Author: admin

ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕಡಲ ತೀರ ಭಾಗಗಳ ಸುತ್ತಮುತ್ತ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಒಂದೆರಡು ಕಡೆ ಸಾಧಾರಣ ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ ಒಕ್ಟೊಬರ್ 14ರಿಂದ ಹಿಂಗಾರು ಮತ್ತು ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮದಿಂದ ಮಳೆ ಹೆಚ್ಚಾಗುವ ಲಕ್ಷಣಗಳಿವೆ. ಮಲೆನಾಡು : ಕೊಡಗು ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಒಳನಾಡು ಭಾಗಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ಹಿಂಗಾರು ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಒಕ್ಟೊಬರ್ 14ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಒಳನಾಡು :…

Read More

ರಾಮನಗರ: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದು ಕುತೂಹಲ ಕೆರಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಳಿಯ ಮಂಜುನಾಥ್ ಅವರು ಸ್ಪರ್ಧೆ ನಡೆಸಿದ್ರು. ಈ ವೇಳೆ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರು ಮಂಜುನಾಥ್ ಅವರ ಗೆಲುವಿಗೆ ಸಾಕಷ್ಟು ಶ್ರಮಿಸಿದ್ರು. ಇದೀಗ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಅಖಾಡಕ್ಕೆ ಇಳಿಯೋದು ಪಕ್ಕಾ ಎನ್ನಲಾಗುತ್ತಿತ್ತು. ಆದರೆ, ಸದ್ಯದ ಬೆಳವಣೆಗೆಯನ್ನ ಗಮನಿಸಿದ್ರೆ, ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರ ಜೊತೆಗೆ ನಿರಂತರವಾಗಿ ನಿಖಿಲ್ ಕುಮಾರಸ್ವಾಮಿ ಅವರು ಸಭೆಯನ್ನ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣೆಗೆಗಳನ್ನ ಗಮನಿಸಿದರೇ ಸಿ.ಪಿ. ಯೋಗೇಶ್ವರ್ ಗೆ ಟಿಕೆಟ್ ಅಸಾಧ್ಯ ಎನ್ನಲಾಗುತ್ತಿದೆ. ಚನ್ನಪಟ್ಟಣದಿಂದ ನಿಖಿಲ್ ಅವರು ಸ್ಪರ್ಧಿಸಬೇಕೆಂಬ ಕೂಗು ಕೇಳಿ ಬಂದಿದ್ದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ…

