Subscribe to Updates
Get the latest creative news from FooBar about art, design and business.
- ಗ್ರಾಮೀಣ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಶೇ.7.5ರ ವಿಶೇಷ ಮೀಸಲಾತಿ ವಿಸ್ತರಿಸಲು ಆಗ್ರಹ
- ಮಾದಿಗ ಸಮಾಜಕ್ಕೆ ಸಚಿವ ಸ್ಥಾನ ಕೋರಿ ನೊಣವಿನಕೆರೆ ಅಜ್ಜಯ್ಯನವರಿಗೆ ಭಿನ್ನವತ್ತಳೆ
- “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ
- ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
- ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ
- ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ
- ತುಮಕೂರು: ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ಪೌಷ್ಟಿಕಾಂಶದ ಅರಿವು ಕಾರ್ಯಕ್ರಮ
- ವಸತಿ ಶಾಲೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ಕಡ್ಡಾಯ: ಆಶ್ವಿಜಾ ಬಿ.ವಿ.
Author: Ganesh Tumkuru
ಗುಬ್ಬಿ: ವಿಶ್ವದ ಅತ್ಯಂತ ಹಳೆಯ ಸಮರ ಕಲೆ ಕೇರಳ ಮೂಲದ ಕಲರಿಪಯಟ್ಟು ಕಲೆಯನ್ನು ಆಶ್ರಮದ ಶಾಲಾ ಮಕ್ಕಳಿಗೆ ಕಲಿಸಲು ಚಿದಂಬರ ಪಬ್ಲಿಕ್ ಸ್ಕೂಲ್ ಆ. 17 ರಿಂದ 22 ರವರೆಗೆ ಆರು ದಿನಗಳ ಕಾಲ ಕಲರಿಪಯಟ್ಟು ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶ್ರೀ ಚಿದಂಬರಾಶ್ರಮ ಅಧ್ಯಕ್ಷ ಸಚ್ಚಿದಾನಂದ ಶರ್ಮ ತಿಳಿಸಿದ್ದಾರೆ. ಸಾಂಸ್ಕೃತಿಕ ಪರಂಪರೆಯ ಸಮರ ಕಲೆ ಕಲರಿಪಯಟ್ಟು ಕಲಿತು ದೇಶ ವಿದೇಶದಲ್ಲೂ ಖ್ಯಾತಿ ಪಡೆದ ಸುದರ್ಶನ್ ಪಂಡಿತ್ ಅವರು ನಮ್ಮ ಚಿದಂಬ ರಾಶ್ರಮದ ಹಳೆಯ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಎನಿಸಿದೆ. ಇವರ ಕಲೆಯ ಪ್ರಕಾರಗಳನ್ನು ಮಕ್ಕಳಿಗೆ ಕಲಿಸಲು ಇದೇ ತಿಂಗಳ 17 ಬೆಳಿಗ್ಗೆ 10.30 ಕ್ಕೆ ಶಿಬಿರ ಉದ್ಘಾಟನೆ ಆಶ್ರಮದ ಆರ್ಟ್ ಯೋಗ ಧ್ಯಾನ ಮಂದಿರದಲ್ಲಿ ಆಗಲಿದೆ ಎಂದರು. ಸುದರ್ಶನ್ ಪಂಡಿತ್ 2000 ಇಸವಿಯಲ್ಲಿ ಕಲರಿಯ ಗುರುಕುಲಂ ಶ್ರೀ ರಂಜನ್ ಮುಲ್ಲರತ್ ಅವರ ಮಾರ್ಗದರ್ಶನದಲ್ಲಿ ಕಲರಿಪಯಟ್ಟು ಸಮರ ಕಲೆ ಕಲಿಕೆ ಆರಂಭಿಸಿ, ಇಂದು ಕಲರಿ ಸತ್ತಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ 90…
