Author: admin

ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಇಲ್ಲಿ ಜಷ್ನೇ ಎ. ಬಹಾರೆ ಎ ಉರ್ದು—2024 ಕಾರ್ಯಕ್ರಮವನ್ನು ಉರ್ದು ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿ ಮೈಸೂರು ವಿ.ವಿ.ಯ ಉರ್ದು ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ಕಲಾನಿಕಾಯದ ಡೀನರಾಗಿದ್ದ ಪ್ರೊ. ಎಸ್.ಮಸೂದ್ ಸಿರಾಜ್ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಭಾಷೆ ಒಂದು ಸಂವಹನ ಸಾಧನವಾಗಿದ್ದು, ಉರ್ದು ಭಾಷೆಯು ಅತ್ಯಂತ ಸೌಜನ್ಯಯುತವಾದ ಭಾಷೆಯಾಗಿದೆ. ವ್ಯಕ್ತಿ ಗೌರವಕ್ಕೆ ಅತ್ಯಂತ ಮಹತ್ವ ನೀಡುವಂತಹದ್ದಾಗಿದೆ. ಭಾಷಾ ಜ್ಞಾನವು ಭಾವನೆಗಳನ್ನು ಪ್ರಸರಿಸುವ ಪ್ರಮುಖ ಸಾಧನವಾಗಿದೆ. ಉರ್ದು ಭಾಷೆಯು ಹರಿತವಾದ ವಿಷಯವನ್ನು ಪ್ರೀತಿಯಿಂದ, ಗೌರವದಿಂದ ವ್ಯಕ್ತಪಡಿಸುವ ಪ್ರಮುಖವಾದ ಶ್ರೀಮಂತ ಭಾಷೆ ಎಂದು ಅಭಿಪ್ರಾಯಪಟ್ಟರು. ಲಾಲ್ ಬಹದ್ದೂರು ಶಾಸ್ತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉರ್ದು ವಿಭಾಗದ ಮುಖ್ಯಸ್ಥರಾದ ಮನ್ಸೂರು ನೋಮಾನ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಭಾಷೆಯು ಮಾನವ ವ್ಯಕ್ತಿತ್ವವನ್ನು ಸೂಚಿಸುವ ಪ್ರಮುಖ ಸಾಧನವಾಗಿದ್ದು, ಉರ್ದು ಭಾಷೆಯು ಹಲವು ಭಾಷೆಗಳ ಸಂಗವಾಗಿದೆ. ಉರ್ದು ಭಾಷೆಯು ಇಂದು ಬಳಸುವಲ್ಲಿ ನಾವು ವಿಭಿನ್ನ ಭಾಷೆಗಳನ್ನು…

Read More

ತಿಪಟೂರು: ತಾಲೂಕು ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ರಸ್ತೆಗೆ ಅಡ್ಡಲಾಗಿ ಇಟ್ಟಿರುವ ಸಿಮೆಂಟ್ ತಡೆಗೋಡೆಗೆ ಬೈಕ್ ಸವಾರ ಗುದ್ದಿದ ಪರಿಣಾಮ ಸ್ಥಳದಲ್ಲೇ ಅಸುನಿಗಿದ ಘಟನೆ ನಡೆದಿದೆ. ಪ್ರಕರಣ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಮಧುಗಿರಿ: ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಬರುವುದನ್ನು ತಪ್ಪಿಸಲು ಸರ್ಕಾರ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು. ತಾಲೂಕಿನ ನೇರಳೆ ಕೆರೆ ಗ್ರಾಮದ ಶ್ರೀರಂಗನಾಥ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಗ್ರಾಮಮಟ್ಟದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು,ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದು, ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು. ಪಾವತಿ ಖಾತೆಗಳನ್ನು ಬದಲಾವಣೆ ಮಾಡಿಸಿಕೊಳ್ಳುವ ಮೂಲಕ ಸಮಸ್ಯೆಗಳಿಂದ ಮುಕ್ತರಾಗಬೇಕು, ರೈತರು ಬೆಳೆ ವಿಮೆ ಮಾಡಿಸಿಕೊಳ್ಳು ವುದರಿಂದ ಆರ್ಥಿಕವಾಗಿ ಹೊರೆಯಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂದರು. ಕೆ. ಎನ್. ರಾಜಣ್ಣನವರು ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳನ್ನು ತಂದಿದ್ದು, ತಾಲೂಕಿನ ವಸತಿ ರೈತರಿಗೆ ಹಂತ ಹಂತವಾಗಿ ವಿತರಿಸಲಾಗುವುದು. ಯಾವುದೇ ಪಕ್ಷದವರು ಇರಲಿ ಬಡವರನ್ನು ಗುರುತಿಸಿ ಮನೆಗಳನ್ನು ಹಂಚುವಂತೆ ಪಂಚಾಯತಿ ಅಧ್ಯಕ್ಷ — ಪಿ ಡಿ ಓ ಗಳಿಗೆ ಸೂಚಿಸಿದರು. ಆಶ್ರಯ ಮನೆಗಳಿಗೆ ನಿವೇಶನ ನೀಡಿದಾಗ…

