Author: admin

ಮಧುಗಿರಿ: ರಾಜ್ಯದಲ್ಲಿ ರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷರೂ ಗಳ ವರೆಗೂ ಸಾಲ ನೀಡಲಾಗುತ್ತದೆ ಎಂದು ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿ ಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಬಿಜವರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ನೂತನ ಗೋದಾಮುಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ,ಕ್ಷೇತ್ರದಲ್ಲಿನ ಪಹಣಿ ಹೊಂದಿರುವ ಎಲ್ಲಾರಿಗೂ ಜಾತಿ ಪಕ್ಷ ನೋಡದೆ ಸಾಲ ನೀಡಲಾಗಿದೆ. ರಾಜ್ಯದ ಸಹಕಾರ ಸಂಘಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಹೊರಟಿರುವುದು ಕ್ರಾಂತಿಕಾರಕ ತೀರ್ಮಾನ ಇದರಿಂದ ಅವಕಾಶ ವಂಚಿತರಿಗೆ ಅವಕಾಶ ದೊರೆಯುವ೦ತಾಗುತ್ತದೆ. ಹಾಲು ಉತ್ಪಾದಕ ಸಂಘಗಳಿಗೆ ಹಾಲು ಸರಬರಾಜು ಮಾಡುತ್ತಿದ್ದರು. ರಾಜ್ಯದಲ್ಲಿ ಅಂದಾಜು 85,000 ರೈತರಿಗೆ ಹಾಲು ಉತ್ಪಾದಕರ ಸಂಘದ ಸದಸ್ಯತ್ವ ನೀಡಿಲ್ಲ. ಈ ಹಿನ್ನಲೆ ಯಲ್ಲಿ ಅವರಿಗೆ ಸದಸ್ಯತ್ವ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಸದಸ್ಯತ್ವ ಪಡೆಯುದಿದ್ದರೆ 5 ರೂ. ಪ್ರೋತ್ಸಾಹ ಧನ ಸಿಗುವುದಿಲ್ಲ ಇದೇ ಅಲ್ಲದೆ ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ತಾಲೂಕಿನಲ್ಲಿ 1355 ಜನರ…