ಬೀದರ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಸಮೀಪದ ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಆಟೋ (ಟಂಟಂ) ಹಾಗೂ ಟ್ಯಾಂಕರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಬೀದರ್ ತಾಲೂಕಿನ ಸಿಂಧೋಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜಗೀರಾ ಗ್ರಾಮದವರು ಎಂದು ತಿಳಿದುಬಂದಿದೆ. ಟಂಟಂ ಚಾಲಕ ದೇವಿದಾಸ ಸೇರಿದಂತೆ ಕೂಲಿ ಕಾರ್ಮಿಕರಾದ ರೇಖಾ, ರೇಷ್ಮಾ, ಕವಿತಾ ಹಾಗೂ ಇತರರು ಸಾವನ್ನಪ್ಪಿದ್ದಾರೆ. ಆಟೋದಲ್ಲಿ ಒಟ್ಟು 11 ಜನ ಕಾರ್ಮಿಕರಿದ್ದರು ಎನ್ನಲಾಗಿದ್ದು, ಮೃತ ಕಾರ್ಮಿಕರು ಪ್ರತಿದಿನ ಕೂಲಿ ಕೆಲಸಕ್ಕೆಂದು ತೆಲಂಗಾಣಕ್ಕೆ ತೆರಳುತ್ತಿದ್ದರು. ಎಂದಿನಂತೆ ಕೆಲಸ ಮುಗಿಸಿ ಸಂಜೆ ವಾಪಸ್ ಊರಿಗೆ ಮರಳುವಾಗ ಈ ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕೆಲ ಕಾರ್ಮಿಕರ ಮೃತದೇಹಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಕುರಿತು ಬೀದರ್ ಹಾಗೂ ತೆಲಂಗಾಣ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಜಹೀರಾಬಾದ್…
ತುಮಕೂರು: ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಹಾಗೂ ‘ಅಗ್ನಿಯುಗದ ಹರಿಕಾರ’ ಖುದಿರಾಮ್ ಬೋಸ್ ಅವರ 118ನೇ ಹುತಾತ್ಮ ದಿನವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಒ) ನೇತೃತ್ವದಲ್ಲಿ ತುಮಕೂರಿನ ವಿವಿಧ ಶಾಲಾ-ಕಾಲೇಜುಗಳು, ಹಾಸ್ಟೆಲ್ ಹಾಗೂ ಮೈದಾನಗಳಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, “ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ಹೋರಾಡಿದ ಖುದಿರಾಮ್ ಬೋಸ್, ತಮ್ಮ 18ನೇ ವಯಸ್ಸಿನಲ್ಲೇ ನೇಣುಗಂಬಕ್ಕೇರಿದರು. ನೇಣಿಗೆ ಹೋಗುವ ಮುನ್ನವೂ ಎದೆಯುಬ್ಬಿಸಿ, ಮುಖದಲ್ಲಿ ಮುಗುಳ್ನಗೆಯೊಂದಿಗೆ ಧೀರತನ ಮೆರೆದ ಅವರ ಬಲಿದಾನ ಕಂಡು ಬಂಗಾಳದ ಜನತೆ ದಿಗ್ಭ್ರಾಂತರಾದರು. ಅಂದಿನಿಂದ ಪ್ರತಿಯೊಬ್ಬ ತಾಯಂದಿರೂ ತಮ್ಮ ಮನೆಯಲ್ಲೂ ಖುದಿರಾಮ್ ಹುಟ್ಟಲಿ ಎಂದು ಬಯಸುವಷ್ಟು ಅವರು ಜನಮಾನಸದಲ್ಲಿ ಸ್ಫೂರ್ತಿಯಾದರು” ಎಂದು ಸ್ಮರಿಸಿದರು. “ಬ್ರಿಟಿಷರ ದೌರ್ಜನ್ಯವನ್ನು ಭಾರತೀಯರು ಎಂದಿಗೂ ಸುಮ್ಮನೆ ಸಹಿಸುವುದಿಲ್ಲ ಎಂಬುದನ್ನು ಪೂರ್ವ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಕೆಚ್ಚೆದೆಯಿಂದ ತೋರಿಸಿಕೊಟ್ಟ ಧೀರ ಯೋಧ ಖುದಿರಾಮ್. ಬಂಗಾಳದ ಜನತೆ ಅವರನ್ನು…
ಸರಗೂರು: ಕ್ಷೇತ್ರದ ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲ್ಲೂಕಿನ ದೇವಲಾಪುರ ಹುಂಡಿ, ಬಾಡಗ, ಹೊಸಕೋಟೆ, ಕಂದಲಿಕೆ ತಿಟ್ಟು, ಮೊಳೆಯೂರು, ನಡಾಡಿ, ಬಂಕವಾಡಿ, ಗದ್ದೆಹಳ್ಳ ಮತ್ತು ಸಾಗರೆ ಗ್ರಾಮಗಳಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುಮಾರು ರೂ. 3.