Author: admin

ತುಮಕೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಕೆಎಸ್ಆರ್ ಟಿಸಿ ಬಸ್ ಗೆ ಸಿಲುಕಿ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ತುಮಕೂರು ನಗರದ ಚೇತನ ಬಡಾವಣೆ ನಿವಾಸಿ ಚಂದ್ರಶೇಖರ್ (49) ಮೃತ ದುರ್ದೈವಿಯಾಗಿದ್ದಾರೆ. ಬಟವಾಡಿ ಕಡೆಯಿಂದ ಮಹಾತ್ಮ ಗಾಂಧಿ ಸ್ಟೇಡಿಯಂ ಕಡೆಗೆ ಹೋಗ್ತಿದ್ದ ಚಂದ್ರಶೇಖರ್,  ಈ ವೇಳೆ ಬಸ್ ನೇರವಾಗಿ ಬಂದು ಡಿಕ್ಕಿ ಹೊಡೆದಿದೆ. ಬಸ್ ನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಚಂದ್ರಶೇಖರ್ ರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಜಿಲ್ಲೆಯಲ್ಲೇ ನಿರ್ಮಾಣವಾಗ್ತಿದೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸುಮಾರು 25 ಎಕರೆ ಜಾಗ ಈಗಾಗಲೇ ಸರ್ಕಾರ ಮೀಸಲಿಟ್ಟಿದೆ. ಸುಮಾರು 150 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ.  ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇಂಜಿನಿಯರ್ ಗಳು ಸ್ಥಳ ವೀಕ್ಷಣೆ ನಡೆಸಿದ್ದಾರೆ. ಬಳಿಕ ಟಿ.ಬಿ.ಜಯಚಂದ್ರ ಜೊತೆ ಮಾತುಕತೆ ನಡೆಸಿದ ಅಧಿಕಾರಿಗಳ ವರ್ಗದ ಜೊತೆಗೆ  ಮೂಲಭೂತ ಸೌಕರ್ಯಗಳ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಶಿರಾ ಶಾಸಕ ಟಿ.ಬಿ.ಜಯಚಂದ್ರ  ಸ್ವತಃ ಫೇಸ್ ಬುಕ್ ಫೇಜ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಾವಗಡ: ತಾಲೂಕಿನ ಕೊತ್ತೂರು ಸಮೀಪದ ಸಾಕಮ್ಮನಗುಡ್ಡದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಅರಸೀಕೆರೆ ಠಾಣೆಯ ಪೊಲೀಸರು ದಾಳಿ ನಡೆಸಿ ಬರೋಬ್ಬರಿ 2,22,290 ಹಣ ಒಂಬತ್ತು ಜನ ಆರೋಪಿಗಳನ್ನು ಹಾಗೂ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ, ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಗಿರೀಶ್  ಅವರ ನೇತೃತ್ವದಲ್ಲಿ ಪಿಎಸ್ ಐ ತಾರಸಿಂಗ್ ಮತ್ತು ಪೊಲೀಸ್ ಪೇದೆಗಳಾದ ಸೌಕತ್, ಕೃಷ್ಣ, ಧಾವಲ್, ಸಂದೇಶರ ತಂಡ ದಾಳಿ ನಡೆಸಿದ್ದು, ಈ ಸಂಬಂಧ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಗಳನ್ನು ಅರಸೀಕೆರೆ ಪೊಲೀಸ್ ಠಾಣೆಯ ಪೊಲೀಸರು ಕೈಗೊಂಡಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/JItjEWZ9e5fBWDL6CkTr97

