ತುಮಕೂರು: ತಾಲ್ಲೂಕಿನ ಹೆಬ್ಬೂರು ಗ್ರಾಮ ತುಮಕೂರು–ಕುಣಿಗಲ್ ರಸ್ತೆ ಕೆನರಾ ಬ್ಯಾಂಕ್ ಬಳಿ ಜನವರಿ 26ರಂದು ಸುಮಾರು 70 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತನ ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತ ಯಾರೆಂದು ತಿಳಿದು ಬಂದಲ್ಲಿ, ಕೂಡಲೇ ಹೆಬ್ಬೂರು ಪೊಲೀಸ್ ಠಾಣೆ ಅಥವಾ ಮೊ.ಸಂ. 9480802953-00 ಅಥವಾ ದೂ.ವಾ.ಸಂ. 0816–2241036ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಅಪರಿಚಿತ ಮಹಿಳೆ ಶವ ಪತ್ತೆ:
ತುಮಕೂರು: ಕ್ಯಾತ್ಸಂದ್ರ ಪೋಲೀಸ್ ಠಾಣೆ ವ್ಯಾಪ್ತಿ ಸಿದ್ದಗಂಗಾ ಮಠದ ಬಸವೇಶ್ವರ ಪ್ರತಿಮೆಯ ಬಳಿ ಸುಮಾರು 45 ವರ್ಷದ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತ ಮಹಿಳೆಯು 160 ಸೆಂ.ಮೀ. ಎತ್ತರ, ಕೋಲು ಮುಖ, ಗಿಡ್ಡನೆಯ ಮೂಗು, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಗೈ ಮೊಣಕೈನಲ್ಲಿ ಗಂಗಮ್ಮ ಎಂದು ಹಚ್ಚೆ, ಮೈಮೇಲೆ ಬಿಳಿ-ಕೆಂಪು ಬಣ್ಣದ ಸೀರೆ ಇರುತ್ತದೆ.
ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ಕ್ಯಾತ್ಸಂದ್ರ ಪೋಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4