Author: admin

ಒಂದು ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈಗಾಗಲೇ 55 ಲಕ್ಷಕ್ಕೂ ಅಧಿಕ ವೀವ್ಸ್‌ ಪಡೆದಿರುವ ವಿಡಿಯೊದಲ್ಲಿ ಅಂಥದ್ದೇನಿದೆ? ಪ್ರಶ್ನೆ ಮತ್ತು ಅದಕ್ಕೊಂದು ಫನ್ನಿ ಉತ್ತರ ಇರುವ ಪೋಸ್ಟ್‌ ಗಳು. ಇವರೊಬ್ಬ ಕಂಟೆಂಟ್‌ ಕ್ರಿಯೇಟರ್‌ ..ಅವರೇ ಹೀಗೆ ಪರೀಕ್ಷೆಯ ಪ್ರಶ್ನೋತ್ತರ ಪರಿಕಲ್ಪನೆಯಲ್ಲಿ ಪೋಸ್ಟ್‌ ಗಳನ್ನು ಮಾಡುತ್ತಾರೆ ಎಂದೂ ಹೇಳಲಾಗಿದೆ. @rohit_hand_writing ಎಂಬ ಇನ್‌ ಸ್ಟಾಗ್ರಾಂ ಅಕೌಂಟ್‌ ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಅದೊಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ. ಅದರಲ್ಲಿ ʼಗಾಂಧೀಜಿ ಯಾಕೆ ಎಲ್ಲ ನೋಟುಗಳ ಮೇಲೆ ನಗುತ್ತಿದ್ದಾರೆ.?ʼ ಎಂಬುದು ಪ್ರಶ್ನೆ. ಅದಕ್ಕೆ ವಿದ್ಯಾರ್ಥಿಯು ಕೊಟ್ಟ ಉತ್ತರ ಸಖತ್‌ ರಾಕಿಂಗ್‌ ಆಗಿದೆ..ʼತಾನು ಅತ್ತರೆ ಕಣ್ಣೀರಿನಿಂದ ನೋಟು ಒದ್ದೆಯಾಗುತ್ತದೆ ಎಂಬ ಕಾರಣಕ್ಕೆ ಅವರು ಎಲ್ಲ ನೋಟ್‌ ಗಳ ಮೇಲೆಯೂ ನಗುತ್ತಿದ್ದಾರೆʼ ಎಂದು ಉತ್ತರ ಬರೆಯಲಾಗಿದೆ. ಈ ಉತ್ತರಕ್ಕೆ ಟೀಚರ್‌ ಪೂರ್ತಿಯಾಗಿ 10 ಅಂಕ ಕೊಟ್ಟಿದ್ದಲ್ಲದೆ, ವೆರಿ ಗುಡ್‌ ಎಂದೂ ಬರೆದು ಸಹಿ ಹಾಕಿದ್ದಾರೆ. ಒಂದು ಫನ್ನಿ ಪ್ರಶ್ನೆಗೆ ಅಷ್ಟೇ ಫನ್ನಿಯಾಗಿ, ಸಖತ್‌ ಲೈವ್ಲಿಯಾಗಿ ಕೊಡಲಾದ ಉತ್ತರ ನೆಟ್ಟಿಗರ…

Read More

ಚಿಕನ್ ಪ್ರಿಯರಿಗೆ ನೆಮ್ಮದಿಯ ಸುದ್ದಿ, ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಕೋಳಿಮಾಂಸದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದಿನಿಂದ ಶ್ರಾವಣ ಮಾಸ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕನ್ ಬೆಲೆಯಲ್ಲಿ ಇಳಿಕೆಗೆ ಕಾರಣ ಎನ್ನಲಾಗಿದೆ. ಚಿಕನ್ ಬೆಲೆ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಶ್ರಾವಣ, ಆಷಾಢ ಮಾಸವು ಭಾನುವಾರ ಕೊನೆಗೊಂಡು ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗಿದೆ. ಇದರೊಂದಿಗೆ ಇಂದಿನಿಂದ ಶ್ರಾವಣ ಮಾಸ ವ್ರತಗಳು ಆರಂಭವಾಗುತ್ತಿವೆ. ಈ ಹಿನ್ನೆಲೆ ಕೆಲವರು ಶ್ರಾವಣ ಮಾಸ ಮುಗಿಯುವವರೆಗೆ ಮನೆಗಳಿಗೆ ಮಾಂಸವನ್ನು ತರುವುದನ್ನು ನಿಲ್ಲಿಸುತ್ತಾರೆ. ಇಂದಿನಿಂದ ಶ್ರಾವಣ ಮಾಸ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕನ್ ಬೆಲೆಯಲ್ಲಿ ಇಳಿಕೆಗೆ ಕಾರಣ ಎನ್ನಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಕೆಜಿಗೆ 260-280 ರೂ. ಇದ್ದ ಚಿಕನ್ ಬೆಲೆಯಲ್ಲಿ ದಿಢೀರ್ 180-150 ರೂ.ವರೆಗೆ ಇಳಿಕೆಯಾಗಿದೆ. ಕೆಜಿಗೆ 260-280 ರೂ.ವರೆಗೆ ಇದ್ದ ಚಿಕನ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಇಂದು ಕೋಳಿಮಾಂಸದಬೆಲೆ 180 ರೂ.ಗೆಇಳಿದಿದೆ . ಇನ್ನು ಕೆಲವು ಪ್ರದೇಶಗಳಲ್ಲಿ ಒಂದು ಕೆಜಿ ಚಿಕನ್ ಬೆಲೆ ರೂ . ಇದನ್ನು 150…