Read More

ತುಮಕೂರು: ಆಧುನಿಕತೆಯ ಭರಾಟೆಯಲ್ಲಿ ಸಾರಿಗೆ ವ್ಯವಸ್ಥೆ ಅತ್ಯಾಧುನಿಕವಾಗಿ ಮುಂದುವರಿದು ಮೆಟ್ರೋ ಟ್ರೈನ್ ಗಳು ಬಂದಿವೆ. ಬುಲೆಟ್ ಟ್ರೈನ್ ಬರುತ್ತಿವೆ. ಆದರೆ ಗ್ರಾಮವೊಂದು ಇದುವರೆಗೂ ಸರ್ಕಾರಿ ಬಸ್ ನ ಮುಖ ನೋಡಿಲ್ಲ ಅಂದ್ರೆ ನೀವು ನಂಬಲೇಬೇಕು. ಹೌದು ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಮಕೂರು ಜಿಲ್ಲೆ ಹೆಬ್ಭೂರು ಹೋಬಳಿಯ ಚಿಕ್ಕಯ್ಯನ ಪಾಳ್ಯ ಗ್ರಾಮಕ್ಕೆ ಮೊದಲ ಬಾರಿ ಬಸ್ ಬಂದಿದ್ದು, ಗ್ರಾಮದಲ್ಲಿ ಇನ್ನಿಲ್ಲದ ಸಡಗರ ತರುವಂತೆ ಮಾಡಿದೆ, ಮೊದಲ ಬಾರಿ ಸರ್ಕಾರಿ ಬಸ್ ನೋಡಿದ ಗ್ರಾಮದ ಜನತೆ ಬಸ್ ಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. ಇನ್ನು ಬಸ್ ಬಂದ ಖುಷಿಯಲ್ಲಿ ಮಾತನಾಡಿದ ಗ್ರಾಮದ ಯುವಕ ರಾಜಶೇಖರ್ ಜೆ.ಆರ್ ರವರು ಗ್ರಾಮದಲ್ಲಿ ನಿತ್ಯ ಹತ್ತಾರು ಮಕ್ಕಳು ನಾಗವಲ್ಲಿ, ಹೆಬ್ಬೂರು, ತುಮಕೂರು ಶಾಲಾ ಕಾಲೇಜಿಗೆ ಹೋಗುತ್ತಾರೆ. ಬಸ್ ಬಿಡಿಸುವಂತೆ ಸಾಕಷ್ಟು ಬಾರಿ ಶಾಸಕರಿಗೆ ಮನವಿ ಮಾಡಿದ್ದೆವು ನಮ್ಮ ಮನವಿಗೆ ಸ್ಪಂದಿಸಿ ಈಗ ಬಸ್ ಬಿಟ್ಟಿರುವುದಕ್ಕೆ ಸಾರಿಗೆ ಇಲಾಖೆಗೂ ಮತ್ತು ಸಚಿವರಿಗೂ ಧನ್ಯವಾದ ಹೇಳುತ್ತೇನೆ ಎಂದು ಹರ್ಷ…

