Author: admin

ಜೆ. ರಂಗನಾಥ, ತುಮಕೂರು ಭರತ ಖಂಡದ ವಾಸ್ತುಶಿಲ್ಪ ಪರಂಪರೆ ತನ್ನದೇ ಆದ ಸಾಂಪ್ರದಾಯಿಕ ವಾಸ್ತು  ಶಿಲ್ಪಕ್ಕೆ ಹೆಸರಾಗಿದೆ. ಇದು ವಿಶ್ವ ಮಾನ್ಯ ಸ್ಥಾನಮಾನ ಹೊಂದಿದೆ. ಭಾರತ ಖಂಡದ ಹಲವಾರು  ರಾಜ ಮನೆತನಗಳು ವಾಸ್ತುಶಿಲ್ಪ ಜಗತ್ತಿಗೆ  ಹಲವಾರು ಕೊಡುಗೆಗಳನ್ನು ನೀಡಿ ವಿಶ್ವ ಮಾನ್ಯವಾಗಿವೆ. ಕನ್ನಡ ನಾಡನ್ನಾಳಿದ ಹಲವಾರು ರಾಜಮನೆತನಗಳು ಅವರ ಸಾಮಂತ ಆಳ್ವಿಕೆಗಾರರು, ಪಾಳು ಪಟ್ಟುಗಳ ನ್ನಾಳಿದ ಪಾಳೆಗಾರರು ನೀಡಿದ ಕೊಡುಗೆ ಅಪಾರ. ಇಂತಹ ಶಿಲ್ಪಕಲಾ ಜಗತ್ತಿಗೆ ಅಂದು  ರಾಜ -ಮಹಾರಾಜರು ನೀಡಿದ ಕೊಡುಗೆಗಳಲ್ಲಿ ಚಿತ್ರದುರ್ಗ ಜಿಲ್ಲೆ ,ಹೊಸದುರ್ಗ ತಾಲೂಕಿನ ,ಶ್ರೀರಾಂಪುರ ಹೋಬಳಿಯ ಹಗ್ಗೆರೆ ಗ್ರಾಮದ  ಹೊಯ್ಸಳ ವಾಸ್ತುಶಿಲ್ಪದ  ಶ್ರೀ ಸುಪಾರ್ಶ್ವನಾಥ ಜೈನಬಸದಿಯೂ ಒಂದು. ಉತ್ತರ ಕರ್ನಾಟಕದ ಬೆಳಗಾವಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಸವದತ್ತಿಯ ರಟ್ಟರು ಜೈನ ಧರ್ಮೀಯರು. ಅವರು ಬೆಳಗಾವಿಯ ಕೋಟೆಯಲ್ಲಿ ಕಮಲ ಬಸದಿ ಯನ್ನು ನಿರ್ಮಿಸಿದ್ದು, ಅದು ಅವರ ಮೂಲ ಮನೆ ದೇವರಾದ ಶ್ರೀ ನೇಮಿನಾಥ ತೀರ್ಥಂಕರ ಬಸದಿಯಾಗಿದೆ. ಈ ಬಸದಿಯ ಒಳಗೆ  ಹಾಗೂ ಹೊರಭಾಗಗಳೆಲ್ಲ ಕಮಲಕ್ಕೆ…