Read More

ಬೆಳಗ್ಗೆ 5 ಘಂಟೆ ಸಮಯದಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ವಾಕಿಂಗ್ ಎಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನ ವಿಕೃತ ಕಾಮಿಯೊಬ್ಬ ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿದ್ದಾನೆ. ಬೆಂಗಳೂರಿನ ಕೋಣನಕುಂಟೆಯ (Konanakunte) ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಆಕೆ ಬಳಿ ಬಂದು ಆಕೆಯನ್ನು ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟಿದ್ದಾನೆ. ಈ ವೇಳೆ ಮಹಿಳೆ ಆತನಿಂದ ತಪ್ಪಿಸಿಕೊಂಡು ಮುಂದೆ ಹೋಗಿದ್ದು, ಮತ್ತೆ ಆಕೆಯನ್ನು ಹಿಂಬಾಲಿಸಿದ ಆತ ಮತ್ತೆ ಆಕೆಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು, ಕೂಡಲೇ ಆತ ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಇವಿಷ್ಟೂ ಘಟನೆ ಮನೆಯೊಂದಕ್ಕೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಪೊಲೀಸರು ಅಪರಾಧಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 76, 78 ಮತ್ತು 79 ರ…

Read More

ಹಾಜಿಪುರ: ಹೈಟೆನ್ಷನ್‌ ಓವರ್‌ ಹೆಡ್‌ ವಿದ್ಯುತ್ ತಂತಿಯ ಸ್ಪರ್ಶದಿಂದ ಕನಿಷ್ಠ ಒಂಬತ್ತು ಕನ್ವರ್‌ ಯಾತ್ರಿಕರು ಸಾವನ್ನಪ್ಪಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಕೈಗಾರಿಕಾ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸುಲ್ತಾನ್‌ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೈಶಾಲಿ ಜಿಲ್ಲೆಯ ಇಂಡಸ್ಟ್ರಿಯಲ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸುಲ್ತಾನ್‌ಪುರ ಗ್ರಾಮದಲ್ಲಿ ಹೈ ಟೆನ್ಷನ್‌ ಓವರ್‌ ಹೆಡ್‌ ವೈರ್‌ ವಾಹನದ ಮೇಲೆ  ಬಿದ್ದಿದೆ. ಇದರಿಂದಾಗಿ  ಒಂಬತ್ತು ಯಾತ್ರಾರ್ಥಿಗಳು (ಕನ್ವಾರಿಯಾಗಳು) ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿಯಲ್ಲಿ ಕನ್ವಾರಿಯರು ಜಲಾಭಿಷೇಕ ಮಾಡಲು ಸೋನೆಪುರದ ಬಾಬಾ ಹರಿಹರನಾಥ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ವಯನಾಡ್‌: ಕೇರಳದ ವಯನಾಡ್ ನಲ್ಲಿ ಭೀಕರ ಭೂಕುಸಿತ ಪ್ರಕರಣದಲ್ಲಿ 599 ಮಕ್ಕಳು ಮತ್ತು ಆರು ಗರ್ಭಿಣಿಯರು ಸೇರಿದಂತೆ 2,500 ಕ್ಕೂ ಹೆಚ್ಚು ಜನರು ಪರಿಹಾರ ಶಿಬಿರದಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂಕುಸಿತದಿಂದ ಪೀಡಿತ ಜನರು ತಂಗಿರುವ ಬೆಟ್ಟದ ಜಿಲ್ಲೆಯ ಮೆಪ್ಪಾಡಿ ಮತ್ತು ಇತರ ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 16 ರಕ್ಷಣಾ ಶಿಬಿರಗಳಿವೆ. 