Author: admin

ಕೇಂದ್ರದಲ್ಲಿ ಮೂರನೇ ಬಾರಿಗೆ ಎನ್ಡಿಎ ಸರ್ಕಾರ ರಚನೆಯಾಗುವುದರೊಂದಿಗೆ, ನಡೆಯುತ್ತಿರುವ ಅನೇಕ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಈ ಅನುಕ್ರಮದಲ್ಲಿ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ. ಕೇಂದ್ರ ಸರ್ಕಾರವು ವಿವಿಧ ರೀತಿಯ ವೃತ್ತಿಗಳಿಗೆ ಸಂಬಂಧಿಸಿದ ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಒದಗಿಸುತ್ತದೆ. ಹೊಲಿಗೆ ಯಂತ್ರವೂ ಈ ರೀತಿಯ ಯಂತ್ರವಾಗಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಎಂಬ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿ, ಹೊಲಿಗೆ ಯಂತ್ರವನ್ನು ಖರೀದಿಸಲು ಒಬ್ಬರು 15,000 ರೂ.ಗಳನ್ನು ಪಡೆಯಬಹುದು. ಈ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೆ, ಸರ್ಕಾರವು ಒಂದು ವಾರದ ಡಿಜಿಟಲ್ ತರಬೇತಿಯನ್ನು ಸಹ ಒದಗಿಸುತ್ತದೆ. ಆ ಸಮಯದಲ್ಲಿ ಅದು ದಿನಕ್ಕೆ 500 ರೂಪಾಯಿಗಳ ದರದಲ್ಲಿ ಪಾವತಿಸುತ್ತದೆ. ಹೊಲಿಗೆ ಯಂತ್ರವನ್ನು ಖರೀದಿಸಿದ ನಂತರ, ಕೇಂದ್ರವು ಒಂದು ಲಕ್ಷ ರೂಪಾಯಿಗಳ ಸಾಲವನ್ನು ನೀಡುತ್ತದೆ. ಈ ಸಾಲವನ್ನು 18 ತಿಂಗಳಲ್ಲಿ ಮರುಪಾವತಿ ಮಾಡಬಹುದು. ಸಾಲವನ್ನು ಮರುಪಾವತಿ ಮಾಡಿದ ನಂತರ, ನೀವು…

Read More

ಬೆಳಗಾವಿ: ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ 1.2 ಲಕ್ಷ ರೂ. ಪರಿಹಾರದ ಜೊತೆಗೆ ಮನೆ ಕೂಡ ನೀಡಲಾಗುವುದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಈ ನೆರವಿನ ದುರುಪಯೋಗವಾಯಿತು. ಹಾಗೂ ಹಲವರಿಗೆ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿ, ಎರಡು ಹಾಗೂ ಮೂರನೇ ಕಂತಿನ ಪರಿಹಾರ ಈವರೆಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ 1.2 ಲಕ್ಷ ರೂ. ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ ಎಂದು ಸ್ಪಷ್ಟ ಪಡಿಸಿದರು. ಜನರ ಸಹಕಾರವಿದ್ದರೆ ಪದೇ ಪದೇ ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಲು ಚಿಂತನೆ ಮಾಡಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಢಾಕಾ: ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಜೈಲಿನಲ್ಲಿರುವ ವಿರೋಧ ಪಕ್ಷದ ನಾಯಕಿ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಿ ಆದೇಶಿಸಿದ್ದಾರೆ. ವಿರೋಧ ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲಾಗಿದೆ. ಸಭೆಯಲ್ಲಿ ಸೇನಾ ಮುಖ್ಯಸ್ಥ ವಾಕರ್—ಉಜ್–ಜಮಾನ್, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಮತ್ತು ಬಿಎನ್ಪಿ ಮತ್ತು ಜಮಾತ್—ಎ–ಇಸ್ಲಾಮಿ ಸೇರಿದಂತೆ ವಿರೋಧ ಪಕ್ಷಗಳ ಉನ್ನತ ನಾಯಕರು ಭಾಗವಹಿಸಿದ್ದರು. ಖಲೀದಾ ಜಿಯಾ ಅವರು 1991 ರಲ್ಲಿ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾದರು. 1977 ರಿಂದ 1981 ರವರೆಗೆ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದ ಮತ್ತು 1978 ರಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯನ್ನು ಸ್ಥಾಪಿಸಿದ ಅವರ ಪತಿ ಜಿಯಾವುರ್ ರಹಮಾನ್ ಅವರ ಹತ್ಯೆಯ ನಂತರ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ಜಿಯಾ ಇತ್ತೀಚೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ ಮತ್ತು ವೈದ್ಯಕೀಯ ಆರೈಕೆಗಾಗಿ ಆಗಾಗ್ಗೆ…