Read More

ಸೆಕ್ಯುರಿಟಿ ಗಾರ್ಡ್ ವೊಬ್ಬರು ದೆವ್ವದೊಂದಿಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ದೃಶ್ಯ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ. ಮುಂಜಾನೆ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ. ಸೆಕ್ಯುರಿಟಿ ಕಾರ್ಡ್ ಕಚೇರಿಯಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಮುಂಜಾನೆ ಮೂರು ಗಂಟೆಗೆ ಅವನು ಇದ್ದಕ್ಕಿದ್ದಂತೆ ಎದ್ದನು. ಇದ್ದಕ್ಕಿದ್ದಂತೆ ಬಾಗಿಲು ಓಪನ್ ಆಗಿದೆ. ಆ ಸಮಯದಲ್ಲಿ ಯಾರೋ ಬಂದಿದ್ದರು ಎಂದು ವಿವರಗಳನ್ನು ತಮ್ಮ ಲಾಗ್ ಪುಸ್ತಕದಲ್ಲಿ ಬರೆದಿರುವುದನ್ನು ಕಾಣಬಹುದು. ಆತ ಎದುರಿ ಇರುವ ಯಾರೊಂದಿಗೆ ಮಾತನಾಡುತ್ತಿದ್ದಾನೆ. ಆದರೆ ಅಲ್ಲಿ ಯಾರೂ ಇರುವುದು ಕಾಣುವುದಿಲ್ಲ. ನಂತರ ಭದ್ರತಾ ಸಿಬ್ಬಂದಿ ಪುಸ್ತಕವನ್ನು ಮೇಜಿನ ಮೇಲೆ ಇರಿಸಿ ತಕ್ಷಣ ಗಾಲಿಕುರ್ಚಿಯನ್ನು ತಂದರು. ಅವನು ಯಾರಿಗಾದರೂ ಅದರಲ್ಲಿ ಕುಳಿತುಕೊಳ್ಳಲು ಹೇಳುತ್ತಿದ್ದಾನೆ. ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೆಕ್ಯುರಿಟಿ ಗಾರ್ಡ್ ಕಾಣದ ವ್ಯಕ್ತಿಯೊಂದಿಗೆ ಮಾತನಾಡುವುದು ಮತ್ತು ಸಹಾಯ ಮಾಡುವುದು ಕಂಡುಬರುತ್ತದೆ. ಆದಾಗ್ಯೂ, ವೀಡಿಯೊದಲ್ಲಿ ವ್ಯಕ್ತಿ ಕಾಣಿಸದ ಕಾರಣ ಎಲ್ಲವೂ ಗೊಂದಲಕ್ಕೊಳಗಾಗಿದೆ ಎಂದು ತೋರುತ್ತದೆ. ಈ…