723 ಕುಟುಂಬಗಳಿಗೆ ಸೇರಿದ 2,514 ಜನರು ಶಿಬಿರಗಳಲ್ಲಿದ್ದಾರೆ. ಅವರಲ್ಲಿ 943 ಪುರುಷರು, 972 ಮಹಿಳೆಯರು ಮತ್ತು 599 ಮಕ್ಕಳು ಎಂದು  ಕೇರಳ ಸಿಎಂ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಅವರಲ್ಲಿ ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾದ ನಂತರ ಕಾಣೆಯಾದವರ ಸಂಖ್ಯೆ ಹಿಂದಿನ 206 ರಿಂದ 180 ಕ್ಕೆ ಇಳಿದಿದೆ ಎಂದು ಅವರು ಭಾನುವಾರ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ನವದೆಹಲಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ಪ್ರತಿಭಟನೆ ತೀವ್ರಗೊಂಡಿದ್ದು, ಹೀಗಾಗಿ ಅಲ್ಲಿಗೆ ಪ್ರಯಾಣಿಸದಂತೆ ಭಾರತ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಇದೇ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು ಸೋಮವಾರ ಮುಚ್ಚಲಾಗುವುದು ಎಂದು ಢಾಕಾದಲ್ಲಿರುವ ಭಾರತದ ರಾಯಭಾರಿ ಕಚೇರಿ ತಿಳಿಸಿದೆ. ಮುಂದಿನ ಸೂಚನೆ ಬರುವವರೆಗೂ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಕಟ್ಟುನಿಟ್ಟಿನ ಸಲಹೆ ನೀಡಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದಿರಲು ತಿಳಿಸಲಾಗಿದೆ. ಅನಗತ್ಯವಾಗಿ ಹೊರಗಡೆ ಸುತ್ತುವುದನ್ನು ತಪ್ಪಿಸಿ ಎಂದು ಹೇಳಲಾಗಿದೆ. ತುರ್ತು ಸಂದರ್ಭದಲ್ಲಿ ಢಾಕಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸಿ ಎಂದು ಸೂಚಿಸಲಾಗಿದೆ ಎಂದು ಅದು ತಿಳಿಸಿದೆ. ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಆಡಳಿತಾರೂಢ ಅವಾಮಿ ಲೀಗ್‌ ಪಕ್ಷದ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಬೆಂಗಳೂರು: ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಬಿಜಾಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿ ನಾಯಕರ ವಿರುದ್ಧವೇ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದು, ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರ ವರಿಷ್ಟರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಇಲ್ಲವೇ ಶಿಸ್ತುಕ್ರಮ ಜರುಗಿಸಲು ವರಿಷ್ಟರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್‌‍ ಜಂಟಿಯಾಗಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲೇ ಯತ್ನಾಳ್‌ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಹೇಳಿಕೆ ನೀಡಿದ್ದರು. ಇದು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಿಗೆ ಇರಿಸುಮುರುಸು ಉಂಟು ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಟಾರ್ಗೆಟ್ ಮಾಡಿ, ಸಾಕಷ್ಟು ಹೇಳಿಕೆಗಳನ್ನು ನೀಡಿದ್ದು, ಯತ್ನಾಳ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಳ್ಳುತ್ತಿದ್ದ, ಯತ್ನಾಳ್ ಹೇಳಿಕೆಗೆ ಸ್ಪಷ್ಟನೆ ನೀಡಿ ಎಂದು ಕಾಂಗ್ರೆಸ್ ನಾಯಕರು ಬಿಜೆಪಿಗೆ ತಿರುಗೇಟು…