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮೈಸೂರು-ಮಾನಂದವಾಡಿ ರಸ್ತೆ ಅಗಲೀಕರಣ: ಮೈಸೂರು-ಮಾನಂದವಾಡಿ ೪ ಪಥದ ರಸ್ತೆ ಅಗಲೀಕರಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ (ಜನವರಿಯಲ್ಲಿ) ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು. ಜಿಲ್ಲೆಯಲ್ಲೇ ಅತ್ಯಂತ ವಿಶಾಲವಾದ ಹಾಗೂ ಹಿಂದುಳಿದ ತಾಲೂಕಾಗಿದ್ದರೂ, ಕಾಂಗ್ರೆಸ್ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿದೆ. ಮಾಜಿ ಶಾಸಕ ದಿ. ಚಿಕ್ಕಮಾದು ಹಾಗೂ ಮಾಜಿ ಸಂಸದ ದಿ. ಆರ್. ಧ್ರುವನಾರಾಯಣ್ ಅವರು ಕ್ಷೇತ್ರದ ಅಭಿವೃದ್ಧಿಗೆ…
ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಶಾಲಾ ಶತಮಾನೋತ್ಸವ ಕಾರ್ಯಕ್ರಮವೊಂದರಲ್ಲಿ ಕೊಪ್ಪಳದ ಶ್ರೀ ಗವಿಮಠದ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ತೀವ್ರ ಮುಜುಗರ ಉಂಟಾದ ಘಟನೆ ಸಂಭವಿಸಿದೆ. ಪ್ರವಚನ ನೀಡುತ್ತಿದ್ದ ವೇಳೆ ವೇದಿಕೆಯಲ್ಲಿ ಉಂಟಾದ ಗದ್ದಲ ಹಾಗೂ ಮೈಕ್ ಕಿರಿಕಿರಿಯಿಂದ ಬೇಸರಗೊಂಡ ಶ್ರೀಗಳು, ತಮ್ಮ ಪ್ರವಚನವನ್ನು ಅರ್ಧಕ್ಕೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ‘ಹೀರೇದ ಸೂಗಮ್ಮ ಶಾಲೆ’ಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಯವರು ಸಭಿಕರನ್ನು ಉದ್ದೇಶಿಸಿ ಪ್ರವಚನ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದರು. ಸ್ವಾಮೀಜಿಗಳು ಮಾತನಾಡುತ್ತಿದ್ದಂತೆಯೇ ವೇದಿಕೆಯಲ್ಲಿದ್ದವರು ಮೈಕ್‌ನಲ್ಲಿ ಸಚಿವರ ಆಗಮನವನ್ನು ಘೋಷಿಸಿದರು. ಅದೇ ವೇಳೆ ಸಚಿವರ ಬೆಂಬಲಿಗರ ಕೂಗಾಟ ಹಾಗೂ ವಾದ್ಯಮೇಳದ ಸದ್ದು ಮುಂತಾದ ಗೊಂದಲಗಳು ಉಂಟಾಗಿ ಸ್ವಾಮೀಜಿಯವರ ಪ್ರವಚನಕ್ಕೆ ಭಂಗ ತಂದವು. ಶ್ರೀಗಳ ಅಸಮಾಧಾನ: ಕಾರ್ಯಕ್ರಮದ ಶಿಸ್ತು ತಪ್ಪಿದ್ದರಿಂದ ಹಾಗೂ ವೇದಿಕೆಯಲ್ಲಿ ಉಂಟಾದ ಗದ್ದಲದಿಂದ ತೀವ್ರ ಮುಜುಗರ ಮತ್ತು ಕಿರಿಕಿರಿ…
ಬೆಂಗಳೂರು: ರಾಜ್ಯ ಸರ್ಕಾರವು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ 10 ಪ್ರಮುಖ ಸಚಿವರಿಗೆ ಬೆಂಗಳೂರು ನಗರದಲ್ಲಿ ಅಧಿಕೃತ ಸರ್ಕಾರಿ ನಿವಾಸ (ಬಂಗಲೆ) ಹಾಗೂ 19 ನೂತನ ಸಚಿವರಿಗೆ ಅಧಿಕೃತ ಸರ್ಕಾರಿ ವಾಹನಗಳನ್ನು (ಕಾರು) ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಈ ಕುರಿತು ಅಧಿಕೃತ ಆದೇಶ ನೀಡಿದ್ದು, ಕುಮಾರ ಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಬೆಂಗಳೂರಿನ ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಈ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವರಿಗೆ ಹಂಚಿಕೆಯಾದ ಸರ್ಕಾರಿ ನಿವಾಸಗಳ ವಿವರ: ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿಗಳು): ಸದಾಶಿವನಗರ, RMV 2ನೇ ಹಂತ, ಬೆಂಗಳೂರು ಎನ್. ಚೆಲುವರಾಯಸ್ವಾಮಿ: ನಂ. 