Read More

ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳಾದ ಶಿವು ಚಂದ್ರಶೇಖರ್ ಯುವಕನನ್ನು ಗೋನಕೊಪ್ಪದ ಬಳಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಹತ್ಯೆಯಾದ ಕೆಲ ಗಂಟೆಗಳಲ್ಲೇ ಅಶೋಕ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಉಳಿದ ಆರೋಪಿಗಳನ್ನು ತೋರಿಸುವುದಾಗಿ ಹೇಳಿ ಪೊಲೀಸರನ್ನು ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರ ಕಾಲಿಗೂ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಾಳು ಆರೋಪಿಗಳನ್ನು ಕಿಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತಿರುವನಂತಪುರಂ: ಕೇರಳದ ಓಣಂ ಬಂಪರ್ ಲಾಟರಿಯ 25 ಕೋಟಿ ರೂ. ಬಹುಮಾನ ಕರ್ನಾಟಕ ಮೂಲದ ವ್ಯಕ್ತಿಗೆ ಸಿಕ್ಕಿದೆ. ಮಂಡ್ಯದ ಪಾಂಡವಪುರ ನಿವಾಸಿ ಹಾಗೂ ಸ್ಕೂಟರ್ ಮೆಕ್ಯಾನಿಕ್ ಅಲ್ತಾಫ್ 500 ರೂಪಾಯಿಯ ಲಾಟರಿ ಟಿಕೆಟ್ ನಿಂದ ಕೋಟ್ಯಾದೀಶರಾಗಿದ್ದಾರೆ. ಈ ಲಾಟರಿ ಬ್ಯುಸಿನೆಸ್ ನಿಂದ ಕೇರಳ ಸರ್ಕಾರಕ್ಕೆ 100 ಕೋಟಿಗಿಂತಲೂ ಹೆಚ್ಚು ಆದಾಯ ಹರಿದು ಬಂದಿದೆಯಂತೆ. ಅಕ್ಟೋಬರ್ 09ರಂದು ಪ್ರಕಟವಾದ ಲಾಟರಿ ಫಲಿತಾಂಶ ದಲ್ಲಿ ಮಂಡ್ಯ ಮೂಲದ ಅಲ್ತಾಫ್ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಂದ ಹಾಗೆ 25 ಕೋಟಿ ರೂಪಾಯಿಯಲ್ಲಿ ಟಾಕ್ಸ್ ಗಳೆಲ್ಲವೂ ಕಳೆದ ನಂತೆ ಅಲ್ತಾಫ್ ಗೆ 17.5 ಕೋಟಿ ರೂಪಾಯಿ ಸಿಕ್ಕಿದೆಯಂತೆ 500 ರೂಪಾಯಿಯ ಒಟ್ಟು 71.43 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದು, ಇದರಿಂದ 357.15 ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ ಬಹುಮಾನದ ಹಣ, 28% ಜಿಎಸ್ಟಿ, ಮುದ್ರಣ ಮತ್ತು ವಿತರಣೆ ಸೇರಿದಂತೆ ಇತರ ವೆಚ್ಚಗಳನ್ನು ಹೊರತುಪಡಿಸಿದರೆ, ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಸಿಗಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ವಿಜಯಪುರ: ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ನಾಡದೇವಿಗೆ ಬೆಳ್ಳಿಯ ಕಿರೀಟ ಕೊಡಿಸಿದ್ದು, 250 ಗ್ರಾಮ್ ತೂಕದ ಬೆಳ್ಳಿಯ ಕಿರೀಟ ನಾಡದೇವಿಯ ಮುಡಿಯೇರಿದೆ. ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಹೂವಿನಹಳ್ಳಿಯ ಮಹಿಳೆ ಭಾಗಮ್ಮಕಳೆದ ಒಂದೂವರೆ ವರ್ಷದಿಂದ ಬಂದ ಭಾಗ್ಯಲಕ್ಷ್ಕೀ ಯೋಜನೆ ಹಣ ಕೂಡಿಟ್ಟು ನಾಡ ದೇವಿಗೆ ಬೆಳ್ಳಿಯ ಕಿರೀಟ ದಾನ ಮಾಡಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಗ್ಯಮ್ಮ ಅವರು ಸಿದ್ದರಾಮಯ್ಯ ಸರ್ಕಾರವನ್ನು ಕೊಂಡಾಡಿದರು. ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅನುಕೂಲವಾಗುತ್ತಿದೆ ಎಂದರು. ಇನ್ನು ಭಾಗಮ್ಮ ಬಿರಾದಾರ ಅವರು ಈ ಕಾರ್ಯಕ್ಕೆ ಸ್ಥಳೀಯ‌ ಮುಖಂಡರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಅಲ್ಲದೇ ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಭಾಗಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಇತ್ತೀಚೆಗೆ ಮಹಿಳೆಯೊಬ್ಬರು ಗೃಹಲಕ್ಷ್ಮಿಯಿಂದ ಬಂದ ಹಣವನ್ನು ಕೂಡಿಟ್ಟು ಮಗನಿಗೆ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಅದಲ್ಲದೆ ಅತ್ತೆಯೊಬ್ಬರು ಈ ಹಣದಿಂದ ತನ್ನ ಸೊಸೆಯ ಜೀವನಕ್ಕಾಗಿ ಫ್ಯಾನ್ಸಿ ಅಂಗಡಿಯನ್ನು ಮಾಡಿಸಿಕೊಟ್ಟಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಆ್ಯಸಿಡ್ ಹಾಕ್ತೀನಿ ಅಂತ ಮಹಿಳಾ ಉದ್ಯೋಗಿಗೆ ಬೆದರಿಕೆ ಹಾಕಿದ ಸಹೋದ್ಯೋಗಿಯೊಬ್ಬನನ್ನು ಕಂಪೆನಿ ಕೆಲಸದಿಂದ ತೆಗೆದು ಹಾಕಿರುವ ಘಟನೆ  ನಡೆದಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಖಿತ್ ಎಂಬಾತನ ವಿರುದ್ಧ ಸದ್ಯ  ಪ್ರಕರಣ ದಾಖಲಾಗಿದೆ. ಮಹಿಳೆಯ ಪತಿ ಈತನ ವಿರುದ್ಧ ದೂರು ದಾಖಲಾಗಿಸಿದ್ದಾರೆ. ಮಹಿಳೆಯ ಬಟ್ಟೆಯ ಆಯ್ಕೆಯನ್ನು ವಿರೋಧಿಸಿ ಆರೋಪಿ ಆ್ಯಸಿಡ್ ಎರಚುವ ಬೆದರಿಕೆಯೊಡ್ಡಿದ್ದ ಎಂದು ದೂರಲಾಗಿದೆ. ನನ್ನ ಹೆಂಡತಿಯ ಬಟ್ಟೆಯ ಆಯ್ಕೆಗಾಗಿ ಆಸಿಡ್ ಎರಚುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಯಾವುದೇ ಘಟನೆ ನಡೆಯದಂತೆ ಈ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ ಎಂದು ಶಹಬಾಜ್ ಅನ್ಸಾರ್ ಎನ್ನುವವರು ಕರ್ನಾಟಕ ಡಿಜಿಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ನನ್ನ ಪತ್ನಿಗೆ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಎಟಿಯೋಸ್ ಡಿಜಿಟಲ್ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಸಂಸ್ಥೆಯಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಶಹಬಾಜ್ ಆತಂಕ ಹೊರಹಾಕಿದ್ದಾರೆ. ಈ ಘಟನೆ…

