Author: admin

ಮದುವೆಗಿಂತ ಮೊದಲು ವರನ ಲೈಂಗಿಕ ಸಾಮರ್ಥ್ಯ ಪರೀಕ್ಷೆ ಮಾಡುವುದು ಇಲ್ಲಿ ಕಡ್ಡಾಯವಂತೆ! ಮದುವೆಗೂ ಮೊದಲು ವಧುವಿನ ಚಿಕ್ಕಮ್ಮ ಅಥವಾ ಸೋದರತ್ತೆ ಅಳಿಯನ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತಾರಂತೆ. ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ. ಉಗಾಂಡ ದೇಶದ ಬಯಂಕೋಲೆ ಬುಡಕಟ್ಟು ಜನಾಂಗದಲ್ಲಿ ಈ ರೀತಿಯ ಸಂಪ್ರದಾಯವಿದೆಯಂತೆ. ಮಗಳನ್ನು ವರನಿಗೆ ಮದುವೆ ಮಾಡಿಕೊಡುವುದಕ್ಕೂ ಮೊದಲು, ವರನ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಆತ ಲೈಂಗಿಕವಾಗಿ ಸಮರ್ಥವಾಗಿದ್ದರೆ ಮಾತ್ರವೇ ಮದುವೆ ನಡೆಯುತ್ತದೆ. ವಧುವಿನ ಚಿಕ್ಕಮ್ಮ ಅಥವಾ ಸೋದರತ್ತೆ ಈ ಪರೀಕ್ಷೆ ನಡೆಸುತ್ತಾರೆ. ಮದುವೆಗೂ ಮುನ್ನ ವರ ಇವರೊಂದಿಗೆ ಸೇರಬೇಕಾಗುತ್ತದೆ. ವರ ಲೈಂಗಿಕವಾಗಿ ಸಮರ್ಥನಿದ್ದಾನೆಯೇ ಇಲ್ಲವೇ ಎನ್ನುವುದನ್ನು ಇವರೇ ಘೋಷಿಸುತ್ತಾರಂತೆ! ಇದು ಕೇವಲ ಲೈಂಗಿಕ ಸಾಮರ್ಥ್ಯದ ಪರೀಕ್ಷೆ ಮಾತ್ರವಲ್ಲ, ವರನಿಗೆ ಸೆಕ್ಸ್ ಎಜುಕೇಷನ್ ನೀಡುವುದು ಕೂಡ ಇದರ ಉದ್ದೇಶವಂತೆ. ಅಲ್ಲದೇ ವರ ಗಂಡಸು ಹೌದೋ ಅಲ್ಲವೋ ಎನ್ನುವುದನ್ನೂ ಕೂಡ ಪರಿಶೀಲಿಸಲು ಈ ವಿಚಿತ್ರ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ವರ ಗೆದ್ದರೆ ಮಾತ್ರವೇ ವಿವಾಹ ನಿಶ್ಚಯವಾಗುತ್ತದೆ. ನಮ್ಮತುಮಕೂರಿನ…

