Subscribe to Updates
Get the latest creative news from FooBar about art, design and business.
- ಐಷಾರಾಮಿ ರೆಸ್ಟೋರೆಂಟ್ ಮೇಲೆ ದಾಳಿ: ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು
- ಚಿತ್ರದುರ್ಗ: ವಿದ್ಯುತ್ ಆಘಾತಕ್ಕೆ ನವಿಲು ಹಾಗೂ ಚಿರತೆ ದಾರುಣ ಸಾವು
- ಚಿಕ್ಕಮಗಳೂರು: 100 ಅಡಿ ಪ್ರಪಾತಕ್ಕೆ ಉರುಳಿದ 10 ವೀಲ್ ಲಾರಿ
- ‘ನನ್ನನ್ನು ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ’: ಕಾಂಗ್ರೆಸ್ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
- ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!
- ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ
- ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!
- ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ; ಎಫ್ ಐಆರ್ ದಾಖಲು
Author: admin
ಪಾವಗಡ: ಹೇಳಿ ಕೇಳಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಬರದ ನಾಡು ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶವಾಗಿದೆ. ಇದು ಹೀಗಿದ್ದರೆ ತಾಲೂಕಿನ ನಾಗಲಮಡಿಕೆ ಹೋಬಳಿಯ ರ್ಯಾಪ್ಟೆ ಗ್ರಾಪಂ ವ್ಯಾಪ್ತಿಯ ನಾಗೇನಹಳ್ಳಿಯ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಗ್ರಾಮದಲ್ಲಿ ಎರಡು ಬೋರ್ ಗಳಿಂದ ಗ್ರಾಮದ ಜನರಿಗೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದ್ರೆ ಕಳೆದ ಐದು ದಿನಗಳ ಹಿಂದೆ ಕುಡಿಯುವ ನೀರಿನ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದು, ಮೋಟರನ್ನು ರಿಪೇರಿ ಮಾಡಲು ತೆಗೆದುಕೊಂಡು ಹೋಗಿದ್ದ ಮೆಕಾನಿಕ್ ರಿಪೇರಿ ಮಾಡದೆ ಮೋಟರನ್ನು ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾನೆ . ಈ ಬಗ್ಗೆ ಗ್ರಾಮಸ್ಥರು ಕೇಳಿದರೆ ನನಗೆ ಗ್ರಾಮ ಪಂಚಾಯಿತಿಯಿಂದ ಈ ಹಿಂದೆ ಮೋಟಾರ್ ಗಳನ್ನ ರಿಪೇರಿ ಮಾಡಿದ ಸಾಕಷ್ಟು ಹಣ ಬರಬೇಕಿದೆ, ಆ ಹಣ ಬರುವವರೆಗೂ ನಾನು ಇದನ್ನು ರಿಪೇರಿ ಮಾಡುವುದಿಲ್ಲ, ಅವರಿಗೆ ಕೊಡುವುದಿಲ್ಲ ಎಂಬ ಉತ್ತರವನ್ನು ಹೇಳಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು, ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಪಿಡಿಒ…