Read More

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ  ನವರಾತ್ರಿಯ ಕೊನೆಯ ದಿನವಾದ ಇಂದು  ಸಿ.ಎಂ ಸಿದ್ದರಾಮಯ್ಯನವರು ಮೈಸೂರಿನ ಆಯ್ದ ಭಾಗಗಳ ದೀಪಾಲಂಕರವನ್ನು ವೀಕ್ಷಣೆ ಮಾಡಿದ್ದು, ಅಲ್ಲಿನ ಅದ್ಭುತ ದೃಶ್ಯಗಳಿಗೆ ಮನಸೋತರು. ಅಂಬಾರಿ ಬಸ್ ಮೂಲಕ  ಇಂಧನ ಸಚಿವರಾದ ಕೆ.ಜೆ ಜಾರ್ಜ್, ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ ಮಹದೇವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಉನ್ನತ ಶಿಕ್ಷಣದ ಕ್ಯಾಬಿನೆಟ್  ಸಚಿವರಾದ ಡಾ. ಎಂ. ಸಿ ಸುಧಾಕರ್, ಚಾಮುಂಡೇಶ್ವರಿ ವಿದ್ಯುತ್  ನಿಗಮ ನಿಯಮಿತದ ಅಧ್ಯಕ್ಷರಾದ ಎ. ಬಿ.ರಮೇಶ್ ಬಂಡಿಸಿದ್ದೇಗೌಡ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ  ಗಣೇಶ್ ಪ್ರಸಾದ್ , ಮೂಡ ಅಧ್ಯಕ್ಷರಾದ ಮರಿಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ  ಮೈಸೂರಿನ ಸುಂದರ ದೀಪಾಲಂಕಾರದ ದೃಶ್ಯವನ್ನು ಕಣ್ತುಂಬಿಕೊಂಡರು. ಅಂಬಾರಿ ಬಸ್ ಸಂಚರಿಸುವ ಮಾರ್ಗದುದ್ದಕ್ಕೂ ಮುಖ್ಯಮಂತ್ರಿಗಳನ್ನು ನೋಡಲು  ಜನರು ಕಿಕ್ಕಿರಿದು ನಿಂತಿದ್ದಂತಹ ಜನರಿಗೆ ಸಿದ್ದರಾಮಯ್ಯ ಅವರು ನಾಡಹಬ್ಬ ದಸರಾ…