Read More

ಚಿಕ್ಕಮಗಳೂರು:  ನಕ್ಸಲ್ ಚಳುವಳಿಯ ಕೊನೆಯ ವ್ಯಕ್ತಿ ಕೋಟೆಹೊಂಡ ರವೀಂದ್ರ ಇಂದು ಮುಖ್ಯವಾಹಿನಿಗೆ ಬರಲಿದ್ದು, ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ಎಸ್ಪಿ ಕಚೇರಿಯಲ್ಲಿ ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ. ಶೃಂಗೇರಿ ತಾಲ್ಲೂಕಿನ ಕಿಗ್ಗಾ ಗ್ರಾಮದ ಕೋಟೆಹೊಂಡ ರವೀಂದ್ರ ಕಾಡಿನಲ್ಲೇ ಉಳಿದಿದ್ದ ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿಯಾಗಿದ್ದರು. ಜ.8ರಂದು ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಶರಣಾಗಿತ್ತು. ಇದೀಗ ಇಂದು ರವೀಂದ್ರ ಶರಣಾಗಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಚಿಕ್ಕನಾಯನಹಳ್ಳಿ: ಐದುನೂರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ನಮ್ಮ ದೇಶ ಹಾಗೂ ಧರ್ಮವನ್ನ ಕಾಪಾಡಿಕೊಂಡು ಬಂದಿದ್ದಾರೆ.  ಈ ನಿಟ್ಟಿನಲ್ಲಿ ನಾವುಗಳು ಕೂಡ ಅವರ ಮಾರ್ಗದರ್ಶನದ ಸಂಸ್ಕಾರ ಸಂಸ್ಕೃತಿಯಲ್ಲೇ  ನಡೆಯಬೇಕು ಎಂದು ವಿಜಯನಗರ ಮಹಾ ಸಂಸ್ಥಾನ ಅರಸರಾದ 19ನೇ  ಶ್ರೀಕೃಷ್ಣದೇವರಾಯರು ಹೇಳಿದರು. ಪಟ್ಟಣದಲ್ಲಿ ನೂತನವಾಗಿ ಕೇರಳ ಶೈಲಿಯಲ್ಲಿ ಶ್ರೀ ಮಹಾಲಕ್ಷ್ಮೀ ಮದ್ಧರಲಕ್ಕಮ್ಮ ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪ್ರಸ್ತುತ ಜನರು ಪಾಶ್ಚಿಮಾತ್ಯ ರಾಷ್ಟ್ರಗಳ ಇಂಗ್ಲೀಷ್ ಭಾಷೆಗೆ ಮಾರುಹೊಗುವುದಲ್ಲದೆ,  ದೇಶದಲ್ಲಿ ಅವಿಭಕ್ತ ಕುಟುಂಬಗಳ ವರ್ಜನೆಯಾಗುತ್ತಿರುವುದು ವಿಷಾದ ಸಂಗತಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾವು ಅಮೆರಿಕಾದಲ್ಲಿ ಇದ್ದು, ವಾಸಿಸಿ ಬಂದಿದ್ದಾದರು ನಮ್ಮ ದೇಶದ ಧರ್ಮ ಸಂಸ್ಕತಿ ಬೇರೆ ಯಾವ ರಾಷ್ಟ್ರದಲ್ಲೂ ಸಿಗುವುದಿಲ್ಲ. ನಮ್ಮ ರಾಜ ಮನೆತನದ ಕುಟುಂಬ ಆಗಿರ ಬಹುದು ಅಥವಾ ಜನ ಸಾಮಾನ್ಯರ ಕುಟುಂಬಗಳಾಗಿರ ಬಹುದು ಎಲ್ಲಾ ಅವಿಭಕ್ತ ಕುಟುಂಬದಲ್ಲಿ ಬದುಕಿ ಬಾಳುತ್ತಿದ್ದರು. ರಾಜನಾಗಲಿ ಸಾಮಾನ್ಯ ಪ್ರಜೆಯಾಗಲಿ ಗುರುವಿನ ಅನುಗ್ರಹ ಲಭಿಸಬೇಕು, ಈ ಅನುಭವವನ್ನ ಸ್ವತಃ ತಾವೇ ಪಡೆಕೊಂಡಿರುವುದಾಗಿ ತಿಳಿಸಿದರು. ವಿಜಯನಗರ…