Read More

ಲೈಂಗಿಕ ಕ್ರಿಯೆ ನಡೆಸಬೇಕಾದ್ರೆ ನಾನು ಪತ್ನಿಗೆ 1,500(ಅಂದಾಜು 15 ಡಾಲರ್) ರೂ ನೀಡಬೇಕು. ಹಾಗಾಗಿ ನನಗೆ ಆಕೆಯಿಂದ ವಿಚ್ಛೇದನ ನೀಡಿ ಎಂದು ಪತಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದು, ಆತನ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ತೈವಾನ್ ನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 2014ರಲ್ಲಿ ಈ ಜೋಡಿ ವಿವಾಹವಾಗಿತ್ತು. 3 ವರ್ಷಗಳ ಕಾಲ ಎಲ್ಲವೂ ಚೆನ್ನಾಗಿತ್ತಂತೆ. 2017ರಲ್ಲಿ ತಿಂಗಳಿಗೊಮ್ಮೆ ಲೈಂಗಿಕ ಸಂಪರ್ಕ ಹೊಂದುವ ಸ್ಥಿತಿ ಬಂತು. 2019ರಲ್ಲಿ ಪತ್ನಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಸೂಚಿಸಿಲ್ಲ. ಒತ್ತಾಯ ಮಾಡಿದಾಗ ಮಾತನಾಡುವುದನ್ನೇ ಬಿಟ್ಟಿದ್ದಳು ಎಂದು ಪತಿ ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾನೆ. ಇದಾದ ನಂತರ ಪತಿಯ ಬಲವಂತಕ್ಕೆ ಲೈಂಗಿಕ ಸಂಪರ್ಕ ಹೊಂದಲು ಒಪ್ಪಿದ್ದು, ಆದರೆ ಒಂದು ಬಾರಿ ಲೈಂಗಿಕ ಸಂಪರ್ಕ ಹೊಂದಲು 1500 ರೂಪಾಯಿ ಅಂದ್ರೆ ಸುಮಾರು 15 ಡಾಲರ್ ಹಣ ಕೊಡಬೇಕು ಎಂದು ಷರತ್ತು ವಿಧಿಸಿದ್ದಾಳೆ. ಇದು ಮುಂದುವರಿಯುತ್ತಾ ಹೋದಂತೆ ಪತ್ನಿಯೊಂದಿಗೆ ಮಾತನಾಡಲೂ ಹಣ ಕೊಡುವ ಪರಿಸ್ಥಿತಿ ಆತನದ್ದಾಗಿತ್ತು. ಪತ್ನಿ ಮಾತು ಬಿಟ್ಟಿದ್ದಲ್ಲದೇ, ಮಾತನಾಡುವುದಕ್ಕೂ ಹಣ…