Read More

ಹೆಚ್.ಡಿ.ಕೋಟೆ: ಹುಲಿ ಉಪಟಳ ಗಣಿಶದ್ದು ಗ್ರಾಮಸ್ಥರು ತತ್ತರಿಸಿ ಹೋಗಿದ್ದು, ಪ್ರತಿನಿತ್ಯ ಪ್ರಾಣ ಭಯದಲ್ಲಿ ಗ್ರಾಮಸ್ಥರು ದಿನದೂಡುವಂತಾಗಿದೆ. ಪ್ರತಿನಿತ್ಯ ಸಾಕು ಪ್ರಾಣಿಗಳನ್ನು ಹುಲಿ ಹೊತ್ತೊಯ್ಯುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಎಷ್ಟು ಭಾರಿ ಮನವಿ ಮಾಡಿದರೂ ಕ್ಯಾರೇ ಅನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ನಿನ್ನೆ ರಾತ್ರಿ 4 ಮೇಕೆಗಳನ್ನು ವ್ಯಾಘ್ರ ಬಲಿಪಡೆದುಕೊಂಡಿದೆ.  ಅಧಿಕಾರಿಗಳು ಇತ್ತ ಗಮನ ಹರಿಸಿ ಅಂತ ಗ್ರಾಮಸ್ಥರು ಅಂಗಲಾಚುತ್ತಿದ್ದಾರೆ. ಇಷ್ಟಾದರೂ ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಜನರ ಮೇಲೆ ಹುಲಿ ದಾಳಿ ಮಾಡುವುದಕ್ಕೂ ಮೊದಲೇ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆಯೇ ಅಥವಾ ನರಬಲಿಯಾಗುವವರೆಗೂ ಕಾಯುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಾವಗಡ:  ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ತಾಲೂಕು ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶ್ರೀ ಮಹಾಂತ ಶಿವಯೋಗಿ ಸ್ವಾಮಿಗಳ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸುವಂತಹ ವ್ಯಸನ ಮುಕ್ತ ದಿನಾಚರಣೆಯ ಜಾಥಾ ಕಾರ್ಯಕ್ರಮಕ್ಕೆ  ಡೊಳ್ಳು ಒಡೆಯುವ ಮೂಲಕ ಸಿಪಿಐ ಸುರೇಶ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವ್ಯಸನ ಮುಕ್ತ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಅಧಿಕಾರಿಗಳಿಗೆ ನೆರದಿದ್ದ ಸಾರ್ವಜನಿಕರಿಗೆ  ಬೋಧಿಸಲಾಯಿತು. ಜಾಥಾದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಜಿ.ಕಿರಣ್,  ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ, ಟಿಪಿಒ ಬಸವರಾಜು, ಬಿಸಿಎಂ ಗೋಪಾಲಪ್ಪ, ತಾಲೂಕು ಹಿರಿಯ ಮೇಲ್ವಿಚಾರಕರಾದ ಪ್ರಭಾವಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತಿಪಟೂರು: ಶ್ರೀ ಕೆರಗೋಡಿ ರಂಗಾಪುರ ಸುಕ್ಷೇತ್ರದಲ್ಲಿ ಆಗಸ್ಟ್ 4ರಂದು ಶ್ರೀ ಗುರು ಪರದೇಶಿ ಕೇಂದ್ರ ಸ್ವಾಮೀಜಿಯವರ ಸನ್ನಿಧಾನದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರದ ಹಿರಿಯ ವಿದ್ಯಾರ್ಥಿ ಮತ್ತು ಕ್ಷೇತ್ರ ಅಭಿಮಾನಿ ಸಂಘದ ಅಧ್ಯಕ್ಷರಾದ ಯ.ಕೆ.