Subscribe to Updates
Get the latest creative news from FooBar about art, design and business.
- ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ
- ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ
- ಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್ ಪಿ ಬಲ್ಲಪ್ಪ ನಂದಗಾಂವೆ ಸೂಚನೆ
- ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ
- ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ
- ಸಿದ್ಧರಾಮಯ್ಯರ ‘ಅನ್ನಭಾಗ್ಯ’: ಎಷ್ಟೇ ಬರಗಾಲ ಬಂದರೂ ಊಟಕ್ಕೆ ತೊಂದರೆಯಾಗದು: ಕೆ.ಎನ್. ರಾಜಣ್ಣ
- ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ್ದ ಬಸವಣ್ಣ: ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಡಾ.ಎನ್.ತಿಪ್ಪೇಸ್ವಾಮಿ
- ವಿಜ್ಞಾನ ಕಾಲೇಜಾಗಿ ಮೇಲ್ದರ್ಜೆಗೇರಿದ ಮೊರಾರ್ಜಿದೇಸಾಯಿ ವಸತಿ ಶಾಲೆ: ಶಾಸಕರು, ಎಂಎಲ್ಸಿ ಪ್ರಯತ್ನದಿಂದ ಬಡವನಹಳ್ಳಿಗೆ ಪ.ಪೂ.ಕಾಲೇಜು
Author: admin
ಕೊರಟಗೆರೆ: ತಾಲೂಕು ಕಚೇರಿ ಆವರಣದಲ್ಲಿ ಮಹಾತ್ಮ ಶಿವಯೋಗಿ ಸ್ವಾಮೀಜಿಯವರ ಜನ್ಮದಿನ ಆಚರಣೆ ಮಾಡಲಾಯಿತು. ಶಿವಯೋಗಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಸ್ವಾಮೀಜಿಯವರ ಜನ್ಮ ದಿನಾಚರಣೆ ಅಂಗವಾಗಿ ಮದ್ಯಪಾನ, ಧೂಮಪಾನ ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಥಾ ನಡೆಸಲಾಯಿತು. ಅಧಿಕಾರಿಗಳಿಂದ ಪ್ರತಿಜ್ಞಾವಿಧಿ ಹಾಗೂ ಬೀದಿ ನಾಟಕದ ತಂಡದಿಂದ ಜನಪದ ಗೀತೆಗಳು ಹಾಗೂ ಬೀದಿ ನಾಟಕ ಪ್ರದರ್ಶಿಸಿಸಲಾಯಿತು. ಜಾಗೃತಿ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಮಂಜುನಾಥ್ ಕೆ. ಚಾಲನೆ ನೀಡಿದರು. ತಾಲೂಕು ಕಚೇರಿಯಿಂದ ಮಧ್ಯ ಬಸ್ಟ್ಯಾಂಡ್ ವರೆಗೆ ಕಾಲ್ನಾಡಿಗೆ ಜಾಥಾ ಮೂಲಕ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಬೀದಿ ನಾಟಕದ ತಂಡ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಮಟ್ಟದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು, ತಾಲೂಕಿನ ಎಲ್ಲ ಶಾಲೆಯ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಬೀದಿ ನಾಟಕ ತಂಡದವರು ಹಾಜರಿದ್ದರು. ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಕೊರಟಗೆರೆ: ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಗೆ ಕೆಲವು ಇಲಾಖೆಯ ಅಧಿಕಾರಿಗಳು ಗೈರಾಗಿದ್ದು, ಇದಕ್ಕೆ ಬೇಸರ ವ್ಯಕ್ತಪಡಿಸಿದ ತಹಶೀಲ್ದಾರ್ ಮಂಜುನಾಥ್ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದೇ ವೇಳೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬರುವ ಮಕ್ಕಳಿಗಾಗಲಿ ಸಾರ್ವಜನಿಕರಿಗಾಗಿ ಯಾವುದೇ ತೊಂದರೆಗಳಾದಂತೆ ಸಿದ್ಧತೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು. ಬ್ರಿಟಿಷರ ಜೊತೆ ಹೋರಾಡಿ ನಮಗಾಗಿ ನಮ್ಮ ನಾಡಿಗಾಗಿ ಪ್ರಾಣವನ್ನು ಅರ್ಪಿಸಿರುವ ಸ್ವತಂತ್ರ ಹೋರಾಟಗಾರರಿಗೆ ಪಿತಾಮಹರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅವರು ಹೇಳಿದರು. ತಪ್ಪು ಯಾರು ಮಾಡುವುದಿಲ್ಲ ಪದೇ ಪದೇ ತಪ್ಪುಗಳನ್ನು ಮಾಡಬಾರದು ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಸರಿದಾರಿಯಲ್ಲಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಸ್ವತಂತ್ರ ದಿನಾಚರಣೆಯ ದಿನ ಸಿದ್ಧತೆಯ ವ್ಯವಸ್ಥೆ ವಹಿಸಿಕೊಂಡ ಇಲಾಖೆಗಳು ತಮ್ಮ ತಮ್ಮ ಕೆಲಸ ಜವಾಬ್ದಾರಿಯಿಂದ ಮಾಡಬೇಕು ಎಂದು ತಹಶೀಲ್ದಾರ್ ಮಂಜುನಾಥ್ ಖಡಕ್ ಎಚ್ಚರಿಕೆ ನೀಡಿದರು. ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಕೊರಟಗೆರೆ: ಗೃಹಸಚಿವ ಡಾ.ಜಿ.ಪರಮೇಶ್ವರ ಅವರ ೭೩ನೇ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ವಿಶೇಷ ಸಾಮಾಜಿಕ ಮತ್ತು ಜನಸೇವೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಕೆ.ಆರ್.ಓಬಳರಾಜು ತಿಳಿಸಿದರು. ಕೊರಟಗೆರೆ ಪಟ್ಟಣದ ರಾಜೀವ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳಿಗೆ ಸಮವಸ್ತ್ರ, ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಸಮವಸ್ತ್ರ ವಿತರಣೆ, ಬಡ ಜನರಿಗೆ ಬೆಡ್ ಶೀಟ್, ರಕ್ತದಾನ ಶಿಬಿರ ಮತ್ತು ೪ ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಗೃಹ ಸಚಿವರ ಹುಟ್ಟುಹಬ್ಬವನ್ನ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು. ಪಪಂ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಹುಟ್ಟು ಹಬ್ಬವು ಕೊರಟಗೆರೆ ಕ್ಷೇತ್ರದಲ್ಲಿ ಸಂಭ್ರಮದಿಂದ ನಡೆಯಲಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಅಭಿಮಾನಿ ಬಳಗದಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಪ.ಪಂ.ಸದಸ್ಯ ನಾಗರಾಜು, ನಂದೀಶ್, ಕಾಂಗ್ರೆಸ್ ಯುವಧ್ಯಕ್ಷ ಬೈರೇಶ್, ಉಪಾಧ್ಯಕ್ಷ…
