Author: admin

ಕರ್ನಾಟಕ ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವರದಿಗಾರರ ಸಂಘದ ರಾಜ್ಯಾಧ್ಯಕ್ಷರಾದ ಶಶಿಕಾಂತ್ ಅವರು ಇಂದು ರಾಜ್ಯ ಸಂಘಟನಾ ಸಂಚಾಲಕರನ್ನಾಗಿ ಯಶಸ್ವಿನಿ ಬಿ. ಅವರನ್ನು ಆಯ್ಕೆ ಮಾಡಿದ್ದಾರೆ. ಈ ಮಹತ್ವಪೂರ್ಣ ನೇಮಕಾತಿ ಸಂಘದ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಲಿದೆ ಎನ್ನುವುದು ಸದಸ್ಯರ ನಿರೀಕ್ಷೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಅಧ್ಯಕ್ಷರಾದ ಸಂಜಯ್ ಹಾಗೂ ಬೆಂಗಳೂರು ವಿಭಾಗದ ಅಧ್ಯಕ್ಷರಾದ ವಿಜಯ್ ಮುನಿಯಪ್ಪ ಉಪಸ್ಥಿತರಿದ್ದು, ಯಶಸ್ವಿನಿ ಬಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು ಮತ್ತು ಹೊಸ ನೇಮಕಾತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಯಶಸ್ವಿನಿ ಬಿ. ಅವರು ತಮ್ಮ ನೇಮಕಾತಿಗೆ ಧನ್ಯವಾದ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ತಮ್ಮ ಶ್ರಮವನ್ನು ಅರ್ಪಿಸುವ ನಿರ್ಧಾರವನ್ನು ಪ್ರಕಟಿಸಿದರು. “ನಮ್ಮ ಸಂಘದ ಉದ್ದೇಶಗಳ ಸಾಧನೆಗಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು. ತುಮಕೂರು ಜಿಲ್ಲಾ ಘಟಕ – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘ (ರಿ) ಪದಾಧಿಕಾರಿಗಳು:…

Read More

ಹಾವೇರಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಬಾಲಕರು ಮುಳುಗಿ ಸಾವನ್ನಪ್ಪಿರುವ ಘಟನೆ  ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಂಗಲ್ ತಾಲ್ಲೂಕಿನ ಕೊಪ್ಪರಸಿಕೊಪ್ಪದಲ್ಲಿ ಇಬ್ಬರು ಬಾಲಕರು ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಧನುಷ್ ಚೋಳಪ್ಪನವರ್ (13) ಮತ್ತು ನಿಖಿಲ್ ಜಗದೀಶ್ ನಾಗೋಜಿ (11) ಮೃತಪಟ್ಟವರಾಗಿದ್ದಾರೆ. ಧನುಷ್ ಮುಂಡ್‌ಗೋಡ್ ಖಾಸಗಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಮತ್ತು ನಿಖಿಲ್ ಕೊಪ್ಪರಸಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ. ಇವರಿಬ್ಬರು ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನೂ  ಶಿಗ್ಗಾಂವ್ ತಾಲ್ಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಮತ್ತೊಂದು ದುರಂತ ನಡೆದಿದೆ. ಗೌಡರ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಪ್ರಜ್ವಲ್ ದೇವರಮಣಿ (14) ಮತ್ತು ಸನತ್ ಭೂಸರೆಡ್ಡಿ (14) ಎಂಬ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. ಬೇಸಿಗೆ ಕಾಲದಲ್ಲಿ ಈಜಲು ತೆರಳುವ ವೇಳೆ ಅವಘಡಗಳು ಪ್ರತಿ ವರ್ಷವೂ ನಡೆಯುತ್ತಿದೆ. ಕೆರೆಯ ಆಳದ ಅರಿವು ಇಲ್ಲದೇ ನೀರಿಗಿಳಿಯುತ್ತಿರುವ ಮಕ್ಕಳು ಬಲಿಯಾಗುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More

