Subscribe to Updates
Get the latest creative news from FooBar about art, design and business.
- ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್?
- ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ
- ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ
- ತುಮಕೂರು: ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಹಿರಿಯ ಶಾಸಕರಿಗೆ ಕಡೆಗಣನೆ; ಕಾಂಗ್ರೆಸ್ ನಲ್ಲಿ ಬಂಡಾಯದ ಕಾವು
- ಕಾರವಾರ: ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್–ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್ ಲೈನ್ ಅರ್ಜಿ
- ಗ್ಯಾಸ್ ಸಿಲಿಂಡರ್ ಕಳ್ಳತನ ಜಾಲ ಭೇದಿಸಿ ಬೀದರ್ ಪೊಲೀಸರು: ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್ ವಶ | ನಾಲ್ವರು ಆರೋಪಿಗಳ ಬಂಧನ
- 560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ
- ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
Author: admin
ಮಂಡ್ಯ: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನದಿಂದ ಪತಿ ಯುವಕನೊಬ್ಬನನ್ನು ಗುಂಡಿಟ್ಟು ಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಂಭೋವಿನಹಳ್ಳಿಯಲ್ಲಿ ನಡೆದಿದೆ. ಶಿವರಾಜು ಎಂಬಾತ ಗುಂಡಿನ ದಾಳಿ ನಡೆಸಿದ ವ್ಯಕ್ತಿಯಾಗಿದ್ದು, ಯುವಕ ಮಂಜು ಎಂಬಾತ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ. ಸದ್ಯ ಮಂಜುನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಿವರಾಜು ಮುಂಬೈನಲ್ಲಿ ಹೋಟೆಲ್ ನಲ್ಲಿ ಕೆಲಸದಲ್ಲಿದ್ದ. ಕೆಲದಿನಗಳ ಹಿಂದೆ ಮನೆಗೆ ಬಂದಿದ್ದ. ತನ್ನ ಪತ್ನಿ ಜೊತೆ ಯುವಕ ಮಂಜು ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಹಿನ್ನೆಲೆಯಲ್ಲಿ ಮನೆಯ ಜಗುಲಿಯ ಮೇಲೆ ಕುಳಿತಿದ್ದ ಮಂಜುವಿನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ಯುವಕನ ತಲೆಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಶಿವರಾಜುನನ್ನು ಬಂಧಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಬೆಂಗಳೂರು: ಮಾನವ ಹಕ್ಕು ಉಲ್ಲಂಘನೆ, ಮಹಿಳೆಯರಿಗೆ ಧಕ್ಕೆ ತಂದ ಆರೋಪ ಬಿಗ್ಬಾಸ್ ಶೋ ಹಾಗೂ ಕೆಲವು ಸ್ಪರ್ಧಿಗಳ ಮೇಲೆ ಇದೆ. ಹೀಗಾಗಿ ಬಿಗ್ ಬಾಸ್ ಗೆ ಕುಂಬಳಗೋಡು ಪೊಲೀಸರು ನೋಟಿಸ್ ನೀಡಿದ್ದಾರೆ. ನರಕಕ್ಕೆ ಹೋದ ಸ್ಪರ್ಧಿಗಳಿಗೆ ಊಟದ ಬದಲು ಗಂಜಿ, ನೆಲದ ಮೇಲೆ ಹಾಕಲಾದ ಬೆಡ್ ನಲ್ಲಿ ನಿದ್ದೆ, ಕೂರಲು ಕುರ್ಚಿ ಇಲ್ಲ, ನೀರಿಗೆ ಒಂದು ಮಡಿಕೆ, ಶೌಚಾಲಯಕ್ಕೆಂದು ಹೋಗಲು ಸ್ವರ್ಗವಾಸಿಗಳ ಅನುಮತಿ ಮಾಡಬೇಕಿತ್ತು. ಇವು ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಪೌಷ್ಠಿಕ ಆಹಾರ, ಶೌಚಾಲಯದ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘಟನೆ ಮಾಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಆರೋಪ ಮಾಡಿದ್ದರು. ಹೀಗಾಗಿ ಬಿಗ್ ಬಾಸ್ ಸೆಟ್ ಗೆ ತೆರಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ- ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಪಾವಗಡ : ಪಟ್ಟಣದಲ್ಲಿ ಅದ್ದೂರಿಯಾಗಿ ದಸರಾ ಉತ್ಸವ ಜರುಗಿದ್ದು, ತಾಲೂಕಿನ ದಂಡಾಧಿಕಾರಿಗಳಾದ ವರದರಾಜು ನೇತೃತ್ವದಲ್ಲಿ ರಾಜಬೀದಿಯಲ್ಲಿರುವ ಪುರಾತನ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ರಾಜಬೀದಿಗಳ ಮೂಲಕ ವಿವಿಧ ದೇವರುಗಳ ಸಹಿತ ಮೆರವಣಿಗೆ ಕೈಗೊಳ್ಳಲಾಯಿತು. ನಂತರ ಗುರು ಭವನದ ಮೈದಾನದಲ್ಲಿರುವ ಬನ್ನಿಮಂಟಪಕ್ಕೆ ಆಗಮಿಸಿ ಬನ್ನಿ ಗಿಡಕ್ಕೆ ವಿಶೇಷ ಪೂಜೆಗಳನ್ನು ಸಲ್ಲಿಸಿ ನಂತರ ಸಂಪ್ರದಾಯದಂತೆ ಬಾಣವನ್ನ ಗಿಡದ ಬುಡಕ್ಕೆ ಬಿಡಲಾಯಿತು. ಪಾವಗಡ ತಾಲೂಕಿನ ನೂರಾರು ಸಂಖ್ಯೆಯ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿವಿಧ ಸಂಘ ಸಂಸ್ಥೆಗಳಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ತುಮಕೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಡನ್ನು ಹಾಡಿ ಜನರನ್ನು ರಂಜಿಸಿದರು. ಕನ್ನಡ ಚಲನಚಿತ್ರ ಗಾಯನವಾದ ‘ಕಾಣದಂತೆ ಮಾಯವಾದನು ಶಿವ’ ಎಂಬ ಹಾಡನ್ನು ಹಾಡಿದರು. ತುಮಕೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು ಹಾಡಿದ ವೇಳೆ ಗಾಯಕ ವಿಜಯಪ್ರಕಾಶ್ ಹಾಡಿದ ಹಾಡಿಗೆ ಧ್ವನಿಗೂಡಿಸಿದರು. ಮೊದಲ ಬಾರಿ ಜಿಲ್ಲಾಡಳಿತದಿಂದ ತುಮಕೂರು ದಸರಾ ಆಯೋಜನೆ ಮಾಡಲಾಗಿದ್ದು ಅಭಿಮಾನಿಗಳ ಒತ್ತಾಯಕ್ಕೆ ಗೃಹ ಸಚಿವ ಪರಮೇಶ್ವರ್ ಹಾಡು ಹಾಡಿದರು. ತುಮಕೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿಯೂ ಹೆಜ್ಜೆ ಹಾಕಿದ ಸಚಿವ ಪರಮೇಶ್ವರ್, ದಂಪತಿ ಸಮೇತ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದರು. ಜಂಬೂಸವಾರಿ ದಸರಾ ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಪರಮೇಶ್ವರ್, ತಾಯಿ ಚಾಮುಂಡೇಶ್ವರಿ ಅಂಬಾರಿ ಮುಂದೆ ಹೆಜ್ಜೆ ಹಾಕಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಪ್ರತಿಯೊಂದು ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ 1 ರಿಂದ 3/4 ನಕಲಿ ವೈದ್ಯರು ಇರುತ್ತಾರೆ ಇವರಿಗೆ ಆರೋಗ್ಯ ಇಲಾಖೆ ಇವರಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಿರುವುದಿಲ್ಲ, ಇವರಿಗೆ ಯಾವುದೇ ರೀತಿಯ ಅಧಿಕೃತ ತರಬೇತಿ ಇರುವುದಿಲ್ಲ, ಇವರು ಕೆಲವು ಕ್ಲಿನಿಕ್ ಗಳಲ್ಲಿ ಕೆಲಸ ಮಾಡಿ ಆ ಅನುಭವದ ಮೇಲೆ ಚಿಕಿತ್ಸೆ ನೀಡುವುದರಿಂದ ಕೆಲವು ಸಂಧರ್ಭದಲ್ಲಿ ರೋಗಿಗಳ ಸಾವುಗಳು ನೋಡಬಹುದು. ಅಥವ ರಿಯಾಕ್ಷನ್ ಆಗಬಹುದು ಆದುದರಿಂದ ಇವುಗಳನ್ನು ಮುಚ್ಚಿಸಲು ಸಾಮಾಜಿಕ ಕಾರ್ಯಕರ್ತರು ಒತ್ತಾಯ ಮಾಡುತ್ತಾರೆ. ಇವರು ಕ್ಲಿನಿಕ್ ನಡೆಸಲು ಸರ್ಕಾರದಿಂದ ಅನುಮತಿ ಪಡೆದಿರುವುದಿಲ್ಲ, ಅದುದರಿಂದ ಇವುಗಳಿಗೆ ಕಡಿವಾಣ ಹಾಕಬೇಕೆಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಒತ್ತಾಯ ಮಾಡುವುದನ್ನು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಕಂಡುಬರುತ್ತದೆ. ಸಾಮಾಜಿಕ ಕಾರ್ಯಕರ್ತರಿಗೆ ಸರ್ಕಾರಿ ನಿಯಮಗಳಿಗೆ ಹಾಗೂ ರೋಗಿಗಳ ಬಗ್ಗೆ ಕಾಳಜಿ ಬಿಟ್ಟರೆ ಇನ್ನು ಯಾವ ಉದ್ದೇಶ ಇರುವುದಿಲ್ಲ, ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ನಕಲಿ ವೈದ್ಯರ ಮೇಲೆ ಕ್ರಮಗಳು ಕಣ್ಣು ಮುಚ್ಚಾಲೆ ತರ ಇರುತ್ತದೆ ಎಂಬುವುದು ಸಾಮಾಜಿಕ ಕಾರ್ಯಕರ್ತರ…
ತಿಪಟೂರು : ತಾಲ್ಲೂಕಿನ ದಸರಿಘಟ್ಟ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಿಯವರ 32ನೇ ವರ್ಷದ ಮುಳ್ಳುಗದ್ದಿಗೆ ಉತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಜಗತ್ತಿನ ಸೃಷ್ಠಿಗೆ ಭಗವಂತನೇ ನೇರ ಕಾರಣ. ಮುಳ್ಳುಗಳು ಕಷ್ಟದ ಪ್ರತೀಕ. ಅದನ್ನು ಮೆಟ್ಟಿ ನಿಲ್ಲುವಂತ ಶಕ್ತಿ ನೀಡುವವಳೇ ಚೌಡೇಶ್ವರಿದೇವಿ. ದೇವಿ ಪವಾಡದಿಂದ ಮುಳ್ಳುಗಳಂತ ಕಷ್ಟಗಳ ಮೇಲೆ ನಡೆಯುವಾಗ ಆಕೆಯ ಸ್ಮರಣೆ ಮಾಡಿದರೆ ಕಷ್ಟಗಳು ಮಂಜಿನಂತೆ ಕರಗುತ್ತವೆ. ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ವಿಜ್ಞಾನ ಎಷ್ಟೇ ಮುಂದುವರೆದರೂ ಜ್ಞಾನವೆಂಬುದು ಮಸುಕಾಗಿದೆ. ಪ್ರಕೃತಿಯ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಂತಃಕರಣ ಶುದ್ಧಿಗೊಂಡರೆ ಮತ್ತಷ್ಟು ಶಕ್ತಿ ಪಡೆಯಬಹುದು. ಮನುಷ್ಯನ ಪಯಣ ಯಾವಾಗಲೂ ಒಳ್ಳೆಯ ದಿಕ್ಕಿನಲ್ಲಿ ಸಾಗಲಿ. ದ್ವೇಷ, ಅಸೂಹೆ, ಸ್ವಾರ್ಥತೆಯನ್ನು ಬಿಟ್ಟು ನಡೆದಾಗ…
ಚಿಕ್ಕನಾಯಕನಹಳ್ಳಿ: ಪಟ್ಟಣದ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಅಂಗವಾಗಿ ವಿಜಯ ದಶಮಿ ದಿನದಂದು ಸ್ವಚ್ಛತೆಯೇ ಸೇವೆ ಎಂಬ ದ್ಯೇಯ ವಾಕ್ಯದೊಂದಿಗೆ ಪಟ್ಟಣದ ಪುರಸಭೆಯ ಮಹಿಳಾ ಪೌರ ಕಾರ್ಮಿಕರ ಪಾದ ಪೂಜೆಯನ್ನು ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಲಕ್ಷ್ಮೀಶ್ ರವರು ನೆರವೇರಿಸಿದರು. ಇದೇ ವೇಳೆ ಅಕ್ಷತ ಲಕ್ಷ್ಮೀಶ್, ನಾಗರತ್ನ ರಂಗಸ್ವಾಮಿ ರವರು ಮಂಗಳ ದ್ರವ್ಯಗಳನ್ನು ವಸ್ತ್ರ ನೀಡಿ ಗೌರವ ಸಲ್ಲಿಸಿದರು. ನಂತರ ಕೌಮಾರಿ ಪೂಜೆ ಹತ್ತು ವರ್ಷದ ಒಳಗಿನ ಹೆಣ್ಣುಮಕ್ಕಳಿಗೂ ಸಹ ಪಾದ ಪೂಜೆ ಮಾಡಲಾಯಿತು. ನಂತರ ಶಮಿ ಪೂಜೆ, ಕದಲಿ ವೃಕ್ಷ ಛೇದನ, ಬನ್ನಿ ಪ್ರಸಾದ ನೀಡಲಾಯಿತು. ದೇವಾಲಯದ ಧರ್ಮದರ್ಶಿಗಳಾದ ಶ್ರೀರಂಗ ಸ್ವಾಮಿ ಸಿ.ಎನ್. ರವರು ಎಲ್ಲ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಂಗರಾಜು, ಮೋಹಿತ್, ಮನೋಜ್, ಯೋಗ ಗುರುಗಳಾದ ಚರಣ್, ಕುಮಾರ್, ರಾಜಶೇಖರ್ ಪೋಚ್ಕಟ್ಟೆ, ಚರಣ್ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಎಲ್ಲ ಭಕ್ತರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಅಕ್ಟೋಬರ್ 20ರಂದು ಗ್ರಹಗಳ ಸೇನಾಪತಿಯಾಗಿರುವ ಮಂಗಳ ಕರ್ಕ ರಾಶಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ ಕೆಲವೊಂದು ಗ್ರಹಗಳ ನಡುವೆ ಮಂಗಳನ ಗೋಚರ ಫಲ ಕಾಣಿಸಿಕೊಳ್ಳುವುದರಿಂದಾಗಿ ಕೆಲವು ರಾಶಿಯವರಿಗೆ ಅದು ನಕಾರಾತ್ಮಕವಾಗಿ ಕೂಡ ಪರಿಣಮಿಸಬಹುದಾಗಿದೆ. ಆದರೆ ಕರ್ಕ…