ಬೆಂಗಳೂರು: 2024-24ನೇ ಸಾಲಿನ ಪಿಎಂ ಪೋಷಣ್ ಮಧ್ಯಾಹ್ನದ ಉಪಹಾರ ಯೋಜನೆಯ ಅಡಿಯಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಯೋಜನೆ ಜಾರಿಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಹೀಗಿದೆ ವಿಶೇಷ ಭೋಜನ” (ತಿಥಿ ಭೋಜನ)ವನ್ನು ಆಯೋಜಿಸಲು ಈ ಕೆಳಗಿನ ಮಾರ್ಗಸೂಚಿಗಳನ್ನು ಗಮನಿಸಬೇಕು 1. ಆಹಾರ ಪದಾರ್ಥಗಳು: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) 2013 ರ schedule || ರಲ್ಲಿ ಉಲ್ಲೇಖಿಸಿರುವಂತೆ ಯೋಜನೆಯ ಮಾನದಂಡಗಳಿಗೆ (ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ- 450 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೋಟೀನ್ ಮತ್ತು ಹಿರಿಯ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ 750 ಕ್ಯಾಲೋರಿಗಳು ಮತ್ತು 20 ಗ್ರಾಂ ಪ್ರೋಟೀನ್) ಬದ್ಧವಾಗಿ ‘ತಿಥಿ ಭೋಜನದಲ್ಲಿ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡಬೇಕು. ಸ್ಥಳೀಯವಾಗಿ ಲಭ್ಯವಿರುವ ಹಸಿರು ಎಲೆಗಳ ತರಕಾರಿಗಳು, ಕಾಳುಗಳು/ದ್ವಿದಳ ಧಾನ್ಯಗಳು ಮತ್ತು ಸಿರಿಧಾನ್ಯಗಳು ವಿಶೇಷ ಭೋಜನದ ಮೆನುವಿನಲ್ಲಿ ಅಳವಡಿಸಬೇಕು. ಆಹಾರ ಧಾನ್ಯಗಳ ಸಂಗ್ರಹಣೆ, ಅಡುಗೆ ಮಾಡುವಾಗ ಹಾಗೂ ಬಡಿಸುವಾಗ ಸ್ವಚ್ಛತೆ ಮತ್ತು…
ತನಿಖಾ ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ಪ್ರೀತಿಸಿ ಮದುವೆ ಆಗಿದ್ದ ಗಂಡನನ್ನು ಬಿಟ್ಟು ಮಾಜಿ ಪ್ರಿಯಕರನ ಹಿಂದೆ ಬಿದ್ದವಳು ತನ್ನ ಪತಿಯನ್ನೇ ಹತ್ಯೆ ಮಾಡಿಸಿರುವ ಘಟನೆ ಕೊರಟಗೆರೆಯ ಮಲ್ಲೇಕಾವು ಗ್ರಾಮದಲ್ಲಿ ನಡೆದಿದೆ. ಪ್ರಕಾಶ್ (32) ಮೃತ ದುರ್ದೈವಿಯಾಗಿದ್ದಾನೆ. ಪ್ರಿಯಕರ ಗುಂಡನ ಹಿಂದೆ ಹೋದವಳ ಕಥೆಯಲ್ಲಿ ಪೊಲೀಸ್ ತನಿಖೆಯಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂರು ಜನ ಆರೋಪಿಗಳ ಮೇಲೆ ಪ್ರಥಮವಾಗಿ ಪ್ರಕರಣ ದಾಖಲಿಸಿದ್ದ ಕೊರಟಗೆರೆ ಪೊಲೀಸರು ತನಿಖೆ ವೇಳೆ ಬರೋಬ್ಬರಿ ಆರು ಜನ ಸೇರಿ ಪ್ರಕಾಶ್‍ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಾಲ್ಲೂಕಿನ ಕಸಬಾ ಹೋಬಳಿ ತುಂಬಾಡಿ-ಸಿದ್ದರಬೆಟ್ಟದ ಮಾರ್ಗದ ಕೆಪಿಟಿಸಿಎಲ್ ಘಟಕದ ಬಳಿ ಜು.28ರ ಭಾನುವಾರ ರಾತ್ರಿ 8 ಗಂಟೆಯ ವೇಳೆಯಲ್ಲಿ ಪ್ರಕಾಶನ ಹತ್ಯೆಯಾಗಿತ್ತು. ಘಟನೆಗೆ ಸಂಬಂಧ ತನಿಖೆ ಚುರುಕುಗೊಳಿಸಿದ ಕೊರಟಗೆರೆ ಪೊಲೀಸರು ಹೆಂಡತಿಯ ಪಾತ್ರದ ಜೊತೆ ಹಳೇ ಪ್ರೇಮಿಯ ಕೈವಾಡ ಸೇರಿ ಆರು ಜನ ಆರೋಪಿಗಳ ಕೈವಾಡ ಇರುವುದು ತಿಳಿದು ಬಂದಿದ್ದು, ಆರು ಜನರನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…
ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರಿಗೆ ವೃದ್ಧನೊಬ್ಬರ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಈ ಘಟನೆ ಉತ್ತರ ಪ್ರದೇಶದ ಬಿಸೋಲಿಯಲ್ಲಿ ನಡೆದಿದೆ ಎನ್ನಲಾಗಿದೆ. ಈ ಮುದುಕ ಯುವತಿಯೊಬ್ಬಳ ಕೂದಲನ್ನು ಮುಟ್ಟಲು, ಅದನ್ನು ಮುದ್ದಿಸಲು ಯತ್ನಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊದಲ್ಲಿ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು, ಅನೇಕರ ಗಮನವನ್ನು ಸೆಳೆದಿದೆ. ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ವಾಸನೆ ನೋಡಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜುಲೈ 31ರಂದು ಟ್ವಿಟ್ಟರ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಇದೀಗ ಈ ವಿಡಿಯೊ ವೈರಲ್ ಆಗಿದೆ. ವೃದ್ಧನ ವಿಚಿತ್ರ ವರ್ತನೆಗೆ ಸಾರ್ವಜನಿಕರು ಆಕ್ರೋಶ, ಅಚ್ಚರಿ ವ್ಯಕ್ತಪಡಿಸಿದ್ದಾರೆ. Incident from Uttar Pradesh Bisauli A old man h@rrassing a girl in Broad daylight pic.twitter.com/lxZiXTwJFG — Ghar…
ಲಕ್ನೋ: ರಸ್ತೆಯಲ್ಲಿ ಹರಿಯುತ್ತಿದ್ದ ನೀರು ಎರಚಿ ಮಹಿಳೆಗೆ ಕಿರುಕುಳ ನೀಡಿರುವ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಠಾಣೆಯೊಂದರ ಎಲ್ಲ ಸಿಬ್ಬಂದಿಯನ್ನೂ ಅಮಾನತುಗೊಳಿಸಿರುವ ಘಟನೆ ನಡೆದಿದೆ. ನೀರು ಹರಿಯುತ್ತಿದ್ದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಾ ಬಂದ ವ್ಯಕ್ತಿ ಹಾಗೂ ಮಹಿಳೆಯ ಮೇಲೆ ಪುಂಡರ ತಂಡವೊಂದು ನೀರು ಎರಚಿದ್ದು, ಬಳಿಕ ಮಹಿಳೆಯನ್ನು ಬೈಕ್ ನಿಂದ ಬೀಳಿಸಿ, ಅಸಭ್ಯವಾಗಿ ಸ್ಪರ್ಶಿಸಿ ಎಬ್ಬಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ವಿಧಾನ ಸಭೆಯಲ್ಲಿ ಉತ್ತರಿಸಿದ ಸಿಎಂ ಯೋಗಿ ಆದಿತ್ಯನಾಥ್, ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪವನ್ ಯಾದವ್, ಸುನಿಲ್ ಕುಮಾರ್ ಬಾರಿ, ಮೊಹಮ್ಮದ್ ಅರ್ಬಾಜ್, ವಿರಾಜ್ ಸಾಹು, ಅರ್ಜುನ್ ಅಗ್ರಿಹರಿ, ರತನ್ ಗುಪ್ತಾ, ಅಮನ್ ಗುಪ್ತಾ, ಅನಿಲ್ ಕುಮಾರ್, ಪಿಯಾನ್ಶು ಶರ್ಮಾ, ಆಶಿಶ್ ಸಿಂಗ್, ವಿಕಾಸ್ ಭಂಡಾರಿ, ಮನೀಶ್ ಕುಮಾರ್ ಸರೋಜ್, ಅಭಿಷೇಕ್ ತಿವಾರಿ, ಕೃಷ್ಣ ಕಾಂತ್…
ಬ್ಯಾಚುಲರ್ ಪಾರ್ಟಿ ಸಿನಿಮಾದ ಹಾಡಿನಲ್ಲಿ ಕಾಪಿರೈಟ್ಸ್ ಉಲ್ಲಂಘನೆ ಕೇಸ್ ಗೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟ ಇಂದು ಯಶವಂತಪುರ ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಹಾಜರಾದರು. ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ. ನನ್ನ ಪ್ರಕಾರ, ಕಾಪಿರೈಟ್ ಉಲ್ಲಂಘನೆ ಅಲ್ಲ. ಈ ಸಿನಿಮಾಗೂ ಮುನ್ನ ಆ ಹಾಡುಗಳನ್ನು ಬಳಸಲು ಅನುಮತಿಗಾಗಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ, ಹೆಚ್ಚಿನ ಮೊತ್ತ ಕೇಳಿದ್ದರು. ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಎನಿಸಲಿಲ್ಲ. ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಹೋಯಿತು. ಈ ಸಿನಿಮಾದ ರಿಲೀಸ್ ನಂತರ ಅವರು ಕೇಸ್ ಹಾಕಿದ್ದಾರೆ ಎಂದು ವಿವರಿಸಿದರು. ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ ಎಂದು ನಟ ಪ್ರಶ್ನಿಸಿದ್ದಾರೆ. ಕೊಟ್ಟಿರುವ ಕಂಪ್ಲೆಂಟ್‌ಗೆ ನಾನು ಕೂಡ ಕೋರ್ಟ್‌ನಲ್ಲಿ ಫೈಟ್ ಮಾಡ್ತೀನಿ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ…
