Subscribe to Updates
Get the latest creative news from FooBar about art, design and business.
- ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ
- ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ
- ಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್ ಪಿ ಬಲ್ಲಪ್ಪ ನಂದಗಾಂವೆ ಸೂಚನೆ
- ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ
- ವಾಣಿಜ್ಯ ಬಳಕೆಗೆ ಗೃಹ ಬಳಕೆ ಸಿಲಿಂಡರ್ ಬಳಕೆ: 8 ವಶ
- ಸಿದ್ಧರಾಮಯ್ಯರ ‘ಅನ್ನಭಾಗ್ಯ’: ಎಷ್ಟೇ ಬರಗಾಲ ಬಂದರೂ ಊಟಕ್ಕೆ ತೊಂದರೆಯಾಗದು: ಕೆ.ಎನ್. ರಾಜಣ್ಣ
- ಸಮುದಾಯಗಳಿಗೆ ಸಮಾನತೆ ಕಲ್ಪಿಸಿದ್ದ ಬಸವಣ್ಣ: ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಡಾ.ಎನ್.ತಿಪ್ಪೇಸ್ವಾಮಿ
- ವಿಜ್ಞಾನ ಕಾಲೇಜಾಗಿ ಮೇಲ್ದರ್ಜೆಗೇರಿದ ಮೊರಾರ್ಜಿದೇಸಾಯಿ ವಸತಿ ಶಾಲೆ: ಶಾಸಕರು, ಎಂಎಲ್ಸಿ ಪ್ರಯತ್ನದಿಂದ ಬಡವನಹಳ್ಳಿಗೆ ಪ.ಪೂ.ಕಾಲೇಜು
Author: admin
ಸಾಮಾನ್ಯವಾಗಿ ಫೋನ್ ನೊಂದಿಗೆ ಬರುವ ಚಾರ್ಜರ್ ಗಳು ಕೆಲವು ದಿನಗಳ ನಂತರ ಹಾನಿಗೊಳಗಾಗುತ್ತವೆ. ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಚಾರ್ಜರ್ ಅನ್ನು ಖರೀದಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಮೂಲ ಕಂಪನಿಯ ಚಾರ್ಜರ್ ಗಳು ಹೆಚ್ಚು ದುಬಾರಿಯಾಗಿವೆ. ಇದು ಅವರನ್ನು ಕಡಿಮೆ ವೆಚ್ಚದ ಟ್ರಾವೆಲ್ ಚಾರ್ಜರ್ ಗಳನ್ನು ಖರೀದಿಸುವಂತೆ ಮಾಡುತ್ತದೆ. ಆದಾಗ್ಯೂ, ಇವು ನಿಮ್ಮ ಸ್ಮಾರ್ಟ್ಫೋನ್ ಅನ್ನು ಹಾನಿಗೊಳಿಸಬಹುದು. ಬೆರಳಿನಿಂದ ಖರೀದಿಸಿದ ಸ್ಮಾರ್ಟ್ಫೋನ್ ನೂರಾರು ರೂಪಾಯಿಗಳ ಚಾರ್ಜರ್ಗಳಿಂದಾಗಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ನಕಲಿ ಚಾರ್ಜರ್ ಗಳು ಸಹ ಮಾರುಕಟ್ಟೆಯಲ್ಲಿ ಹೆಚ್ಚುತ್ತಿವೆ. ನೀವು ಬಳಸುತ್ತಿರುವ ಚಾರ್ಜರ್ ಅಸಲಿಯೇ ಅಥವಾ ಅಲ್ಲವೇ ಎಂದು ಕಂಡುಹಿಡಿಯಲು ಲಭ್ಯವಿರುವ ಕೆಲವು ಸಲಹೆಗಳು ಇಲ್ಲಿವೆ. ಅವು ಯಾವುವು ಎಂದು ಈಗ ಕಂಡುಹಿಡಿಯೋಣ.. * ಚಾರ್ಜರ್ ನ ಹಿಂಭಾಗದಲ್ಲಿ ಡಬಲ್ ಸ್ಕ್ವೇರ್ ಚಿಹ್ನೆ ಇದ್ದರೆ. ಇದರರ್ಥ ಮೊಬೈಲ್ ಚಾರ್ಜರ್ ಒಳಗೆ ಬಳಸುವ ವೈರಿಂಗ್ ಡಬಲ್ ಇನ್ಸುಲೇಟೆಡ್ ಆಗಿದೆ. ಈ ಚಾರ್ಜರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಈ ಚಾರ್ಜರ್ ಅನ್ನು…
ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಗುಂಪು ವಿಭಾಗದಲ್ಲಿ ಖೋ ಖೋ ಕ್ರೀಡೆಯಲ್ಲಿ ಬಾಲಕ ಮತ್ತು ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿವೆ. ಅಲ್ಲದೇ ವೈಯುಕ್ತಿಕ ವಿಭಾಗದಲ್ಲಿ400 ಮೀ. ಓಟದಲ್ಲಿ ಶಿವಮ್ಮ ಪ್ರಥಮ ಸ್ಥಾನ,100 ಮೀ. ಮತ್ತು 200 ಮೀ ಓಟದಲ್ಲಿ ಸತೀಶ್ ದ್ವಿತೀಯ ಸ್ಥಾನ, 800 ಮೀ. ಓಟದಲ್ಲಿ ಶಾಲಿನಿ ಪ್ರಥಮ ಸ್ಥಾನ,1500 ಮೀ. ಓಟದಲ್ಲಿ ಅನಿತಲಕ್ಷ್ಮೀ ಪ್ರಥಮ ಸ್ಥಾನ ಮತ್ತು 3000 ಮೀ. ಓಟದಲ್ಲಿ ಪೂರ್ಣಿಮಾ ದ್ವಿತೀಯ ಸ್ಥಾನಗಳನ್ನು ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಎಸ್.ಡಿ.ಎಂ.ಸಿ. ಅದ್ಯಕ್ಷರು, ಸರ್ವ ಸದಸ್ಯರು ಅರಸೀಕೆರೆಯ ಗ್ರಾಮಸ್ಥರು ಕ್ರೀಡೆಯಲ್ಲಿ ಗೆದ್ದ ಎಲ್ಲರಿಗೂ ಮತ್ತು ಕ್ರೀಡಾ ತರಬೇತುದಾರ ರಾದ ವಿಮಲಾರವರಿಗೆ, ತರಬೇತಿ ನೀಡಿದ ರಾಜಶೇಖರಯ್ಯ, ಸೋಮನಾಥ,ತ್ರಿಶೂಲ್ ಮತ್ತು ಇತರರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಬೀದರ್: ಕಮಲನಗರ ತಾಲೂಕಿನ ಬಸನಾಳ–ಕೋರಿಯಾಳ ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಸ್ವಲ್ಪ ಮಳೆಯಾದರೆ ಸಾಕು ಕೆಸರು ಗದ್ದೆಯಂತಾಗುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ʼಸುಮಾರು 2–3 ಕಿ.ಮೀ ಇರುವ ಈ ರಸ್ತೆಯಲ್ಲಿ ತಗ್ಗು, ಗುಂಡಿಗಳೇ ತುಂಬಿಕೊಂಡಿವೆ. ರಸ್ತೆಯಲ್ಲಿ ಡಾಂಬರ್ ಎಂಬುದು ಮಾಯವಾಗಿ ಬರೀ ಕೆಸರು ತುಂಬಿಕೊಂಡಿದೆ. ರಸ್ತೆ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ದ್ವಿಚಕ್ರ ವಾಹನ ಸವಾರರ ಪರದಾಟ ಹೇಳತೀರದುʼ ಎಂಬುದು ಪ್ರಯಾಣಿಕರ ಅಭಿಪ್ರಾಯ.ಭಾಲ್ಕಿಯಿಂದ ದಿನಕ್ಕೆ ಒಂದು ಸಲ ಬರುವ ಸಾರಿಗೆ ಬಸ್ ಕೂಡ ರಸ್ತೆ ಸಮಸ್ಯೆ ಕಾರಣಕ್ಕೆ ಕೆಲ ದಿನಗಳಿಂದ ಬರುತ್ತಿಲ್ಲ. ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸುತ್ತಲಿನ ಗ್ರಾಮಗಳ ರೈತರು, ಪ್ರಯಾಣಿಕರು ಸಕಾಲಕ್ಕೆ ತಲುಪದೇ ಸಮಸ್ಯೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಬಸನಾಳ ಗ್ರಾಮದ ನಿವಾಸಿ ಸದಾನಂದ ಪಾಟೀಲ್ ಆಗ್ರಹಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ…
ದೇಶದ ಆಯ್ದ ನಗರಗಳಲ್ಲಿ ಬಿಎಸ್ ಎನ್ ಎಲ್ ತನ್ನ 5ಜಿ ಸಿಮ್ ಬಿಡುಗಡೆಗೊಳಿಸಿದೆ. ಮುಂಬರುವ ದಿನಗಳಲ್ಲಿ ನೆಟ್ ವರ್ಕ್ ಅಪ್‌ಡೇಟ್ ಮಾಡುವ ಮಹತ್ತರ ಯೋಜನೆ ಹೊಂದಿರುವುದಾಗಿ ತಿಳಿಸಿದೆ. ಸದ್ಯ ಆಂಧ್ರ, ತೆಲಂಗಾಣ, ಕೇರಳದಲ್ಲಿ ಈ ಸಿಮ್ ಲಭ್ಯವಿದೆ. ಇಂಟರ್ ನೆಟ್ ಸ್ಪೀಡ್ ಹೆಚ್ಚಿಸಲು ತೀರ್ಮಾನಿಸಿದೆ. ಈ ಭಾಗದ ಜನರಿಗೆ ಅಧಿಕೃತ ಬಿಎಸ್ ಎನ್ ಎಲ್ ಸಿಮ್ ಮಾರಾಟ ಮಾಡುವವರ ಬಳಿ ಸಿಮ್ ಲಭ್ಯವಿದ್ದು, ಹಳೆ ಸಿಮ್ ಗಳನ್ನು 5ಜಿಗೆ ಬದಲಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಹೊಸ 5ಜಿ ಸಿಮ್ ವಿಶಿಷ್ಟ ಮಾದರಿಯಲ್ಲಿದ್ದು, 5ಜಿ ಎಂದು ತ್ರಿವರ್ಣದಲ್ಲಿ ಬರೆದಿದೆ. ಸಂಪೂರ್ಣವಾಗಿ 5ಜಿ ರೂಪಾಂತರಗೊಂಡ ಬಳಿಕ, ಹೊಸ ಸಿಮ್ ಅಗತ್ಯವಿಲ್ಲದೇ ಹಳೆ ಸಿಮ್ ಮೂಲಕವೇ 5ಜಿ ಸೌಲಭ್ಯ ಪಡೆಯಬಹುದು ಎಂದಿದೆ. ಕೇಂದ್ರ ಸರ್ಕಾರದ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್ ಮೂಲಕ ವೀಡಿಯೊವೊಂದರನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು 5 ಜಿ ನೆಟ್ವರ್ಕ್ ಮೂಲಕ ವೀಡಿಯೊ ಕಾಲ್ ಮಾಡಿದ್ದಾರೆ.…
ಬೆಂಗಳೂರು: ವಯನಾಡಿನಲ್ಲಿ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ಕರ್ನಾಟಕ ಸರ್ಕಾರ ನಿಂತಿದೆ. ಮಾನವೀಯ ನೆಲೆಯಲ್ಲಿ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಮನೆ ನಿರ್ಮಾಣ ಮಾಡಿಕೊಡಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ ಎಂದು ಹೇಳಿದ್ದಾರೆ. ವಯನಾಡಿನ ಚೂರಲ್ಮಾಲ, ಮುಂಡಕ್ಕೈ ಹಾಗೂ ಅಟ್ಟಮಾಲ ಊರುಗಳು ಗುರುತು ಸಿಗದಂತೆ ಅಳಿದು ಹೋಗಿದೆ. ಸಾವನ್ನಪ್ಪಿದವರಿಗಾಗಿ ಇನ್ನೂ ಹುಡುಕಾಟ ನಡೆಯುತ್ತಲೇ ಇದೆ. ರಕ್ಷಣಾ ಕಾರ್ಯಾಚರಣೆಯೂ ಮುಂದುವರಿದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನವದೆಹಲಿ: ಇತಿಹಾಸವನ್ನು ಮರೆಮಾಚಲು ರಾಮನ ಅಸ್ತಿತ್ವದ ಬಗ್ಗೆ ಮಾತನಾಡುತ್ತಾರೆ, ಭಗವಾನ್ ರಾಮ ಅಸ್ತಿತ್ವದಲ್ಲಿದ್ದನೆಂದು ಹೇಳಲು ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ತಮಿಳುನಾಡು ಸಚಿವ ಮತ್ತು ಡಿಎಂಕೆ ಮುಖಂಡ ಎಸ್.ಎಸ್.ಶಿವಶಂಕರ್ ಹೇಳಿದ್ದಾರೆ. ಅರಿಯಲೂರು ಜಿಲ್ಲೆಯ ಗಂಗೈಕೊಂಡಚೋಳಪುರಂನಲ್ಲಿ ರಾಜೇಂದ್ರ ಚೋಳ ಅವರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್.ಶಿವಶಂಕರ್ ಈ ಹೇಳಿಕೆ ನೀಡಿದ್ದು, ಇದೀಗ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ರಾಜೇಂದ್ರ ಚೋಳ (ಚೋಳ ರಾಜವಂಶದ ಒಂದನೇ ರಾಜೇಂದ್ರ) ಅವರ ಪರಂಪರೆಯನ್ನು ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾವು ಚೋಳ ರಾಜವಂಶದ ಚಕ್ರವರ್ತಿ ರಾಜೇಂದ್ರ ಚೋಳನ ಜನ್ಮದಿನವನ್ನು ಆಚರಿಸುತ್ತೇವೆ, ಏಕೆಂದರೆ ಶಾಸನಗಳು, ಅವನು ನಿರ್ಮಿಸಿದ ದೇವಾಲಯಗಳು ಮತ್ತು ಅವನು ನಿರ್ಮಿಸಿದ ಸರೋವರದಂತಹ ಪುರಾತತ್ವ ಪುರಾವೆಗಳು ನಮ್ಮಲ್ಲಿವೆ. ಆದರೆ, ಭಗವಾನ್ ರಾಮನ ಇತಿಹಾಸವನ್ನು ಪತ್ತೆಹಚ್ಚಲು ಯಾವುದೇ ಪುರಾವೆಗಳಿಲ್ಲ ಎಂದು ಅವರು ಹೇಳಿದರು. ನಮ್ಮನ್ನು ತಿರುಚಲು, ನಮ್ಮ ಇತಿಹಾಸವನ್ನು ಮರೆಮಾಚಲು ಭಗವಾನ್ ರಾಮನು 3,000 ವರ್ಷಗಳ ಹಿಂದೆ ವಾಸಿಸುತ್ತಿದ್ದನೆಂದು ಅವರು ಹೇಳುತ್ತಾರೆ ಎಂದು ಅವರು ಹೇಳಿದರು. ನಮ್ಮತುಮಕೂರಿನ…
ಬೀದರ್: ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಒಡೆದು ಹೋಗಿದ್ದ ಬಸವಕಲ್ಯಾಣ ತಾಲೂಕಿನ ಕೋಹಿನೂರ್, ಅಟ್ಟೂರ್ ಗ್ರಾಮಗಳ ಹಳೆ ಕೆರೆಗಳ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ 3.85 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಬೀದರ್ ಸಂಸದ ಸಾಗರ್ ಖಂಡ್ರೆ ಹೇಳಿದ್ದಾರೆ. ಕೆರೆ ಒಡೆದ ಪರಿಣಾಮ ಸುತ್ತಲಿನ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತು ತಮ್ಮ ʼಎಕ್ಸ್ʼ ಖಾತೆಯಲ್ಲಿ ʼಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಬಸವಕಲ್ಯಾಣ ತಾಲೂಕಿನ ಕೊಹಿನೂರ, ಅಟ್ಟೂರ್ ಗ್ರಾಮಗಳ ಹಳೆ ಕೆರೆಗಳು ಒಡೆದು ಹೋಗಿದ್ದವು. ಅಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕೆರೆಗಳ ಪುನರುಜ್ಜೀವನಕ್ಕೆ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದೆ. ಕೊಟ್ಟ ಭರವಸೆ ಅಂತೆ ಕೊಹಿನೂರ, ಅಟ್ಟೂರ್ ಕೆರೆಗಳ ಪುನರುಜ್ಜೀವನಕ್ಕೆ ಕರ್ನಾಟಕ ಸರ್ಕಾರ 3.85 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆʼ ಎಂದು ಹಂಚಿಕೊಂಡಿದ್ದಾರೆ. ಕೆರೆಗಳ ಪುನರುಜ್ಜೀವನಕ್ಕೆ ಅನುದಾನ ಬಿಡುಗಡೆ…
ತುಮಕೂರು: ತುಮಕೂರಿನಿಂದ ಬೆಂಗಳೂರು ನಗರಕ್ಕೆ ಸಂಚರಿಸುವ ರೈಲಿಗೆ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ವಿಶೇಷವಾಗಿ ರೈಲಿನ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಹತ್ತು ವರ್ಷಗಳ ಹಿಂದೆ ತುಮಕೂರಿನಿಂದ ಬೆಂಗಳೂರಿಗೆ ತೆರಳಲು ರೈಲನ್ನು ವ್ಯವಸ್ಥೆ ಮಾಡಲಾಗಿತ್ತು. ರೈಲಿಗೆ ವಿಶೇಷವಾಗಿ ಪ್ರಯಾಣಿಕರು ಪೂಜೆ ಸಲ್ಲಿಸುತ್ತಿದ್ದರು. ಅಂದಿನಿಂದ ಪ್ರತಿ ವರ್ಷ ರೈಲಿನ ಹುಟ್ಟುಹಬ್ಬವನ್ನೇ ಆಚರಣೆ ಮಾಡಿಕೊಂಡು ಪ್ರಯಾಣಿಕರು ಬರುತ್ತಿದ್ದಾರೆ. ಅದರಂತೆ ಇಂದು ಕೂಡ 10ನೇ ವರ್ಷದ ರೈಲಿನ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ರೈಲಿಗೆ ಹಸಿರು ತಳಿರು ತೋರಣ ಹಾಗೂ ಹೂವನ್ನು ಕಟ್ಟಿ ಸಿಂಗರಿಸಲಾಗಿತ್ತು. ಅಲ್ಲದೆ ಪುರೋಹಿತರು ಬಂದು ರೈಲಿಗೆ ಆರತಿ ಬೆಳಗಿದರು. ಇದೆ ವೇಳೆ ಕೇಕ್ ಅನ್ನು ಕತ್ತರಿಸಿ ಸ್ಥಳದಲ್ಲಿದ್ದ ಪ್ರಯಾಣಿಕರಿಗೆ ಸಿಹಿಯನ್ನು ಹಂಚಲಾಯಿತು. ನಿತ್ಯ ಸಾವಿರಾರು ಮಂದಿ ತುಮಕೂರಿನಿಂದ ಬೆಂಗಳೂರಿಗೆ ಕೆಲಸ ಅರಸಿ ತೆರಳುತ್ತಾರೆ. ಈ ರೈಲಿನ ಸಂಪರ್ಕ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂಬ ಅಭಿಮಾನದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಬೆಂಗಳೂರು: ಮೂಡಾ ಹಗರಣ ಮುಂದಿಟ್ಟುಕೊಂಡು ಬಿಜೆಪಿ–ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೆ ತಿರುಗೇಟು ನೀಡಲು ಸಿಎಂ ಸಿದ್ದರಾಮಯ್ಯ ತಂತ್ರ ಹೆಣೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ತಮ್ಮ ನಿವಾಸದಲ್ಲಿಂದು ಚಾಮರಾಜನಗರ, ಮಡಿಕೇರಿ ಮತ್ತು ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜೊತೆ ಉಪಹಾರ ಕೂಟ ನಡೆಸಿ ಪ್ರಸಕ್ತ ರಾಜಕೀಯ ಬೆಳವಣಿಗೆಯ ಬಗ್ಗೆ ಸಮಾಲೋಚನೆ ನಡೆಸಿದರು. ಬಿಜೆಪಿ –ಜೆಡಿಎಸ್ ಪಾದಯಾತ್ರೆಗೆ ಪ್ರತಿಯಾಗಿ ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ. ಈಗಾಗಲೇ ಬಿಡದಿ, ರಾಮನಗರದಲ್ಲಿ ಎರಡು ದಿನ ಕಾಂಗ್ರೆಸ್ ಸಮಾವೇಶ ನಡೆದಿದೆ. ಆ.9 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಅದಕ್ಕೆ ಸುಮಾರು ಒಂದು ಲಕ್ಷ ಜನ ಸಮಾವೇಶಗೊಳ್ಳಬೇಕು. ಬಿಜೆಪಿ–ಜೆಡಿಎಸ್ನ ಪಾದಯಾತ್ರೆಗೆ ಪ್ರತಿಯಾಗಿ ಈ ಎರಡೂ ಪಕ್ಷಗಳ ನಾಯಕರ ಹಗರಣಗಳನ್ನು ಜನರ ಮುಂದಿಡಬೇಕು ಎಂಬ ಚರ್ಚೆಗಳಾಗಿವೆ ಎಂದು ಹೇಳಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಶಿವಮೊಗ್ಗ : ಭ್ರಷ್ಟಾಚಾರದಲ್ಲಿ ‘ರ್‍ಯಾಂಕ್’ ಕೊಟ್ಟರೆ ಬಿವೈ ವಿಜಯೇಂದ್ರನೇ ನಂಬರ್ ಒನ್ ಸ್ಥಾನ ಪಡೆಯಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಕೆಂಗೇರಿಯಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಮೈಸೂರು ಜಿಲ್ಲಾ ಪಾದಯಾತ್ರೆಗೆ ಚಾಲನೆ ನೀಡಿದರು. ಈ ವಿಚಾರಕ್ಕ ಪ್ರತಿಕ್ರಿಯಿಸಿದ ಅವರು, ಹಿಂದುಳಿದ ವರ್ಗದ ನಾಯಕನನ್ನು ತುಳಿಸುವ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿ ಬಿಜೆಪಿ—ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೆಹಲಿ ಸಿಎಂ ಕೇಜ್ರಿವಾಲ್ ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿತ್ತು. ಕೇಜ್ರಿವಾಲ್ ಈಗ ಜೈಲಿನಲ್ಲಿ ಇದ್ದಾರೆ. ಆದರೂ ಒಳ್ಳೆಯ ಆಡಳಿತ ನಡೆಯುತ್ತಿದೆ. ಜೈಲಿಗೆ ಕಳುಹಿಸುವುದು ಅಂದರೆ ಬಿಜೆಪಿಯವರಿಗೆ ಬಹಳ ಖುಷಿ. ವಿಜಯೇಂದ್ರ ಬಗ್ಗೆ ಶಾಸಕ ಯತ್ನಾಳ್ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ನಾಯಿ ತರಹ ಬೈಯುತ್ತಿದ್ದಾರೆ. ಅದರ ಬಗ್ಗೆ ನಾಚಿಕೆ ಇಲ್ವಾ? ಎಂದು ಬಂಗಾರಪ್ಪ ಕಿಡಿಕಾರಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…