Author: admin

ಪಾವಗಡ: ತಾಲ್ಲೂಕಿನಲ್ಲಿ ಆರೋಗ್ಯ ಶಿಕ್ಷಣ ಮತ್ತು ಉದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಬದಲಾವಣೆ ಬೇಕಾಗಿದೆ ಎಂದು ಹೈಕೋರ್ಟ್ ವಕೀಲ ಹರಿರಾಮ್ ತಿಳಿಸಿದರು. ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ಭಾರತೀಯ ಪರಿವರ್ತನ ಸಂಘ, ನಿಸರ್ಗ ದೃಷ್ಠಿಧಾಮ, ಬೆಂಗಳೂರುರವರ ಸಹಯೋಗದಲ್ಲಿ ಹರಿರಾಮ್ ರವರ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರದಂದು ಹಮ್ಮಿಕೊಂಡಿದ್ದ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲ್ಲೂಕಿನ ಬಹುತೇಕ ಯುವಕರು ಉದ್ಯೋಗ ಗುಳೆ ಹೋಗುತ್ತಿದ್ದಾರೆ. ಸಣ್ಣ ಆರೋಗ್ಯ ಸಮಸ್ಯೆಗೂ ದೂರದ ನಗರಗಳಿಗೆ ಹೋಗಬೇಕಾದ ಸ್ಥಿತಿ ಇದೆ. ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಎಂಬುದು ಮರೀಚಿಕೆಯಾಗುತ್ತಿದೆ. ಇದೆಲ್ಲವೂ ಬದಲಾಗಬೇಕು ಎಂದರು. ಪತ್ರಿಕೆಯವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಾನು ಸದ್ಯಕ್ಕೆ ರಾಜಕೀಯ ಪ್ರವೇಶದ ಚಿಂತನೆಯಲ್ಲಿ ಇಲ್ಲ. ಕೆಲವು ಸಂದರ್ಭದಲ್ಲಿ ಜನತೆಯ ಅಭಿಲಾಷೆಗಳಿಗೆ ಮತ್ತು ಒತ್ತಾಯಗಳಿಗೆ ಸ್ಪಂದಿಸಬೇಕಾಗುತ್ತದೆ. ತಾಲ್ಲೂಕಿನ ಜೀವನ ಮಟ್ಟ ಉತ್ತಮಗೊಳ್ಳಬೇಕಾದರೆ ಜನಾಭಿಪ್ರಾಯ ಮುಖ್ಯವಾಗುತ್ತದೆ ಎಂದರು. ಶಿಬಿರದಲ್ಲಿ ಸುಮಾರು 157 ಜನರ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಮಾಡಲಾಯಿತು.  ಡಾ.ದೇವರಾಜ್ ನಾಯ್ಕರವರ ವೈದ್ಯರ ತಂಡ,…

