್ವರ್
- RSS–ಪಾಕ್ ಲಿಂಕ್ ಬಗ್ಗೆ ತನಿಖೆಯಾಗಲಿ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ರೋಶ
- ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಜಿಲ್ಲಾ ಸಮಾಲೋಚನಾ ಸಭೆ: ರೈತರ ಹಿತರಕ್ಷಣೆಗೆ ಮಹತ್ವದ ನಿರ್ಣಯ
- ಸರಗೂರು: ಮಕ್ಕಳ ಉತ್ತಮ ಆರೋಗ್ಯಕ್ಕೆ ಜಂತುಹುಳು ನಿವಾರಣಾ ಮಾತ್ರೆ ಸೇವನೆ ಅತ್ಯಗತ್ಯ: ಡಾ. ಚಂದ್ರಶೇಖರ
- ಸಾರ್ಥವಳ್ಳಿಯ ಗಂಗಾಧರ್ ಕುಟುಂಬಕ್ಕೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
- ಐಷಾರಾಮಿ ರೆಸ್ಟೋರೆಂಟ್ ಮೇಲೆ ದಾಳಿ: ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು
- ಚಿತ್ರದುರ್ಗ: ವಿದ್ಯುತ್ ಆಘಾತಕ್ಕೆ ನವಿಲು ಹಾಗೂ ಚಿರತೆ ದಾರುಣ ಸಾವು
Author: admin
ಪೆರ್ನಾಜೆ: ಶ್ರೀ ವಿಟ್ಲ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಾದೋಪಾಸನ ಹಾಗೂ ತ್ಯಾಗರಾಜರ ಆರಾಧನೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಸ್ವರ ಸಿಂಚನ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಫೆ.23ರಂದು ಬೆಳಿಗ್ಗೆಯಿಂದ ದಿನಪೂರ್ತಿ ನಡೆಯಿತು. ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕರಾದ ಕೇಶವ ಆರ್.ವಿ. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮಾರ್ಗದರ್ಶನದಲ್ಲಿ ನಡೆಯಿತು. ಪಕ್ಕ ವಾದ್ಯದಲ್ಲಿ ಮೃದಂಗ ವಾದಕರಾಗಿ ಕ್ಷಿತಿಶ ರಾಮ ಕೆ.ಎಸ್., ವಯಲಿನ್ ನಲ್ಲಿ ಶ್ರೀ ಪ್ರಿಯಾ ಪರಕ್ಕಜೆ ಸಹಕರಿಸಿದರು. ರಮ್ಯಾ ಜೆಡ್ಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವರ ಸಿಂಚನ ಸಂಗೀತ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಸುಮಾರು 40 ವಿದ್ಯಾರ್ಥಿಗಳಿಂದ ಏಕವ್ಯಕ್ತಿ ಶಾಸ್ತ್ರೀಯ ಸಂಗೀತ ಪ್ರದರ್ಶನ ನಡೆಯಿತು. ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಸ್ವರ ಮಧುರ ಗಾಯನ ಮೇಳ ರಂಜಿಸಿತು. ಸಂಗೀತದ ಸುಧೆಯ ತುoಬಿ ಮಾಧುರ್ಯ ಮನದಲ್ಲಿ ತುಂಬಿದೆ. ಭಾಗ್ಯಶ್ರೀ, ಕು.ಆದರ್ಶನಿ ,ಕು.ಭುವಿ ಕಾರ್ಯಕ್ರಮವನ್ನು ನಿರೂಪಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಬೆಂಗಳೂರು: ಬೆಳಗಾವಿ ಸಾರಿಗೆ ಬಸ್ ನಿರ್ವಾಹಕರು ಕನ್ನಡಿಗರ ಮೇಲೆ ಮರಾಠಿ ಭಾಷಾಂಧ ಪುಂಡರು ನಡೆಸಿದ ಕುಕೃತ್ಯವು ಯಾವುದೇ ನಾಗರೀಕ ಸಮಾಜವು ಸಹಿಸಲು ಸಾಧ್ಯವಿಲ್ಲ, ಇಂತಹವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಮ್ ಆದ್ದಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ. ಅನೇಕ ವರ್ಷಗಳಿಂದ ತಮ್ಮ ರಾಜಕೀಯ ಅಭಿಲಾಷೆಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಸಾಮರಸ್ಯ ಸಂಬಂಧಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಎಸಗಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಈ ಸಮಾಜದ್ರೋಹಿಗಳನ್ನು ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಎರಡೂ ರಾಜ್ಯಗಳಲ್ಲಿ ಶಾಂತಿಭಂಗ ವಾಗುವ ಅಪಾಯ ಇದೆ ಎಂದು ಅವರು ಹೇಳಿದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ತಾವು ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು. ಅಲ್ಲದೆ ಭಾಷಾ ಸಾಮರಸ್ಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹಾಳು ಮಾಡುತ್ತಿರುವ ತಮ್ಮ ಪಕ್ಷವು ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರುಗಳಿಗೆ ಕಠಿಣ ಎಚ್ಚರಿಕೆ ನೀಡುವ ಮೂಲಕ ಕನ್ನಡಿಗರೊಂದಿಗೆ ಸರಕಾರ ಇದೆ ಎಂಬ ಎಚ್ಚರಿಕೆಯನ್ನು ರವಾನಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ…
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಶಿವಕುಮಾರ್ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ವರದಿಗಳನ್ನು ನೋಡಿ ನನ್ನ ಕೆಲವು ಸ್ನೇಹಿತರು ಕರೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಾನು ನೋಡುತ್ತಿದ್ದೇನೆ. ಹುಟ್ಟಿನಿಂದಲೇ ನಾನು ಕಾಂಗ್ರೆಸ್ಸಿಗ, ನನ್ನ ನಿಲುವು ನಾನು ಹಿಂದೂ, ಮತ್ತು ಸಮಾಜದ ಪ್ರತಿಯೊಂದು ಸಂಸ್ಕೃತಿಯನ್ನು ನಾನು ನಂಬುತ್ತೇನೆ. ನನ್ನ ವೈಯಕ್ತಿಕ ನಂಬಿಕೆಯ ಜೊತೆಗೆ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು ಕಾಂಗ್ರೆಸ್ ಸಿದ್ಧಾಂತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜನರು ಕಥೆಗಳನ್ನು ಹೆಣೆಯುತ್ತಿದ್ದಾರೆ. ಈಶಾ ಫೌಂಡೇಶನ್ ನ ಸದ್ಗುರುಗಳು ನನ್ನ ನಿವಾಸಕ್ಕೆ ಬಂದು ನನ್ನನ್ನು ಶಿವರಾತ್ರಿಗೆ ಆಹ್ವಾನಿಸಿದರು. ಅವರು ಮೈಸೂರಿನವರು ಮತ್ತು ಅವರ ಜ್ಞಾನಕ್ಕಾಗಿ ನಾನು ಅವರನ್ನು ಮೆಚ್ಚುತ್ತೇನೆ. ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಸಾಮಾಜಿಕ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ನಾನು ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿಲ್ಲ ಎಂದು ಅವರು…
ಗುವಾಹಟಿ: ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ 5.0 ತೀವ್ರತೆಯ ಭೂಕಂಪ ಗುರುವಾರ ಮುಂಜಾನೆ ಸಂಭವಿಸಿದ್ದು, ಭೂಕಂಪನಕ್ಕೆ ಇಲ್ಲಿನ ನಾಗರಿಕರು ಬೆಚ್ಚಿಬಿದ್ದಿದ್ದಾರೆ. ಅಸ್ಸಾಂನ ಕೇಂದ್ರ ಭಾಗ ಹಾಗೂ ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿಯೂ ಭೂಕಂಪನಗಳು ಸಂಭವಿಸಿವೆ. ಭೂಕಂಪದಿಂದ ಯಾರಿಗೂ ಯಾವುದೇ ಗಾಯ ಅಥವಾ ಯಾವುದೇ ಆಸ್ತಿಗಳಿಗೆ ಹಾನಿಯಾದ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ. ಭೂಕಂಪವು ಭೂಮಿಯ 16 ಕಿಲೋಮೀಟರ್ ಆಳದಲ್ಲಿ ಆಗಿದ್ದು, ತಡರಾತ್ರಿ ಸುಮಾರು 2:25 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರವು ತಿಳಿಸಿದೆ. ಭೂಕಂಪದ ಕೇಂದ್ರಬಿಂದುವು ಗುವಾಹಟಿಯಿಂದ ಪೂರ್ವಕ್ಕೆ 52 ಕಿ.