Read More

ತುಮಕೂರು: ವಯನಾಡಿನ ದುರಂತ ಕಂಡು ಆ್ಯಂಬುಲೆನ್ಸ್ ಚಾಲಕರು ಕರಗಿದ್ದು,  ಅಗತ್ಯ ಸಾಮಗ್ರಿಗಳೊಂದಿಗೆ ಆ್ಯಂಬುಲೆನ್ಸ್  ಚಾಲಕರು ತೆರಳಿದ್ದಾರೆ. ತುಮಕೂರಿನ ಆ್ಯಂಬುಲೆನ್ಸ್ ಚಾಲಕರು ಮತ್ತು ಮಾಲಿಕರ ಸಂಘದಿಂದ ವಯನಾಡ್ ಸಂತ್ರಸ್ತರಿಗೆ ಸಹಾಯ ಹಸ್ತಚಾಚಲಾಯಿತು. ಎರಡು ಆ್ಯಂಬುಲೆನ್ಸ್ ಗಳಲ್ಲಿ ವಯನಾಡ್ ಗೆ 10 ಮಂದಿ ಚಾಲಕರು ತೆರಳಿದರು. ಮಕ್ಕಳು, ಮಹಿಳೆಯರು ಸೇರಿದಂತೆ ಪ್ರವಾಹ ಸಂತ್ರಸ್ಥರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಹೊತ್ತು,  ತುಮಕೂರಿನ ಆ್ಯಂಬುಲೆನ್ಸ್ ಚಾಲಕರು ವಯನಾಡ್ ಗೆ ತೆರಳಿದರು. ದಾನಿಗಳಿಂದ ಹಾಗೂ ತಮ್ಮ ಕೈಲಾದ ಹಣ ಹೊಂದಿಸಿ ಸಹಾಯ ನೀಡಿದ್ದು, ಪ್ರವಾಹ ಸಂತ್ರಸ್ತರಿಗೆ ಬೇಕಾದ ಬಟ್ಟೆ, ಆಹಾರ, ನೀರು ಸೇರಿದಂತೆ ಔಷಧಿಗಳನ್ನು ತೆಗೆದುಕೊಂಡು ಪ್ರಯಾಣ ಬೆಳೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸ್ನೇಹಿತರ ದಿನಾಚರಣೆ ( ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಡೇ ಅಥವಾ ಫ್ರೆಂಡ್ಸ್ ಡೇ ಎಂದೂ ಸಹ ಕರೆಯಲಾಗುತ್ತದೆ ) ಹಲವಾರು ದೇಶಗಳಲ್ಲಿ ಸ್ನೇಹವನ್ನು ಆಚರಿಸುವ ದಿನವಾಗಿದೆ . ಇದನ್ನು ಆರಂಭದಲ್ಲಿ ಗ್ರೀಟಿಂಗ್ ಕಾರ್ಡ್ ಉದ್ಯಮದಿಂದ ಪ್ರಚಾರ ಮಾಡಲಾಯಿತು. ಹಾಲ್ಮಾರ್ಕ್ ಕಾರ್ಡ್ಸ್ನ ಸ್ಥಾಪಕ ಜಾಯ್ಸ್ ಹಾಲ್ 1950 ರ ದಶಕದಲ್ಲಿ ಸ್ನೇಹವನ್ನು ಗೌರವಿಸಲು ಮೀಸಲಾದ ದಿನದ ಕಲ್ಪನೆಯನ್ನು ಮೊದಲು ಉತ್ತೇಜಿಸಿದಾಗ ಇದು ಮೊದಲು ಹುಟ್ಟಿಕೊಂಡಿತು. ಈ ಪರಿಕಲ್ಪನೆಯು ಶೀಘ್ರದಲ್ಲೇ ಯುಎಸ್ನಲ್ಲಿ ಸ್ಥಳೀಯರಲ್ಲಿ ಜನಪ್ರಿಯತೆಯನ್ನು ಗಳಿಸಿತು. ನಂತರ, ಇದು ಅಂತರರಾಷ್ಟ್ರೀಯವಾಗಿ ಹರಡಿತು, ಮತ್ತು 2011 ರಲ್ಲಿ, ವಿಶ್ವಸಂಸ್ಥೆ ಇದನ್ನು ಗುರುತಿಸಿತು. ಗ್ಲೋಬಲ್ ಫ್ರೆಂಡ್ಶಿಪ್ ಡೇ ಕಲ್ಪನೆಯನ್ನು ಮೊದಲ ಬಾರಿಗೆ 20 ಜುಲೈ 1958 ರಂದು ಡಾ. ರಾಮನ್ ಆರ್ಟೆಮಿಯೊ ಬ್ರಾಕೊ ಅವರು ಪರಾಗ್ವೆಯ ಅಸುನ್ಸಿಯಾನ್ನಿಂದ ಉತ್ತರಕ್ಕೆ 200 ಮೈಲಿಗಳು (320 ಕಿಮೀ) ಪರಾಗ್ವೆ ನದಿಯ ಪರಾಗ್ವೆಯ ಪಟ್ಟಣವಾದ ಪೋರ್ಟೊ ಪಿನಾಸ್ಕೋದಲ್ಲಿ ಸ್ನೇಹಿತರೊಂದಿಗೆ ಭೋಜನದ ಸಮಯದಲ್ಲಿ ಪ್ರಸ್ತಾಪಿಸಿದರು . ಈ ಸಭೆಯಲ್ಲಿ ವಿಶ್ವ ಸೌಹಾರ್ದ ಹೋರಾಟ ಹುಟ್ಟಿಕೊಂಡಿತು.…