3, ಕುಮಾರ ಕೃಪಾ ದಕ್ಷಿಣ, ಬೆಂಗಳೂರು ಬಿ. ಝೆಡ್. ಜಮೀರ್ ಅಹಮದ್ ಖಾನ್: ನಂ. 30, ಸ್ಯಾಂಕಿ ರಸ್ತೆ, ಬೆಂಗಳೂರು ಶಿವರಾಜ್ ಎಸ್.…
ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಅವರನ್ನು ಆಗಸ್ಟ್ 14, 2026 ರಂದು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ವಿಧಾನಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಗಳ ಉಪ-ನಿಯಮ 7(1) ರ ಅಡಿಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಈ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಸ್ಪೀಕರ್ ಹುದ್ದೆಗೆ ಸ್ಪರ್ಧಿಸುವವರು ಅಥವಾ ಪ್ರಸ್ತಾಪಿಸುವವರು ಆಗಸ್ಟ್ 13 ರ ಮಧ್ಯಾಹ್ನ 12 ಗಂಟೆಯ ಒಳಗಾಗಿ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ನೋಟಿಸ್ ಸಲ್ಲಿಸಬೇಕಾಗಿದೆ. ಈ ನೋಟಿಸ್‌ಗೆ ಇನ್ನೊಬ್ಬ ಸದಸ್ಯರ ಅನುಮೋದನೆ ಅಗತ್ಯವಿದ್ದು, ನಾಮನಿರ್ದೇಶಿತ ಸದಸ್ಯರು ಆಯ್ಕೆಯಾದಲ್ಲಿ ಹುದ್ದೆಯನ್ನು ಸ್ವೀಕರಿಸಲು ಸಿದ್ಧರಿರುವ ಬಗ್ಗೆ ಹೇಳಿಕೆಯನ್ನು ಹೊಂದಿರಬೇಕು. ಪ್ರಸ್ತುತ ಸ್ಪೀಕರ್ ಮತ್ತು ಉಪ ಸ್ಪೀಕರ್ ಹುದ್ದೆಗಳು ಖಾಲಿಯಾಗಿರುವ ಕಾರಣ ಹಿರಿಯ ಕಾಂಗ್ರೆಸ್ ಶಾಸಕ ಟಿ. ಬಿ. ಜಯಚಂದ್ರ ಅವರು ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೂನ್ 3 ರಂದು ಯು. ಟಿ. ಖಾದರ್ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನಂತರ ಸ್ಪೀಕರ್ ಸ್ಥಾನ ತೆರವಾಗಿತ್ತು. ತದನಂತರ ಉಪ ಸ್ಪೀಕರ್ ಆಗಿದ್ದ ರುದ್ರಪ್ಪ…
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ. ಮಂಗಳವಾರ ಸಿಸಿಬಿ (CCB) ಅಧಿಕಾರಿಗಳು ಕಾರಾಗೃಹದಲ್ಲಿ ನಡೆಸಿದ ದಿಢೀರ್ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತೆ ಪುಷ್ಟಿ ನೀಡಿದೆ. ಅತ್ಯಾಚಾರ ಪ್ರಕರಣದ ಸಜಾ ಕೈದಿಯಾಗಿ ಪ್ರತ್ಯೇಕ ಬ್ಯಾರಕ್ ನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಪ್ರಜ್ವಲ್ ಗೆ ಜೈಲಿನೊಳಗೆ ಮೊಬೈಲ್ ತಂದು ಕೊಟ್ಟವರು ಯಾರು? ಅವರು ಎಷ್ಟು ದಿನಗಳಿಂದ ಫೋನ್ ಬಳಕೆ ಮಾಡುತ್ತಿದ್ದರು? ಎಂಬುದರ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಜೈಲು ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಕಾನೂನು ಕಲಂಗಳಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಇದಕ್ಕೆ ಸಹಕರಿಸಿದವರ ವಿರುದ್ಧ ಪ್ರಕರಣ (FIR) ದಾಖಲಿಸಲು ಸಿಸಿಬಿ ಮುಂದಾಗಿದೆ. ರೇಣುಕಾಸ್ವಾಮಿ…
ತುಮಕೂರು: ವಿಬಿ ಜಿ ರಾಮ್ ಜಿ ಯೋಜನೆಯಡಿ ಕೇಂದ್ರದಿಂದ ಕೂಲಿ ಹಣ ಬರುತ್ತಿಲ್ಲ. ಬರ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಜನರು ಗುಳೆ ಹೋಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಿ ಉದ್ಯೋಗ ನೀಡಿ, ಜನರು ಗುಳೆ ಹೋಗುವುದನ್ನು ತಪ್ಪಿಸಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಗಳವಾರ ವಿಧಾನಸೌಧದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಕುಣಿಗಲ್ ತಹಶೀಲ್ದಾರ್ ಅವರ ಕಚೇರಿಯಿಂದ ಭಾಗವಹಿಸಿ ಮಾತನಾಡಿದ ಡಿಸಿಎಂ ಅವರು, ‘ಬರದಿಂದ ಉದ್ಯೋಗಕ್ಕಾಗಿ ಎಲ್ಲಿಗೆ ಹೋಗಬೇಕು? ಉತ್ತರ ಕರ್ನಾಟಕ ಭಾಗದಲ್ಲಿ ಜನ ಗುಳೆ ಹೋಗುತ್ತಿದ್ದಾರೆ. ಕೂಲಿ ಪಾವತಿಯಾಗದೇ ತಡೆಯಾಗಿರುವ ಏಳು ದಿನದ ಒಳಗಾಗಿ ಹಣ ಪಾವತಿಸಬೇಕು. ಕೂಲಿ ಹಣ ಪಾವತಿಯಾಗದೇ ಹೋದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀಡುವ ಕೆಲಸ ಎಂದೂ ಯಶಸ್ವಿಯಾಗಲು ಸಾಧ್ಯವಿಲ್ಲ. ಅವರಿಗೆ ತಕ್ಷಣ ಕೆಲಸ ಕೊಟ್ಟು ಉದ್ಯೋಗ ಒದಗಿಸಬೇಕು’ ಎಂದು ಹೇಳಿದರು. ಬರನಿರ್ವಹಣೆ,…
ಕಲಬುರಗಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ದೇಹಕ್ಕೆ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ ಪುತ್ರಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ನಡೆದಿದೆ. ಶಿವಲಾಲ್ ರಾಠೋಡ (49) ಹಾಗೂ ಅವರ ಪುತ್ರಿ ಮೀರಾ ರಾಠೋಡ (15) ಮೃತರು. ಶಿವಲಾಲ್ ಅವರ ಪತ್ನಿ ಸವಿತಾ (40), ಪುತ್ರ ಪ್ರಕಾಶ್, ಸಂಬಂಧಿಕರಾದ ಸುರೇಖಾ ಚೌವ್ಹಾಣ (30) ಮತ್ತು ವಿವೇಕ್ ಚೌವ್ಹಾಣ (12) ಗಾಯಾಳುಗಳು. ಗಾಯಾಳುಗಳನ್ನು ತಕ್ಷಣವೇ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ, ಶಿವಲಾಲ್ ಹಾಗೂ ಅವರ ಪತ್ನಿ ಸವಿತಾ ನಡುವೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇದರಿಂದ ಮನನೊಂದ ಸವಿತಾ ಅವರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಕರೆದುಕೊಂಡು ಪತಿಯನ್ನು ತೊರೆದು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಬೆಳಿಗ್ಗೆ ಶಿವಲಾಲ್…