Read More

ತುಮಕೂರು: ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಹಾಗೂ ಎಂಕಾಂ ವಿಭಾಗವು ಸೇರಿದಂತೆ ಕೈಗಾರಿಕೋದ್ಯಮಿಯಾದ ಮತ್ತು ಲೋಕೋಪಕಾರಿ  ಹಾಗೂ ಭಾರತೀಯ ವಾಣಿಜ್ಯ ಉದ್ಯಮಿಯಾದವರು, ಸಮಾಜಕ್ಕೆ ರತನ್ ಟಾಟಾರವರು ನೀಡಿದ ಅಮೂಲ್ಯವಾದ ಕೊಡುಗೆಗಳನ್ನು ಗುರುತಿಸಿ ರತನ್ ಟಾಟಾರವರಿಗೆ‌ ಹೃತ್ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ ಗೌರವವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕವನ ರವರು ರತನ್ ಟಾಟಾ ರವರು  ಸಾಧನೆಯನ್ನು ನೆನಪಿಸಿಕೊಂಡು ಭಾವುಕರಾದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್ ಎಂ., ಎಂ.ಕಾಂ. ವಿಭಾಗದ ಮುಖ್ಯಸ್ಥರಾದ ಸೈಯದ್ ಬಾಬು ಹೆಚ್.ಬಿ. ಹಾಗೂ ವಾಣಿಜ್ಯ ವಿಭಾಗ ಮತ್ತು ಎಂ.ಕಾಂ. ವಿಭಾಗದ ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ನವರಾತ್ರಿ ಎಂಬುದಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಮಹತ್ವವಿದೆ. ದುರ್ಗೆಯ ನವ ಅವತಾರಗಳನ್ನು ಆರಾಧಿಸುವ ಈ ಹಬ್ಬವನ್ನು ಭ್ರಷ್ಟ ಮುಖ್ಯಮಂತ್ರಿ, ಮುಡಾ ಹಗರಣದ ಎ1 ಆರೋಪಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಅಕ್ಷಮ್ಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಆರೋಪಿ ಸಿದ್ದರಾಮಯ್ಯ ಅವರೇ, ಈ ರೀತಿ ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದೆ. ರಾಮ ಸತ್ಯನೇ, ಆದರೆ ಸಿದ್ದರಾಮಯ್ಯ ಬ್ರಹ್ಮಾಂಡ ಸುಳ್ಳು. ಶ್ರೀರಾಮ ಸತ್ಯ ಅನ್ವೇಷಣೆಗಾಗಿ ಸೀತೆಯಿಂದ ದೂರವಾಗಿ ಸತ್ಯಶೋಧನೆ ನಡೆಸಿದ್ದ. ಅದೇ ಮಾರ್ಗದಲ್ಲಿ ನೀವು ನಡೆಯುವುದಾದರೆ ಸಿಎಂ ಪದವಿಗೆ ರಾಜೀನಾಮೆ ಸಲ್ಲಿಸಿ ಸತ್ಯಶೋಧನೆಗೆ ಅವಕಾಶ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಬಾಂಗ್ಲಾದೇಶದ ಸತ್ಖಿರಾದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದ ಕಾಳಿ ದೇವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ಕಿರೀಟವನ್ನು ನೀಡಿದ್ದರು. ಆದ್ರೆ ಈ ಕಿರೀಟ ಇದೀಗ ಕಳವಾಗಿದೆಯಂತೆ. ಢಾಕಾದಲ್ಲಿರುವ ದೇವಾಲಯಕ್ಕೆ 2021 ಮಾರ್ಚ್ ನಲ್ಲಿ ಮೋದಿ ಭೇಟಿ ನೀಡಿದ್ದರು. ಈ ವೇಳೆ ದೇವಿಗೆ ಕಿರೀಟ ಉಡುಗೊರೆಯಾಗಿ ನೀಡಿದ್ದರು. ಅರ್ಚಕ ದಿಲೀಪ್ ಮುಖರ್ಜಿ ಪೂಜೆ ಮಾಡಿ ಹೋದ ನಂತರ ಕಳುವು ನಡೆದಿದೆ. ಕಳ್ಳರನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗ್ತಿದೆ ಪರಿಶೀಲಿಸುತ್ತಿದ್ದೇವೆ ಎಂದು ಶ್ಯಾಮನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತೈಜುಲ್ ಇಸ್ಲಾಂ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More