Subscribe to Updates
Get the latest creative news from FooBar about art, design and business.
- ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಅಸ್ತು!
- ನೂತನ ಸಚಿವರಿಗೆ ಶೀಘ್ರವೇ ಖಾತೆ ಹಂಚಿಕೆ: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ : ಡಿಸಿಎಂ ಜಿ. ಪರಮೇಶ್ವರ್
- RSS–ಪಾಕ್ ಲಿಂಕ್ ಬಗ್ಗೆ ತನಿಖೆಯಾಗಲಿ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ರೋಶ
- ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಜಿಲ್ಲಾ ಸಮಾಲೋಚನಾ ಸಭೆ: ರೈತರ ಹಿತರಕ್ಷಣೆಗೆ ಮಹತ್ವದ ನಿರ್ಣಯ
- ಸರಗೂರು: ಮಕ್ಕಳ ಉತ್ತಮ ಆರೋಗ್ಯಕ್ಕೆ ಜಂತುಹುಳು ನಿವಾರಣಾ ಮಾತ್ರೆ ಸೇವನೆ ಅತ್ಯಗತ್ಯ: ಡಾ. ಚಂದ್ರಶೇಖರ
- ಸಾರ್ಥವಳ್ಳಿಯ ಗಂಗಾಧರ್ ಕುಟುಂಬಕ್ಕೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
- ಐಷಾರಾಮಿ ರೆಸ್ಟೋರೆಂಟ್ ಮೇಲೆ ದಾಳಿ: ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು
- ಚಿತ್ರದುರ್ಗ: ವಿದ್ಯುತ್ ಆಘಾತಕ್ಕೆ ನವಿಲು ಹಾಗೂ ಚಿರತೆ ದಾರುಣ ಸಾವು
Author: admin
ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನ ದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಮಾರ್ಚ್ 13ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಕರಿಗಿರಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆಯು ಮಾರ್ಚ್ 6 ರಿಂದ ಮಾರ್ಚ್ 18ರವರೆಗೆ ನಡೆಯಲಿದ್ದು, ಜಾತ್ರೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆ ಅಂಗವಾಗಿ ಮಾ. 6ರಂದು ಸಂಜೆ 7 ಗಂಟೆಗೆ ಅಂಕುರಾರ್ಪಣ, ಮಾ. 7ರಂದು ಸಂಜೆ 7.30ಕ್ಕೆ ಧ್ವಜಾರೋಹಣ, ಮಾ. 8ರಂದು ಸಂಜೆ 7ಕ್ಕೆ ಶೇಷವಾಹನೋತ್ಸವ, ಮಾ.9ರಂದು ಸಂಜೆ 7ಕ್ಕೆ ಸಿಂಹಾರೋಹಣ, ಮಾ.10ರಂದು ಬೆಳಿಗ್ಗೆ 7 ಗಂಟೆಗೆ ಪುಷ್ಪರಥ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರಥೋತ್ಸವದ ಅಂಗವಾಗಿ ಮಾ.11ರಂದು ಸಂಜೆ 6ಕ್ಕೆ ಪ್ರಹ್ಲಾದೋತ್ಸವ, ರಾತ್ರಿ 12ಗಂಟೆಗೆ ರಾಮಾನುಜಕೂಟ ಸೇವೆ ಹಾಗೂ 12.30ಕ್ಕೆ ಕಲ್ಯಾಣೋತ್ಸವ; ಮಾ.12ರಂದು ಮಧ್ಯಾಹ್ನ 12ಕ್ಕೆ ದೊಡ್ಡಗರುಡವಾಹನ, ಸಂಜೆ 5ಕ್ಕೆ ಗಜೇಂದ್ರ ಮೋಕ್ಷ, ಸಂಜೆ 6ಕ್ಕೆ ನವಿಲು ವಾಹನೋತ್ಸವ ಹಾಗೂ ಸಂಜೆ 7ಕ್ಕೆ ಮುತ್ತಿನ ಪಲ್ಲಕ್ಕಿ ಉತ್ಸವ; ಮಾ. 13ರಂದು ಬೆಳಿಗ್ಗೆ 8…
ಹೂವಿನ ಹಡಗಲಿ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಮತ್ತು ಶ್ರೀ ಜ್ವಾಲಮಾಲಿನಿ ಮಹಿಳಾ ಸಮಾಜ ಹೂವಿನಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ,ಪರೀಕ್ಷೆ ಹೇಗೆ ಬರೆಯಬೇಕು, ಹೇಗೆ ಎದುರಿಸಬೇಕು ಎಂಬ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು. ಪರೀಕ್ಷೆಯಲ್ಲಿ ಫೇಲಾದರೂ ವಿದ್ಯಾರ್ಥಿಗಳಲ್ಲಿರುವ ಸದಾವಕಾಶಗಳು, ಇನ್ನಿತರ ವಿಚಾರಗಳನ್ನು ಹಾಗೂ ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷ ಎಂ.ಡಿ.ಪದ್ಮಾವತಿ, ಉಪಾಧ್ಯಕ್ಷ ರಾದ ಜಯಶ್ರೀ ಮಂಜುನಾಥ್ ಜೈನ,ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸೀಮಾ ಪ್ರಶಾಂತ್ ಹೊಳಲು ಕಾರ್ಯದರ್ಶಿ ಚಂಪಾರಾಯಪ್ಪ ಹೊಳಲು, ಖಜಾಂಚಿ ಮೇಘ ಬಾಗೇಶ ಜೈನರ್, ಸದಸ್ಯರಾದ ಪದ್ಮ ಅಜಿತ್ ಹೊಳಲು, ವೈಶಾಲಿ ಅಮಿತ್ ಹೊಳಲು, ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗಳಿಗೆ ಪೆನ್ಸಿಲ್ ಗಳನ್ನು ವಿತರಿಸಲಾಯಿತು. ವರದಿ: ಜೆ ರಂಗನಾಥ, ತುಮಕೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಬೆಂಗಳೂರು: ಬೆಂಗಳೂರಿನ ವಿವಿಧೆಡೆಯಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳಲ್ಲಿ ಸುಮಾರು 51 ರಷ್ಟು ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ ಕರ್ನಾಟಕ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ. ಇಡ್ಲಿ ತಯಾರಿಸಲು ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಆರೋಗ್ಯ ಇಲಾಖೆ ಅನೇಕ ಕಡೆಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಆ ಪೈಕಿ ಸುಮಾರು 50 ರಷ್ಟು ಸ್ಯಾಂಪಲ್ಸ್ ವರದಿ ಬಂದಿದ್ದು, ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ. ಉಳಿದ ಸ್ಯಾಂಪಲ್ಸ್ ವರದಿಗಾಗಿ ಕಾಯಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಪ್ರಯಾಗ್ ರಾಜ್: ಮಹಾಕುಂಭ ಮೇಳವು ‘ಏಕತೆಯ ಮಹಾಯಜ್ಞ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದು, ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿಬಿಂಬವಾಗಿ ಮಹಾಕುಂಭವನ್ನು ಪರಿಗಣಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 45 ದಿನಗಳ ಕಾಲ ನಡೆಯುವ ಈ ಮಹಾಕುಂಭವು, ಭಾರತದಲ್ಲಿ ಸಮಾಜದ ಪ್ರತಿಯೊಬ್ಬ ವರ್ಗದ ಜನರು ನಂಬಿಕೆ ಎಂದು ಅವರು ಹೇಳಿದರು. ಮಹಾಕುಂಭವು ‘ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸಹಾಯವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ಈ ಅವಿಸ್ಮರಣೀಯ ಏಕತೆಯ ದೃಶ್ಯವು ಕೋಟಿ ಕೋಟಿ ಭಾರತೀಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೆಂಗಳೂರು: ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇನ್ನು ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು. ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ. ಪುಸ್ತಕಗಳನ್ನು ಖರೀದಿಸಿ, ಮನೆ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಿ. ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಚಟದಿಂದ ಹೊರಗೆ ಬಂದು ಪುಸ್ತಕಗಳನ್ನು ಓದುವ ಹವ್ಯಾಸ, ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೆಂಗಳೂರು: ಈ ಬಾರಿಯ ಬಜೆಟ್ ನಲ್ಲಿ ದಲಿತರಿಗೆ ಮೀಸಲಾಗಿಡುವ ಎಸ್.ಸಿ.ಪಿ., ಟಿ.ಎಸ್.ಪಿ.ಗೆ ಸೇರಿದ ಒಂದು ರೂಪಾಯಿ ಹಣವನ್ನು ಕೂಡ ಗ್ಯಾರಂಟಿಗಳಿಗೆ ಬಳಸಬಾರದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ ಎಸ್.ಸಿ.ಪಿ., ಟಿ.ಎಸ್.ಪಿ. ಹಣದಲ್ಲಿ ಮೊದಲು ಅಂಬೇಡ್ಕರ್ ನಿಗಮ, ಆದಿ ಜಾಂಬವ ನಿಗಮ, ಬೋವಿ, ವಾಲ್ಮೀಕಿ ನಿಗಮ ಸೇರಿ ವಿವಿಧ ನಿಗಮಗಳ ಮೂಲಕ ಜಮೀನು ಇಲ್ಲದವರಿಗೆ ಜಮೀನುಗಳನ್ನು ಕೊಡಲಾಗುತ್ತಿತ್ತು. ಆದರೆ, ಭೂಮಿ ಕೊಟ್ಟಿಲ್ಲ; 39 ಸಾವಿರ ಕೋಟಿ ಮೀಸಲಿಟ್ಟರೂ ಎಲ್ಲ ನಿಗಮಗಳಿಗೆ ಸೇರಿ 500 ಕೋಟಿ ಕೊಡಲು ಇವರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ದಲಿತರಿಗೆ ಇಟ್ಟ ಹಣವನ್ನು ಅವರಿಗಲ್ಲದೇ ಇನ್ನೊಬ್ಬರಿಗೆ ಖರ್ಚು ಮಾಡುವುದಿಲ್ಲ ಎನ್ನುತ್ತಾರೆ. ಆದರೆ, ಗ್ಯಾರಂಟಿಗಳಿಗೆ ಬಳಸುವುದು ತಪ್ಪು. ಸಾರ್ವಜನಿಕವಾಗಿ ಕೊಡುವ ಗ್ಯಾರಂಟಿಗೆ ದಲಿತರಿಗೆ ಮೀಸಲಿಟ್ಟ ಹಣ ಬಳಸುವುದು ತಪ್ಪು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಶಿರಾ: ಭಾರತೀಯ ಜನತಾ ಪಾರ್ಟಿ, ಶಿರಾ ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಇಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನವನ್ನು ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ. ಗೌಡ ರವರ ನೇತೃತ್ವದಲ್ಲಿ ಆಚರಿಸಲಾಯಿತು. ಅವರ ಗೃಹ ಕಛೇರಿ ಸೇವಾಸದನದಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರುಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಧುಗಿರಿ ಸಂಘಟನಾ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬಿ.ಸಿ.ಹನುಮಂತೇಗೌಡ ಅವರ ಹುಟ್ಟು ಹಬ್ಬವನ್ನು ಹಾಗೂ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷರಾದ ಲಲಿತಮ್ಮನವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ನಿಕಟ ಪೂರ್ವ ಅಧ್ಯಕ್ಷರಾದ ಚಿಕ್ಕಣ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಉಮಾ ವಿಜಯರಾಜ್, ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷರಾದ ಮಾಗೋಡ್ ಪ್ರತಾಪ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್ ಸಂತೆಪೇಟೆ ಹಾಗೂ ಕೊಟ್ಟ ರಂಗನಾಥ್, ಮಾಜಿನಗರ ಮಂಡಲ ಅಧ್ಯಕ್ಷರಾದ ಶ್ರೀಧರ ಮೂರ್ತಿ ಹಾಗೂ…
ತುಮಕೂರು: ಕರ್ನಾಟಕ ಬಂಜಾರ (ಲಂಬಾಣಿ) ಜಾಗೃತಿ ದಳ(ರಿ), ವತಿಯಿಂದ ತುಮಕೂರು ನಗರದಲ್ಲಿ 2025ರ ಮಾರ್ಚ್ 02ನೇ ಭಾನುವಾರ ಬಂಜಾರ ಸಮುದಾಯದ ಆರಾಧ್ಯ ದೈವ ಶ್ರೀಸಂತ ಸೇವಾಲಾಲ್ ಮಹಾರಾಜ್ ಅವರ 286ನೇ ಜನ್ಮಜಯಂತಿ ಹಾಗೂ ಬಿಗ್ ಬಾಸ್ 11ರ ವಿಜೇತ ಹನುಮಂತ ಲಮಾಣಿ ರವರಿಗೆ ಅಭಿನಂದನಾ ಸಮಾರಂಭದ ಅಂಗವಾಗಿ ನಗರದ ಖಾಸಗಿ ಹೊಟೇಲ್ನಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರರಾದ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಬಾವಿ ಸಭೆ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬಂಜಾರ(ಲಂಬಾಣಿ ) ಜಾಗೃತಿ ದಳ(ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ತಿಪ್ಪೇಸ್ವಾಮಿ ಸಂತ ಸೇವಾಲಾಲ್ ಮಹಾರಾಜ್ ಅವರ ಜೀವನ, ಸಾಧನೆಯನ್ನು ಸಮುದಾಯದ ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಮುದಾಯದ ಹಿರಿಯ ಸರಕಾರದೊಂದಿಗೆ ಮಾರ್ಚ್ 02 ನೇ ಭಾನುವಾರ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿರುವ ಬಂಜಾರ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಬಿಗ್ಬಾಸ್ ಸೀಜನ್ 11 ರ ವಿಜೇತರಾದ ಬಂಜಾರ…