ತಿಪಟೂರು: ಒಳಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನ ಸ್ವಾಗತಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಮಾದಿಗ ದಂಡೋರದಿಂದ ತುಮಕೂರು ಜಿಲ್ಲೆ ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೊಪ್ಪಶಾಂತಪ್ಪ, ಶೋಷಿತ ಸಮುದಾಯಗಳು ಸರ್ಕಾರದ ಮೀಸಲಾತಿ ಸವಲತ್ತುಗಳನ್ನ ಪಡೆಯಬೇಕು ಎಂದರೆ ಒಳಮೀಸಲಾತಿ ಜಾರಿಯಾಗಬೇಕು ಎಂದು ಕಳೆದ ಮೂರ್ನಾಲ್ಕು ದಶಕಗಳಿಂದ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳು ನಿರಂತರವಾಗಿ ಹೋರಾಟಮಾಡುತ್ತಾ ಬಂದಿದ್ದಾರೆ, ಹಲವಾರು ವರ್ಷಗಳ ನಿರಂತರ ಹೋರಾಟದಫಲವಾಗಿ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಒಳಮೀಸಲಾತಿ ಜಾರಿಗೊಳಿಸಿದರೂ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇದ್ದ ಕಾರಣ ಪೂರ್ಣಪ್ರಮಾಣದ ಮೀಸಲಾತಿ ಜಾರಿಯಾಗಿರಲ್ಲಿಲ್ಲ ಆದರೆ ಸರ್ವೋಚ್ಚ ನ್ಯಾಯಾಲಯದ 7 ಜನರ ನ್ಯಾಯಾಧೀಶರ ಪೂರ್ಣಪೀಠ, ಸಮಾಜದ ತುಳಿತಕೋಳಗಾದ ಜನಸಮುದಾಯಗಳಿಗೆ ನ್ಯಾಯಸಮ್ಮತ ತೀರ್ಪು ನೀಡಿರುವುದು, ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾದಿಗ ದಂಡೋರ…
ತುಮಕೂರು: ಮುಂಬೈಗೆ ತೆರಳುವ ಮಾರ್ಗ ಮಧ್ಯೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಚಿತ್ರನಟ ಧ್ರುವ ಸರ್ಜಾ ಭೇಟಿ ನೀಡಿ ಶ್ರೀ ಸಿದ್ದಲಿಂಗಸ್ವಾಮೀಜಿ ಅವರ ಆಶೀರ್ವಾದ ಪಡೆದರು. ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಧ್ರುವ ಸರ್ಜಾ ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಮುಂಬೈನಲ್ಲಿನ ಮರ‍್ಟಿನ್ ಚಿತ್ರದ ಟ್ರೈಲರ್ ಲಾಂಚಿಂಗ್ ಇವೆಂಟ್ ಗಾಗಿ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಸಿದ್ದಗಂಗಾ ಮಠಕ್ಕೆ ತಮ್ಮ ನೆಚ್ಚಿನ ನಟ ಆಗಮಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಅಭಿಮಾನಿಗಳು ದ್ರುವ ಸರ್ಜಾ ನೋಡಲು ಮುಗಿ ಬಿದ್ದರು. ಮಠದ ಆವರಣದಲ್ಲಿ ಜಮಾಯಿಸಿದ ಅಭಿಮಾನಿಗಳು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಭಾರೀ ನೂಕುನುಗ್ಗಲು ಉಂಟಾಯಿತು. ಧ್ರುವ ಅವರನ್ನು ನೋಡಿ ಕೇಕೆ ಹಾಕಿದ ಅಭಿಮಾನಿಗಳು ಸಂತಸಗೊಂಡರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296