ತುಮಕೂರು: ನಮಗೆ ವಿಶ್ವವಿದ್ಯಾಲಯಗಳ ಪದವಿಗಳು ಬೇಕಿಲ್ಲ, ಗುರುಪರಂಪರೆಗಳು ಬೇಕು, ನಮಗೆ ಬೇಕಿರುವುದು ಡಿಗ್ರಿಗಳಲ್ಲ, ಜನ ಸಮುದಾಯದ ಮನಸ್ಸು ಶಾಂತಿ, ನೆಮ್ಮದಿ ಸಮಾನತೆ ಸಹಬಾಳ್ವೆಯಿಂದ ಬಾಳುವಂತ ಮನಸ್ಸು ಬದಲಾಗಬೇಕಾದದ್ದು ಅನಿವಾರ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಬೆಳ್ಳಾವಿ ಕಾರದ ಮಠದ ಕರ್ತೃ ಗದ್ದುಗೆ ಲೋಕಾರ್ಪಣೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರು ಪರಂಪರೆ ನಮ್ಮದು, ಆ ಗುರುಗಳ ಮಾತು ನಾವೆಲ್ಲ ಕೇಳಬೇಕು, ಅದರಂತೆ ನಾವು ನಡೆದು ಕೊಳ್ಳ ಬೇಕು ಎಂದರು. ಭಗವಾನ್ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣರನ್ನು ಸ್ಮರಿಸಿದ ಪರಮೇಶ್ವರ, ಸುಮಾರು 2,500 ವರ್ಷಗಳ ಹಿಂದೆ ಈ ದೇಶದಲ್ಲಿ ಭಗವಾನ್ ಬುದ್ಧ ಹುಟ್ಟುತ್ತಾನೆ. ಸಮಾಜವನ್ನು ಉದ್ದಾರಮಾಡಲು ಜನಿಸಿದವರು ಬುದ್ಧ. ರಾಜನಾಗಿದ್ರು ಹೆಂಡತಿ, ಮಗು, ಆಸ್ತಿ ಎಲ್ಲವನ್ನು ತ್ಯಜಿಸಿ ಸಿದ್ದಾರ್ಥ ಬುದ್ಧನಾದ. ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದವನು ಬುದ್ಧ. ಇನ್ನು 850 ವರ್ಷಗಳ ಹಿಂದೆ ಹುಟ್ಟಿದ ಬಸವಣ್ಣ ಬ್ರಾಹ್ಮಣತ್ವವನ್ನು ತ್ಯಜಿಸಿ ತನ್ನದೇ ತತ್ವಗಳನ್ನು ಸಮಾಜಕ್ಕೆ…
ತುಮಕೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ 1 ತಿಂಗಳ ವಸತಿ ಸಹಿತ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 20ರವರೆಗೆ ವಿಸ್ತರಿಸಲಾಗಿದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನ ನೀಡಲಾಗುವುದು. ಅರ್ಜಿದಾರರು ಪ.ಜಾತಿ ಅಥವಾ ಪ.ಪಂಗಡಕ್ಕೆ ಸೇರಿದವರಾಗಿದ್ದು, 20 ರಿಂದ 45 ವರ್ಷದೊಳಗಿನವರಾಗಿರಬೇಕು ಹಾಗೂ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಲಘು ವಾಹನ ಚಾಲನಾ ಪರವಾನಗಿಯನ್ನು ಪಡೆದಿರಬೇಕು. ನಗರ ಪ್ರದೇಶದವರ ವಾರ್ಷಿಕ ಆದಾಯ 2 ಲಕ್ಷ ರೂ. ಹಾಗೂ ಗ್ರಾಮಾಂತರ ಪ್ರದೇಶದವರ ವಾರ್ಷಿಕ ಆದಾಯ 1.50ಲಕ್ಷ ರೂ.ಗಳನ್ನು ಮೀರಬಾರದು. ಯಾವುದೇ ಸರ್ಕಾರಿ ಇಲಾಖೆ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ತಹಶೀಲ್ದಾರರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ/ ಆದಾಯ ಪ್ರಮಾಣಪತ್ರ, ಖಾಯಂ ಲಘು ವಾಹನ ಚಾಲನಾ ಪರವಾನಗಿ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಆಧಾರ್ ಕಾರ್ಡ್,…
ತುಮಕೂರು: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯು ಶಿಶುಕೇಂದ್ರೀಕೃತ ಯೋಜನೆಯಡಿ ನಡೆಸುತ್ತಿರುವ ವಿಶೇಷ ಶಾಲೆಯನ್ನು ಅನುದಾನಕ್ಕೆ ಒಳಪಡಿಸಲು ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಸಂಸ್ಥೆಗಳು ಬೆಂಗಳೂರಿನ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಿಂದ ಅನುಮತಿ ಪಡೆದು, ಕಳೆದ 3 ವರ್ಷಗಳಿಂದ ಶಾಲೆಯನ್ನು ನಡೆಸುತ್ತಿರಬೇಕು. ಆಸಕ್ತ ಸಂಸ್ಥೆಯು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದ್ವಿ–ಪ್ರತಿಯಲ್ಲಿ ಫೆಬ್ರವರಿ 28ರೊಳಗಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816–2270029ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪ ಎಂ.ದೊಡ್ಡಮನಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ತುಮಕೂರು: ತಾಲ್ಲೂಕಿನ ಹೆಬ್ಬೂರು ಗ್ರಾಮ ತುಮಕೂರು–ಕುಣಿಗಲ್ ರಸ್ತೆ ಕೆನರಾ ಬ್ಯಾಂಕ್ ಬಳಿ ಜನವರಿ 26ರಂದು ಸುಮಾರು 70 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತನ ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತ ಯಾರೆಂದು ತಿಳಿದು ಬಂದಲ್ಲಿ, ಕೂಡಲೇ ಹೆಬ್ಬೂರು ಪೊಲೀಸ್ ಠಾಣೆ ಅಥವಾ ಮೊ.ಸಂ. 9480802953-00 ಅಥವಾ ದೂ.ವಾ.ಸಂ. 0816–2241036ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಅಪರಿಚಿತ ಮಹಿಳೆ ಶವ ಪತ್ತೆ: ತುಮಕೂರು: ಕ್ಯಾತ್ಸಂದ್ರ ಪೋಲೀಸ್ ಠಾಣೆ ವ್ಯಾಪ್ತಿ ಸಿದ್ದಗಂಗಾ ಮಠದ ಬಸವೇಶ್ವರ ಪ್ರತಿಮೆಯ ಬಳಿ ಸುಮಾರು 45 ವರ್ಷದ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತ ಮಹಿಳೆಯು 160 ಸೆಂ.ಮೀ. ಎತ್ತರ, ಕೋಲು ಮುಖ, ಗಿಡ್ಡನೆಯ ಮೂಗು, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಗೈ ಮೊಣಕೈನಲ್ಲಿ ಗಂಗಮ್ಮ ಎಂದು ಹಚ್ಚೆ, ಮೈಮೇಲೆ ಬಿಳಿ-ಕೆಂಪು ಬಣ್ಣದ ಸೀರೆ ಇರುತ್ತದೆ. ಮೃತಳ ವಾರಸುದಾರರು ಯಾರಾದರೂ…
ತುಮಕೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ ಗಣನೀಯ ಸೇವೆ ಸಲ್ಲಿಸಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಮಧುಗಿರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಶಸ್ತಿಯನ್ನು ಏಪ್ರಿಲ್ 5ರಂದು ನಡೆಯುವ ಡಾ.ಬಾಬು ಜಗಜೀವನರಾಂ ಹಾಗೂ ಏಪ್ರಿಲ್ 14ರಂದು ನಡೆಯುವ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯಂದು ನೀಡಲಾಗುವುದು. ಆಸಕ್ತರು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 27ರೊಳಗಾಗಿ ಮಧುಗಿರಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕ(ಗ್ರೇಡ್-1) ದಿನೇಶ್ ಬಿ.ಎಂ. ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಶ್ರವಣಬೆಳಗೊಳ : ಬಾಹುಬಲಿ ಸ್ವಾಮಿಯ ಅಭಿಷೇಕದ ನಿಮಿತ್ತ ವೃಷಭನಾಥ ಸ್ವಾಮಿಯ ಲಘು ಪಂಚಕಲ್ಯಾಣದ ಧಾರ್ಮಿಕ ವಿಧಿಗಳು ಆಚಾರ್ಯರು, ತ್ಯಾಗಿಗಳು ಹಾಗೂ ಭಟ್ಟಾರಕ ಸ್ವಾಮೀಜಿಗಳ ಸಾನಿಧ್ಯ ಮತ್ತು ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪುರೋಹಿತ ವರ್ಗದವರು ಶನಿವಾರ ನೆರವೇರಿಸಿದರು. ಭಂಡಾರ ಬಸದಿಯ ಮುಂಭಾಗ ಬೆಳಗ್ಗೆ ವಿವಿಧ ಮಂಗಲ ವಾದ್ಯಗಳೊಂದಿಗೆ ಧ್ವಜಾರೋಹಣವನ್ನು ಬೆಂಗಳೂರಿನ ಅನಿಲ್ ಸೇಠಿ ಹಾಗೂ ವೇದಿಕೆಯ ಉದ್ಘಾಟನೆಯನ್ನು ಚಂಪಾಲಾಲ್ ಭಂಡಾರಿ ನೆರವೇರಿಸಿದರು. ಕಂಕಣ ಧಾರಣೆಯೊಂದಿಗೆ ಮಕರ ಲಗ್ನದಲ್ಲಿ ಸಕಲೀಕರಣ, ಇಂದ್ರಪ್ರತಿಷ್ಠೆ ನಾಂದಿ ಮಂಗಲ, ಅಖಂಡ ದೀಪ ಸ್ಥಾಪನೆ ಅಂಕುರಾರ್ಪಣೆಯನ್ನು ನೆರವೇರಿಸಲಾಯಿತು. ನೂತನ ಬಾಹುಬಲಿ ಬಿಂಬಕ್ಕೆ ಧಾಮ ಸಂಪ್ರೋಕ್ಷಣೆ, ವಿಮಾನ ಶುದ್ಧಿ, ಹೋಮಗಳು ನಡೆದ ನಂತರ 14 ನದಿಗಳ ಶುದ್ಧ ಜಲದಿಂದ ಮೂರ್ತಿಯನ್ನು ಮಂತ್ರಗಳೊಂದಿಗೆ ಶುದ್ಧಿ ಮಾಡಲಾಯಿತು. ಕಿರೀಟ ಧರಿಸಿದ್ದ ಅಷ್ಟ ಕನ್ನಿಕೆಯರು ಮತ್ತು ಶ್ರಾವಕ ಶ್ರಾವಕಿಯರು ಸೇರಿ ಬಿಂಬಕ್ಕೆ ಅರಿಷಿಣ ಕೇಸರಿಮ ಕ್ಷೀರ, ಗಂಧಗಳಿಂದ ಸಂಪ್ರೋಕ್ಷಿಸಿ ಶುದ್ಧಿ ಮಾಡಲಾಯಿತು. ರಚಿಸಿದ್ದ ಯಾಗ ಮಂಟಪದಲ್ಲಿ ವಾಸ್ತು ವಿಧಾನ,…
ಪಾವಗಡ: ಸರ್ಕಾರಿ ಪಾಠಶಾಲೆಗಳು ಗ್ರಾಮೀಣ ಮಕ್ಕಳ ಬೆಳಕು ಚೆಲ್ಲುವ ವಿಶ್ವವಿದ್ಯಾಲಯಗಳು ಆಗಬೇಕು, ಸರ್ಕಾರಿ ಶಾಲೆಗಳು ಉಳಿಸುವುದು ಬೆಳೆಸುವುದು ಆಯಾ ಭಾಗದ ಗ್ರಾಮಸ್ಥರ ಕಾಯಕವಾಗಬೇಕು ಎಂದು ಸಮಾಜ ಸೇವಕಿ ಡಾ.ಸಾಯಿಸುಮನ ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರದಂದು ಮಂಗಳವಾಡ ಗ್ರಾ ಪಂ.ನ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಂಗಳವಾಡ ಶಾಲಾ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಹಳೇ ವಿದ್ಯಾರ್ಥಿಗಳು ಮತ್ತು ಸಮಾಜ ಸೇವಕಿ ಸಾಯಿ ಸುಮನ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಡಾ.ಸಾಯಿಸುಮನ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ಗ್ರಾಮಸ್ಥರು, ಪೋಷಕರು ಕುಟುಂಬದ ಪ್ರತಿ ಪುಟಾಣಿ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಪ್ರವೇಶ ಮಾಡಿಸಬೇಕು. ಗ್ರಾಮೀಣ ಸರಕಾರಿ ಶಾಲೆಯ ಕನ್ನಡ ಮಾಧ್ಯಮ ಮಕ್ಕಳು ಯಾವ ಭಾಷೆಯ ಕಲಿಕಾರ್ಥಿಗಳಿಗೂ ಕಮ್ಮಿ ಇಲ್ಲವೆಂದು ಗ್ರಾಮೀಣರು ತೋರ್ಪಡಿಸಬೇಕಾಗಿದೆ, ಗ್ರಾಮೀಣ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ ಕಂಡ ಉತ್ತಮ ರಾಜನೀತಿ ಪಾಲನೆ ಮಾಡುವ ಸಮಾಜದ ಸುಧಾರಕರು ಆಗಿರುವ ಘಟನೆಗಳು ಇತಿಹಾಸ ಪುಟದಲ್ಲಿ ಎದ್ದು ಕಾಣುತ್ತಿವೆ ಎಂದರು. ಸರ್ಕಾರಿ ಶಾಲೆಯ…