Read More

ಶ್ರಾವಣ ಮಾಸ ಅಂದ್ರೆ ಮಳೆಯಾಗುವ ಸಮಯ. ತಂಪಾದ ಗಾಳಿ ಮತ್ತು ಮಳೆಯು ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ ವಾತಾವರಣ ಹೆಚ್ಚು  ಆರ್ದ್ರತೆಯಿಂದ ಕೂಡಿರುತ್ತದೆ. ಹೀಗಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ ಗಳು ಈ ವಾತಾವರಣದಲ್ಲಿ ಬೇಗ ಬೆಳೆಯುತ್ತವೆ. ಹೀಗಾಗಿ ಇದು ಸೋಂಕು, ಫುಡ್‌ ಪಾಯ್ಸನ್‌, ಅತಿಸಾರ ಮತ್ತು ಅಜೀರ್ಣದಂತಹ ಸಾಮಾನ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಆರ್ದ್ರತೆಯು ಜೀರ್ಣಕ್ರಿಯೆಯ (Digestion) ಮೇಲೆ ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರಿ ಆಹಾರಗಳು ಮತ್ತು ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಹಿಂದೂ ಸಂಪ್ರದಾಯದ (Hindu religion) ಪ್ರಕಾರ, ಪ್ರಾಣಿಗಳ ಸಂತಾನವೃದ್ಧಿ ಕಾಲದಲ್ಲಿ ಅವುಗಳನ್ನು ಕೊಲ್ಲುವುದು ಪಾಪವೆಂದು ಪರಿಗಣಿಸಲಾಗುತ್ತದೆ. ಮಾನ್ಸೂನ್ ಅನೇಕ ಪ್ರಾಣಿಗಳಿಗೆ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ, ಈ ಅವಧಿಯಲ್ಲಿ ಮಾಂಸಾಹಾರಿ ಮತ್ತು ಮೊಟ್ಟೆಗಳನ್ನು ತಪ್ಪಿಸಲು ಸೂಚಿಸಲಾಗುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಸಸ್ಯಾಹಾರಕ್ಕೆ ಹೋಲಿಸಿದರೆ ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅಜೀರ್ಣವಾಗಿ ಮಾಂಸಾಹಾರವು ಕರುಳಿನ ಮೇಲೆ ಪರಿಣಾಮ ಬೀರಬಹುದು. ಆರೋಗ್ಯ…