Read More

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಫೋಟೋಗೆ ನಿಯಮ ಬಾಹಿರವಾಗಿ ಪೂಜೆ ಸಲ್ಲಿಸಿದ ಅರ್ಚಕನೊಬ್ಬನನ್ನು ಅಮಾನತುಗೊಳಿಸಲಾಗಿದೆ. ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಮಲ್ಲಿ ಎಂಬ ಅರ್ಚಕ ನಟ ದರ್ಶನ್ ಫೋಟೋ ಇಟ್ಟು ಅದಕ್ಕೆ ಮಂಗಳಾರತಿ ಮಾಡಿ ಪೂಜೆ ನಡೆಸಿದ್ದಾನೆ. ದೇವಾಲಯದ ಸಂಪ್ರದಾಯದ ವಿರುದ್ಧವಾಗಿ ವರ್ತಿಸಿರುವ ಹಿನ್ನೆಲೆ ಅರ್ಚಕ ಮಲ್ಲಿಯನ್ನು ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ಹೋರಾಟ ಸೋಮವಾರ ಭಾರೀ ಪ್ರತಿಭಟನೆಗೆ ತಿರುಗಿದ್ದು, ಸೇನಾ ದಂಗೆಯಾಗಿ ಮಾರ್ಪಟ್ಟಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಬಾಂಗ್ಲಾದೇಶವನ್ನು ತೊರೆದರು. ಇದರ ಬೆನ್ನಲ್ಲೇ ಸೇನಾ ಮುಖ್ಯಸ್ಥ ಜನರಲ್ ವೇಕರ್–ಉಜ್–ಜಮಾನ್ ಮಿಲಿಟರಿ ಮಧ್ಯಂತರ ಸರ್ಕಾರವನ್ನು ರಚಿಸುತ್ತದೆ ಎಂದು ಹೇಳಿದರು. ಅಲ್ಲದೇ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ನಡುವೆ ಹಸೀನಾ ಮಿಲಿಟರಿ ವಿಮಾನದಲ್ಲಿ ದೇಶದಿಂದ ಪಲಾಯನ ಮಾಡಿದ್ದಾರೆ ಎನ್ನುವ ವಿಚಾರ ತಿಳಿದು ಹಸೀನಾ ಅವರ ನಿವಾಸಕ್ಕೆ ನುಗ್ಗಿ ಅವರ ಬ್ರಾ ಮತ್ತು ಸೀರೆಗಳು ಸೇರಿದಂತೆ ತಮ್ಮಿಂದ ಸಾಧ್ಯವಾದದ್ದನ್ನು ಲೂಟಿ ಮಾಡಿದರು. ವ್ಯಕ್ತಿಯೊಬ್ಬ ನಾಚಿಕೆಯಿಲ್ಲದೆ ಕೈಯಲ್ಲಿ ಬ್ರಾಗಳನ್ನು ಹಿಡಿದು ವಿಕೃತಿ ಮೆರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಢಾಕಾ: ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಳ್ಳುತ್ತಿದ್ದಂತೆಯೇ ಬಾಂಗ್ಲಾದೇಶದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದ ಗದ್ದುಗೆ ಹಿಡಿದಿದ್ದ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಹಸೀನಾ ಅವರ ರಕ್ಷಣೆಗೆ ಭಾರತ ಕ್ರಮಕೈಗೊಂಡಿದ್ದು, ಅವರನ್ನು ಬಿಗಿ ಭದ್ರತೆಯೊಂದಿಗೆ ಸುರಕ್ಷಿತವಾಗಿ ಭಾರತದಲ್ಲಿ ಇಳಿಸಿದೆ. ಹಸೀನಾ ಅವರು ಬಾಂಗ್ಲಾದಿಂದ ಹೊರಡುತ್ತಿದ್ದಂತೆ ಭಾರತೀಯ ವಾಯುಪಡೆಯ ರಾಡಾರ್ ಗಳು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದವು. ಸಂಜೆ 6ರ ಸುಮಾರಿಗೆ ಹಸೀನಾ ಮತ್ತು ಅವರ ಸಹೋದರಿಯನ್ನು ಹೊತ್ತ ಬಾಂಗ್ಲಾದೇಶ ವಾಯುಪಡೆಯ ಸಿ -130 ಸಾರಿಗೆ ವಿಮಾನ AJAX1413 ಗಾಜಿಯಾಬಾದ್ ನ ಹಿಂಡನ್ ವಾಯುನೆಲೆಯನ್ನು ತಲುಪಿತು. ಈ ಸಂದರ್ಭದಲ್ಲಿ ಯಾವುದೇ ತುರ್ತು ಅಗತ್ಯಕ್ಕಾಗಿ ಭಾರತೀಯ ವಾಯುಪಡೆಯ ಸಿಬ್ಬಂದಿ ಎರಡು ರಫೇಲ್ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿದ್ದರು. ಹಸೀನಾ ಅವರ ಜೆಟ್ ವಿಮಾನಕ್ಕೆ ಸುರಕ್ಷತೆ ಒದಗಿಸಲು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಿಂದ 101 ಸ್ಕ್ವಾಡ್ರನ್ ನ ಎರಡು ರಫೇಲ್ ಯುದ್ಧ ವಿಮಾನಗಳು ಬಿಹಾರ ಮತ್ತು ಜಾರ್ಖಂಡ್ ನಲ್ಲಿ…