Read More

ಬೆಂಗಳೂರು: ಸಿಸಿಬಿ ಆರ್ಥಿಕ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಮ್ಮೇಗೌಡ ಅವರು ಬಿಡದಿ ಬಳಿ ಸಾವಿಗೆ  ಶರಣಾಗಿದ್ದಾರೆ. ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ತಿಮ್ಮೇಗೌಡ ಶವ ಪತ್ತೆಯಾಗಿದೆ. ಈ ಘಟನೆ ಬಿಡದಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಆತ್ಮಹತ್ಯೆಗೆ ಯಾವ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಯ ಬಳಿಕ ಇನ್ನಷ್ಟು ವಿವರಗಳು ಲಭ್ಯವಾಗಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತಿಪಟೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದ ಅತ್ತ ಗೃಹಲಕ್ಷ್ಮಿ ಹಣವೂ ಇಲ್ಲ, ಇತ್ತ ವೃದ್ದಾಪ್ಯ ವೇತನವೂ ಇಲ್ಲದೇ  ಹುಚ್ಚಮ್ಮ ಎನ್ನೋ ಅಯೋವೃದ್ದೆ ತುತ್ತು ಅನ್ನಕ್ಕಾಗಿ ಅಲೆಯುವಂತಾಗಿದೆ. ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ವಾಸಿ ಸುಮಾರು 80 ವರ್ಷ ವಯಸ್ಸಿನ ವೃದ್ದೆ ಹುಚ್ಚಮ್ಮ ಅಂಗವಿಕಲೆಯಾಗಿದ್ದು, ಅಪಘಾತದಲ್ಲಿ  ಕಾಲು ಕಳೆದುಕೊಂಡಿದ್ದಾರೆ.  ಇವರಿಗೆ 3 ಜನ ಮಕ್ಕಳಿದ್ದರೂ ಸಾಕದೆ ಇರುವ ಕಾರಣ ವೃದ್ದೆ, ಪ್ರತ್ಯೇಕವಾಗಿ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ದುಡಿದು ತಿನ್ನಲು ಶಕ್ತಿಇಲ್ಲ, ಮಕ್ಕಳ ಆಸರೆಯೂ ಇಲ್ಲದೆ ಬದುಕು ಸಾಗಿಸುವ ಹುಚ್ಚಮ್ಮ ಬಿನ್ ದುರ್ಗಯ್ಯ   ಅನ್ನಭಾಗ್ಯ ಪಡಿದರ ಧಾನ್ಯದಿಂದ ಜೀವನ ಸಾಗಿಸುತ್ತಿದ್ದರು. ಆದರೇ ಅಧಿಕಾರಿಗಳ ಯಡವಟ್ಟಿನಿಂದ ಕಳೆದ ಒಂದು ವರ್ಷದಿಂದ ವೃದ್ದಾಪ್ಯವೇತನ ಹಾಗೂ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣವೂ ಸಿಗದೆ ವೃದ್ಧೆ ಪರದಾಡುವಂತಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಲ್ಕುರಿಕೆ ಗ್ರಾಮಪಂಚಾಯ್ತಿ, ಪೋಸ್ಟ್ ಆಫೀಸ್ ಗೆ ಪ್ರತಿನಿತ್ಯ ಅಲೆದು ಈ ವೃದ್ಧೆ ಸುಸ್ತಾಗಿದ್ದಾರೆ. ಇದೀಗ ಯಾವುದೇ ಹಣ ಇಲ್ಲದ ಕಾರಣ ಇವರು ಭಿಕ್ಷಾಟನೆ ಮಾಡುವಂತಾಗಿದೆ. ಹತ್ತಾರು ಭಾರೀ…

Read More

ಬೀದರ್: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಪೋಸ್ಟ್ ಗಳನ್ನು ಹರಿಯಬಿಡುವವರಿಗೆ ಬೀದರ್ ಜಿಲ್ಲಾ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಔರಾದ–ಬಿ ತಾಲೂಕಿನ  ವ್ಯಕ್ತಿಯೊಬ್ಬ (ಆರೋಪಿ) ತನ್ನ ಮೊಬೈಲ್ ನಂಬರ್ ನಿಂದ ವಾಟ್ಸಾಪ್ ಗ್ರೂಪ್ ನಲ್ಲಿ ಒಂದು ಧರ್ಮದ ಬಗ್ಗೆ ಅಸಹನೆಯ ಭಾವ ಮೂಡಿಸುವಂತೆ,  ಮುಂಬೈಯಲ್ಲಿ ಜೂನ್ ತಿಂಗಳಲ್ಲಿ ಜರುಗಿದ ಘಟನೆಯನ್ನು ಆ ಧರ್ಮಕ್ಕೆ ಸಂಬಂಧವಿಲ್ಲದ ವಿಡಿಯೋದೊಂದಿಗೆ ಸುಳ್ಳು ಸಂದೇಶ ಹರಡಿಸಿ ಸಮಾಜದಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂತಹ ಹಳೆ ವಿಡಿಯೋವನ್ನು ಹರಿಬಿಟ್ಟಿದ್ದ. ಇವನ ವಿರುದ್ದ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪಿ.ಎ.ಆರ್ ಸಂ: 22/2024, ಕಲಂ: 126 ಬಿ.ಎನ್.ಎಸ್.ಎಸ್ ಪ್ರಕಾರ ಕಾನೂನು ರಿತಿಯ ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟು ಸಮಾಜದಲ್ಲಿ ಅಶಾಂತಿ ಕೆದಡುವಂತಹ ಪೋಸ್ಟ್ ಗಳು ಹರಿಯ ಬಿಡುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದ್ದು, ಅಂಥವರ  ವಿರುದ್ಧ ಈಗಾಗಲೇ ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಿಸಿಕೊಳ್ಳಲಾಗುತ್ತಿದೆ. ಈ ಕುರಿತು ಜಿಲ್ಲಾ ಪೊಲೀಸರಿಂದ ಸಾಮಾಜಿಕ ಜಾಲತಾಣದಲ್ಲಿ…

Read More