Read More

ವೀರಪ್ಪನ್, ರಾಜ್​ಕುಮಾರ್ ಅವರನ್ನು ಅಪಹರಿಸಿ 24 ವರ್ಷಗಳಾದವು. ಅಂದಹಾಗೆ ವೀರಪ್ಪನ್, ರಾಜ್ ​ಕುಮಾರ್ ಅವರನ್ನೇ ಅಪಹರಣ ಮಾಡಿದ್ದು ಏಕೆ? ಮಹಾದಡ್ಡನಾಗಿದ್ದ ವೀರಪ್ಪನ್ ​ಗೆ ರಾಜ್​ ಕುಮಾರ್ ಅವರನ್ನು ಅಪಹರಣ ಮಾಡುವಂತೆ ಐಡಿಯಾ ಕೊಟ್ಟಿದ್ದು ಯಾರು? 24 ವರ್ಷದ ಹಿಂದೆ ಇದೇ ಭೀಮನ ಅಮವಾಸ್ಯೆ ದಿನವೇ ರಾಜ್​ಕುಮಾರ್ ಅಪಹರಣವಾಗಿತ್ತು. ಅಷ್ಟಕ್ಕೂ ರಾಜ್​ಕುಮಾರ್ ಅವರನ್ನೇ ಅಪಹರಣ ಮಾಡಬೇಕು ಎಂಬ ಐಡಿಯಾ ವೀರಪ್ಪನ್​ಗೆ ಬಂದಿದ್ದು ಹೇಗೆ? ಅಸಲಿಗೆ ವೀರಪ್ಪನ್, ಕಾಡಿನಲ್ಲಿ ಕುಕೃತ್ಯಗಳನ್ನು 1980ರಲ್ಲಿಯೇ ಪ್ರಾರಂಭ ಮಾಡಿದ ಆದರೆ 1990ರ ದಶಕದ ಅಂತ್ಯದ ವೇಳೆಗೆ ಪೊಲೀಸ್, ಅರಣ್ಯ ಇಲಾಖೆಯವರ ಶಿಸ್ತಿನ ಕಾರ್ಯಾಚರಣೆಗಳಿಂದ ಗಂಧದ ಕಳ್ಳಸಾಗಣೆ, ಆನೆದಂತದ ವ್ಯಾಪಾರಗಳು ಕ್ಷೀಣಿಸಿದ್ದವು. ಎಸ್​ಐಟಿ ಅಧಿಕಾರಿ ಕೆ ವಿಜಯ್ ಕುಮಾರ್ ಹೇಳುವಂತೆ 1995 ರಿಂದ ಆಚೆಗೆ ವೀರಪ್ಪನ್ ಬಳಿ ಹಣವೇ ಇರಲಿಲ್ಲವಂತೆ. ತೀರ ಸಣ್ಣ ಪುಟ್ಟ ಹಣಕ್ಕೂ ಕಾಡಿನಲ್ಲಿ ದರೋಡೆಗಳನ್ನು ಮಾಡಲು ಪ್ರಾರಂಭಿಸಿದ್ದನಂತೆ ವೀರಪ್ಪನ್. ಒಂದು ಬಾರಿಯಂತೂ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೂ ಸಹ ಅಡವಿಟ್ಟು ಹಣ ಪಡೆದಿದ್ದನಂತೆ. ಅದೇ ಸಮದಯಲ್ಲಿ…