ತುಮಕೂರು: ಪ್ರತಿಯೊಬ್ಬ ಪ್ರಜೆಯೂ ನೆಲದ ಕಾನೂನನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಸಾರ್ವಜನಿಕ ಜೀವನಗಳಲ್ಲಿ ಏಕಾಏಕಿ ಕಾನೂನಾತ್ಮಕ ಸಮಸ್ಯೆಗಳು ಎದುರಾದಾಗ ಅದನ್ನು ಪರಿಹರಿಸುವುದು ಹೇಗೆ? ಎನ್ನುವುದು ತೋಚದೇ ಸಾಕಷ್ಟು ಜನರು ಕಂಗಾಲಾಗುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಧಿ ಪ್ರಜ್ಞ ಕರ್ನಾಟಕ ಕಾನೂನು ಸ್ವಯಂ ಸೇವಾ ನೊಂದಾಯಿತ ಸಂಸ್ಥೆ ‘ಕಾನೂನು ಸಮಸ್ಯೆಗಳಿಗೆ ನೇರವಾಗಿ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರ ಜೊತೆ ಸಂವಾದ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಫೆಬ್ರವರಿ 16(ಇಂದು)ರಿಂದ ಪ್ರತಿ ಭಾನುವಾರ ಕಾನೂನು ಅರಿವು ಕಾರ್ಯಕ್ರಮ ಆನ್ ಲೈನ್ ಮೂಲಕ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೇರವಾಗಿ ಭಾಗಿಯಾಗಬಹುದಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಪುರುಷೋತ್ತಮ್ ಜಿ. ಅವರು ತಿಳಿಸಿದ್ದಾರೆ. ಫೆಬ್ರವರಿ 16ರ ದಿನವಾದ ಇಂದು ಕಾನೂನು ಸಮಸ್ಯೆಗಳ ಬಗ್ಗೆ ಉಚಿತವಾಗಿ ನೇರ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಬಾಬಾಸಾಹೇಬ್ ಜಿನರಾಳ್ಕರ್ ವಿಶ್ರಾಂತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಕಾನೂನು ಸಲಹೆಗಾರರು, ಡಾ.ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಇವರು…
ತುಮಕೂರು: ನಗರದ ಟೌನ್ ಹಾಲ್ ವೃತ್ತದ ಬಳಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅವರು ಶನಿವಾರ ಹೆಲಿಕಾಪ್ಟರ್ ವೇದಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯ ಗುಬ್ಬಿ ತಾಲ್ಲೂಕು ಬಿದರೆಹಳ್ಳದ ಬಳಿ ಹೆಚ್ ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದ ಕುರುಹಾಗಿ ಪಾಲಿಕೆ ಕಚೇರಿಯ ಹೊರ ಆವರಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಅನ್ನು ಪ್ರದರ್ಶಿಸಲು ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ಹಾಗೂ ಹೊರಗಿನಿಂದ ಬರುವವರಿಗೂ ಜಿಲ್ಲೆಯಲ್ಲಿರುವ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದರು. ಹೆಲಿಕಾಪ್ಟರ್ ಘಟಕದ ಕುರುಹಾಗಿ ೫೦ ಲಕ್ಷ ರೂ. ಮೌಲ್ಯದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (Light Utility Helicopter)ಅನ್ನು ಪ್ರದರ್ಶಿಸಲಾಗುವುದು. ಹೆಲಿಕಾಪ್ಟರ್ ಪ್ರದರ್ಶನಕ್ಕಾಗಿ ೫ ಅಡಿ ಎತ್ತರ ಹಾಗೂ ೫೦ ಅಡಿ ವ್ಯಾಸದ ಸುತ್ತುವ ವೇದಿಕೆ(Rotation Platform)ಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ನಂತರ ಮಾತನಾಡಿದ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಬಿದರೆಹಳ್ಳದಲ್ಲಿರುವ ಹೆಚ್ ಎಎಲ್…