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕು ಎಡೆಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 5ರಂದು ಜರುಗುವ ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸುವುದರಿಂದ ಯಾವುದೇ ರೀತಿ ಬೆಂಕಿ ಅವಘಡ–ಕಾಲ್ತುಳಿತವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬೆಂಕಿ ಅವಘಡಗಳುಂಟಾದಲ್ಲಿ ಪಾರಾಗುವ ಹಾಗೂ ಕಾಲ್ತುಳಿತ, ನೂಕು–ನುಗ್ಗಲುಗಳಾಗದಂತೆ ಸಂಯಮದಿಂದ ನಡೆದುಕೊಳ್ಳುವ ಬಗ್ಗೆ ಎಲ್ಇಡಿ ಪರದೆ ಅಳವಡಿಸಿ ಕಿರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಜನ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. ಭಕ್ತಾದಿಗಳಿಗೆ ವಿತರಿಸುವ ಪ್ರಸಾದ ತಯಾರಿಸಲು ಶುದ್ಧ ಕುಡಿಯುವ ನೀರನ್ನೇ ಬಳಸಬೇಕು. ಸ್ವಾಮಿಯ ದರ್ಶನಕ್ಕೆ ಕುಟುಂಬ ಸಮೇತ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗಂತೆ ಮೂಲಭೂತ ಸೌರ‍್ಯಗಳನ್ನು ಒದಗಿಸಬೇಕು. ಜಾತ್ರಾ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಜಾತ್ರಾ ಕೆಲಸ–ಕಾರ್ಯಗಳಿಗೆ ನಿಯೋಜಿಸುವ ಸಿಬ್ಬಂದಿಗೆ ಧರಿಸಲು ದೇವಸ್ಥಾನದ ಚಿಹ್ನೆಯಿರುವ ಒಂದೇ ಬಣ್ಣದ ಮೇಲು ಅಂಗಿಯನ್ನು ನೀಡಬೇಕು. ಇದರಿಂದ ಸಮಸ್ಯೆಗಳುಂಟಾದಾಗ ನೆರವು ಕೋರಲು ಭಕ್ತಾದಿಗಳಿಗೆ ಅನುವಾಗುತ್ತದೆ ಎಂದು…
ತುಮಕೂರು: ಜನರಿಗೆ ವಿಷಮುಕ್ತ ಆಹಾರ ದೊರಯಬೇಕು. ಭೂಮಿಯ ಮೇಲಿನ ಜೀವ ವೈವಿದ್ಯತೆಯನ್ನುಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ಹೊಸೂರಿನ ಗಾಂಧೀ ಸಹಜ ಬೇಸಾಯ ಆಶ್ರಯದಲ್ಲಿ 2025ರ ಮಾರ್ಚ್ 01ರ ಶನಿವಾರ ಬೆಳಗ್ಗೆ 10 ಗಂಟೆಗೆ ಗಾಂಧಿ ರೈತ ವಿಜ್ಞಾನ ಕೇಂದ್ರ–ಜೈವಿಕ ಸಂಪನ್ಮೂಲಕ ಕೇಂದ್ರವನ್ನುಆರಂಭಿಸಲಾಗುತ್ತಿದೆ. ಸಾವಯವ ಕೃಷಿಗೆ ಬೇಕಾದ ಒಳಸುರಿಗಳಾದ ಪಂಚಗವ್ಯ, ಕುನಪಜಲ ಮತ್ತುಇನ್ನಿತರ ಪದಾರ್ಥಗಳನ್ನು ಹೊಂದಿಸಲು ಹಾಗು ಉತ್ಪಾದಿಸಲು ರೈತರಿಗೆ ಕಷ್ಟವಾಗುತ್ತಿದೆ. ಉದಾಹರಣೆಗೆ ಹೇಳುವುದಾದರೆ, ನೀಲಗಿರಿಎಲೆಯ ಸಾರವು ಬಿಳಿ ನೊಣಗಳು ಮತ್ತು ಕಪ್ಪುಹೇನುಗಳಂತಹ ಕ್ರಿಮಿಗಳನ್ನು ಹತೋಟಿಗೊಳಿಸುತ್ತದೆ, ಅಂದರೆ ಮೊಟ್ಟೆ ಇಡುವ ಕ್ರಿಯೆ ತಡೆಯುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದುಬಂದಿದೆ. ಈ ವಿಜ್ಞಾನವನ್ನು ತಿಳಿದ ರೈತರು ನೀಲಿಗಿರಿ ಮರದ ಬಳಿ ಹೋಗಿ, ನಿರ್ದಿಷ್ಟವಾಗಿ ಯಾವ ಎಲೆಯನ್ನು ತರಬೇಕು; ಎಳೆಯ ಚಿಗುರೋ, ಅಥವಾ ಚೆನ್ನಾಗಿ ಬಲಿತದ್ದೋ, ಒಣಗಿದ್ದೊ ಎಂದು ಗೊಂದಲಕ್ಕೆ ಸಿಲುಕುತ್ತಾನೆ. ಅಷ್ಟಲ್ಲದೇ, ಎಲೆಗಳನ್ನು ಗಂಜಲದಲ್ಲಿಎಷ್ಟು ದಿನ ಇಡಬೇಕು.? ಗಾಳಿಯಾಡಿಸಬೇಕೋ ಬೇಡವೋ.? ಗಾಳಿಯಾಡಿಸುವುದಾದರೆ ಎಷ್ಟು ಹೊತ್ತು.? ಮಿಶ್ರಣಕ್ಕೆ ಹುಳ ಬಿದ್ದರೆ ಏನು ಮಾಡಬೇಕು.?…