Subscribe to Updates
Get the latest creative news from FooBar about art, design and business.
- ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್?
- ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ
- ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ
- ತುಮಕೂರು: ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಹಿರಿಯ ಶಾಸಕರಿಗೆ ಕಡೆಗಣನೆ; ಕಾಂಗ್ರೆಸ್ ನಲ್ಲಿ ಬಂಡಾಯದ ಕಾವು
- ಕಾರವಾರ: ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್–ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್ ಲೈನ್ ಅರ್ಜಿ
- ಗ್ಯಾಸ್ ಸಿಲಿಂಡರ್ ಕಳ್ಳತನ ಜಾಲ ಭೇದಿಸಿ ಬೀದರ್ ಪೊಲೀಸರು: ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್ ವಶ | ನಾಲ್ವರು ಆರೋಪಿಗಳ ಬಂಧನ
- 560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ
- ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
Author: admin
ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯ ದಶಮಿ ಸಂಭ್ರಮ ಮನೆ ಮಾಡಿದ್ದು, ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಜಯನಗರ, ವಿಜಯನಗರ, ಬಸವನಗುಡಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಹೂ, ಬಾಳೆಕಂದು, ಮಾವಿನ ಸೊಪ್ಪು, ಬೂದುಗುಂಬಳಕಾಯಿ ಖರೀದಿ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಕುಸಿದಿದ್ದ ಹೂವಿನ ಬೆಲೆ ಹಬ್ಬದ ಪ್ರಯುಕ್ತ ಮತ್ತೆ ಏರಿಕೆಯಾಗಿದೆ. ಸೇವಂತಿಗೆ, ಕನಕಾಂಬರ, ಗುಲಾಬಿ, ಮಲ್ಲಿಗೆ ಹೂಗಳ ಬೇಡಿಕೆ ಹೆಚ್ಚಳವಾಗಿದೆ. ಮಲ್ಲಿಗೆ ಕೆ.ಜಿ.ಗೆ 800, ಕನಕಾಂಬರ 2,000, ಗುಲಾಬಿ 350, ಸೇವಂತಿಗೆ 300, ಸುಗಂಧರಾಜ 350, ಚೆಂಡು ಹೂ 100 ರೂ.ಗೆ ಮಾರಾಟವಾಗುತ್ತಿದೆ. ಬಾಳೆಕಂದು ಜೋಡಿಗೆ 50, ಮಾವಿನ ಸೊಪ್ಪು 1 ಕಟ್ 20, ನಿಂಬೆಹಣ್ಣು ಒಂದಕ್ಕೆ 7 ರೂ. ದ್ರಾಕ್ಷಿ 250, ಸೇಬು 120, ದಾಳಿಂಬೆ 200, ಏಲಕ್ಕಿ ಬಾಳೆಹಣ್ಣು 100, ಸೀತಾಫಲ 100 ರೂ.ಗೆ ಮಾರಾಟವಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ತುಮಕೂರು: ಬುದ್ಧಿವಾದ ಹೇಳಿದ ತಾಯಿಯನ್ನು ಮಗನೇ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ತುಮಕೂರು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕುಣಿಗಲ್ ತಾಲ್ಲೂಕು ಹಂಗರಹಳ್ಳಿ ಗ್ರಾಮದ ನಿವಾಸಿ, ಅಪರಾಧಿ ವಿರೂಪಾಕ್ಷ ಜೀವಾವಧಿ ಶಿಕ್ಷೆಗೊಳಪಟ್ಟ ವ್ಯಕ್ತಿಯಾಗಿದ್ದಾನೆ. ಈತ ತನಗೆ ಬುದ್ದಿವಾದ ಹೇಳಿದ್ದ ತಾಯಿ ಜಯಮ್ಮನ್ನ ಆಕ್ರೋಶದಿಂದ ಕೊಲೆ ಮಾಡಿದ್ದ. 2021 ಜನವರಿ 15ರಂದು ರಾತ್ರಿ ವಿರೂಪಾಕ್ಷ ಈ ದುಷ್ಕೃತ್ಯ ಎಸಗಿದ್ದ. ಜಯಮ್ಮ ಹೂ ಹಾಗೂ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ವಿರೂಪಾಕ್ಷ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದ. ಪದೇ ಪದೇ ಹಣ ನೀಡುವಂತೆ ತನ್ನ ತಾಯಿಯನ್ನು ಪೀಡಿಸಿ ಗಲಾಟೆ ಮಾಡುತ್ತಿದ್ದ. ಮಗನ ವರ್ತನೆಯಿಂದ ಬೇಸತ್ತ ತಾಯಿ, ಈ ರೀತಿ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ಅಲ್ಲದೇ ಹಣ ನೀಡಲು ನಿರಾಕರಿಸಿದ್ದಾರೆ. ತಾಯಿಯ ಬುದ್ಧಿವಾದವನ್ನು ಕೇಳದ ವಿರೂಪಾಕ್ಷ, ಜಯಮ್ಮ ಮಲಗಿದ್ದ ವೇಳೆ ತಲೆ ಮೇಲೆ ಖಾರ ಅರೆಯುವ ಗುಂಡು ಕಲ್ಲು ಎತ್ತಿ ಹಾಕಿ ಕೊಲೆ…
ತುರುವೇಕೆರೆ: ತುಮಕೂರು ಜಿಲ್ಲೆಯಲ್ಲಿಯೇ ಇತಿಹಾಸದಲ್ಲಿ ಪ್ರಥಮ ಬಾರಿಗೆ ತುಮಕೂರು ಜಿಲ್ಲಾಡಳಿತ ವತಿಯಿಂದ ದಸರಾ ಉತ್ಸವವನ್ನು ಹಮ್ಮಿಕೊಂಡಿದ್ದು, ತುರುವೇಕೆರೆ ತಾಲೂಕಿನ ಸಮಸ್ತ ನಾಗರಿಕ ಬಂಧುಗಳು ತಮ್ಮ ಕುಟುಂಬ ಸಮೇತವಾಗಿ ತುಮಕೂರು ದಸಾರ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿ ದಸರಾ ಉತ್ಸವವನ್ನು ಕಣ್ತುಂಬಿಕೊಳ್ಳಬೇಕೆಂದು ತುರುವೇಕೆರೆ ತಾಲೂಕು ದಂಡಾಧಿಕಾರಿ ಕುಂ.ಇ. ಅಹಮದ್ ವಿಶೇಷವಾಗಿ ಮನವಿ ಮಾಡಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಕ್ಟೋಬರ್ 3ರಿಂದ ಅ. 12 ರವರೆಗೆ ಅದ್ದೂರಿ ದಸರಾವೂ ಪ್ರಾರಂಭವಾಗಿದ್ದು, ಈ ಹಿಂದೆ ನಾವೆಲ್ಲರೂ ದಸರಾದ ವೀಕ್ಷಣೆಗೆ ದೂರದ ಮೈಸೂರು, ಮಡಿಕೇರಿ, ಹಾಗೂ ಮುಂತಾದ ಜಿಲ್ಲೆಗಳಿಗೆ ತೆರಳಿ ದಸರಾ ಸಂಭ್ರಮವನ್ನು ವೀಕ್ಷಿಸಬೇಕಿತ್ತು, ಆದರೆ ಇದೀಗ ಸರ್ಕಾರವು ಮತ್ತು ತುಮಕೂರು ಜಿಲ್ಲಾಡಳಿತ ನಮ್ಮ ಜಿಲ್ಲೆಯ ಜನತೆಗೆ ದಸರಾ ಸಂಭ್ರಮ ವೀಕ್ಷಿಸಲು ನಮ್ಮ ಜಿಲ್ಲೆಯಲ್ಲಿಯೇ ಆಯೋಜಿಸಿರುವ ಹಿನ್ನೆಲೆ ಬಹಳ ವಿಶೇಷವಾದ ಕಾರ್ಯಕ್ರಮಗಳು ಜರುಗಲಿವೆ. ವಿಶೇಷವಾಗಿ ಅಕ್ಟೋಬರ್ 11ರಂದು ಶುಕ್ರವಾರ ಕ್ರೀಡಾ ದಸರಾ ಉತ್ಸವ. ಆಹಾರಮೇಳ. ವಿಜ್ಞಾನ ಮೇಳ. ನಾಡ ಕುಸ್ತಿ, ಸೇರಿದಂತೆ ಎಚ್.ಎ.ಎಲ್, ವತಿಯಿಂದ ಹೆಲಿಕ್ಯಾಪ್ಟರ್…
ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಗುರುವಾರ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಟಾಟಾ ಗ್ರೂಪ್ ಅನ್ನು ಜಾಗತಿಕವಾಗಿ ಹೆಸರಾಂತ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾದ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಇಂದು ಬೆಳಗಿನ ಜಾವ 2 ಗಂಟೆಯ ನಂತರ ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಆಂಬುಲೆನ್ಸ್ ನಲ್ಲಿ ಹೊರತರಲಾಯಿತು ಮತ್ತು ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅವರ ಉಪ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಮತ್ತು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಟಾಟಾ ಅವರ ಸಾವಿನ ಸುದ್ದಿ ಕೇಳಿ ಆಸ್ಪತ್ರೆಗೆ ಧಾವಿಸಿದವರಲ್ಲಿ ಸೇರಿದ್ದರು. ಶೋಕಾಚರಣೆಯ ಸಂಕೇತವಾಗಿ ಇಂದು ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರೀಯ…
ತುಮಕೂರು: ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯವಾಗಿರೋ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ. ಸ್ಫೋಟಗೊಂಡ ಪರಿಣಾಮ ಬಾಲಕನ ಮೂರು ಬೆರಳು ಛಿದ್ರವಾಗಿವೆ. ಮೋನಿಷ್ ಗಾಯಗೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದು, ಈತನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಲು ತಂದು ಸುರಿಯಲಾಗಿದ್ದ ಕಲ್ಲುಗಳ ನಡುವೆ ಇದ್ದ ಸ್ಪೋಟಕವನ್ನು ಕೈಗೆತ್ತಿಕೊಂಡು ಎಸೆದ ವೇಳೆ ಅದು ಸ್ಫೋಟಗೊಂಡಿದೆ . ಆಟದ ವಸ್ತು ಇರಬಹುದು ಎಂದು ಕೆಂಪು ಬಣ್ಣದ ಸ್ಫೋಟಕವನ್ನು ಮುಟ್ಟಿದ್ದನು. ಈ ಸಂಬಂಧ ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ವರದಿ : ಮಂಜುಸ್ವಾಮಿ ಎಂ ಎನ್. ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಸುಮಾರು ವರ್ಷಗಳಿಂದ ಗುಡಿಸಲಲ್ಲಿ ವಾಸವಾಗಿರುವ ನಿರಾಶ್ರಿತರ ಬದುಕನ್ನ ಘನ ಸರ್ಕಾರದ ಸಕಲ ಸೇವಾ ಸೌಲಭ್ಯ ನೀಡಿ ಉತ್ತಮ ಬದುಕನ್ನ ರೂಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಫಲವಾಗಿದೆ ಎಂದು ಹಿರಿಯ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಬ್ಬಿ ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗ ವಾಸವಿರುವ ಸುಮಾರು 42ಕ್ಕೂ ಹೆಚ್ಚು ನಿರ್ಗತಿಕ ಕುಟುಂಬಗಳ ಗೋಳು ಕೇಳೋರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇಲ್ಲಿನ ಬಡವರ ಬದುಕು ನಿಜಕ್ಕೂ ರೋಚಕದ ಸಂಗತಿಯಾಗಿದೆ ಕೆಲವು ದಿನಗಳ ಹಿಂದೆಯಷ್ಟೇ ಭೀಕರವಾಗಿ ಸುರಿದ ಮಳೆಯ ನೀರಲ್ಲಿ ವಯೋವೃದ್ದೆಯೊಬ್ಬರು ಮುಳುಗಿ ಪ್ರಾಣ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ ಹಾಗೂ ಹಾವಿನ ಕಡಿತದಿಂದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಕಾಣಬಹುದಾಗಿದೆ. ಆದರೂ ಕೂಡ ತುಮಕೂರು ಜಿಲ್ಲಾ ಆಡಳಿತ ಮತ್ತು ಗುಬ್ಬಿ ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು…
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 ಶುಕ್ರ ಗ್ರಹವು ಬಹಳ ಮಹತ್ವಪೂರ್ಣವಾದ ಗ್ರಹವಾಗಿದೆ. ಈ ಗ್ರಹವು ಪ್ರೇಮ, ಆಕರ್ಷಣೆ, ಸೌಂದರ್ಯ, ಹಣ, ವೈಭವ, ಭೌತಿಕ ಸಂತೋಷ, ಭೋಗ ಮತ್ತು ವಿಲಾಸವನ್ನು ಕರುಣಿಸುವ ಗ್ರಹವಾಗಿದೆ. ಶುಕ್ರ ಗ್ರಹದ ಪ್ರಭಾವವು ವ್ಯಕ್ತಿಯ…
ಬೆಂಗಳೂರು : ಆರ್.ಆರ್.ನಗರ ಶಾಸಕ ಮುನಿರತ್ನ ವಿಚಾರವಾಗಿ ನೋಟಿಸ್ ಕೊಟ್ಟಿದ್ದೇವೆ. ಎಫ್ ಎಸ್ ಎಲ್ ವರದಿ ಬಳಿಕ ಶಾಸಕ ಸ್ಥಾನದ ರಾಜೀನಾಮೆ ಪಡೆಯುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನೋಟಿಸ್ ನೀಡಿದ್ದೇವೆ, ಎಫ್ ಎಸ್ ಎಲ್ ವರದಿ ಬಳಿಕ ಶಾಸಕ ಸ್ಥಾನದ ರಾಜೀನಾಮೆ ಪಡೆಯುತ್ತೇವೆ ಎಂದರು. ಜಾತಿಗಣತಿ: ಜಾತಿಗಣತಿ ಹೇಳಿ ಮಾಡಿಸಿದ್ದಾರೆಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ಕೆ. ಸುಧಾಕರ್, ಶಾಮನೂರು ಶಿವಶಂಕರಪ್ಪ ವಿರೋಧ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯದವರು ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿಮ್ಮ ಗೊಂದಲಗಳನ್ನು ಬಿಜೆಪಿಯ ಮೇಲೆ ಹಾಕಬೇಡಿ ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಬೆಳಗಾವಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ. ಉದ್ಯಮಿಗಳು ಮಾಡುವ ರೀತಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ.ಕೊಡಗು, ಚಾಮರಾಜನಗರ, ಚಿಕ್ಕಮಂಗಳೂರು ಕಡೆಗೆ ರೋಡ್ ಶೋ ನಡೆಸಿದ್ದಾರೆ. ನಾನೇ ಸಿಎಂ ನಾನೇ ಸಿಎಂ ಅಂತ ಯಾರು ಹೇಳುತ್ತಿದ್ದಾರೆ? ಡಿ.ಕೆ. ಹೇಳಿಕೆಗಳಿಗೆ ಕಡಿವಾಣ…
ಹುಬ್ಬಳ್ಳಿ: ವ್ಯಾಪಾರಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಜೋಯಾ ನದಾಫ, ಪರ್ವಿನ ಬಳ್ಳಾರಿ, ಸಯ್ಯದ್ ತಹಶೀಲ್ದಾರ, ತೌಸಿಫ್, ಅಬ್ದುಲ್ ಬಂಧಿತರಾಗಿದ್ದಾರೆ ಎಂದು ಡಿಸಿಪಿ ಮಹಾನಿಂಗ ನಂದಗಾಂವಿ ತಿಳಿಸಿದ್ದಾರೆ. ಪಾತ್ರೆ ವ್ಯಾಪಾರಿ ಚಗನ್ ಲಾಲ್ ಎಂಬುವರೆ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾಗಿರುವ ವ್ಯಾಪಾರಿಯಾಗಿದ್ದು, ಬಂಧಿತ ಜೋಯಾ, ಚಗನ್ ಲಾಲ್ ಅವರ ಮೊಬೈಲ್ ಗೆ ಕರೆಮಾಡಿ ಪರಿಚಯಿಸಿಕೊಂಡು ಉಣಕಲ್ ಕ್ರಾಸ್ ಗೆ ಕರೆಸಿಕೊಂಡಿದ್ದಾಳೆ. ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾಳೆ. ತದನಂತರ ಐವರು ಸೇರಿ ಕೇಳಿದಷ್ಟು ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಚಗನ್ ಲಾಲ್‌ರು ಸೋಮವಾರ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ತಂಡದ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ ಎರಡು ಬೈಕ್, ಐದು ಮೊಬೈಲ್ ಫೋನ್ಸ್, 9…
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಹೊಸ ಹೇರ್ ಸ್ಟೈಲ್ ಗೆ ಬಂದ ಕಾಮೆಂಟ್ ಗಳಿಗೆ ತಲೆಬಾಗಿ ಕೊನೆಗೂ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಕೆದರಿದ ಕೂದಲುಗಳನ್ನು ಬಿಟ್ಟು ಪೋಸ್ ಕೊಟ್ಟಿದ್ದ ಪ್ರತಾಪ್ ಸಿಂಹ ಹೊಸ ಸ್ಟೈಲ್ ಕೆಲವರಿಗೆ ಇಷ್ಟವಾಗಿದ್ದರೆ, ಸಾಕಷ್ಟು ಜನ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ನೀವು ಜನಪ್ರತಿನಿಧಿಯಾಗಿ ಈ ರೀತಿಯಾಗಿ ಕೆದರಿದ ಕೂದಲಿನಿಂದ ಕಾಣಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿ ಬಂದಿತ್ತು. ವರದಿಗಳ ಪ್ರಕಾರ ಕೇಂದ್ರ ಸಚಿವರೊಬ್ಬರು ಕೂಡ ಪ್ರತಾಪ್ ಸಿಂಹ ಅವರನ್ನ ತರಾಟೆಗೆತ್ತಿಕೊಂಡಿದ್ದರಂತೆ. ಹೀಗಾಗಿ ಕೊನೆಗೂ ಪ್ರತಾಪ್ ಸಿಂಹ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296