Read More

U/A ಸರ್ಟಿಫಿಕೇಟ್ ಪಡೆದ “ಅಡವಿ” ಕನ್ನಡ ಚಲನಚಿತ್ರ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧವಾಗಿದೆ. ನಿರ್ಮಾಪಕ ಟೈಗರ್ ನಾಗರಾಜು ಅವರ ಕಟ್ಟುದೊರೆ ಮತ್ತು ತಳಹದಿಯ ಕಠಿಣ ಶ್ರಮದ ಫಲವಾಗಿ ಈ ಚಿತ್ರವು ಪ್ರೇಕ್ಷಕರ ಮುಂದೆ ಪ್ರದರ್ಶನವಾಗಲಿದೆ. ಈ ಚಿತ್ರವು ವಿಶಿಷ್ಟ ಕಥಾವಸ್ತು ಮತ್ತು ಕಲಾತ್ಮಕ ಪ್ರಸ್ತುತಿ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಬೆಳಕು ಮೂಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. “ಅಡವಿ” ಚಲನಚಿತ್ರದ ವಿವರ: ಶೀರ್ಷಿಕೆ: “ಅಡವಿ” ನಿರ್ಮಾಪಕ: ಟೈಗರ್ ನಾಗರಾಜು (ಜಟ್ಟಿ ಅಗ್ರಹಾರದ ನಾಗರಾಜು) ಸೆನ್ಸರ್ ಸೀಟಿಫಿಕೇಟ್: U/A ಚಿತ್ರದ ವಿಷಯ: “ಅಡವಿ” ಚಿತ್ರವು ನೈಸರ್ಗಿಕ ದೃಶ್ಯಾವಳಿ ಮತ್ತು ಸ್ಪಷ್ಟ ಕಥಾವಸ್ತುಗಳನ್ನು ಒಳಗೊಂಡಿದ್ದು, ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಬೆಳಕು ಮೂಡಿಸುವ ನಿರೀಕ್ಷೆಯಿದೆ. ಪ್ರಸ್ತುತಿ: ಚಿತ್ರವು ಕನ್ನಡ ಚಿತ್ರೋದ್ಯಮಕ್ಕೆ ತನ್ನ ವಿಶಿಷ್ಟ ಶೈಲಿಯ ಮೂಲಕ ಕೊಡುಗೆ ನೀಡುತ್ತಿದೆ. ಆಕರ್ಷಣೀಯತೆ: ಚಿತ್ರವು ವಿಶಿಷ್ಟ ಕಥಾಹಂದರ ಮತ್ತು ಕಲಾತ್ಮಕ ಶ್ರೇಷ್ಠತೆಯನ್ನು ಹೊಂದಿದ್ದು, ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲವನ್ನು ಉಂಟುಮಾಡುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ ವಿಕೋಪಗಳಿಂದಾಗಿ ನಮ್ಮ ಸುತ್ತಮುತ್ತಲು ದುರಂತಗಳು ದೈನಂದಿನವಾಗಿ ಏರುತ್ತಿವೆ, ಹೆಚ್ಚಿನ ಮಳೆ, ಭೂಮಿ,ಗುಡ್ಡ ಬೆಟ್ಟಗಳ ಕುಸಿತ, ನದಿ ಕೆರೆಗಳು ತುಂಬಿ ತುಳುಕುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ ಅಲ್ಲದೇ ಮನುಷ್ಯ ಪ್ರಾಣಿ ಸಂಕುಲಕ್ಕೆ ಹಾನಿ ಮತ್ತು ತೊಂದರೆಗಳು ಎದುರಾಗುತ್ತಿವೆ. ರಸ್ತೆಗಳು ದಾರಿ ಮನೆ ಹಾಗೂ ವಿಶಾಲ ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಜನ ಸಂಚಾರ ವಾಹನ ಚಲಾವಣೆ ಎಲ್ಲವೂ ಸಂಕಷ್ಟಕರವಾಗಿದೆ. ಎಡ ಬಿಡದೆ ಬರುವ ಮಳೆ, ವೇಗವಾಗಿ ಬೀಸುವ ಗಾಳಿ ಮನೆ ಕಟ್ಟಡಗಳಿಗೆ ಹಾಗೂ ಗಿಡ ಮರಗಳು ಧರೆಗುರುಳಿ ಉಂಟಾಗುತ್ತಿರುವ ಹಾನಿಗಳು ಎಲ್ಲವೂ ಮನುಷ್ಯ ರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಜೀವನ್ಮರಣ ಹೋರಾಟದ ನಡುವೆ ಕೆಲವು ಜೀವಗಳು ಮಣ್ಣಿನಲ್ಲಿ ಮಾಯವಾಗಿ ಇನ್ನು ಕೆಲವು ಜೀವಗಳು ಮೃತವಾಗಿ. ಕಣ್ಣು ಮುಂದೆಯೇ ನೀರಿನಲ್ಲಿ ಜನ…

