Author: admin

ಹಿಂದೂಗಳಿಗೆ ಬಹಳ ಶ್ರೇಷ್ಠವಾದ ಹಾಗೂ ವಿಶೇಷವಾದ ಮಾಸ ಶ್ರಾವಣ ಮಾಸ ಆಗಿದೆ.  ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವ, ಪಾರ್ವತಿ, ಲಕ್ಷ್ಮಿ, ವಿಷ್ಣು ಸೇರಿದಂತೆ ಅನೇಕ ದೇವಾನುದೇವತೆಗಳ ಪೂಜೆ ಮಾಡುತ್ತಾರೆ. ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸ ಇದಾಗಿದೆ. ಈ ಮಾಸದಲ್ಲಿ ಜಪ–ತಪ, ವ್ರತ–ನಿಯಮ, ಪೂಜೆ–ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ–ಯಾಗ, ಹೋಮ—ಹವನಗಳು ಹೆಚ್ಚಾಗಿ ನಡೆಯುತ್ತದೆ. ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಶ್ರಾವಣ ಬಹಳ ಪ್ರಶಸ್ತವಾಗಿದೆ. ಈ ಮಾಸದಲ್ಲಿ ಪ್ರಕೃತಿಯಲ್ಲಿನ ಗಿಡಮರಗಳು ಚಿಗುರೊಡೆದು ಹಚ್ಚಹಸಿರಾಗಿ, ಹೂಗಳನ್ನು ಬಿಟ್ಟು ಬಣ್ಣಗಳಿಂದ ಕಂಗೊಳಿಸುತ್ತಾ ಸಂತಸದಿಂದ ಇರುತ್ತದೆ. ಹಾಗೇ ಪ್ರಾಣಿ ಪಕ್ಷಿಗಳು ಕೂಡ ಉಲ್ಲಾಸದಿಂದ ಇರುತ್ತದೆಯಂತೆ. ಇದನ್ನು ಕಂಡು ದೈವಾನುದೇವತೆಗಳು ಕೂಡ ಸಂಭ್ರಮ ಪಡುತ್ತಾರೆ ಅನ್ನೋ ನಂಬಿಕೆ ಇದೆ. ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ…

Read More

ತುಮಕೂರು:  ನಿಧಿ ಆಸೆಗಾಗಿ ಚೋರರು ಬಂಡೆಗಳನ್ನು ಕೊರೆದು ಶೋಧ ನಡೆಸಿರುವ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ವಡ್ಡರಹಳ್ಳಿ ಗ್ರಾಮದ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.  ವಡ್ಡರಹಳ್ಳಿ ಗ್ರಾಮದಿಂದ ಹೊರಭಾಗದಲ್ಲಿರುವ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿಧಿಗಾಗಿ ಮಧ್ಯರಾತ್ರಿ  ಮೂರು ಕಡೆ ಬಂಡೆ ಕೊರೆದಿದ್ದಾರೆ. ಅರಿಶಿನ ಕುಂಕಮ, ತೆಂಗಿನಕಾಯಿ ಹಾಗೂ ವಸ್ತ್ರವನ್ನಿಟ್ಟು ಪೂಜೆ ಮಾಡಿರುವ ಕಿಡಿಗೇಡಿಗಳು. ನಿಧಿ ಸಿಗದೇ ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ದೇವಸ್ಥಾನಕ್ಕೆ ಪೂಜೆ ಮಾಡಲು ಬಂದ ಅರ್ಚಕರಿಂದ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಸ್ಥಾನಕ್ಕೆ ಭದ್ರತೆ ಕೊಡುವಂತೆ ಪೊಲೀಸರಿಗೆ ಗ್ರಾಮಸ್ಥರಿಂದ ಮನವಿ ಸಲ್ಲಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ಶಾಲಾ ಸಹಪಾಠಿಗಳ ಲೈಂಗಿಕ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ. ಸಿಡೇದಹಳ್ಳಿ ನಿವಾಸಿ ಮಮತಾ (31)  ಸಾವಿಗೆ ಶರಣಾದ ಮಹಿಳೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜೆ.ಪಿ.ನಗರ ನಿವಾಸಿ, ಆರೋಪಿ ಗಣೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಅಶೋಕ್‌ ಎಂಬಾತನ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮಮತಾಳ ಹೈಸ್ಕೂಲ್‌ ಸಹಪಾಠಿಗಳಾಗಿದ್ದರು. ಆ ನಂತರ ಮಮತಾರಿಗೆ ಕೆಲ ವರ್ಷಗಳ ಹಿಂದೆ ಲೋಕೇಶ್‌ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗೆ 6 ವರ್ಷದ ಗಂಡು ಮಗು ಇದ್ದು, ಸಿಡೇದಹಳ್ಳಿಯಲ್ಲಿ ವಾಸವಿದ್ದರು. ಲೋಕೇಶ್‌ ಫ‌ುಡ್‌ ಡಿಲಿವರಿ ಏಜೆಂಟ್‌ ಆಗಿ ಕೆಲಸ ಮಾಡಿಕೊಂಡಿದ್ದರು.  ಬುಧವಾರ ಪತ್ನಿಗೆ ಲೋಕೇಶ್ ಕರೆ ಮಾಡಿದಾಗ ಅವರು ಕಾಲ್ ರಿಸೀವ್ ಮಾಡಿಲ್ಲ. ಹಾಗಾಗಿ ಪಕ್ಕದ ಮನೆಯವರಿಗೆ ಕರೆ ಮಾಡಿದ ವೇಳೆ ಮಮತಾ ಸಾವಿಗೆ ಶರಣಾಗಿರುವುದು ತಿಳಿದು ಬಂದಿದೆ. ಹೈಸ್ಕೂಲ್‌ನ ಸಹಪಾಠಿಗಳಾದ ಅಶೋಕ್‌ ಮತ್ತು ಗಣೇಶ್‌, ಮಮತಾ ಅವರಿಗೆ ಕಿರುಕುಳ ನೀಡುತ್ತಿರುವ ವಿಚಾರವನ್ನು ಅವರು ಡೆತ್ ನೋಟ್…