ಮೀ ದೂರದಲ್ಲಿ ದಾಖಲಾಗಿದೆ. ನೆರೆಯ ಕಾಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಕರ್ಬಿ ಆಂಗ್ಲಾಂಗ್, ಪಶ್ಚಿಮ ಕರ್ಬಿ ಆಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಕ್ಯಾಚಾರ್, ಕರೀಮ್‌ಗಂಜ್, ಹೈಲಕಂಡಿ, ಧುಬ್ರಿ, ದಕ್ಷಿಣ ಸಲ್ಮಾರಾ-ಮಂಕಚಾರ್ ಮತ್ತು ಗೋಲ್ಪಾರಾ ಜಿಲ್ಲೆಗಳ ಜನರಿಗೂ ಕಂಪನದ ಅನುಭವವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 10+2 (ಪದವಿ ಪೂರ್ವ) ಮತ್ತು 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಯುಜಿಸಿ ಅನುಮೋದಿತ ಸ್ನಾತಕ(ಯು.ಜಿ)/ಸ್ನಾತಕೋತ್ತರ(ಪಿ.ಜಿ) ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಬಹುದಾಗಿದ್ದು, ಮೈಸೂರಿನ ಕರಾಮುವಿಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2024–25ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಯುಜಿಸಿ ಅನುಮೋದಿತ ಕೋರ್ಸ್ ಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಮೇಲ್ಕಂಡ ಪದವಿಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಭರ್ತಿಮಾಡಿ ನಂತರ ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್ ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು. ಪ್ರಥಮ ವರ್ಷದ ಪ್ರವೇಶಾತಿಗೆ 2025ರ ಮಾರ್ಚ್…
ತುಮಕೂರು: ಸಿದ್ದಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇಂದು ಸಿದ್ದಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ನಡೆಯುತ್ತಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಬ್ರಹ್ಮರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಹೂಗಳಿಂದ ಅಲಂಕಾರಗೊಂಡ ರಥೋತ್ಸವ ನಡೆಯುತ್ತಿದೆ. ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂ ಸಿಇಓ ಪ್ರಭು, ಎಸ್ ಪಿ ಅಶೋಕ್, ಮಹಾನಗರ ಪಾಲಿಕೆ ಕಮಿಷನರ್ ಬಿ.ವಿ ಅಶ್ವಿಜಾ, ಶಾಸಕ ಜಿ.ಬಿ ಜ್ಯೋತಿ ಗಣೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ತುಮಕೂರಿನ ಕ್ಯಾತಸಂದ್ರ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದುಬರುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೀದರ್: ಜಿಲ್ಲೆಯ ಔರಾದ ತಾಲೂಕಿನ ಕೌಠಾ(ಬಿ) ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಇಬ್ಬರು ಮುಸುಕುಧಾರಿಗಳು ಮನೆಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 25 ತೊಲೆ ಚಿನ್ನಾಭರಣ ಹಾಗೂ ನಗದು ಹಣ ದರೋಡೆಯಾಗಿದೆ ಎಂದು ಆರೋಪಿಸಿದ ಪ್ರಕರಣ ಪೊಲೀಸ್ ತನಿಖೆಯಲ್ಲಿ ಸುಳ್ಳು ಎಂದು ಸಾಬೀತಾಗಿದೆ. ಮನೆಯಲ್ಲಿ ನನ್ನ ಪತ್ನಿ ಒಬ್ಬಳೇ ಇದ್ದ ವೇಳೆ ಇಬ್ಬರು ಮುಸುಕುಧಾರಿಗಳು ಹಿಂಬಾಗಿಲಿನಿಂದ ಮನೆಗೆ ನುಗ್ಗಿ ಚಾಕುವಿನಿಂದ ಗಂಭೀರವಾಗಿ ಗಾಯಗೊಳಿಸಿ ಮನೆಯಲ್ಲಿದ್ದ 25 ತೊಲೆ ಚಿನ್ನಾಭರಣ ಹಾಗೂ 1 ಲಕ್ಷ ನಗದು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬದ ಮುಖ್ಯಸ್ಥ ಓಂಕಾರ ಅಪ್ಪಾರಾವ್ ಗಾದೆಗೆ ಎಂಬುವವರ ಫೆ.21ರಂದು ನೀಡಿದ ದೂರಿನ ಮೇರೆಗೆ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನವೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದರು. ಹಾಡುಹಗಲೇ ನಡೆದ ಈ ಘಟನೆಯಿಂದಾಗಿ ಜಿಲ್ಲೆಯ ಜನರಲ್ಲಿ ಭಾರೀ ಆತಂಕ ಆವರಿಸಿತು. ಈ ಪ್ರಕರಣವನ್ನು…