Read More

ಬೀದರ್: ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಕ್ಕಳ, ಹೆರಿಗೆ ಹಾಗೂ ಪ್ರಸೂತಿ ವಿಭಾಗ, ರೋಟರಿ ಕ್ಲಬ್ ಆಫ್ ಬೀದರ ನ್ಯಿವ್ ಸಂಚೂರಿ ಸಮುದಾಯ ಆರೋಗ್ಯ ಕೇಂದ್ರ ಸಂತಪೂರ ಇವರ ಸಹಯೋಗದಲ್ಲಿ ವಿಶ್ವ ಸ್ತನಪಾನ್ಯ ಸಪ್ತಾಹ 2024 ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಮಕ್ಕಳ ವೈದ್ಯರಾದ ಡಾ.ಶರಣ ಬುಳ್ಳಾ ನೆರವೇರಿಸಿದರು. ರೋಟರಿ ಕ್ಲಬ್ ಆಫ್ ಬೀದರ ನ್ಯಿವ್ ಸಂಚೂರಿ ಅಧ್ಯಕ್ಷರಾದ ಶಿವಕುಮಾರ ಪಖಾಲ್, ಡಾ.ರೇಣುಕಾ, ಡಾ.ರಾಹುಲ್ ಬೇದ್ರೆ, ಡಾ.ಮುಸ್ತಫಾ, ಡಾ.ರಾಜಕುಮಾರ ಹೆಬ್ಬಾಳೆ ಬ್ರಿಮ್ಸ್ ಸೇರಿದಂತೆ ತಾಯಂದಿರು, ಆಶಾ ಕಾರ್ಯಕರ್ತರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಾವಗಡ: ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರ ಅತಿ ಹೆಚ್ಚು ಸುಧಾರಣೆಯನ್ನು ಕಾಣುತ್ತಿದೆ ಎಂದು ಪಾವಗಡದ ಶಾಸಕ ಎಚ್.ವಿ. ವೆಂಕಟೇಶ್ ತಿಳಿಸಿದ್ದಾರೆ. ಬುಧವಾರ ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಈ.ವೈ. ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ “ಸೌರಭ –2024 ಕಾಲೇಜು ವಾರ್ಷಿಕೋತ್ಸವ” ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು , ನಾವು ಶಿಕ್ಷಣವನ್ನ ಪಡೆಯುತ್ತಿದ್ದಂತಹ ಸಂದರ್ಭದಲ್ಲಿ ನೆಲದ ಮೇಲೆ ಕುಳಿತು ಪಾಠವನ್ನು ಕೇಳುವಂತಿತ್ತು, ಆದರೆ ಈಗ ಅತ್ಯಾಧುನಿಕ ಪರಿಕರಗಳಿಂದ ಪಾಠ ಕೇಳುವಂತಹ ಭಾಗ್ಯವನ್ನು ತಾವೆಲ್ಲರೂ ಪಡೆದುಕೊಂಡಿದ್ದೀರಾ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಉನ್ನತವಾದಂತ ಶಿಕ್ಷಣವನ್ನು ಪಡೆದುಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿ ಮತ್ತು ಆಡಿಟೋರಿಯಂ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಗುದ್ದಲಿ ಪೂಜೆಯನ್ನು ನೆರವೇರಿಸುತ್ತೇವೆ, ಇತ್ತೀಚಿನ ದಿನಗಳಲ್ಲಿ ಕಾಲೇಜು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ವಿ.ಎನ್.ಮುರಳಿಧರ್ ಮಾತನಾಡಿ, 2024ನೇ ಶೈಕ್ಷಣಿಕ ಸಾಲಿನ…