Read More

ಸರಗೂರು: ಇತ್ತೀಚೆಗೆ ಕಾಡಿನಿಂದ ನಾಡಿಗೆ ಬರುವ ಮೃಗಗಳ ಸಂಖ್ಯೆ ಹೆಚ್ಚುತ್ತಿದೆ. ಸರಗೂರು ತಾಲ್ಲೂಕಿಯಲ್ಲಂತೂ ವಿಪರೀತ ಭಯದ ವಾತಾವರಣ ನಿರ್ಮಾಣವಾಗಿದೆ. ನುಗು ಜಲಾಶಯದ ಹಿನ್ನೀರು ಬಳಿ ಇರುವ ಹೊಸ ಬಿರ್ವಾಳ್ ವಲಯದ ಅರಣ್ಯ ವ್ಯಾಪ್ತಿಯ ಹೊಸಹೆಗ್ಗುಡಿಲು ಗ್ರಾಮದಲ್ಲಿ ಶನಿವಾರದಂದು ಜಮೀನು ಒಂದರಲ್ಲಿ  ಹುಲಿ ಹೆಜ್ಜೆಯ ಗುರುತು ಕಾಣಿಸಿಕೊಂಡು ಪ್ರತ್ಯಕ್ಷವಾಗಿ ಆತಂಕ ನಿರ್ಮಿಸಿರುವ ಬೆನ್ನಲ್ಲೇ ಹೊಸಹೆಗ್ಗುಡಿಲು ಗ್ರಾಮದ ಜಮೀನಿನಲ್ಲಿ  ಹುಲಿಯೊಂದು ಹೆಜ್ಜೆ ಗುರುತು ಕಾಣಿಸಿಕೊಂಡು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ. ಹೆಡಿಯಾಲ ಮಾರ್ಗವಾಗಿ ಸರಗೂರು ತಾಲ್ಲೂಕಿನಗೆ ಮಧ್ಯೆ ರಸ್ತೆಯ ಬದಿಯಲ್ಲಿ ಇರುವ ಹೊಸಹೆಗ್ಗುಡಿಲು ಗ್ರಾಮದ ಸಿದ್ದರಾಜು ಎಂಬುವರ ಜಮೀನಲ್ಲಿ ಬಿರ್ವಾಳ್ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯೆ ಹುಲಿ ಪ್ರತ್ಯಕ್ಷವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಜಮೀನಲ್ಲಿ ಕಾವಲು ಕಾಯುವ ಸಮಯದಲ್ಲಿ ರೈತರು ಒಬ್ಬರು ದಾಟುತ್ತಿದ್ದ ಹುಲಿಯ ದೃಶ್ಯ ಸೆರೆಯಾಗಿದೆ. ಈ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಚಿರತೆ ಮತ್ತು ಹುಲಿ ಹಾವಳಿಯಿಂದ ಈಗಾಗಲೇ ಭಯ ಹೆಚ್ಚಿದೆ. ಈಗ…

Read More

ತುಮಕೂರು: ಹಾಲಪ್ಪ ಪ್ರತಿಷ್ಠಾನ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೈಲ್ವೆ ಸ್ಟೇಷನ್ ರಸ್ತೆ, ತುಮಕೂರು, ಇವರ ನೇತೃತ್ವದಲ್ಲಿ “ಯುವ ಸಬಲೀಕರಣ ಶಿಬಿರ” (ಉದ್ಯೋಗ ಹಾಗೂ ಕೌಶಲ್ಯಮೇಳ)ವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಮಾನ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಜನ್ಮದಿನದ ಅಂಗವಾಗಿ, ಸರ್ಕಾರದ ವಿವಿಧ ಇಲಾಖೆಗಳನ್ನು, ಕಂಪನಿಗಳನ್ನು ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವವನ್ನು ಒಳಗೊಂಡಿತ್ತು. ಈ ಉದ್ಯೋಗ ಮೇಳವು ಯುವಜನತೆಗೆ ಸುಭದ್ರ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದ್ದು, ಸುಮಾರು 34 ಕಂಪನಿಗಳು ಹಾಗೂ 3,906 ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಈ ಮೇಳದಲ್ಲಿ 203 ಅಭ್ಯರ್ಥಿಗಳು ನೇರವಾಗಿ ನೇಮಕಗೊಂಡಿದ್ದು, 207 ಅಭ್ಯರ್ಥಿಗಳು ಎರಡನೇ ಸಂದರ್ಶನಕ್ಕೆ ಆಯ್ಕೆಗೊಂಡಿದ್ದಾರೆ. 390 ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾದರೆ, 51 ಅಭ್ಯರ್ಥಿಗಳು ಸ್ವಯಂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮಹತ್ವದ ಕಾರ್ಯಕ್ರಮವು ಸ್ಥಳೀಯ ಯುವಕರಿಗೆ ಹೊಸ ಅವಕಾಶಗಳನ್ನು ತೆರೆದಿದ್ದು, ಅವರ ಪ್ರತಿಭೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸಿದೆ. ಈ ಮೇಳದ ಯಶಸ್ಸಿಗೆ ಕಾರಣರಾದ ಹಾಲಪ್ಪ ಪ್ರತಿಷ್ಠಾನ, ಸರ್ಕಾರಿ ಪ್ರಥಮ ದರ್ಜೆ…

Read More

ತೆಲುಗು ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕ ಕೊಮರಿ ಜನಯ್ಯ ನಾಯ್ಡು (44) ಅವರ ಮೃತದೇಹ ಕುಕಟ್ಪಲ್ಲಿಯ ಭಾಗ್ಯ ನಗರದ ಹೋಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಮರಿ ಜನಯ್ಯ ನಾಯ್ಡು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ಮೊದಲು ಹೊಟೇಲ್ ಸಿಬ್ಬಂದಿ ಗಮನಿಸಿ ಆಡಳಿತ ಮಂಡಳಿ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ಕೊಮರಿ ಜನಯ್ಯ ನಾಯ್ಡು ಅವರು ಹಲವು ಚಲನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತೊಲುಬೊಮ್ಮಲ ಸಿತ್ರಾಲು ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಅದರಲ್ಲಿ ‘ಜಿಎಸ್ಟಿ (ಗಾಡ್ ಸೈಥಾನ್ ಟೆಕ್ನಾಲಜಿ)’ ಎಂಬ ಸಣ್ಣ ಚಲನಚಿತ್ರವನ್ನು ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಮಂಡ್ಯ: ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮೀ ಯೋಜನೆ ಬಂದಿಲ್ಲ ಅಂತ ಫಲಾನುಭವಿಗಳು ಟೆನ್ಷನ್ ನಲ್ಲಿದ್ದಾರೆ. ಈ ನಡುವೆ ಎರಡು ತಿಂಗಳ ಹಣವನ್ನೂ ಒಟ್ಟಿಗೆ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡ್ತೀವಿ,  ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಗೃಹ ಲಕ್ಷ್ಮೀ ಹಣ ಬಂದಿದ್ಯಾ ಅಂತ ಕಳೆದೆರಡು ತಿಂಗಳಿನಿಂದ ಮನೆಯಜಮಾನಿಯರು ಬ್ಯಾಂಕ್ ಗೆ ಬರ್ತಾ ಇದ್ದಾರೆ, ಹೋಗ್ತಾ ಇದ್ದಾರೆ. ಆದರೂ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿರಲಿಲ್ಲ. ಇದೀಗ ಎರಡು ತಿಂಗಳ ಹಣವನ್ನೂ ಒಟ್ಟಿಗೆ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಮಂಡ್ಯದಲ್ಲಿ ಮಂಗಳವಾರ ನಡೆದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ತಿಳಿಸಿದರು. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು,  ಕೇಂದ್ರದಲ್ಲಿ ಬಿಜೆಪಿ ಸರ್ಕಾರ 10 ವರ್ಷದಿಂದ ಅಧಿಕಾರದಲ್ಲಿದ್ದರೂ ಕರ್ನಾಟಕಕ್ಕೆ ಅವರ ಕೊಡುಗೆ ಶೂನ್ಯ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಇಂದು ಬಿಜೆಪಿ…

Read More

ತುಮಕೂರು:  ಗೃಹ ಸಚಿವ ಪರಮೇಶ್ವರ್  ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರಿಗೆ ಬೃಹತ್ ಕೊಬ್ಬರಿ ಹಾರ ಹಾಕಿ ಬೆಳ್ಳಿ ಕಿರೀಟ ತೊಡಿಸಿ, ಬೆಳ್ಳಿ ಖಡ್ಗ  ಕೊಟ್ಟು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಗೌರವಿಸಿದರು. ತುಮಕೂರಿನ ಹೆಗ್ಗೆರೆ ಗ್ರಾಮದಲ್ಲಿ  ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲಾಯಿತು. ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಅಭಿಮಾನಿಗಳು, ಕಾರ್ಯಕರ್ತರಿಂದ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಮೊದಲಿಗೆ ಗೃಹ ಸಚಿವ ಪರಮೇಶ್ವರ್‌ ಗೆ  ಬೃಹತ್ ಕೊಬ್ಬರಿ ಹಾರ ಹಾಕಿ ಸ್ವಾಗತಿಸಿದ   ಅಭಿಮಾನಿಗಳು ಮೆರವಣಿಗೆ ಮಾಡಿದರು.  ನಂತರ ಬೃಹತ್ ಕೇಕ್ ಕತ್ತರಿಸಿ ಪರಮೇಶ್ವರ್ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೀದರ್: ಭಾಲ್ಕಿ ಔರಾದ ಹೀರೆಮಠ ಸಂಸ್ಥಾನ ಪೀಠಾಧಿಪತಿಗಳು ಪೂಜ್ಯ ಮ.ಘ.ಚ. ಗುರುಬಸವ ಪಟ್ಟದೇವರ ಜನ್ಮದಿನದ ಅಂಗವಾಗಿ ಸಂತಪೂರ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಅಬ್ದುಲ್ ವಾಜಿದ್, ಡಾ.ರೇಣುಕಾ, ವೈಜಿನಾಥ, ದಲಿತ ಸಂಘರ್ಷ ಸಮಿತ ಜಿಲ್ಲಾ ಸಂಚಾಲಕ ಧನರಾಜ ಮುಸ್ತಪುರ, ಟಿ.ಎಮ್.ಮಚ್ಚೆ, ಕಿರಣಕುಮಾರ ಬಿರಾದರ್, ಗುರುನಾಧ ಅಂಕುಲಗಿ, ಡಿಜಿ ರಾಣಿ, ಎಸೇಪ್ಪಾ ಶೇಂಬೇಳಿ, ಘಾಳೇಪ್ಪಾ ಶೇಂಬೇಳಿ, ತುಕಾರಾಮ ಹಸ್ಮುಖಿ, ಸುಧೀರ್ ಕಾಂಬಳೆ, ಸೂರ್ಯಕಾಂತ ಸೂನೆ, ವಿಜಯಕುಮಾರ ಇದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಔರಾದ್: ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ಔರಾದ ವತಿಯಿಂದ ತಾಲೂಕಿನ ಚಿಂತಾಕಿ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನು ವಿತರಿಸುವ ಮ‌ೂಲಕ ಕೇಕ್ ಕತ್ತರಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಚಿಂತಾಕಿ ಪೋಲಿಸ್ ಠಾಣೆಯ ಪಿ ಎಸ್ ಐ ಸಿದ್ಧಲಿಂಗ ಅವರು ಕೆಕ್ ಕತ್ತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಭವಿಷ್ಯದ ಪ್ರಜೆಗಳಾಗಿ ತಮ್ಮ ಕುಟುಂಬಕ್ಕೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಒಳ್ಳೆಯ ಉದ್ಯೋಗ ಪಡೆದುಕೊಳ್ಳಿ ಎಂದು ನುಡಿದರು. ಸುನಿಲ ಮಿತ್ರಾ ಮಾತನಾಡಿ, ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ವತಿಯಿಂದ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ಸರಕಾರಿ ಶಾಲೆಯ ಮಕ್ಕಳ ಸಮ್ಮುಖದಲ್ಲಿ ಅವರಿಗೆ ನೋಟ್ ಬುಕ್ ವಿತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ವಿನೂತನವಾಗಿ ಆಚರಿಸುತ್ತೇವೆ ಎಂದು ನುಡಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ಅಧ್ಯಕ್ಷ ದತ್ತಾತ್ರಿ ಚಿಕ್ಲೆ, ಅನೀಲ,…

Read More

ಬೀದರ್: ಬೀದರ್ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಗ್ರೇಡ್–1 ಹಾಗೂ ಕಾರ್ಯದರ್ಶಿ ಇವರುಗಳಲ್ಲಿ ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು, ಸರ್ಕಾರದ ಅನುದಾನ ದುರ್ಬಳಕೆ, ಅನಧಿಕೃತವಾಗಿ ಹಾಗೂ ಕಾನೂನು ಬಾಹಿರವಾಗಿ ಇ–ಸ್ವತ್ತು ತಂತ್ರಾಂಶದ ಅಡಿಯಲ್ಲಿ ಡಿಜಿಟಲ್ ಖಾತೆ ವಿತರಿಸುವುದು, ಹೀಗೆ ನಾನಾ ರೀತಿಯ ಅವ್ಯವಹಾರದಲ್ಲಿ ತೊಡಿಸಿಕೊಂಡು ಸರ್ಕಾರಕ್ಕೆ ಕೋಟ್ಯಾಂತರ ಮೊತ್ತದ ಆರ್ಥಿಕ ನಷ್ಟವನ್ನು ಮಾಡುತ್ತಿದ್ದು, ಇದನ್ನು ಮನಗಂಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬಡೋಲೆ ಈ ಅವ್ಯವಹಾರಗಳಿಗೆ ಕಡಿವಾಣ ಹಾಕಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಪಿ.ಡಿ.ಓ, ಕಾರ್ಯದರ್ಶಿ ಗ್ರೇಡ್–1, ಕಾರ್ಯದರ್ಶಿ ಇವರ ಅಕ್ರಮ ಧಂದೆಯನ್ನು ತಡೆದಿರುವುದರಿಂದ ಆಕ್ರೋಶಗೊಂಡು ಸದರಿ ಭ್ರಷ್ಟ ಸರ್ಕಾರಿ ನೌಕರರು, ಹಣಬಲ ಬಳಸಿಕೊಂಡು ಜಿಲ್ಲೆಯ ವಿವಿಧ ಸಂಘಟನೆಗಳೊಂದಿಗೆ ಕೈಜೋಡಿಸಿ ನಿಷ್ಠಾವಂತ ಅಧಿಕಾರಿಯ ವಿರುದ್ಧ ಸುಳ್ಳು ಪ್ರಚಾರ ಮಾಡುವುದು, ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಒಬ್ಬ ನಿಷ್ಠಾವಂತ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಔರಾದ ತಾಲೂಕಿನ ಗ್ರಾಮ ಪಂಚಾಯತ ಸದಸ್ಯರಾದ…

Read More

ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಗಂಡು ಸಿಂಹವೊಂದು ಅಸುನೀಗಿದೆ. ಹದಿನೆಂಟು ವರ್ಷದ ಗಂಡು ಸಿಂಹ ಆರ್ಯ ಇಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಕಳೆದ ಆರು ತಿಂಗಳುಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಆರ್ಯ ಕಳೆದ ಮೂರು ದಿನಗಳಿಂದ ಆಹಾರವನ್ನು ತ್ಯಜಿಸಿತ್ತು.ಇಂದು ಕೊನೆಯುಸಿರು ಎಳೆಯುವ ಮೂಲಕ ಸಫಾರಿಯ ಆಕರ್ಷಣೀಯ ಕೇಂದ್ರಬಿಂದು ಅಜರಾಮರವಾಗಿದೆ ಸಾಮಾನ್ಯವಾಗಿ ಕಾಡಿನಲ್ಲಿ ಸಿಂಹಗಳು 12 ರಿಂದ 15 ವರ್ಷಗಳ ವರೆಗೆ ಬದುಕಿರುತ್ತವೆ ವಯಸ್ಸಾದ ನಂತರ ಭೇಟೆಯಾಡಲು ಅಶಕ್ತವಾಗಿ ಹಸಿವಿನಿಂದಲೇ ಪ್ರಾಣ ಬಿಡುವ ಹಾಗೂ ಪರಸ್ಪರ ಕಾದಾಟದಿಂದ ಗಾಯಗಳಾಗಿ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುವ ಸಂಧರ್ಭಗಳೇ ಹೆಚ್ಚು. ಹುಲಿಗಳಂತೆ ಒಂಟಿಯಾಗಿ ಬದುಕದೆ ಗುಂಪಿನಲ್ಲಿ ಸಿಂಹಗಳು ಬದುಕುತ್ತವೆ ಆದರೆ ಗಂಡು ಸಿಂಹಗಳು ಪರಸ್ಪರ ಒಟ್ಟಿಗೆ ಬದುಕುವುದು ಕೂಡ ವಿರಳ. ಆದರೆ ಲಯನ್ ಸಫಾರಿಯಲ್ಲಿ ಸಾಕಲಾಗಿದ್ದ ಆರ್ಯ ಸಿಂಹ ಹದಿನೆಂಟು ವರ್ಷಕ್ಕೆ ವಯೋಸಹಜ ಕಾಯಿಲೆಯಿಂದ ಬಳಲಿ ಇಂದು ಇಹಲೋಕ ತ್ಯಜಿಸಿದೆ. 2008ರಲ್ಲಿ ಮೈಸೂರು ಮೃಗಾಲಯದಿಂದ ಶಿವಮೊಗ್ಗಕ್ಕೆ ಬಂದಿದ್ದ ಆರ್ಯ ಸಿಂಹದ ಅಗಲಿಕೆಯಿಂದ ಈಗ ಹುಲಿ…

Read More