Read More

ತುಮಕೂರು:  ಬೆವಿಕಂ ಗ್ರಾಮೀಣ ಉಪವಿಭಾಗ–1ರ ವ್ಯಾಪ್ತಿಯಲ್ಲಿ ಡಿಟಿಸಿ ಸ್ಥಳಾಂತರ ಕಾಮಗಾರಿ ಕೈಗೊಂಡಿರುವುದರಿಂದ ಫೆಬ್ರವರಿ 2ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ  ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳ್ಳಾವಿ ಟೌನ್, ಸುಗುಣ, ದೊಡ್ಡವೀರನಹಳ್ಳಿ, ಸಿಂಗೀಪುರ, ದೊಡ್ಡೇರಿ, ಕಾಗ್ಗೆರೆ, ಅಸಲಿಪುರ, ಮಶಣಾಪುರ, ಹರಿವಣಪುರ, ನಾಗಾರ್ಜುನಹಳ್ಳಿ, ಚನ್ನೇನಹಳ್ಳಿ, ಕರಲುಪಾಳ್ಯ, ಚಿಕ್ಕಬೆಳ್ಳಾವಿ, ಮಾವಿನಕುಂಟೆ, ತಿಮ್ಮಲಾಪುರ, ಬಾಣಾವರ, ಲಕ್ಕನಹಳ್ಳಿ, ಅಪ್ಪಿನಾಯಕನಹಳ್ಳಿ, ಬ್ಯಾಲ, ಟಿ.ಗೊಲ್ಲಹಳ್ಳಿ ಹಾಗೂ ಬೆಳ್ಳಾವಿ ಗ್ರಾಮ ಪಂಚಾಯಿತಿಯ ಇತರೆ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರೇತರ(ಎನ್ ಜಿಒ) ಸಂಸ್ಥೆಗಳ ಹೊಸ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಎನ್.ಜಿ.ಓ ಪೋರ್ಟಲ್ ngo.tribal.gov.in ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ತುಮಕೂರು: ಬೆವಿಕಂ ನಗರ ಉಪವಿಭಾಗ–1ರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಫೆಬ್ರವರಿ 2 ರಿಂದ 12ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಫೆಬ್ರವರಿ 2ರಂದು ಕೆಎಐಡಿಬಿ ಕೈಗಾರಿಕಾ ಪ್ರದೇಶ, ಫೆ. 3ರಂದು ಕೈಗಾರಿಕಾ ಪ್ರದೇಶ, ಮಾರುಕಟ್ಟೆ, ಮಹಾಲಕ್ಷ್ಮೀ ಲೇಔಟ್, ಫೆ.4ರಂದು ಕೈಗಾರಿಕಾ ಪ್ರದೇಶ, ಫೆ. 5ರಂದು ಕೈಗಾರಿಕಾ ಪ್ರದೇಶ, ಫೆ.6ರಂದು ಸತ್ಯಮಂಗಲ, ಕೈಗಾರಿಕಾ ಪ್ರದೇಶ, ಫೆ.8ರಂದು ಕೈಗಾರಿಕಾ ಪ್ರದೇಶ, ಫೆ.9ರಂದು ಕೈಗಾರಿಕಾ ಪ್ರದೇಶ, ಮಾರುಕಟ್ಟೆ, ಮಹಾಲಕ್ಷ್ಮೀ ಲೇಔಟ್, ಫೆ.10ರಂದು ಕೈಗಾರಿಕಾ ಪ್ರದೇಶ, ಫೆ.11ರಂದು ಕೈಗಾರಿಕಾ ಪ್ರದೇಶ, ಫೆ.12ರಂದು ಕೆಎಐಡಿಬಿ ಕೈಗಾರಿಕಾ ಪ್ರದೇಶದಲ್ಲಿ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜು ಹೆಚ್.ಪಿ. ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ತುಮಕೂರು: ಕೆಸರು ಮಾಡು ಗ್ರಾಮದ ಧರ್ಮರಾಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆರವರು ಆಶೀರ್ವಾದ ಪೂರ್ವಕವಾಗಿ ಎರಡು ಲಕ್ಷ ರೂಗಳ ಡಿ.ಡಿ.ಮೊತ್ತವನ್ನು ತುಮಕೂರು ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಕಮಿಟಿಯ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಪ್ರಭಾಕರ್ ರಾಮ್ ನಾಯಕ್, ವಲಯ ಮೇಲ್ವಿಚಾರಕರಾದ ಲೋಕೇಶ್ ಹೆಚ್.ಎಸ್. , ಕಮಿಟಿಯ ಅಧ್ಯಕ್ಷರಾದ ಪಿ.ಧರ್ಮರಾಜ್, ಉಪಾಧ್ಯಕ್ಷರಾದ ಎಸ್.ಎಂ.ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಗೋಪಾಲ್, ಒಕ್ಕೂಟದ ಅಧ್ಯಕ್ಷರಾದ ಲೇಪಾಕ್ಷಮ್ಮ, ಸೇವಾ ಪ್ರತಿನಿಧಿಯಾದ ಕಲಾವತಿ ಹಾಗೂ ಗ್ರಾಮಸ್ಥರು ಸ್ವಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ತುಮಕೂರು: ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳದಿಂದ ಬೇಸತ್ತು ಸ್ವಗ್ರಾಮವನ್ನು ತೊರೆದಿದ್ದ ವಿನುತ ಮತ್ತು ಮಾರುತಿ ಕುಟುಂಬ ಮನೆಗೆ ಮರಳಿದ್ದು, ಸ್ವಗ್ರಾಮ ಸೇರಲು ಕಾರಣವಾದ ಜಿಲ್ಲಾಡಳಿತಕ್ಕೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಜನರಿಂದ ಮೆಚ್ಚುಗೆ : ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆಯ ನಿವಾಸಿ ವಿನುತ ಮತ್ತು ಮಾರುತಿ ದಂಪತಿ ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ 2.50ಲಕ್ಷ ರೂ.ಗಳ ಸಾಲ ಪಡೆದು, ಕೆಲವು ಕಂತುಗಳನ್ನು ಕಟ್ಟಲು ಸಾಧ್ಯವಾಗದಿದ್ದಾಗ ಫೈನಾನ್ಸ್ ಕಂಪನಿಯು ಯಾವುದೇ ನೋಟೀಸ್ ನೀಡದೆ ಏಕಾಏಕಿ ವಿನುತ ಅವರ ಮನೆಯ ಮೇಲೆ “ಈ ಸ್ವತ್ತು ಫೈವ್ ಸ್ಟಾರ್ ಫೈನಾನ್ಸ್ ಕಂಪನಿಗೆ ಅಡಮಾನವಾಗಿದೆ” ಎಂದು ಬರೆಸಿ ಅವಮಾನ ಮಾಡಿದ್ದರಿಂದ ಕುಟುಂಬವು ಸ್ವಗ್ರಾಮ ಬಿಟ್ಟು ಬೆಂಗಳೂರು ಸೇರಿತ್ತು. ವಿಷಯ ತಿಳಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಜನವರಿ 30ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಿನುತ ಅವರು ಪಡೆದ 2.50ಲಕ್ಷ ಸಾಲಕ್ಕೆ ಕಂಪನಿಯು 4.50ಲಕ್ಷ…