Read More

ತುಮಕೂರು: ಸಾಲುಮರದ ತಿಮ್ಮಕ್ಕ ಅವರ 113ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಆಹ್ವಾನಿಸಲು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಇದೇ ವೇಳೆ ಸ್ವಾಮೀಜಿ ಸಾಲುಮರದ ತಿಮ್ಮಕ್ಕ ಅವರನ್ನು ಆಶೀರ್ವದಿಸಿ ಸನ್ಮಾನಿಸಿದರು. ಆಗಸ್ಟ್ 21 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪರಿಸರ ವಾದಗಳು ಸೇರಿದಂತೆ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಪ್ರಾಣವನ್ನೇ ಒತ್ತೆಯಿಟ್ಟು ಕಳ್ಳನನ್ನ ಹಿಡಿದ ಸಾಹಸಿ ಕಾನ್ ಸ್ಟೇಬಲ್ ಗೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನೆ ಸಲ್ಲಿಸಿ ಪ್ರಶಂಸ ಪತ್ರವನ್ನು ನೀಡಿದರು. ಕಾನ್ ಸ್ಟೇಬಲ್ ದೊಡ್ಡಲಿಂಗಯ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತುಮಕೂರು ಎಸ್ ಪಿ ಅಶೋಕ್ ವೆಂಕಟ್, ಇನ್ನೊಬ್ಬ ಕಾನ್ ಸ್ಟೇಬಲ್ ಮೋಹನ್ ಗೂ ಪ್ರಶಂಸನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು. ಪೊಲೀಸ್ ಪದಕಕ್ಕೂ ಶಿಫಾರಸು ಮಾಡುವುದಾಗಿ ತುಮಕೂರು ಎಸ್ ಪಿ ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೀದರ್: ಜಿಲ್ಲಾ ಪೊಲೀಸರು 11 ಕಳ್ಳತನ ಪ್ರಕರಣಗಳಲ್ಲಿ, ಬಂಗಾರ, ಬೆಳ್ಳಿ, ನಗದು ಹಣ, ದ್ವಿಚಕ್ರ ವಾಹನ ಹಾಗೂ ಎಮ್ಮೆ ಕಳ್ಳತನ ಪ್ರಕರಣಗಳಲ್ಲಿ 5 ಜನ ಆರೋಪಿ ಬಂಧನ, 12 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆ ಬಾಳುವ ಸ್ವತ್ತುಗಳ ವಶ ಪಡಿಸಿಕೊಂಡಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಜಿಲ್ಲೆಯ ಹುಮನಾಬಾದ, ಭಾಲ್ಕಿ ಉಪ—ವಿಭಾಗದ ನುರಿತ ಅಧಿಕಾರಿ ಸಿಬ್ಬಂದಿಯವರ ಪ್ರತ್ಯೇಕವಾಗಿ ತಮ್ಮ ತಮ್ಮ ಉಪ-ವಿಭಾಗಳಲ್ಲಿ ತಂಡವನ್ನು ರಚಿಸಿದ್ದು, ತಂಡವು ದೇವಗಿರಿ ತಾಂಡಾದ ಮಂದಿರ ಕಳ್ಳತನ ಪ್ರಕರಣದಲ್ಲಿ 11 ಗ್ರಾಂ ಬೆಳ್ಳಿ ಮತ್ತು ಒಂದು ಗ್ರಾಂ ಚಿನ್ನಾಭರಣ, ನಗದು ಹಣ 79,970 ರೂಪಾಯಿ, ಮತ್ತು ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ತೆಲಂಗಾಣ ರಾಜ್ಯದಲ್ಲಿ ಕಳುವಾದ 9 ವಾಹನಗಳು ಮತ್ತು ಹುಮನಾಬಾದ ಠಾಣೆಯ ಒಂದು ದ್ವಿಚಕ್ರ ವಾಹನ ಹೀಗೆ 10 ದ್ವಿಚಕ್ರ ವಾಹನಗಳು, ಒಂದು ಅಪ್ಪಿ ಆಟೋ ವಶ ಪಡಿಸಿಕೊಂಡಿರುತ್ತಾರೆ. ಕಾರ್ಯಾಚರಣೆಯಲ್ಲಿ ಡಿ.ಎಸ್.ಪಿ. ಯವರಾದ ಜೆ.ಎಸ್.ನ್ಯಾಮಗೌಡರ, ಶಿವಾನಂದ ಪಾವಡಶೆಟ್ಟಿ, ಪ್ರತ್ಯೇಕವಾಗಿ ಹುಮನಾಬಾದ, ಚಿಟಗುಪ್ಪಾ ಸಿ.ಪಿ.ಐ. ಗುರುಲಿಂಗಪ್ಪಾ ಪಾಟೀಲ್, ಶ್ರೀನಿವಾಸ ಅಲ್ಲಾಪೂರೆ,…