ತುಮಕೂರು: ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದರು. ತಾಯಿ ಹಾಗೂ ಕುಟುಂಬ ಸಮೇತ ಸಾಗಿ ತ್ರಿವೇಣಿ ಸಂಗಮದಲ್ಲಿ ಡಾ. ರಂಗನಾಥ ಮಿಂದೆದ್ದರು. ಜೊತೆಗೆ 10 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದುಕೊಂಡು ಶಾಸಕರು ಪುಣ್ಯ ಸ್ನಾನ ಮಾಡಿಸಿದರು. ಡಿಸಿಎಂ ಡಿಕೆಶಿ ಸಂಬಂಧಿಯಾಗಿರುವ ಶಾಸಕ ರಂಗನಾಥ್ ಅವರು ಡಿ.ಕೆ.ಶಿವಕುಮಾರ್ ಅವರು ಕುಂಭಮೇಳದಲ್ಲಿ ಸ್ನಾನ ಮಾಡಿದ ಬೆನ್ನಲ್ಲೇ ತಾವೂ ಸ್ನಾನ ಮಾಡಿದ್ದಾರೆ. ಕುಂಭ ಮೇಳದ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತಿರುವ ನಡುವೆಯೂ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಪುಣ್ಯ ಸ್ನಾನ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಹಾಸನ: ಮಹಾಶಿವರಾತ್ರಿ ಪ್ರಯುಕ್ತ ಹಾಸನ ಜಿಲ್ಲೆಯ ರಾಮನಾಥಪುರ ಹೋಬಳಿಯ ಶಿರಧನಹಳ್ಳಿ ಗ್ರಾಮದ ಶ್ರೀ ಭೂಮಂಡಲ ಶ್ರೀ ಶನೈಶ್ಚರಸ್ವಾಮಿ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಶನಿದೇವರು ಮತ್ತು ಮಸಣಿಕಮ್ಮ ವಿಗ್ರಹಗಳನ್ನು ಬೆಳ್ಳಿ ರಥದಲ್ಲಿ ಕುರಿಸಿ ರಾಮನಾಥಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಗಾಸೆ ನೃತ್ಯ ಜೊತೆ ಸಾವಿರಾರು ಭಕ್ತರು ಸೇರಿದ್ದರು. ಹಾಗೂ ಸಾವಿರಾರು ಸೇರಿದ ಭಕ್ತರಿಗೆ ಸನ್ನಿದಾನದಲ್ಲಿ ಅನ್ನಸಂತಪರ್ಣೆ ಏರ್ಪಡಿಸಲಾಗಿತ್ತು. ಸೇರಿದ ಭಕ್ತರಿಗೆ ಸನ್ನಿದಿಯ ಆವರಣದಲ್ಲಿ ಶಿವರಾತ್ರಿ ಜಾಗರಣೆಂದೆ ಸನ್ನಿದಾನದಲ್ಲಿ ಶನಿಪ್ರಭಾವ ಅಥವಾ ರಾಜ್ ವಿಕ್ರಂ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವರದಿ: ಮಂಜು ಶ್ರವಣೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೀದರ್: ಮದ್ಯ ಸೇವಿಸಿ ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನು ತನ್ನ ಪೋಷಕರ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಶ್ರೀಧರ್ ಶಿವರಾಜ್ (30) ಕೊಲೆಯಾದ ವ್ಯಕ್ತಿ. ಇವರು ಕಳೆದ ಐದಾರು ವರ್ಷಗಳ ಹಿಂದೆ ಪಕ್ಕದ ಗ್ರಾಮವೊಂದರ ಸವಿತಾ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಚಾಲಕ ಕೆಲಸಕ್ಕೆ ಹೋಗುತ್ತಿದ್ದ ಶ್ರೀಧರ್ ಆಗಾಗ ಕುಡಿದ ಅಮಲಿನಲ್ಲಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಗಂಡನ ಕಿರುಕುಳ ತಾಳಲಾರದೆ ಕೋಪಗೊಂಡ ಪತ್ನಿ ಸವಿತಾ ಫೆ.25 ರಂದು ತನ್ನ ಪೋಷಕರನ್ನು ಮನೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಗಲಾಟೆ ನಡೆದಿದೆ ಎನ್ನಲಾಗಿದೆ. ಶ್ರೀಧರ್ ನ್ನು ಕೊಲೆ ಮಾಡುವ ಉದ್ದೇಶದಿಂದ ಸವಿತಾ ಹಾಗೂ ಅವರ ತಂದೆ –ತಾಯಿ ಶ್ರೀಧರ್ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಶ್ರೀಧರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು…