Subscribe to Updates
Get the latest creative news from FooBar about art, design and business.
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
- ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ : ಅಹೋರಾತ್ರಿ ಧರಣಿ ಆರಂಭ!
- ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕ: ಉಚಿತ ಕಾನೂನು ಸೇವೆಗಳ ಸದುಪಯೋಗಕ್ಕೆ ನ್ಯಾಯಾಧೀಶೆ ಸುಷ್ಮಾ ಎಂ. ಕರೆ
- ಔರಾದ್: ಕಲುಷಿತ ನೀರು ಸರಬರಾಜಾಗದಂತೆ ಮುಂಜಾಗ್ರತೆ ವಹಿಸಿ: ಇಒ ಕಿರಣ ಪಾಟೀಲ್ ಸೂಚನೆ
- ಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಿ: ಡಿವೈಎಸ್ ಪಿ ಬಲ್ಲಪ್ಪ ನಂದಗಾಂವೆ ಸೂಚನೆ
Author: admin
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್ ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟದ ಫೈನಲ್ ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ ವಿನೇಶ್ ಪೋಗಟ್, ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇದೀಗ ಅನರ್ಹತೆಯಿಂದಾಗಿ ಕಂಚು ಕೂಡ ಅವರಿಗೆ ದೊರೆಯುವುದಿಲ್ಲ ನನ್ನ ವಿರುದ್ಧ ಕುಸ್ತಿ ಗೆದ್ದಿದೆ. ನಾನು ಸೋತಿದ್ದೇನೆ. ಕ್ಷಮಿಸಿ, ಈಗ ನನ್ನಲ್ಲಿ ಹೆಚ್ಚಿನ ಶಕ್ತಿ ಇಲ್ಲ ಎಂದು ಹೇಳುವ ಮೂಲಕ ಕುಸ್ತಿಪಟು ವಿನೇಶ್ ಫೋಗಟ್ ಭಾವುಕ ಸಂದೇಶದೊಂದಿಗೆ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ನನ್ನ ಕನಸು, ನನ್ನ ಧೈರ್ಯ ಎಲ್ಲ ಛಿದ್ರವಾಯಿತು. ನನ್ನ ಧೈರ್ಯ ಸಂಪೂರ್ಣ ಕುಗ್ಗಿದೆ, ಈಗ ಹೆಚ್ಚಿನ ಶಕ್ತಿ…
ತುಮಕೂರು: ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಸೇರಿದಂತೆ 32 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮಂಜೇಶ ಎಂಬಾತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಆತನನ್ನು ಬಂಧಿಸುವ ಸಂದರ್ಭದಲ್ಲಿ ಸಾಹಸಮಯವಾಗಿ ಪೊಲೀಸ್ ಪೇದೆ ದೊಡ್ಡಲಿಂಗಯ್ಯ ತೆಗೆದುಕೊಂಡ ಕ್ರಮದ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿನ ಕೊರಟಗೆರೆ ಟೌನ್ ಡಿಸಿಸಿ ಬ್ಯಾಂಕ್ ಹತ್ತಿರ ಮನೆಯೊಂದರಲ್ಲಿ ಆರೋಪಿ ಮಂಜೇಶ ಕಳ್ಳತನ ಮಾಡಿದ್ದನು. ಆರೋಪಿ ಪತ್ತೆಯ ಬಗ್ಗೆ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿತ್ತು ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಕಮ್ಯಾಂಡ್ ಸೆಂಟರ್ ನಲ್ಲಿ ವಾಹನಗಳನ್ನು ಪರಿಶೀಲನೆ ಮಾಡಿದಾಗ ಆರೋಪಿಯು ತುಮಕೂರು ನಗರದಲ್ಲಿ ಸಂಚರಿಸಿ ನಂತರ ದಾಬಸ್ ಪೇಟೆ, ನೆಲಮಂಗಲ ಮೂಲಕ ಬೆಂಗಳೂರು ತಲುಪಿದ್ದು ಆರೋಪಿ ಪತ್ತೆಗಾಗಿ ಅರೋಪಿತನ ವಾಹನ ನಂಬರ್ ನ್ನು ಬೆಂಗಳೂರು ನಗರದ ಟಿ.ಎಂ.ಸಿ. ಯ ಅಲರ್ಟ್ ವಾರ್ನಿಂಗ್ ಸೆಂಟರ್ ಗೆ ತಿಳಿಸಲಾಗಿತ್ತು. ಆಗಸ್ಟ್ 6ರಂದು ಟಿ.ಎಂ.ಸಿ.ಯ ಇಂಜಿನಿಯರ್ ಅಶೋಕ್ ರವರು, ಕೊರಟಗೆರೆ ಪೊಲೀಸ್ ಠಾಣಾ ದೊಡ್ಡಲಿಂಗಯ್ಯ ರವರಿಗೆ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ…
ಭಾರತೀಯ ಕುಸ್ತಿ ತಾರೆ ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಬಹಳ ನಿರೀಕ್ಷಿತರಿದ್ದರು. ಆದಾಗ್ಯೂ, ಅಧಿಕ ತೂಕದ ಕಾರಣದಿಂದಾಗಿ ಅವರು ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಅನರ್ಹಗೊಂಡಿದ್ದಾರೆ. ಈ ಘಟನೆ ಕುಸ್ತಿ ಪ್ರಿಯರಲ್ಲಿ ದೊಡ್ಡ ಶೋಕವನ್ನು ಉಂಟುಮಾಡಿದೆ. ವಿನೇಶ್ ಫೋಗಟ್ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸಂಕಟಗಳನ್ನು ಹಾಗೂ ಸವಾಲುಗಳನ್ನು ಎದುರಿಸಿದ್ದಾರೆ. ಅವರ ಶ್ರದ್ಧೆ ಮತ್ತು ಪರಿಶ್ರಮದಿಂದಾಗಿ, ಅವರು ಕ್ರೀಡಾ ಲೋಕದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿದ್ದಾರೆ. ಈ ಅನರ್ಹತೆಯು ಅವರು ಮತ್ತು ಅವರ ಅಭಿಮಾನಿಗಳಿಗೆ ದೊಡ್ಡ ಹೊಡೆತವಾಗಿದೆ, ಆದರೆ ಇದು ಅವರ ಹೋರಾಟದ ಹೊಸ ಅಧ್ಯಾಯಕ್ಕೆ ನಾಂದಿ. ತೂಕ ನಿರ್ವಹಣೆ: ಈ ಘಟನೆ, ಕ್ರೀಡಾಪಟುಗಳ ತೂಕ ನಿಯಂತ್ರಣ ಮತ್ತು ಶ್ರೇಷ್ಠ ದೈಹಿಕ ಆರೋಗ್ಯವನ್ನು ನಿರ್ವಹಿಸುವ ಅಗತ್ಯವನ್ನು ಮತ್ತೆ ಒತ್ತಿಹೇಳುತ್ತದೆ. ಕ್ರೀಡಾಪಟುಗಳಿಗೆ ಸೂಕ್ತ ಪೋಷಕಾಂಶ, ವೈಜ್ಞಾನಿಕ ತರಬೇತಿ ಮತ್ತು ಆರೋಗ್ಯದ ನಿರ್ವಹಣೆಯು ಅತ್ಯಂತ ಅವಶ್ಯಕ. ಅಭಿಮಾನಿಗಳ ಬೆಂಬಲ: ವಿನೇಶ್ ಫೋಗಟ್ ಅವರ ಈ ಸವಾಲುಗಳನ್ನು ಎದುರಿಸಲು ಅವರ ಅಭಿಮಾನಿಗಳು ಮತ್ತು…
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ಆರೋಗ್ಯ ತುಮಕೂರು’ ಅಭಿಯಾನದ ಅಂಗವಾಗಿ ವಿಶೇಷ ಬೃಹತ್ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಹಾಗೂ ಅಸಾಂಕ್ರಾಮಿಕ ರೋಗಿಗಳಿಗೆ ಔಷಧಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇಳೆ ಕಣ್ಣಿನ ದೃಷ್ಠಿ ತೊಂದರೆ ಅನುಭವಿಸುತ್ತಿದ್ದ ರೋಗಿಗಳನ್ನು ಗುರುತಿಸಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಕಳುಹಿಸಲಾಯಿತು. ಜೊತೆಗೆ, ದೃಷ್ಠಿ ಸಮಸ್ಯೆ ಹಾಗೂ ಶ್ರವಣ ತೊಂದರೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಕನ್ನಡಕ ಮತ್ತು ಶ್ರವಣ ಯಂತ್ರಗಳನ್ನು ವಿತರಿಸಲಾಯಿತು. ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಕೂಡ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತುಮಕೂರು ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ, ಆಡಳಿತ), ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತ್…
ಬೀದರ್: ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರೊಬ್ಬರು ವರ್ಗಾವಣೆಗೊಂಡ ಕಾರಣಕ್ಕೆ ಮಕ್ಕಳು ಬಿಕ್ಕಿ, ಬಿಕ್ಕಿ ಅತ್ತ ಪ್ರಸಂಗ ಔರಾದ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಸೋಮವಾರ ನಡೆದಿದೆ. 2013ರಿಂದ ವರ್ಷದಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಾಲ್ ರೆಡ್ಡಿ ಅವರು ಬೀದರ್ ತಾಲೂಕಿನ ಬಗದಲ್ ಸರ್ಕಾರಿ ಪ್ರೌಢ ಶಾಲೆಗೆ ವರ್ಗಾವಣೆಯಾಗಿದ್ದಾರೆ. ಶಾಲೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನೆಚ್ಚಿನ ಶಿಕ್ಷಕ ಬೇರೆಡೆಗೆ ಹೋಗುತ್ತಿರುವುದರಿಂದ ಬೇಸರಗೊಂಡು ವಿದ್ಯಾರ್ಥಿಗಳು ಭಾವುಕರಾಗಿ ಒಲ್ಲದ ಮನಸ್ಸಿನಿಂದ ಕಳಿಸಿಕೊಟ್ಟರು. ದಯವಿಟ್ಟು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗ್ಬೇಡಿ ಸರ್ ಎಂದು ಮಕ್ಕಳು ಅಳುತ್ತಾ ತಬ್ಬಿಕೊಂಡರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕಾಪಿ ಹೊಡೆಯಲು ಕೆಲ ಅಭ್ಯರ್ಥಿಗಳು ಮಾಡಿದ್ದೇನು ಗೊತ್ತಾ!?, ಈ ಸ್ಟೋರಿ ನೋಡಿದ್ರೆ ನೀವೆ ದಂಗಾಗ್ತೀರಾ!? ಬೀರ್ಭುಮ್‌ನ ಸೂರಿಯ ಬೆನಿಮಾಧಬ್ ಇನ್ಸ್ಟಿಟ್ಯೂಷನ್‌ನಲ್ಲಿ ಎಎನ್‌ಎಂ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಮಾಲ್ಡಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಪ್ರತಿಯೊಬ್ಬರನ್ನು ಸರಿಯಾಗಿ ಪರಿಶೀಲನೆ ನಡೆಸಿಯೇ ಮಹಿಳಾ ಸೆಕ್ಯುರಿಟಿ ಗಾರ್ಡ್‌ಗಳು ಪರೀಕ್ಷಾ ಕೊಠಡಿಗೆ ಹೋಗಲು ಅನುಮತಿಸುತ್ತಿದ್ದರು. ಪರಿಶೀಲನೆ ವೇಳೆ ಹಲವರ ಬಳಿ ಮೊಬೈಲ್, ಕಾಪಿ ಚೀಟಿ ಪತ್ತೆಯಾಗಿತ್ತು. ತಕ್ಷಣ ಅವರಿಂದ ಅದನ್ನು ಸೀಜ್ ಮಾಡಿ ಅವರನ್ನು ಪರೀಕ್ಷ ಕೊಠಡಿಗೆ ಕಳುಹಿಸಲಾಗಿತ್ತು. ಆದರೆ ಇನ್ನು ಕೆಲವರು ಸಿಬ್ಬಂದಿಗಳ ಕಣ್ತಪ್ಪಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದರು. ಪರೀಕ್ಷೆಗಳು ಪ್ರಾರಂಭವಾದ ತಕ್ಷಣ, ಕೊಠಡಿಯೊಳಗೆ ಕೆಲವು ಭದ್ರತಾ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆ ಅನುಮಾನ ಬಂದಿತು. ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಮತ್ತೊಂದು ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ…
ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಆಯ್ದ ಪ್ರಕೃತಿ ಸೊಬಗಿನ ತಾಣಗಳನ್ನು ಗುರುತಿಸಿ, ಪ್ರಕೃತಿ ಪ್ರಿಯರು ಹಾಗೂ ಸಾಹಸ ಚಾರಣಿಗರ ಅನುಕೂಲಕ್ಕೆಂದು ರಾಜ್ಯ ಸರ್ಕಾರ ಪರಿಸರ ಪ್ರವಾಸೋದ್ಯಮ ಮಂಡಳಿಯನ್ನು ನಿರ್ಮಿಸಿ, ಅದರಡಿ 20ಕ್ಕೂ ಹೆಚ್ಚು ಅಚ್ಚುಮೆಚ್ಚಿನ ಚಾರಣ ಸ್ಥಳಗಳನ್ನು ಮಂಡಳಿಯ ನಿರ್ವಹಣೆಗೆ ಸೂಚಿಸಿತ್ತು. ಚಾರಣಿಗರಿಂದ ಹಣ ಪಡೆದು ಇಲಾಖೆಗೆ ಹಣ ಪಾವತಿಸದ ಆರೋಪ ಎಂದು ವರದಿಯಾಗಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ (Forest Department) ತಡವಾಗಿ ಕ್ರಮ ಕೈಗೊಂಡಿದೆ. ಇದರಿಂದ ಸ್ವತಃ ಅರಣ್ಯ ಇಲಾಖೆಯಿಂದಲೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ನಿರ್ವಹಣೆ ಮಾಡಲು ಮುಂದಾಗಿದೆ. ಚಾರಣ ಪ್ರಿಯರಿಗೆ ಇಲ್ಲಿದೆ ಕಹಿ ಸುದ್ದಿ ಚಾರಣದ ಟಿಕೆಟ್ ಬುಕಿಂಗ್ ಇಕೋ ಟೂರಿಸಂ ಮಾಡುತ್ತಿತ್ತು. ಇದೀಗ ಇಕೋ ಟೂರಿಸಂ ಬದಲು ಅರಣ್ಯ ಇಲಾಖೆ ಚಾರಣ ನಿರ್ವಹಣೆ ಮಾಡಲು ಮುಂದಾಗಿದೆ. ಇದರಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗಸ್ಟ್1, 2024 ರಿಂದ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ ಎಂದು ಚಿಕ್ಕಬಳ್ಳಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ. ಪ್ರಕೃತಿ ಸೊಬಗು…
ಸಾಮಾನ್ಯವಾಗಿ ರಾತ್ರಿ ಮಲಗುವಾಗ ಸ್ಮಾರ್ಟ್ ಫೋನ್ ಅನ್ನು ದಿಂಬಿನ ಪಕ್ಕದಲ್ಲಿ ಇಟ್ಟು ಮಲಗುತ್ತೇವೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬುದು ತಜ್ಞರ ವಾದ.ಹೀಗಿರುವಾಗ ಕೆಲ ಸಮಸ್ಯೆಗಳಿಂದ ದೂರವಿರಬೇಕಾದರೆ, ಮೊಬೈಲ್ ಅನ್ನು ಸಹ ತಲೆ ಬಳಿಯಿಂದ ದೂರವಿಡಬೇಕು. ಅಂದರೆ 3 ರಿಂದ 4 ಅಡಿ ದೂರದಲ್ಲಿ ಫೋನ್ ಇಟ್ಟುಕೊಳ್ಳಬೇಕು. ದೀರ್ಘಕಾಲದವರೆಗೆ ಸ್ಮಾರ್ಟ್‌ಫೋನ್ ಹತ್ತಿರ ಇರುವುದು ಕಣ್ಣಿನ ಕಿರಿಕಿರಿ, ತಲೆನೋವು ಮತ್ತು ಕಿವಿ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ರಾತ್ರಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ದೂರವಿಡುವುದು ನಿದ್ರೆಯನ್ನು ಸುಧಾರಿಸುವುದಲ್ಲದೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸ್ಮಾರ್ಟ್‌ಫೋನ್ ಅನ್ನು ದಿಂಬಿನ ಕೆಳಗೆ ಇಡುವುದರಿಂದ ಶಾಖದ ಶೇಖರಣೆಗೆ ಕಾರಣವಾಗಬಹುದು. ಇದು ಫೋನ್ ಹೆಚ್ಚು ಬಿಸಿಯಾಗಲು ಮತ್ತು ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಸ್ಮಾರ್ಟ್‌ಫೋನ್ ಅನ್ನು ದಿಂಬಿನ ಕೆಳಗೆ ಇಡುವುದರಿಂದ ಶಾಖದ ಶೇಖರಣೆಗೆ ಕಾರಣವಾಗಬಹುದು. ಇದು ಫೋನ್ ಹೆಚ್ಚು ಬಿಸಿಯಾಗಲು ಮತ್ತು ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಯಶ್ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಮಂಜುನಾಥನ ದರ್ಶನ ಪಡೆದು ಬಂದಿದ್ದಾರೆ. ಯಶ್ ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಂದ ವಿಡಿಯೋ ಹಾಗೂ ಫೋಟೋಗಳು ಎಲ್ಲಡೆ ವೈರಲ್ ಆಗುತ್ತಿವೆ. ಯಶ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಲು ಒಂದು ಪ್ರಮುಖ ಕಾರಣ ಇದೆ ಎನ್ನಲಾಗಿದೆ. ಆ ಕಾರಣ ಏನು ಎಂಬುದನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದರ್ಮಸ್ಥಳ ದರ್ಶನಕ್ಕೆ ಕಾರಣ ಆಗಿದ್ದು ಅವರ ತಂದೆ ಈ ಮೊದಲು ನೀಡಿದ ಹೇಳಿಕೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ಇದನ್ನು ವೈರಲ್ ಮಾಡಿದ್ದಾರೆ. ಯಶ್ ಅವರು ಈ ಮೊದಲು ನೀಡಿದ್ದ ಹೇಳಿಕೆಯನ್ನು ಯಶ್ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಯಶ್ ಅವರು ಅಂದು ಹೇಳಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ‘ನಮ್ಮ ಅಪ್ಪ ಯಾವಾಗಲೂ ಹೇಳುತ್ತಾ ಇರುತ್ತಾರೆ. ಧರ್ಮಸ್ಥಳ ಮಂಜುನಾಥನ ಬೇಡಿಕೋ ಎಲ್ಲದೂ ಆಗುತ್ತದೆ. ಆ ನಂಬಿಕೆಯಲ್ಲಿ ಬೆಳೆದು ಬಂದವರು ನಾವು. ಸಂಪೂರ್ಣ ಕರ್ನಾಟಕ ಆ ನಂಬಿಕೆಯಲ್ಲಿ ಬದುಕುತ್ತಾ…
ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳಾ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅಂತಿಮ ಕ್ಷಣದಲ್ಲಿ ಅನರ್ಹರಾಗಿದ್ದು, ಭಾರತೀಯ ಕ್ರೀಡಾಪ್ರೇಮಿಗಳಿಗೆ ಬಿಗ್ ಶಾಕ್ ಎದುರಾಗಿದೆ. ವಿನೇಶ್ ಫೋಗಟ್ ಅವರ ದೇಹದ ತೂಕದಲ್ಲಿ 150 ಗ್ರಾಂ ಏರಿಕೆಯಾದ ಪರಿಣಾಮ ಒಲಿಪಿಂಕ್ಸ್ ನಿಯಮದ ಅನುಸಾರ ಅನರ್ಹಗೊಳಿಸಲಾಗಿದೆ. ಈ ಆಘಾತದ ಸುದ್ದಿಯ ಮಧ್ಯೆ ವಿನೇಶ್ ಫೋಗಟ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿನೇಶ್ ಫೋಗಟ್ ಅವರು ನಿನ್ನೆ 50 ಕೆಜಿ ವಿಭಾಗದ ಮಹಿಳಾ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯವನ್ನು ಆಡಿದ್ದರು. ಎರಡೂ ಪಂದ್ಯದಲ್ಲಿ ವೀರಾವೇಶದ ಆಟ ಪ್ರವೇಶಿಸಿದ್ದ ವಿನೇಶ್ ಫೈನಲ್ ಪ್ರವೇಶಿಸಿದ್ದರು. ಇಂದು ರಾತ್ರಿ 9.45ಕ್ಕೆ 50 ಕೆಜಿ ವಿಭಾಗದ ಕುಸ್ತಿ ಪಂದ್ಯ ಫೈನಲ್ ಪಂದ್ಯ ನಿಗದಿಯಾಗಿತ್ತು. ನಿನ್ನೆ 50 ಕೆಜಿಗಿಂತ ಕಡಿಮೆಯೇ ತೂಕ ಇತ್ತು. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮುಗಿದ ಮೇಲೆ ನೀರು ಕುಡಿದಿದ್ದಾರೆ. ಇದರ ಜೊತೆಗೆ ಊಟ ಮಾಡಿದ ಮೇಲೆ ವಿನೇಶ್ ಪೋಗಟ್ ಅವರ ದೇಹದ…