Read More

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಪ್ಪ ಆಗ್ತಿರುವ ಖುಷಿಯಲ್ಲಿದ್ದಾರೆ. ರೆಬೆಲ್‌ಸ್ಟಾರ್ ಅಂಬರೀಶ್ ಕುಟುಂಬವು ಹೊಸ ಅತಿಥಿಯನ್ನು ಸ್ವಾಗತಿಸಲು ಸಜ್ಜಾಗಿದೆ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ 2023ರ ಜೂನ್ 5ರಂದು ಅದ್ದೂರಿಯಾಗಿ ಮದುವೆಯಾಗಿದ್ದರು. ಇನ್ನು ವರ್ಷತುಂಬುವಷ್ಟರಲ್ಲಿ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಗರ್ಭಿಣಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕನ್ನಡ ಚಿತ್ರರಂಗದ ಜ್ಯೂನಿಯರ್‌ ರೆಬೆಲ್‌ಸ್ಟಾರ್ ಖ್ಯಾತಿಯ ಅಭಿಷೇಕ್ ಅಂಬರೀಶ್ ಅವರು ಅಪ್ಪನಾಗುವ ಖುಷಿಯಲ್ಲಿದ್ದಾರೆ. ಮದುವೆಯಾಗಿ ಒಂದು ವರ್ಷದಲ್ಲಿಯೇ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ಸಿದ್ಧತಾಗಿದ್ದಾರೆ. ಇನ್ನು ಅವರ ಅಭಿಮಾನಿಗಳು ಮತ್ತೆ ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟಿಬರಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಂಬಿ ಕುಟುಂಬದಲ್ಲಿ ಇದೇ ವಾರ ಅವಿವಾ ಅವರಿಗೆ ಅದ್ದೂರಿಯಾಗಿ ಸೀಮಂತ ಮಾಡಲು ಪ್ಲಾನ್ ಮಾಡಲು ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಅಭಿಷೇಕ್ ಅಂಬರೀಶ್ ಅವರು ಮುಂದಿನ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಕಿಕ್ ಬಾಕ್ಸಿಂಗ್ ಕಲಿಯೋಕೆ ವಿದೇಶಕ್ಕೆ ಹೋಗಿದ್ದರು. ಆದರೆ, ಈಗ ಪತ್ನಿ ಗರ್ಭಿಣಿಯಾಗಿದ್ದು, ಸೀಮಂತ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿಯೇ ನಾಳೆ…

Read More

ಈ ವರ್ಷದ ಸ್ವಾತಂತ್ರ್ಯೋತ್ಸವವು ಡಾ.ಬಿ.ಆರ್. ಅಂಬೇಡ್ಕರ್‌ ಅವರ ಜೀವನ, ಕೊಡುಗೆ, ಹಾಗೂ ಭಾರತ ಸಂವಿಧಾನದ ನಿರ್ಮಾಣದ ಕುರಿತಾದ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಆಯೋಜಿಸಲಾಗುತ್ತಿದ್ದು, ಇದರ ಅಂಗವಾಗಿ ಆಗಸ್ಟ್ 8ರಿಂದ 19ರವರೆಗೆ ಲಾಲ್‌ ಬಾಗ್‌ ಬೋಟಾನಿಕಲ್‌ ಗಾರ್ಡನ್‌, ಬೆಂಗಳೂರು ಇಲ್ಲಿ  ಫಲಪುಷ್ಪ ಪ್ರದರ್ಶನ ನಡೆಯಲಿದೆ. ಪ್ರದರ್ಶನದ ವಿಶೇಷತೆಗಳು: * ಡಾ. ಅಂಬೇಡ್ಕರ್‌ ಅವರ ಜೀವನದ ಪ್ರಮುಖ ಘಟನೆಗಳ ಮೂರ್ತಿಗಳು ಮತ್ತು ನೋಟಗಳು. *  ಸಂವಿಧಾನ ಕುರಿತ ಪಠ್ಯ, ಚಿತ್ರಗಳು, ಹಾಗೂ ಮಾಹಿತಿ ಫಲಕಗಳು. *  ಅಂಬೇಡ್ಕರ್‌ ಅವರ ವಿಚಾರಧಾರೆಯನ್ನು ಪ್ರತಿಬಿಂಬಿಸುವ ಚಿನ್ನದ ಸ್ಮರಣಿಕೆ. *  ವಿವಿಧ ಬಗೆಯ ಹೂಗಳು, ಸಸ್ಯಗಳು, ಮತ್ತು ಔಷಧೀಯ ಗಿಡಗಳ ಪ್ರದರ್ಶನ. ಪ್ರವೇಶದ ಟಿಕೆಟ್‌ ದರಗಳು:  ವಯಸ್ಕರು: ₹80 (ಸಾಮಾನ್ಯ ದಿನಗಳಲ್ಲಿ), ₹100 (ರಜೆ ದಿನಗಳಲ್ಲಿ) ಮಕ್ಕಳು: ₹30  ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಗಳು: (ಉಚಿತ ಪ್ರವೇಶ)  ಟಿಕೆಟ್‌ ಸೌಲಭ್ಯಗಳು:   * ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರಗಳ ವ್ಯವಸ್ಥೆ. * ಆನ್‌…

Read More