Read More

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಬರೋಬ್ಬರಿ 2.10 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಸಲ್ಲಿಸಿದವರ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಬಿಡುಗಡೆ ಮಾಡಿದೆ. ಬಿಎ ಪದವಿ ಪಡೆದ 63,769 ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, 38,692 ಇಂಜಿನಿಯರಿಂಗ್ ಪದವೀಧರರು, 36,091 ಬಿಎಸ್ಸಿ, 34,795 ಬಿಕಾಂ, 6156 ಬಿಟೆಕ್, 3306 ಬಿಸಿಎ, 803 ಎಂಬಿಬಿಎಸ್ ಪದವೀಧರರು ಕೆಎಎಸ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ನೇರ ಪದವಿ, ನೇರ ಸ್ನಾತಕೋತ್ತರ ಪದವಿ ಸೇರಿ ಒಟ್ಟು 144 ಪ್ರಕಾರ ಪದವಿ ಓದಿದವರು ಕೆಎಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ಮುಡಾ ಹಗರಣ ಕೆಣಕಿದ ಬಿಜೆಪಿ ನಾಯಕರಿಗೆ  ಬಿಸಿ ಮುಟ್ಟಿಸಲು ಕಾಂಗ್ರೆಸ್ ಸಜ್ಜಾಗಿದ್ದು, ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಮುಂದಾಗಿದೆ. ಸದ್ಯ ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ವಿವಾದವನ್ನು ಕೈಗೆತ್ತಿಕೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ಪ್ರತಿಮೆ ಸಿದ್ದಪಡಿಸಿದ ಗೋಡೌನ್‌ ನಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. ಕೆಂಗೇರಿ ಬಳಿಯ ಗೋಡೌನ್‌ ಗೆ ಭೇಟಿ ನೀಡಿದ ಕಾರ್ಕಳ ಟೌನ್ ಠಾಣೆ ಪೊಲೀಸರ ತಂಡ ಪರಿಶೀಲನೆ ನಡೆಸಿದೆ. ಮಹಜರು ಸೇರಿದಂತೆ ಪ್ರತಿಮೆ ನಿರ್ಮಾಣಕ್ಕೆ ಬಳಸಿದ್ದ ವಸ್ತುಗಳನ್ನ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ವಿಜಯಪುರ: ಮುಡಾ ಹಗರಣದ ವಿರುದ್ಧ ಬಿಜೆಪಿ ನಾಯಕರು ಪಾದಯಾತ್ರೆ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಮಾಡಿದ್ರೂ ಮಾಡೋರೆ, ವಿಜಯೇಂದ್ರ ಮಾಡಿರು ಮಾಡೋರೆ, ಅಶೋಕ ಮಾಡಿದ್ರು ಮಾಡೋರೆ. ನೀವೆಲ್ಲಾ ವಿಧಾನಸಭೆಗೆ ಹೋಗಿ ಅಡ್ಜೆಸ್ಟ್ಮೆಂಟ್ ಮಾಡಿಕೊಳ್ತೀರಿ. ನಮ್ಮ‌ ಮುಂದೆ‌ ಮಾತ್ರ ಸುಮ್ನೆ ಇರ್ತೀರ. ನೀವೇ ಡೈರೆಕ್ಷನ್ ಕೊಡ್ತೀರಿ. ಸರ್ ನೀವೆಲ್ಲ ಬಿಲ್ ಗಳನ್ನ ಪಾಸ್ ಮಾಡಿಕೊಳ್ಳಿ. ನಾವೂ ಧರಣಿ ಕೂರುತ್ತೀವಿ. ಅಡ್ಜರ್ನ್ ಮಾಡಿ ಹೀಗೆ ನೀವೂ ಕೊಡುವ ಡೈರೆಕ್ಷನ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಆಗ್ತಾ ಇದೆ. ಸುಮ್ಮ ಸುಮ್ಮನೆ ಕೇಸ್ ಹಾಕುತ್ತಾ ಇದ್ದಾರೆ. ಇವತ್ತು ಬಿಜೆಪಿ ಕಾರ್ಯಕರ್ತರು ಹೊರ ಬರುವ ಪರಿಸ್ಥಿತಿ ಇಲ್ಲ. ನೀವ್ ನೋಡುದ್ರೆ ಅಲ್ಲಿ ಹಲ್ಲು ಬಿಡುತ್ತಾ ನಿಲ್ತೀರಿ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ನಾನು ಸಿದ್ದರಾಮಯ್ಯ ಅವರ ಮುಖವನ್ನ ಬರೀ ವಿಧಾನಸೌಧದಲ್ಲಷ್ಟೇ ನೋಡಿದ್ದೀನಿ. ರಾತ್ರಿ ಡಿಕೆಶಿ ಮನೆಗೆ ಹೋಗಿ ಪಾರ್ಟಿ ಮಾಡಿ, ಎಲ್ಲಿ…

Read More

ಬೆಂಗಳೂರು: ಇನ್ನು ಮುಂದೆ ವೈದ್ಯಕೀಯ ಸಂಸ್ಥೆಗಳು ನೋಂದಣಿ ಸಂಖ್ಯೆ, ಸಂಸ್ಥೆ, ಮಾಲೀಕರ ಹೆಸರನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಈ ಬಗ್ಗೆ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದು, ಈ ಮೊದಲು ನಿಗದಿಪಡಿಸಿದ ಅಳತೆಯ ಫಲಕಗಳನ್ನು ಕ್ಲಿನಿಕ್ ಗಳಲ್ಲಿ ಅಳವಡಿಸುವುದು ಕಷ್ಟಸಾಧ್ಯ ಎಂದು ತಿಳಿಸಿದ್ದ ಭಾರತೀಯ ವೈದ್ಯಕೀಯ ಸಂಘ, ಅಳತೆಯ ನಿಯಮ ಸಡಿಲಿಸಲು ಕೋರಿತ್ತು. ಹೀಗಾಗಿ, ಮಾಹಿತಿ ಫಲಕದ ಅಳತೆಯನ್ನು ಕನಿಷ್ಠ 5 ಅಡಿ ಅಗಲ ಹಾಗೂ 2.5 ಅಡಿ ಉದ್ದಕ್ಕೆ ನಿಗದಿಪಡಿಸಲಾಗಿದೆ. ಆಸ್ಪತ್ರೆಗಳು ಮೊದಲಿನ ಆದೇಶದಂತೆ ಕನಿಷ್ಠ 7 ಅಡಿ ಅಗಲ, 3 ಅಡಿ ಉದ್ದದ ಫಲಕವನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಫಲಕದಲ್ಲಿ ಮೂರು ಸಾಲು ಮಾತ್ರ ಇರಬೇಕು. ಮೊದಲ ಸಾಲಿನಲ್ಲಿ ಕೆಪಿಎಂಇ ನೋಂದಣಿ ಸಂಖ್ಯೆ, ಎರಡನೆ ಸಾಲಿನಲ್ಲಿ ಆಸ್ಪತ್ರೆಯ ಹೆಸರು, ಮೂರನೆ ಸಾಲಿನಲ್ಲಿ ಮಾಲೀಕರ ಅಥವಾ ವ್ಯವಸ್ಥಾಪಕ ಹೆಸರನ್ನು ನಮೂದಿಸಬೇಕು. ಫಲಕದಲ್ಲಿ ನಮೂದಿಸಿರುವ ಅಕ್ಷರಗಳು ಎದ್ದು ಕಾಣುವಂತೆ ಕಪ್ಪು ಅಕ್ಷರದಲ್ಲಿ ಇರಬೇಕು. ಅದನ್ನು ಬೇರೆಡೆಗೆ…

Read More

ಬೆಂಗಳೂರು: ರಾಜ್ಯಪಾಲರು ನೀಡಿದ ಬರೀ ನೋಟಿಸ್ ಗೆ ಗಡಗಡ ನಡುಗುತ್ತಿದ್ದೀರಾ. ಇನ್ನೂ ಅನುಮತಿ ಕೊಟ್ಟರೆ ನಿಮ್ಮ ಕತೆ ಏನಾಗಬಹುದು? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ  ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ–ಜೆಡಿಎಸ್ ಜಂಟಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಅವರು ಹೇಳಿದರು. ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ದೊಡ್ಡ ಹೋರಾಟವಿದು. ಕರ್ನಾಟಕದ ಇತಿಹಾಸದಲ್ಲಿಯೇ ಹಿಂದೆಂದು ನಡೆಯದ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗಾಗಿ ನಮ್ಮ ಹೋರಾಟ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು:  ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರನ್ನು ಯಾಕೆ ಬಂಧಿಸಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು,  ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರೇ ಇದರ ಕಿಂಗ್‌ಪಿನ್‌. ಅವನನ್ನು ಏಕೆ ಬಂಧಿಸಿಲ್ಲ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು. ಮುಡಾದಲ್ಲಿ ಅಂದಾಜು ನಾಲ್ಕು ಸಾವಿರ ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಇದರ ಸೂತ್ರಧಾರ ಭೈರತಿ ಸುರೇಶ್‌. ಅವನು ಏಕೆ ಹೊರಗಡೆ ಇದ್ದ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸರ್ಕಾರ ಈತನನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನೆ ಮಾಡಿದರು. ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಒಬ್ಬ ಸಚಿವರು ಈಗಾಗಲೇ ಜೈಲು ಪಾಲಾಗಿದ್ದಾರೆ. ಇದರಲ್ಲಿ 189 ಕೋಟಿ ಹಗರಣ ಆಗಿದೆ. ಅದಕ್ಕಾಗಿ ಸಚಿವರ ರಾಜೀನಾಮೆ ಪಡೆದು ಅವರನ್ನು ಇ.ಡಿ ಬಂಧಿಸಿದೆ. ಹಾಗಾದರೆ ಭೈರತಿ ಸುರೇಶ್‌ ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಮುಂದುವರೆದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ನಮ್ಮತುಮಕೂರಿನ ಕ್ಷಣ…

Read More

ರಾಮನಗರ: ಸಿದ್ದರಾಮಯ್ಯನವರ ಪತ್ನಿ ಅವರಿಗೆ ಮುಡಾ ನಿವೇಶನ ಕೊಟ್ಟಾಗ ಸಿಎಂ ಆಗಿದ್ದವರು ಯಾರು? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಬಿಜೆಪಿ–ಜೆಡಿಎಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ಶನಿವಾರ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಸಹೋದರ ಅರಿಶಿನ ಕುಂಕುಮಕ್ಕೆ ದಾನವಾಗಿ ನೀಡಿದ ಜಮೀನಿನ ವಿಚಾರದಲ್ಲಿ ಅಕ್ರಮ ನಡೆದಿದೆಯಾ? ಅವರು ಸರ್ಕಾರಿ ಜಮೀನು ಕಬಳಿಸಿದ್ದಾರಾ? ಅಕ್ರಮವಾಗಿ ಜಮೀನು ಮಂಜೂರಾತಿ ಮಾಡಿಕೊಂಡಿದ್ದಾರಾ? ಅವರ ಜಮೀನನ್ನು ಮುಡಾದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಕಾರಣಕ್ಕೆ ಪರಿಹಾರವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ಬೊಮ್ಮಾಯಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಿವೇಶನ ನೀಡಿದ್ದೀರಿ. ಈ ನಿವೇಶನಗಳನ್ನು ಈಗ ಸಚಿವರಾಗಿರುವ ಭೈರತಿ ಸುರೇಶ್ ಕೊಟ್ಟಿದ್ದಾರಾ? ಸಿದ್ದರಾಮಯ್ಯ ಈ ನಿವೇಶನ ನೀಡಲು ಸಹಿ ಹಾಕಿದ್ದಾರಾ? ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿಜೆಪಿಯವರು ಮುಡಾದಲ್ಲಿ ಅಧಿಕಾರ ಹೊಂದಿದ್ದಾಗ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಮುಡಾದವರು ತಮ್ಮ ತಪ್ಪಿಗೆ ಪರಿಹಾರವಾಗಿ…

Read More