Read More

ಕುಸ್ತಿಪಟು ವಿನೇಶ್ ಪೋಗಟ್ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರ ನಟ ಪ್ರಕಾಶ್ ರಾಜ್ ಕಾರ್ಟೂನ್ ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ವಿನೇಶ್ ಪೋಗಟ್ ತೂಕ ತಪಾಸಣೆ ಮಾಡುವಾಗ ಹಿಂದಿನಿಂದ ಒಬ್ಬ ವ್ಯಕ್ತಿ ತೂಕದ ಯಂತ್ರದ ಮೇಲೆ ಒಂದು ಕಾಲನ್ನು ಇಟ್ಟಿರುವಂತೆ ಕಾರ್ಟೂನ್ ನಲ್ಲಿ ತೋರಿಸಲಾಗಿದೆ. ಈ ಕಾರ್ಟೂನ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದು, ಊಹಿಸಿ ಎಂದು ಹೇಳಿದ್ದಾರೆ. ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಗುರುವಾರ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಕುಸ್ತಿಯಿಂದ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅಮ್ಮಾ, ಕುಸ್ತಿ ನನ್ನನ್ನು ಸೋಲಿಸಿದೆ, ನಾನು ಸೋತಿದ್ದೇನೆ. ನಾನು ಸೋತಿದ್ದೇನೆ. ನನ್ನ ಧೈರ್ಯವು ಮುರಿದುಹೋಗಿದೆ, ನನಗೆ ಈಗ ಯಾವುದೇ ಶಕ್ತಿ ಇಲ್ಲ ಎಂದು ವಿನೇಶ್ ಬರೆದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ಬೆಂಗಳೂರು: ಸಲಗ ಚಿತ್ರದ ಬಳಿಕ ದುನಿಯಾ ವಿಜಯ್ ಎರಡನೇ ಸಿನಿಮಾದಲ್ಲಿ ನಟಿಸಿ ನಿರ್ದೇಶಿಸಿದ್ದು, ಈ ಚಿತ್ರ ‘ಭೀಮ’ ಆಗಸ್ಟ್ 9ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕಾಗಿ ದುನಿಯಾ ವಿಜಯ್ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ದೊಡ್ಡ ಯುವಕರ ತಂಡವೇ ಈ ಚಿತ್ರದಲ್ಲಿ ನಟಿಸಿದ್ದು, ಯುವಕರಿಗೆ ಈ ಚಿತ್ರ ಬಹಳ ಇಷ್ಟವಾಗಬಹುದು ಎಂದು ನಿರೀಕ್ಷಿಸಲಾಗಿದೆ. ದುನಿಯಾ ವಿಜಯ್ ಗೆ ಜೋಡಿಯಾಗಿ ಅಶ್ವಿನಿ ಅಭಿನಯಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ಡ್ರ್ಯಾಗನ್ ಮಂಜು, ಕಲ್ಯಾಣಿ, ರಾಜು, ಪ್ರಿಯಾ, ಶತಮರ್ಶನ್ ಮತ್ತು ಕಾಕ್ರೋಚ್ ಸುಧಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಕೃಷ್ಣ ಕ್ರಿಯೇಶನ್ಸ್ ಮತ್ತು ಜಗದೀಶ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಗೌತಮ್ ಸಾಹಸ ನಿರ್ದೇಶನ, ಮಾಸ್ತಿ ಅವರ ಸಂಭಾಷಣೆ ಹಾಗೂ ಶಿವಸೇನಾ ಛಾಯಾಗ್ರಹಣವಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಅಹಮದಾಬಾದ್: ಮೆಡ್ರೋನ್ ತಯಾರಿಕಾ ಘಟಕದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದಾಳಿ ನಡೆಸಿ Rs 800 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಗುಜರಾತ್ನ ಭರೂಚ್ ಜಿಲ್ಲೆಯ ಔಷಧಿಯ ಕಾರ್ಖಾನೆಯೊಂದರಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಿದ್ದು, RS 31 ಕೋಟಿ ಮೌಲ್ಯದ ದ್ರವ ಟ್ರಾಮಾಡೋಲ್ ಅನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡೂ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, ಎಟಿಎಸ್ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯಡಿಯಲ್ಲಿ ನಿಷೇಧಿಸಲಾದ ಈ ಮಾದಕ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ನಾಲ್ವರನ್ನು ಬಂಧಿಸಿದೆ ಎಂದು ಉಪ ಪೊಲೀಸ್ ಮಹಾ ನಿರೀಕ್ಷಕ ಸುನೀಲ್ ಜೋಶಿ ತಿಳಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ ಭಿವಂಡಿ ಪಟ್ಟಣದ ಅಪಾರ್ಟ್‍ಮೆಂಟ್ ಮೇಲೆ ಎಟಿಎಸ್ ತಂಡ ದಾಳಿ ನಡೆಸಿತ್ತು. ಈ ವೇಳೆ ಮೊಹಮ್ಮದ್ ಯೂನಸ್ ಶೇಖ್ (41) ಮತ್ತು ಆತನ ಸಹೋದರ ಮೊಹಮ್ಮದ್ ಆದಿಲ್ ಶೇಖ್ (34) ಅವರನ್ನು ಸುಮಾರು 800…

Read More

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪಾದಯಾತ್ರೆ 6ನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯ ತಾಲೂಕಿನ ತೂಬಿನಕೆರೆಯಿಂದ ಇಂದು ಪಾದಯಾತ್ರೆ ಹೊರಟಿತು. ಶಂಖನಾದದ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿ ನಡೆದ ಪಾದಯಾತ್ರೆಯಲ್ಲಿ ಮಾಜಿ ಸಂಸದೆ ಸುಮಲತಾ ಗೈರು ಹಾಜರಾಗಿದ್ದು, ಪಾದಯಾತ್ರೆಯಲ್ಲಿ ಭಾಗಿಯಾಗದೇ ದೂರ ಉಳಿದಿದ್ದಾರೆ. ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ, ಕೇಂದ್ರ ಮಂತ್ರಿ HD ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ದೋಸ್ತಿಗಳ ಪಾದಯಾತ್ರೆ 6ನೇ ದಿನಕ್ಕೆ ಕಾಲಿಟ್ಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More