ಪಾವಗಡ: ಡಾ.ವಿರೇಂದ್ರ ಹೆಗ್ಗಡೆಯವರು ರಾಜ್ಯಾದಂತಹ ಶ್ರೀ ಕ್ಷೇತ್ರಧಮ೯ಸ್ಥಳ ಗ್ರಾಮಾಭಿವೃದ್ದಿಯೋಜನೆ ಮೂಲಕ 60 ಲಕ್ಷಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಬ್ಯಾಂಕ್ ಮೂಲಕ ಸಂಘಗಳಿಗೆ ನೇರವಾಗಿ ಕೋಟ್ಯಾಂತರ ಮೊತ್ತಸಾಲ ಸಿಗುವಂತೆ ಬ್ಯಾಂಕಿನ ಪ್ರತಿನಿಧಿಗಳಾಗಿ ಯೋಜನೆಯ 45,000 ಕಾಯ೯ಕತ೯ರು ಸಂಘಗಳ ಸದಸ್ಯರಿಗೆ ಮಾಹಿತಿ ಮಾಗ೯ದಶ೯ನ ನೀಡುತ್ತಿದ್ದಾರೆ ಎಂದು ತಾಲ್ಲೂಕ್ ರೈತಸಂಘದ ಅಧ್ಯಕ್ಷರಾದ ನರಸಿಂಹರೆಡ್ಡಿ ಹೇಳಿದರು. ಪಾವಗಡ ತಾಲ್ಲೂಕ್ ಸಾಸಲು ಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪೋಲೇನಹಳ್ಳಿ ಗ್ರಾಮದ ಗೊಂಚಿಕುಂಟೆ ಕೆರೆ ಕಾಮಗಾರಿ ಗುದ್ದಲಿ ಪೂಜೆ ಹಾಗು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜನರಿಗೋಸ್ಕರ ಹಲವಾರು ಸಮುದಾಯ ಕಾಯ೯ಕ್ರಮಗಳನ್ನ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತಿದ್ದಾರೆ. ನಿಮ್ಮ ಊರಿನ ಕೆರೆಗೆ ಹೂಳೆತ್ತಲು ಅನುದಾನ ನೀಡಿದ್ದಾರೆ, ರೈತರು ಹೂಳನ್ನ ತಮ್ಮ ಜಮೀನಿಗಳಿಗೆ ಹಾಕಿಕೊಂಡು ಭೂಮಿಯ ಫಲವತ್ತತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ತಾಲ್ಲೂಕ್ ಯೋಜನಾಧಿಕಾರಿಗಳಾದ ಮಹೇಶ್ ಮಾತನಾಡಿ, ಪಾವಗಡ ತಾಲ್ಲೂಕ್ ವಷ೯ಕ್ಕೆ ಒಂದು ಕೆರೆಯಂತೆ 6 ಕೆರೆಗಳನ್ನ ಪುನಶ್ಚೇತನಗೊಳಿಸಿ, ಈ ವರ್ಷ ಹೊಸದಾಗಿ ಪೋಲೇನಹಳ್ಳಿ ಗ್ರಾಮದ ಗೊಂಚಿಕುಂಟೆ ಕೆರೆ…

Read More

ತಿಪಟೂರು: ನಂಬಿಕೆಗಿಂತ ಮೊದಲದ್ದು ಯಾವುದು ಇಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವಾರು ಕಾರ್ಯಕ್ರಮ ನಡೆಯುತ್ತಿದ್ದು, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಒಂದು ತಾಲೂಕಿಗೆ ಸೀಮಿತ ವಾಗದೇ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಸಂಘಟನೆ ಸ್ಥಾಪಿಸಿ, ಬಡವರ್ಗದ ಏಳಿಗೆಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಈ ನಿಸ್ವಾರ್ಥ ಸೇವೆಯನ್ನು ನಾನು 65 ವರ್ಷದಿಂದ ನಾನು ಕಣ್ಣಾರೆ ಕಂಡಿದ್ದೇನೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ತಾಲೂಕು ಬಿದರೆಗುಡಿ ವಲಯದ ಮತ್ತಿಹಳ್ಳಿ ಗ್ರಾಮದಲ್ಲಿ ಈ ದಿನ ಶಿವ ಪಂಚಾಕ್ಷರಿ ಪಠಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಧರ್ಮಧಿಕಾರಿಯಾಗಿ ಯಾರ ಹಿತವನ್ನು ಕಸಿಯದೆ, ಇನ್ನೊಬ್ಬರ ಒಳಿತಿಗಾಗಿ ತಮ್ಮ ಸಂಸ್ಥೆಯನ್ನೆ ಮುಡಿಪಾಗಿ ಇಟ್ಟಿದ್ದಾರೆ ಎಂದರು. ಈ ದಿನ ತಾವೆಲ್ಲರೂ ತಾಯಂದಿರು ಶಿವ ಪಂಚಾಕ್ಷರಿ ಪಠಣ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿರುತ್ತಿರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಕಾಮಗಾರಿ ನಡೆಸಿ ಕೆರೆಗಳನ್ನು…

Read More

ಬೆಂಗಳೂರು: ಗಾಂಜಾ ತರಲು ನೀಡಿದ್ದ 500 ರೂಪಾಯಿ ವಾಪಸ್ ಕೇಳಲು ಹೋದ ವೇಳೆ ಯುವಕನೊಬ್ಬ ಮತ್ತೊಬ್ಬ ಯುವಕನಿಂದ ಬರ್ಬರವಾಗಿ ಹತ್ಯೆಗೀಡಾದ ಘಟನೆ ಹೊಸಕೋಟೆ ತಾಲೂಕಿನ ಕಟ್ಟಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಟ್ಟಿಗಾನಹಳ್ಳಿ ನಿವಾಸಿ ಮೋಹಿನ್ ಹತ್ಯೆಗೀಡಾದ ಯುವಕನಾಗಿದ್ದಾನೆ. ಮೋಹಿನ್ ಗಾಂಜಾ ವ್ಯಸನಿಯಾಗಿದ್ದರಿಂದ ರೋಶನ್ ಗೆ ಗಾಂಜಾ ತರಲು 500 ರೂ. ಹಣವನ್ನು ನೀಡಿದ್ದ. ಆದರೆ ರೋಷನ್ ಗಾಂಜಾ ತರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಗೆ ಹೋಗಿದ್ದ. ಈ ವಿಚಾರವಾಗಿ ಇವರಿಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ರೋಷನ್ ಚಾಕುನಿಂದ ಮೋಹಿನ್ನ ಎದೆ, ಪಕ್ಕೆಲುಬು ಭಾಗಕ್ಕೆ 3 ಬಾರಿ ಚುಚ್ಚಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮೋಹಿನ್ ನನ್ನು ಸ್ನೇಹಿತರು ಮಾಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೋಹಿನ್ ಮೃತಪಟ್ಟಿದ್ದಾನೆ. ಆರೋಪಿ ರೋಶನ್ ಹುಡುಗರಿಗೆ ಗಾಂಜಾ ತಂದು ಕೊಡುತ್ತಿದ್ದ ಎನ್ನಲಾಗಿದೆ. ಸ್ಥಳಕ್ಕೆ ತಿರುಮಶೆಟ್ಟಿ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ…

Read More

ಧರ್ಮಪುರಿ: ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳಾ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಂಬನಲ್ಲೂರಿನಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಹತ್ತಿರದ ಹಳ್ಳಿಯ ನಿವಾಸಿಗಳು. ಸ್ಫೋಟ ಸಂಭವಿಸಿದಾಗ ಅವರು ಚಿನ್ನದುರೈ ಒಡೆತನದ ಪರವಾನಗಿ ಪಡೆದ ಸಂಗ್ರಹಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ದುರಂತ ಸಂಭವಿಸಿದ ಪಟಾಕಿ ಘಟಕವು ದೀರ್ಘಕಾಲದವರೆಗೆ ಸರ್ಕಾರಿ ಪರವಾನಗಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಸತೀಶ್ ದೃಢಪಡಿಸಿದ್ದಾರೆ. ಸ್ಫೋಟದ ಕಾರಣವನ್ನು ಪ್ರಸ್ತುತ ತನಿಖೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಸತೀಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ವರನ್ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ನಿರ್ಣಯಿಸಿದರು ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು:  ದೇಶ ವಿಕಸಿತ ಭಾರತ ಆಗ್ಬೇಕು ಅಂದ್ರೆ, ಯಾವ್ ರೀತಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಅನ್ನೊದನ್ನ 10 ವರ್ಷದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇವತ್ತು 19 ನೇ ಕಂತಿನಲ್ಲಿ 22 ಸಾವಿರ ಕೋಟಿಗಳನ್ನ, 9 ಕೋಟಿ 80 ಲಕ್ಷ ಕುಟುಂಬಗಳಿಗೆ ಇವತ್ತು ವಿತರಣೆ ಮಾಡಿದ್ದಾರೆ ಎಂದರು. ಇವತ್ತು 3 ಲಕ್ಷದ 46 ಸಾವಿರ ಕೋಟಿ ರೂಪಾಯಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. 10 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಬಗ್ಗೆ ಕ್ರಮ ಕೈಗೊಂಡಿದ್ರು ಎಂದರು. ಅದನ್ನ 50 ವರ್ಷದ ಹಿಂದೆ ತಗೊಂಡಿದ್ರೆ ವಿಕಸಿತ ಭಾರತ ಆವತ್ತೆ ಆಗಿರೋದು. ಮೋದಿ ಅವರ ದೂರ ದೃಷ್ಟಿ ನಮಗೆಲ್ಲಾ ಸ್ಪೂರ್ತಿ ಮತ್ತು ಸಂದೇಶ ಆಗಿರುತ್ತೆ ಎಂದರು. ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಕೃತ್ಯವು  ಅಮಾನವೀಯ ಕೃತ್ಯ ಮಾಡ್ತಿರುವ…

Read More

ತುಮಕೂರು:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತನ್ನು ಬಿಹಾರದ ಭಗಲ್‌ ಪುರದಲ್ಲಿ ಸೋಮವಾರ ಬಿಡುಗಡೆ ಮಾಡಿದರು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ವೀಕ್ಷಣೆ ಮಾಡಿದ ನಂತರ ಜಿಲ್ಲೆಯ ತಿಪಟೂರಿನ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪದಲ್ಲಿ ಮಾತನಾಡುತ್ತಾ, ದೇಶದ 9.80 ಕೋಟಿ ರೈತರಿಗೆ (2.41 ಕೋಟಿ ಮಹಿಳಾ ರೈತರು ಸೇರಿದಂತೆ) ಒಟ್ಟು 22,000 ಕೋಟಿ ರೂ.ಗಳನ್ನು ಈ ಕಂತಿನ ಹಣವಾಗಿ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ರಾಜ್ಯದ 44.2 ಲಕ್ಷ ಫಲಾನುಭವಿಗಳಿಗೆ 884 ಕೋಟಿ ರೂ. ಒಳಗೊಂಡಿದೆ. ಈ ಯೋಜನೆ ಕೇವಲ ರೈತರನ್ನಷ್ಟೇ ಪ್ರೋತ್ಸಾಹಿಸದೆ ದೇಶದ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಮೃದ್ಧಿಗಾಗಿ ನಾಂದಿ ಹಾಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಿಪಟೂರು ಪುರಸಭೆ ಅಧ್ಯಕ್ಷೆ ಯುಮುನಾ ಧರಣೇಶ್, ತಿಪಟೂರು ತಾಲ್ಲೂಕು ತಹಶೀಲ್ದಾರ್ ಪವನ್ ಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ತುಮಕೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ತೋರಬಾರದು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 2024–25ನೇ ಸಾಲಿನ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಯೋಜನೆಗಳ ಕುರಿತು ಮಾಹಿತಿ ನೀಡುತ್ತಾ, ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 2023ರಿಂದ ಅಕ್ಟೋಬರ್ 2024ರವರೆಗೆ 90,38,371 ಫಲಾನುಭವಿಗಳಿಗೆ ಒಟ್ಟು 1807.67 ಕೋಟಿ ರೂ. ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2023 ಜೂನ್‌ನಿಂದ ಜನವರಿ 2025ರವರೆಗೆ 1164.14 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ಒಟ್ಟು ಆದಾಯ 34184.97 ಲಕ್ಷ ರೂ.ಗಳಾಗಿದೆ. ಯುವನಿಧಿ ಯೋಜನೆಯಲ್ಲಿ ಜನವರಿ 2025 ಅಂತ್ಯಕ್ಕೆ 7743 ಯುವಜನರು ನೋಂದಣಿಯಾಗಿದ್ದು, 5425 ಜನರಿಗೆ ಡಿಬಿಟಿ ಮೂಲಕ 7.60,83,000 ರೂ. ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ…

Read More

ತುಮಕೂರು:  ಜಿಲ್ಲೆಯ ಗೃಹರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ 255 ಗೃಹರಕ್ಷಕ/ ಗೃಹರಕ್ಷಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಫೆಬ್ರವರಿ 27ರಂದು ಸಂದರ್ಶನ ಏರ್ಪಡಿಸಲಾಗಿದೆ. ತುಮಕೂರು ಘಟಕದ 45 ಹುದ್ದೆ, ಕ್ಯಾತಸಂದ್ರ–45, ಕೊರಟಗೆರೆ–15, ಮಧುಗಿರಿ–11, ಪಾವಗಡ–12, ಶಿರಾ–11, ಚಿಕ್ಕನಾಯಕನಹಳ್ಳಿ–5, ತಿಪಟೂರು–8, ತುರುವೇಕೆರೆ–9, ಕುಣಿಗಲ್–18, ಗುಬ್ಬಿ–6, ಊರ್ಡಿಗೆರೆ–18, ನೊಣವಿನಕೆರೆ–10, ಹೊನ್ನವಳ್ಳಿ–6, ಅಮೃತೂರು–12, ಮಿಡಿಗೇಶಿ–11, ತಾವರೆಕೆರೆ–3, ಕಳ್ಳಂಬೆಳ್ಳ–6, ವೈ.ಎನ್.ಹೊಸಕೋಟೆ–4 ಸೇರಿದಂತೆ ಒಟ್ಟು 255 ಹುದ್ದೆಗಳ ಆಯ್ಕೆಗಾಗಿ ಫೆ.27ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನ(ಡಿಎಆರ್)ದಲ್ಲಿ ಸಂದರ್ಶನ ನಡೆಯಲಿದೆ. ಸದರಿ ಹುದ್ದೆಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಸಸ್ಥಳ ದೃಢೀಕರಣ(ಪಡಿತರ ಚೀಟಿ) ಪತ್ರದ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಜಿಲ್ಲಾ ಗೃಹರಕ್ಷಕ ದಳದ ಪ್ರಭಾರ ಸಮಾದೇಷ್ಟರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ. ಮರಿಯಪ್ಪ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More