Read More

ತುಮಕೂರು: ಗುಬ್ಬಿ ಪಟ್ಟಣದಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದೆ. ಇದರ ಪರಿಣಾಮ ಗುಬ್ಬಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಮಳೆ ನೀರು ನುಗ್ಗಿದೆ. ಆಸ್ಪತ್ರೆಯ ವಾರ್ಡ್ ಗೆ ಮಳೆ ನೀರು ನುಗ್ಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತಾಯಿತು. ಮಳೆ ನೀರು ನೆಲವನ್ನು ವ್ಯಾಪಿಸಿದ್ದರಿಂದ ರೋಗಿಗಳು ಬೆಡ್ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರಿಸುಮಾರು 9 ಗಂಟೆಯಿಂದ ಶುರುವಾದ ಮಳೆ, ಒಂದೂವರೆ ಗಂಟೆಗಳ ಕಾಲ ಬಿಡದೇ ಸುರಿದಿದೆ. ಇದರಿಂದಾಗಿ ಮಧ್ಯರಾತ್ರಿವರೆಗೂ ರೋಗಿಗಳು ಪರದಾಡಿದರು. ಆಸ್ಪತ್ರೆಯ ಕೆಳಹಂತಸ್ತಿನ ವಾರ್ಡ್ ಗಳಿಗೆ ಕೂಡ ಮಳೆ ನೀರು ನುಗ್ಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳು ಮಾತ್ರವಲ್ಲ ಸಿಬ್ಬಂದಿಯೂ ಪರದಾಡುವಂತಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಸ್ಮಶಾನದಲ್ಲಿರೋ ಮಾರುಕಟ್ಟೆಗೆ ನಾನ್ ಹೋಗಲ್ಲ,  ನಾನು ಇಲ್ಲಿಯೇ ವ್ಯಾಪಾರ ಮಾಡುತ್ತೇನೆ ಎಂದು ಹೂವಿನ ವ್ಯಾಪಾರ ತರಕಾರಿ ವ್ಯಾಪಾರ ಮಾಡಿಕೊಂಡಿರುವ ವೃದ್ದೆಯೊಬ್ಬರು ಪಟ್ಟು ಹಿಡಿದ ಘಟನೆ ತುಮಕೂರು ವಿವಿ ಬಳಿ ಬಿ.ಎಚ್.‌ ರಸ್ತೆಯಲ್ಲಿ ನಡೆದಿದೆ. ಬೀದಿ ಬದಿ ವ್ಯಾಪಾರಿಗಳ ತೆರವಿಗೆ ತುಮಕೂರು‌ ಮಹಾನಗರ ಪಾಲಿಕೆ ಸಿಬ್ಬಂದಿ ಆಗಮಿಸಿದ ವೇಳೆ  ಸ್ಮಶಾನದಲ್ಲಿರುವ ಮಾರುಕಟ್ಟೆಗೆ ನಾನು ಹೋಗುವುದಿಲ್ಲ ಎಂದು ವೃದ್ಧ ಪಟ್ಟು ಹಿಡಿದಿದ್ದಾರೆ. ದೋಬಿಘಾಟ್ ಬಳಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ  ನಿರ್ಮಿಸಲಾಗಿದೆ.  ಕೆಲವು ವ್ಯಾಪಾರಿಗಳು ಆ ಮಾರುಕಟ್ಟೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಈಗಾಗಲೇ ಆರ್.ಟಿ.ಓ ಕಚೇರಿಯಿಂದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ‌ವರೆಗೆ ಬೀದಿ ಬದಿ ವ್ಯಾಪಾರವನ್ನು ಪಾಲಿಕೆ ನಿರ್ಬಂಧಿಸಿದೆ. ನಿರ್ಬಂಧ  ನಡುವೆ ಕೆಲವು ಬೀದಿ ಬದಿ ವ್ಯಾಪಾರಿಗಳು ವಿವಿ ಬಳಿಯ ಫುಟ್ ಪಾತ್ ನಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ತುಮಕೂರು ವಿವಿಯ ಸ್ಕೈವಾಕರ್ ಕೆಳಗೆ ವೃದ್ಧೆ ವ್ಯಾಪಾರ ಮಾಡುತ್ತಿದ್ದರು. ಇದೀಗ ಏಕಾಏಕಿ ಸ್ಥಳ ಬದಲಾವಣೆ ಮಾಡಲು ಪಾಲಿಗೆ ಸಿಬ್ಬಂದಿ ಒತ್ತಡ ಹಾಕುತ್ತಿದ್ದಾರೆ. ಆದರೆ ವೃದ್ಧೆ,…

