ತುಮಕೂರು: ದೇಶ ವಿಕಸಿತ ಭಾರತ ಆಗ್ಬೇಕು ಅಂದ್ರೆ, ಯಾವ್ ರೀತಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಅನ್ನೊದನ್ನ 10 ವರ್ಷದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇವತ್ತು 19 ನೇ ಕಂತಿನಲ್ಲಿ 22 ಸಾವಿರ ಕೋಟಿಗಳನ್ನ, 9 ಕೋಟಿ 80 ಲಕ್ಷ ಕುಟುಂಬಗಳಿಗೆ ಇವತ್ತು ವಿತರಣೆ ಮಾಡಿದ್ದಾರೆ ಎಂದರು.
ಇವತ್ತು 3 ಲಕ್ಷದ 46 ಸಾವಿರ ಕೋಟಿ ರೂಪಾಯಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. 10 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಬಗ್ಗೆ ಕ್ರಮ ಕೈಗೊಂಡಿದ್ರು ಎಂದರು.
ಅದನ್ನ 50 ವರ್ಷದ ಹಿಂದೆ ತಗೊಂಡಿದ್ರೆ ವಿಕಸಿತ ಭಾರತ ಆವತ್ತೆ ಆಗಿರೋದು. ಮೋದಿ ಅವರ ದೂರ ದೃಷ್ಟಿ ನಮಗೆಲ್ಲಾ ಸ್ಪೂರ್ತಿ ಮತ್ತು ಸಂದೇಶ ಆಗಿರುತ್ತೆ ಎಂದರು.
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಕೃತ್ಯವು ಅಮಾನವೀಯ ಕೃತ್ಯ ಮಾಡ್ತಿರುವ ಅನಾಮಿಕ ಸ್ಯಾಡಿಸ್, ಈ ಸ್ಯಾಡಿಸ್ ಜನರಿಗೆ ಸರ್ಕಾರ ತೀಕ್ಷ್ಣ ಕ್ರಮ ಕೈಗೊಳ್ಳಬೇಕು ಎಂದರು.
ಅವರು ನಾವೆಲ್ಲಾ ಭಾರತೀಯರು, ಪ್ರಧಾನಿ ಮೋದಿ ಅವರು ಕರ್ನಾಟಕ ಹಾಗೂ ಕೇವಲ ಮಹಾರಾಷ್ಟ್ರಕ್ಕೆ ಅಲ್ಲ. ಇಡೀ ರಾಷ್ಟ್ರಕ್ಕೆ ಸವಲತ್ತು ಕೊಡ್ತಿದ್ದಾರೆ ಎಂದರು.
ಈ ರೀತಿಯಾಗಿ ನಡೆದುಕೊಳ್ತಿರೋದು ನಿಮಗೆ ತಕ್ಕದಲ್ಲ. ಮಹಾರಾಷ್ಟ್ರ ಸರ್ಕಾರದ ಸಿಎಂ ಗೆ ಒತ್ತಾಯ ಮಾಡ್ತಿನಿ. ಇಂತಹರ ವಿರುದ್ಧ ತೀಕ್ಷ್ಣವಾದ ಕ್ರಮ ಕೈಗೊಳ್ಳಬೇಕು.
ಒಂದು ರಾಜ್ಯ ಮತ್ತೊಂದು ರಾಜ್ಯದ ಮೇಲೆ ಗದಾಪ್ರಹಾರ ಮಾಡೋ ಕಿಡಿಗೇಡಿಗಳಿಗೆ ಕ್ರಮ ತಗೋಬೇಕು ಅನ್ನೋದು ನನ್ನ ವೈಯಕ್ತಿಕ ಆಗ್ರಹ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4