ಶಿವಪ್ಪ ಹೇಳಿದರು. ಅಂದುಸುಮಾರು 50 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ಎಲ್ಲಾ ಜನರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು ತಿಪಟೂರಿನಿಂದ ಬರುವವರೆಗೆ ಬಸ್ಸಿನ ವ್ಯವಸ್ಥೆಯು ಇರುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು:  ಬೆಂಗಳೂರಿನಲ್ಲಿ ಅಪಾಯಕಾರಿಯಾದ ಡ್ರಗ್ಸ ಪತ್ತೆಯಾಗಿದ್ದು, ಅದು ಎಲ್ಲೆಡೆ ವ್ಯಾಪಿಸುವ ಆತಂಕವಿದೆ ಎಂದು ಚಿತ್ರನಟ ದುನಿಯಾ ವಿಜಯ್  ತಿಳಿಸಿದ್ದಾರೆ. ಭೀಮ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಮಾತು ಕತೆ ಮಾಡುವ ಸಂದರ್ಭದಲ್ಲಿ ಈ ವಿಷಯವನ್ನು ಸ್ವಾಮೀಜಿಯ ಬಳಿ ಹೇಳಿಕೊಂಡು ಆತಂಕ ವ್ಯಕ್ತಪಡಿಸಿದರು. ಈ ಡ್ರಗ್ ಅನ್ನು ನಾನು ಕಂಡುಹಿಡಿದಿದ್ದೇನೆ, ಅದು ಕರ್ನಾಟಕದದ್ಯಂತ ವ್ಯಾಪಿಸಲಿದೆ ಎಲ್ಲೆಡೆ ವ್ಯಾಪಿಸುವುದನ್ನು  ನಿಯಂತ್ರಿಸಬೇಕಿದೆ. ಆ ಡ್ರಗ್ ಅನ್ನು  ಅವರವರೇ ಕಂಡುಹಿಡಿದುಕೊಂಡು ಬಳಸುತ್ತಿದ್ದಾರೆ  ಎಂದು ಹೇಳಿದರು. ಅಲ್ಲದೇ ತಮ್ಮ ಮೊಬೈಲ್ ನಲ್ಲಿ ಈ ಡ್ರಗ್ಸ್ ಕುರಿತದ ಕೆಲವೊಂದು ಮಾಹಿತಿಯನ್ನು ಸ್ವಾಮೀಜಿಯವರೊಂದಿಗೆ ಹಂಚಿಕೊಂಡರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ದಿನಕ್ಕೆ 14 ಗಂಟೆ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವ ವಿರೋಧಿಸಿ ಒಂದೆಡೆ ಐಟಿ ಉದ್ಯೋಗಿಗಳು (IT Employees) ಬೃಹತ್‌ ಪ್ರತಿಭಟನೆಗೆ  ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ‌ನಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಪ್ರಸ್ತಾವನೆ ಸಂಪೂರ್ಣ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ದಿನಕ್ಕೆ 14 ಗಂಟೆ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವ ವಿರೋಧಿಸಿ ನಾಳೆ ಸರ್ಕಾರದ ವಿರುದ್ಧ ಹಾಗೂ ಐಟಿ ಕಂಪನಿಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಐಟಿ ಉದ್ಯೋಗಿಗಳು ಸಜ್ಜು ಮಾಡಿಕೊಳ್ಳುತ್ತಿದ್ದಾರೆ. ಐಟಿ ಉದ್ಯೋಗಿಗಳ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಈ ಪ್ರತಿಭಟನೆಗೆ ತಯಾರು ಮಾಡಿಕೊಂಡಿವೆ. ಫ್ರೀಡಂ ಪಾರ್ಕ್‌ನಲ್ಲಿ ಈ ಪ್ರತಿಭಟನೆ ನಡೆಯಲಿದೆ. ಮುಷ್ಕರದಲ್ಲಿ ಸಾವಿರಾರು ಐಟಿ ಎಂಪ್ಲಾಯಿಗಳು ಭಾಗವಹಿಸಲಿದ್ದಾರೆ. ಐತಿಹಾಸಿಕವಾಗಿ, ಇದೇ ಮೊದಲ‌ ಬಾರಿಗೆ ಐಟಿ ಉದ್ಯೋಗಿಗಳು ಪ್ರತಿಭಟನೆಗಾಗಿ ರಸ್ತೆಗಿಳಿಯುತ್ತಿದ್ದಾರೆ. ಉದ್ಯೋಗಗಳನ್ನು ಹೆಚ್ಚಿಸಬೇಕು. ಅದರ ಬದಲು ಸಮಯ ವಿಸ್ತರಣೆ ಮಾಡುವುದಲ್ಲ. ಹೀಗೆ ಮಾಡುವುದರಿಂದ ಒತ್ತಡ ಹೆಚ್ಚಾಗಿ ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಆಕ್ರೋಶಿಸಿದ್ದಾರೆ.…

Read More

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2024 ಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಇದೀಗ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದಾಗಿ ಪ್ರಾಧಿಕಾರ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಗೆ (KSET) ಈ ವರ್ಷ ಯಾರೆಲ್ಲ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಲು ಕಾಯುತ್ತಿರುವ ಅಭ್ಯರ್ಥಿಗಳು ಕೂಡಲೇ ಸೂಕ್ತ ದಾಖಲಾತಿಗಳ ಸಮೇತ ನೋಂದಣಿ ಮಾಡಿಕೊಳ್ಳಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆನ್‌ಲೈನ್ ನೋಂದಣಿಯನ್ನು ಜುಲೈ 30ರಿಂದ ಆರಂಭಿಸಿದೆ. ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಮುಂದಿನ ಆಗಸ್ಟ್ 22 ರವರೆಗೆ ನೋಂದಣಿ ಅವಕಾಶ ಇದೆ. * ಆನ್‌ ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನ – 2024 ಜುಲೈ 30 * ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಕಡೆಯ ದಿನ – 2024ರ…

Read More

ಧೂಮಪಾನಿಗಳಿಗೆ ‘ಸಿಗರೇಟ್’ ಕೆಟ್ಟದ್ದು ಅಂತ ಗೊತ್ತೇ ಇದೆ. ಆದರೆ ಸಿಗರೇಟ್ ಸೇದೋದನ್ನು ಬಿಡ್ತಾರಾ..? ನೋ ಚಾನ್ಸ್.! ಧೂಮಪಾನವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಚಟವನ್ನು ಯಾರೂ ಕೂಡ ಅಷ್ಟ ಸುಲಭವಾಗಿ ಬಿಡಲ್ಲ . ಧೂಮಪಾನವು ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಧೂಮಪಾನವು ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.ಧೂಮಪಾನ ಮತ್ತು ದೃಷ್ಟಿ ದೌರ್ಬಲ್ಯದ ನಡುವಿನ ಸಂಬಂಧವು ಕಾಳಜಿಯ ವಿಷಯವಾಗಿದೆ. ನಮ್ಮ ಆರೋಗ್ಯದ ಸುಧಾರಣೆಗಾಗಿ ಧೂಮಪಾನದಿಂದ ಸಂಪೂರ್ಣವಾಗಿ ದೂರವಿರುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಧೂಮಪಾನ ಮಾಡುವವರು ಮಾತ್ರವಲ್ಲ, ಹೊಗೆಯನ್ನು ಉಸಿರಾಡುವವರು ಸಹ ಕಣ್ಣುಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು. ಅದಕ್ಕಾಗಿಯೇ ಯಾರಾದರೂ ಧೂಮಪಾನ ಮಾಡುವಾಗ ಪಕ್ಕದಲ್ಲಿರದಿರುವುದು ಉತ್ತಮ ಎಂದು ಹೇಳಲಾಗುತ್ತದೆ. ಧೂಮಪಾನ ಮಾಡುವುದರಿಂದ ದೃಷ್ಟಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನ ಮಾಡುವ ಜನರು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಕ್ಷೀಣತೆಯ ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ತರುಣ್ ಸುಧೀರ್ ಸೋನಲ್ ಮಾಂಥೋರೊ ಮದುವೆ ಸುದ್ದಿ ಇಡೀ ಚಿತ್ರರಂಗಕ್ಕೆ ಬ್ರೇಕಿಂಗ್ ನ್ಯೂಸ್ ಆಗಿತ್ತು. ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಆಗಸ್ಟ್‌ 10 ಮತ್ತು 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ತಯಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುವುದಕ್ಕೆ ಶುರು ಮಾಡಿದ್ದಾರೆ. ಶಾಪಿಂಗ್ ಕೂಡ ಶುರು ಮಾಡಿದ್ದಾರೆ. ಇತ್ತೀಚಿಗೆ ಚಿಕ್ಕಪೇಟೆಯಲ್ಲಿ ಇರುವ ಯೋಗಲಕ್ಷ್ಮಿ ಸಿಲ್ಕ್‌ ಸೀರೆ ಅಂಗಡಿಯಲ್ಲಿ ಮದುವೆ ಸೀರೆಯನ್ನು ಶಾಪಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.ಮೂರ್ನಾಲ್ಕು ಸೀರೆಯನ್ನು ಸೋನಲ್ ಕುಟುಂಬದವರು ಖರೀದಿಸಿದ್ದಾರೆ. ಅಂಗಡಿ ಮಾಲೀಕರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ತರುಣ್ ಸುಧೀರ್ ಹಾಗೂ ಸೋನಲ್ ಸ್ನೇಹಿತರ ಬಳಗವನ್ನು ವಿವಾಹಕ್ಕೆ ಆಮಂತ್ರಿಸಲು ಪರಿಸರ ಸ್ನೇಹಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಸಾಮಾನ್ಯವಾಗಿ ಬೇಡವಾದ ಕಾಗದಗಳನ್ನು ಬಿಸಾಕುವವರೇ ಜಾಸ್ತಿ. ಇದೇ ನಿಟ್ಟಿನಲ್ಲಿ ತರುಣ್ ಮತ್ತು ಸೋನಲ್​ ಪರಿಸರ ಸ್ನೇಹಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಇದನ್ನು ನೆಲದ ಮೇಲೆ ಬಿಸಾಡಿದ್ರೆ…

Read More

ನಟ ದುನಿಯಾ ವಿಜಯ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ನಟ ದುನಿಯಾ ವಿಜಯ್ ಅವರು ತಮ್ಮ ಮುಂಬವರು ಸಿನಿಮಾ ಭೀಮವನ್ನು ನೋಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಕೊಟ್ಟರು. ಭೀಮ‌ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ಸಿನಿಮಾ ಆಗಿದೆ. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಜಯ್ ಅವರು ಸಿಎಂ ಅವರನ್ನು ತಮ್ಮ ಸಿನಿಮಾ ನೋಡಲು ಆಹ್ವಾನಿಸಿದರು. ಆಗಸ್ಟ್ 9 ಕ್ಕೆ ಭೀಮ ಮೂವಿ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ಗೂ ಮೊದಲೇ ಭೀಮ ಚಿತ್ರ ನೋಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಭೀಮ ಸಿನಿಮಾ 400 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್ ಗಾಗಿಯೇ ಕ್ಲೋಸ್ ಆಗಿರೋ 18 ಥಿಯೇಟರ್‌ಗಳು ರೀ-ಓಪನ್ ಆಗುತ್ತಿದೆ. ಹಾಗಾಗಿಯೇ ಆಗಸ್ಟ್-9 ರಂದು ಭೀಮ ಅಬ್ಬರ ಬಲು ಜೋರಾಗಿಯೇ ಇರುತ್ತದೆ. ಭೀಮನ ಅಭಿಮಾನಿಗಳು ದೊಡ್ಡ ಹಬ್ಬ ಮಾಡೋಕು ಇದೀಗ ರೆಡಿ ಆಗುತ್ತಿದ್ದಾರೆ. ಭೀಮ ಚಿತ್ರದ ಬಗ್ಗೆ ಇನ್ನಿಲ್ಲದ ಒಂದು…

Read More