Read More

ತುಮಕೂರು: ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಸಭೆಯನ್ನು ಫೆಬ್ರವರಿ 2ರಂದು ಆಯೋಜಿಸಲಾಗಿದೆ. ಸಂಘದ ಚಟುವಟಿಕೆ, ಲೆಕ್ಕಪರಿಶೋಧನೆ ವರದಿ, ಗುರುತಿನ ಚೀಟಿ, ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಭೆಯಲ್ಲಿ ಖಾಲಿಯಿರುವ ಸಂಘದ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗುವುದು. ಸಭೆಯು ಸಾರಥಿ ನಿಲಯ, ಕಾಲ್ಟೆಕ್ಸ್ ಸರ್ಕಲ್, ಕುಣಿಗಲ್ ರಸ್ತೆ, ತುಮಕೂರು ಇಲ್ಲಿ ಫೆ.2ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ತಾಲ್ಲೂಕು ಮಟ್ಟದ ಅಧ್ಯಕ್ಷರು/ಉಪಾಧ್ಯಕ್ಷರು/ಸದಸ್ಯರುಗಳು ಸಭೆಗೆ ಹಾಜರಾಗಲು ಸಂಘದ ಅಧ್ಯಕ್ಷ ಸಿ. ಜಯರಾಮ್ ಕೋರಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಹೆಚ್.ಡಿ.ಕೋಟೆ: ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ ಸೀರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾಧು ಅಧ್ಯಕ್ಷತೆಯನ್ನು ವಹಿಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯ ಕ್ರವನ್ನು ಉದ್ಘಾಟಿಸಿದರು. ನಂತರ ಶಾಸಕರಾದ ಅನಿಲ್ ಚಿಕ್ಕಮಾದು ಮಾತನಾಡಿ, ಆರೋಗ್ಯ ಇಲಾಖೆಯ ಆಧಾರ ಸ್ತಂಭವೇ ಆಶಾ ಕಾರ್ಯಕರ್ತೆಯರು , ಹಾಗೂ ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ ಸಮವಸ್ತ್ರದ ಸೀರೆಯ ಬಣ್ಣ ತುಂಬಾ ಚೆನ್ನಾಗಿದೆ , ಪಿಂಕ್ ಬಣ್ಣದ ಸಮವಸ್ತ್ರ ಧರಿಸುವ ಆಶಾ ಕಾರ್ಯಕರ್ತೆಯರು ಎಷ್ಟೇ ಜನ ಇದ್ದರೂ ಸಹ ಆಶಾ ಕಾರ್ಯಕರ್ತರು ಎಂದು ಎದ್ದು ಕಾಣಿಸುತಾರೆ ಮತ್ತು ಅದರಲ್ಲಿ ಸಿಗುವ ಗೌರವ ಬೇರೆ ಎಲ್ಲೂ ಸಿಗದು, ಊರಿಂದ ಊರಿಗೆ ನಡೆದುಕೊಂಡು ಗ್ರಾಮದ ಮನೆ ಮನೆಗೂ ಹೋಗಿ ಬಾಣಂತಿ ಗರ್ಭಿಣಿಯರ, ಜನರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಹಾಗೂ ಮಕ್ಕಳ ಚುಚ್ಚುಮದ್ದಿನಲ್ಲೂ ಸಹ ಅವರ ಪಾತ್ರ ಮುಖ್ಯವಾಗಿರುತ್ತದೆ ಎಂದರು. ಆರೋಗ್ಯವೇ ಭಾಗ್ಯ , ಜನರ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯವನ್ನು ಸಹ…

Read More