Read More

ತುಮಕೂರು: ಈ ಬಾರಿಯ ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ಚಿತ್ರನಟ ಸುದೀಪ್ ಗೆ ಡಾಕ್ಟರೇಟ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದನ್ನು ಅವರು ನಯವಾಗಿ ತಿರಸ್ಕಾರ ಮಾಡಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ವಿವಿಧ ಹಂತದಲ್ಲಿ ಅವರನ್ನು ಸಂಪರ್ಕಿಸಲು ಯತ್ನಿಸಲಾಗಿತ್ತು, ಅಂತಿಮವಾಗಿ ಅವರ ಆಪ್ತ ಸಹಾಯಕರ ಮೂಲಕ ಅವರನ್ನು ಪ್ರಸ್ತಾಪ ಮಾಡಲಾಯಿತು. ಡಾಕ್ಟರೇಟ್ ಪದವಿ ಪಡೆಯುವ ನಿರ್ಧಾರ ತಿಳಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದರು. ಆನಂತರ ಅವರು ತಮ್ಮ ಆಪ್ತ ಸಹಾಯಕನ ಮೂಲಕವೇ ನನಗಿಂತ ಅನೇಕ ಮಂದಿ ಹೆಚ್ಚು ಸಾಧನೆ ಮಾಡಿದವರು ಇದ್ದಾರೆ ಅವರನ್ನು ಪರಿಗಣಿಸಿ, ಅಲ್ಲದೆ ತುಮಕೂರು ವಿಶ್ವವಿದ್ಯಾಲಯದ ರೀತಿಯ ನಿರ್ಧಾರಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮೂಲಕವೂ ಕೂಡ ಸುದೀಪ್ ಅವರನ್ನು ಸಂಪರ್ಕಿಸಿದಾಗಲೂ, ಸುದೀಪ್ ಅವರು ಡಾಕ್ಟರೇಟ್ ಪದವಿ ಪಡೆಯಲು ನಿರಾಕರಿಸಿದ್ದಾರೆ ಎಂದು ವಿವರಿಸಿದರು. ಸುದೀಪ ಅವರು ಶೈಕ್ಷಣಿಕ…

Read More

ತುಮಕೂರು : ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಉಪ್ಪಾರಪಾಳ್ಯ ಮಜರೆ ಗ್ರಾಮದ ಜನರ ಜೀವನ ಕೆಲವು ಕಾಣದ ಕೈಗಳ  ಪ್ರಭಾವದಿಂದ ಮತ್ತು ಗ್ರಾಮದ ಶ್ರೀನಿವಾಸ್ ಎಂಬಾತನಿಂದ ನಿರಂತರವಾಗಿ ಊರು ಬಿಡುವಂತೆ ದೌರ್ಜನ್ಯ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು 80 ವರ್ಷಗಳಿಂದ ನೂರಾರು ಜನ ಉಪ್ಪಾರಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿದ್ದು ಗ್ರಾಮದ ಜನರಿಗೆ ನಿವೇಶನ ಹಕ್ಕುಪತ್ರ ಅಂದಿನ ಕಾಲದಲ್ಲಿ ಸರ್ಕಾರ ನೀಡಿದೆ ಖಾತೆ ಕಂದಾಯವನ್ನು ಅಂದಿನಿಂದಲೂ ಇಂದಿನವರೆಗೂ ಜನ ಕಟ್ಟಿಕೊಂಡು ಸರ್ಕಾರಿ ಸೌಲಭ್ಯವನ್ನು ಪಡೆದಿದ್ದಾರೆ ಅಲ್ಲದೇ ಗ್ರಾಮದಲ್ಲಿ ಸಪ್ಪಲಮ್ಮ ದೇವಿಯ ದೇವಾಲಯವಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಮಿನಿ ಅಂಗನವಾಡಿ ಕೇಂದ್ರವು ಇದೆ ಸುಮಾರು 70ಕ್ಕೂ ಹೆಚ್ಚು ಮನೆಗಳಿದ್ದು 400ಕ್ಕೂ ಅಧಿಕ ಜನರಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ಸೌಲಭ್ಯ, ಸಿಸಿ ರಸ್ತೆ,ಚರಂಡಿ, ವಿದ್ಯುತ್ ದೀಪ ಇನ್ನಿತರೆ ಮೂಲ ಸೌಲಭ್ಯಗಳನ್ನು ಪಡೆದಿರುವ ಗ್ರಾಮವಾಗಿದೆ. ಗ್ರಾಮದ ಜನರ ಹೆಸರಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಮನೆಗಳ ಮತ್ತು ನಿವೇಶನಗಳ ಖಾತೆಯನ್ನು ಪಡೆದಿದ್ದಾರೆ…

Read More