ಪುರುಷನನ್ನು ಬೋಳು ಎಂದು ಕರೆಯುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಯುಕೆ ನ್ಯಾಯಾಲಯ ತೀರ್ಪು ನೀಡಿದೆ. ವೆಸ್ಟ್ ಯಾರ್ಕ್‌ಷೈರ್ ಮೂಲದ ಸಂಸ್ಥೆಯ ಮೇಲೆ ಲೈಂಗಿಕ ಕಿರುಕುಳಕ್ಕಾಗಿ ಮೊಕದ್ದಮೆ ಹೂಡಿದ ಬ್ರಿಟಿಷ್ ಬಂಗ್ ಕಂಪನಿಯ ಮಾಜಿ ಉದ್ಯೋಗಿ ಟೋನಿ ಫಿನ್ ಒಳಗೊಂಡ ಪ್ರಕರಣದಿಂದ ಈ ತೀರ್ಪು ಬಂದಿದೆ. ಟೋನಿ ಫಿನ್, ಎಲೆಕ್ಟ್ರಿಷಿಯನ್, ಸುಮಾರು 24 ವರ್ಷಗಳ ಕಾಲ ಬ್ರಿಟಿಷ್ ಬಂಗ್ ಕಂಪನಿಯಲ್ಲಿ ಕೆಲಸ ಮಾಡಿದ್ದು, ಮೇ 2021 ರಲ್ಲಿ ಅವರನ್ನು ವಜಾಗೊಳಿಸಲಾಯಿತು. ಅವರ ವಜಾಗೊಳಿಸಿದ ನಂತರ, ಫಿನ್ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡರು. ನನ್ನನ್ನು ಬೋಳು ತಲೆಯವ ಎಂದು ಅವಹೇಳನ ಮಾಡಲಾಗಿದೆ ಎಂದು ಟೋನಿ ಫಿನ್ ಪ್ರಮುಖವಾಗಿ ಆರೋಪಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ, ಕಾರ್ಖಾನೆಯ ಮೇಲ್ವಿಚಾರಕರಾದ ಜೇಮೀ ಕಿಂಗ್ ಅವರು ಟೋನಿ ಫಿನ್ ಅವರನ್ನು ಬೋಳ ಎಂದು ಕರೆದಿರುವುದೇ ವಿಚಾರಣೆಯ ಮುಖ್ಯ ಭಾಗವಾಯ್ತು. ಬೋಳ(ಬೊಕ್ಕತಲೆಯವ) ಎಂದು ಕರೆಯುವುದು ಕೇವಲ ಅವಮಾನ ಮಾತ್ರವಲ್ಲ, ಲೈಂಗಿಕ ಕಿರುಕುಳ ಎಂದು ವಾದಿಸಲಾಯಿತು. ಉದ್ಯೋಗ ಟ್ರಿಬ್ಯೂನಲ್…
ಬೆಂಗಳೂರು: ಇವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸಿ ಬಡ ಕುಟುಂಬದ ಹೆಣ್ಣು ಮಕ್ಕಳನ್ನು ದಂಧೆಗೆ ಬಳಸಿಕೊಳ್ಳುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪಟ್ಟೆಗಾರ ಪಾಳ್ಯ ನಿವಾಸಿಗಳಾದ ಪ್ರಕಾಶ್, ಪಾರಿಜಾತ ಬಂಧಿತ ದಂಪತಿಯಾಗಿದ್ದು, ಉದ್ಯೋಗ ಕೊಡಿಸುವ ನೆಪದಲ್ಲಿ ಉತ್ತರ ಕರ್ನಾಟಕದ ಬಡ ಹೆಣ್ಣು ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸದೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆರೋಪಿಗಳು ತಮಿಳುನಾಡು, ಪಾಂಡಿಚೇರಿ ರೆಸಾರ್ಟ್ ಗಳಲ್ಲಿ ದಂಧೆ ನಡೆಸುತ್ತಿದ್ದರು. ಮದುವೆ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಪ್ರತಿ ವಾರ ಬೆಂಗಳೂರಿನಿಂದ ತಮಿಳುನಾಡಿಗೆ ಯುವತಿಯರನ್ನು ಕರೆದೊಯ್ದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಶ್ರೀಮಂತರು, ಉದ್ಯಮಿಗಳು, ರೆಸಾರ್ಟ್ ಗಳಿಗೆ ಭೇಟಿ ನೀಡುತ್ತಿದ್ದವರ ಬಳಿಗೆ ಹೆಣ್ಣು ಮಕ್ಕಳನ್ನು ಕಳಿಸುತ್ತಿದ್ದರು. ಒಬ್ಬರಿಗೆ 25 ರಿಂದ 50 ಸಾವಿರ ರೂ.ವರೆಗೆ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ನಮ್ಮತುಮಕೂರಿನ…