Read More

ಔರಾದ್: ಕ್ರೂಸರ್ ಗೆ ದಾರಿಕೊಡಲು ಹೋದ ವೇಳೆ ನಿಯಂತ್ರಣ ತಪ್ಪಿದ ಕಲ್ಯಾಣ ಕನಾ೯ಟಕ ಸಾರಿಗೆ ನಿಗಮದ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ವಡಗಾಂವ (ದೇ) -ಬೇಲೂರ ನಡುವೆ ನಡೆದಿದೆ. ಬೀದರ್ ನಿಂದ ಔರಾದ ತಾಲೂಕಿನ ಕರಂಜಿ ಕಡೆಗೆ  ತೆರಳಿತ್ತಿದ್ದ ವೇಳೆ ಕಿರಿದಾದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆ ವೇಳೆ 32 ಪ್ರಯಾಣಿಕರು ಬಸ್ ನಲ್ಲಿದ್ದರು. ಯಾರಿಗೂ ಪ್ರಾಣಪಾಯವಾಗಿಲ್ಲ ಎಂದು ಚಾಲಕ ಎಡಿಸನ್ ತಿಳಿಸಿದ್ದಾರೆ. ಘಟನೆಯ ನಂತರ  ಬಸ್ ರಸ್ತೆ ಮೇಲೆತ್ತಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಆಯಾ ಗ್ರಾಮಗಳಿಗೆ ತಲುಪಿಸಲಾಯಿತು. ಬೀದರ ಘಟಕ 1ರ ಔರಾದ ತಾಲೂಕಿನಲ್ಲಿ ಸಂಚರಿಸುವ ಬಹುತೇಕ ಬಸ್ ಗಳು ಗುಜರಿ. ಹಾಕುವ ಸ್ಥಿತಿಗೆ ಬಂದಿವೆ. ನಿತ್ಯ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಹೊಸ ಗಳನ್ನು ಓಡಿಸಬೇಕು ಎಂದು ವಡಗಾಂವ ಗ್ರಾಮಸ್ಥರು ಆಗ್ರಹಿಸಿ ದ್ದಾರೆ. ವರದಿ: ಅರವಿಂದ ಮಲ್ಲಿಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಮುಂಬೈ:  ಬಿಜೆಪಿಯು ರಾಜಕೀಯ ಪಕ್ಷಗಳನ್ನು ಒಡೆಯುವ ಮೂಲಕ ಪವರ್ ಜಿಹಾದ್ ನಡೆಸುತ್ತಿದೆ ಎಂದು  ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ. ಪುಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಕೇಂದ್ರ ಗೃಹ ಸಚಿವ ಅಮಿತ್​​ ಷಾ ಅವರು ತನ್ನನ್ನು ಔರಂಗಜೇಬ್ ಅಭಿಮಾನಿಗ ಸಂಘದ ಮುಖ್ಯಸ್ಥ ಎಂದು ಕರೆದಿದ್ದಾರೆ. ಅಮಿತ್​ ಷಾ ಅವರು ಪಾಣಿಪತ್ ಯುದ್ಧದಲ್ಲಿ ಮರಾಠರನ್ನು ಸೋಲಿಸಿದ ಆಫ್ಘನ್ ದೊರೆ ಅಹ್ಮದ್ ಷಾ ಅಬ್ದಾಲಿಯ ರಾಜಕೀಯ ವಂಶಸ್ಥರು ಎಂದು ತಿರುಗೇಟು ನೀಡಿದರು. ನಾವು ನಮ್ಮ ಹಿಂದುತ್ವವನ್ನು ವಿವರಿಸಿದ ನಂತರ ಮುಸ್ಲಿಮರು ನಮ್ಮೊಂದಿಗಿದ್ದರೆ, ನಾವು (ಬಿಜೆಪಿ ಪ್ರಕಾರ) ಔರಂಗಜೇಬ್ ಅಭಿಮಾನಿಗಳ ಸಂಘ. ಹಾಗಾದರೆ ರಾಜಕೀಯ ಪಕ್ಷಗಳನ್ನು ಒಡೆದು ನೀವು ಮಾಡುತ್ತಿರುವುದು ಪವರ್​ ಜಿಹಾದ್. ಯಾರ ಮನೆಯನ್ನು ಸುಡಬಾರದು ಎಂದು ಹೇಳಿಕೊಟ್ಟ ಛತ್ರಪತಿ ಶಿವಾಜಿ ಮಹಾರಾಜರನ್ನು ಆದರ್ಶವಾಗಿ ಪರಿಗಣಿಸುತ್ತೇವೆ. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅವರಂತಹವರು ಹಿಂದುತ್ವವಾದಿಗಳೇ ಎಂಬುದನ್ನು ಬಿಜೆಪಿ ಹೇಳಬೇಕು?ಎಂದು ವ್ಯಂಗ್ಯ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಬೆಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಂ ಸ್ಟೇ ಮತ್ತು ಇಲ್ಲಿನ ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲು ‘ಪಶ್ಚಿಮಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ’ ರಚನೆ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು,  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯಪಡೆ ರಚಿಸಲಾಗಿದ್ದು, ನಾಳೆಯಿಂದಲೇ ಪಶ್ಚಿಘಟ್ಟದಲ್ಲಿನ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಶ್ಚಿಮಘಟ್ಟದಲ್ಲಿನ ಅರಣ್ಯದಲ್ಲಿ 2015ರ ನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ಇಂದಿನಿಂದಲೇ ತೆರವು ಕಾರ್ಯಾಚರಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಎಸಿಎಫ್, ಡಿಸಿಎಫ್, ಸಿಎಫ್, ಸಿಸಿಎಫ್, ಎ.ಪಿ.ಸಿಸಿಎಫ್ ಗಳಿಗೂ ಅರಣ್ಯ ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಿ 64ಎ ಅಡಿಯಲ್ಲಿ ಆದೇಶ ನೀಡಲು ಅವಕಾಶವಿದ್ದು, ಬಾಕಿ ಇರುವ ಎಲ್ಲ…

Read More