Subscribe to Updates
Get the latest creative news from FooBar about art, design and business.
- “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ
- ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
- ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ
- ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ
- ತುಮಕೂರು: ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ಪೌಷ್ಟಿಕಾಂಶದ ಅರಿವು ಕಾರ್ಯಕ್ರಮ
- ವಸತಿ ಶಾಲೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ಕಡ್ಡಾಯ: ಆಶ್ವಿಜಾ ಬಿ.ವಿ.
- ಸಾಲ ಸೌಲಭ್ಯ: ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
- ಹೊಲದ ಕಟ್ಟೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ; 2.35 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
Author: Ganesh Tumkuru
ಸರಗೂರು: ಮಕ್ಕಳಲ್ಲಿ ಜಂತುಹುಳು ಸೋಂಕಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಿ ಅವರ ದೈಹಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಜಂತುಹುಳು ನಿವಾರಣಾ ಮಾತ್ರೆ ಸೇವನೆ ಅತ್ಯಂತ ಮಹತ್ವದ್ದಾಗಿದೆ ಎಂದು ಬಿ. ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರಶೇಖರ ತಿಳಿಸಿದರು. ತಾಲೂಕಿನ ಬಿ. ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟಕೆರೆ ಭೋವಿ ಕಾಲೋನಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸೋಮವಾರ ಬಿ. ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುವ ಇಂತಹ ಜಾಗೃತಿ ಹಾಗೂ ಮಾತ್ರೆ ವಿತರಣಾ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಹಾಗೂ ದೈಹಿಕ ಬೆಳವಣಿಗೆಯ ಕುಂಠಿತದಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಆರೋಗ್ಯ ಇಲಾಖೆಯ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಕಿವಿಮಾತು ಹೇಳಿದರು. ಆರೋಗ್ಯವೇ ಶೈಕ್ಷಣಿಕ ಪ್ರಗತಿಗೆ ಆಧಾರ: ಕಾರ್ಯಕ್ರಮದಲ್ಲಿ ಭಾಗವಹಿಸಿ…
ತಿಪಟೂರು: ತಾಲೂಕಿನ ಸಾರ್ಥವಳ್ಳಿ ವಲಯದ ಸಾರ್ಥವಳ್ಳಿ ನಿವಾಸಿಯಾದ ಗಂಗಾಧರ್ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು 1,000 ರೂ. ಗಳಂತೆ ಮಾಸಾಶನ ತಲುಪುತ್ತಿದ್ದು, ಅವರ ಕುಟುಂಬಕ್ಕೆ ಯೋಜನೆ ದೊಡ್ಡ ಆಸರೆಯಾಗಿದೆ. ಇದರ ಜೊತೆಗೆ, ಗಂಗಾಧರ್ ಅವರ ಮಕ್ಕಳಾದ ಲಕ್ಷ್ಮಿ ಮತ್ತು ಹರೀಶ್ ಅವರಿಗೆ ಯೋಜನೆಯ ‘ವಾತ್ಸಲ್ಯ ವಿದ್ಯಾನಿಧಿ’ ಕಾರ್ಯಕ್ರಮದಡಿ ಅಗತ್ಯ ಶಿಕ್ಷಣ ಸಾಮಗ್ರಿಗಳಾದ ನೋಟ್ಬುಕ್, ಬ್ಯಾಗ್, ರೈನ್ಕೋಟ್, ಚಪ್ಪಲಿ ಹಾಗೂ ಬಟ್ಟೆಗಳನ್ನು ವಿತರಿಸಲಾಯಿತು. ಈ ಸಾಮಗ್ರಿಗಳನ್ನು ತುಮಕೂರು-1 ಜಿಲ್ಲೆಯ ಮಾನ್ಯ ನಿರ್ದೇಶಕರಾದ ಸತೀಶ್ ಸುವರ್ಣ ಅವರು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, “ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಇಬ್ಬರೂ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲಿ” ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಉದಯ್, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಮಕ್ಕಳ ತಾಯಿ ಚಂದ್ರಕಲಾ,…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಪಂಚತಾರ ಹಾಗೂ ಐಷಾರಾಮಿ ಹೋಟೆಲ್ ಗಳ ಮೇಲೆ ಸಮರ ಸಾರಿದೆ. ಕಾರ್ಯಾಚರಣೆಯ ಮೂರನೇ ದಿನವಾದ ಭಾನುವಾರ ರಾತ್ರಿ ಯುಬಿ ಸಿಟಿ (UB City), ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿರುವ ಪ್ರಸಿದ್ಧ ಹೋಟೆಲ್ ಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಒಟ್ಟು 132 ಕೆ.ಜಿ. ಕಳಪೆ ಆಹಾರ ಪದಾರ್ಥಗಳು ಹಾಗೂ 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 15 ಅಧಿಕಾರಿಗಳಿದ್ದ ತಂಡವು ಯುಬಿ ಸಿಟಿಯಲ್ಲಿರುವ ಐದು ಪ್ರಮುಖ ಹೋಟೆಲ್‌ಗಳ ಅಡುಗೆಮನೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಸ್ಕೈ ಹೋಟೆಲ್ (Sky Hotel): ವರದಿಗಳ ಪ್ರಕಾರ, ಇಲ್ಲಿ 45 ಕೆ.ಜಿ. ಕೊಳೆತ ಕೋಳಿ ಹಾಗೂ ದನದ ಮಾಂಸ (ಗೋಮಾಂಸ), 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್ ಹಾಗೂ 15 ಲೀಟರ್ ಮರುಬಳಕೆಯ ಅಪಾಯಕಾರಿ ಅಡುಗೆ ಎಣ್ಣೆಯನ್ನು ಜಪ್ತಿ ಮಾಡಲಾಗಿದೆ. ಕೊಳೆತ ಮಾಂಸ ಮತ್ತು ಅವಧಿ ಮೀರಿದ ಆಹಾರ ಪತ್ತೆಯಾದ…
ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಮತ್ತು ಚಿರತೆ ಎರಡೂ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಸಂಬಂಧಿಸಿದ ವಿದ್ಯುತ್ ಪರಿವರ್ತಕದ (ಟ್ರಾನ್ಸ್‌ಫಾರ್ಮರ್) ಮೇಲೇರಿದ್ದ ನವಿಲೊಂದು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿತ್ತು. ಈ ವೇಳೆ ಮೃತ ನವಿಲನ್ನು ಬೇಟೆಯಾಡಿ ತಿನ್ನುವ ಉದ್ದೇಶದಿಂದ ಟ್ರಾನ್ಸ್‌ಫಾರ್ಮರ್ ಮೇಲೇರಿದ ಚಿರತೆಗೂ ವಿದ್ಯುತ್ ಹರಿದು, ಅದು ಸಹ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಪಟ್ಟ ನವಿಲು ಹಾಗೂ ಚಿರತೆಯ ಶವಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ 10 ವೀಲ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಭೀಕರ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ನಡೆದಿದೆ. ಲಾರಿ ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಚಾಲಕ ಮತ್ತು ನಿರ್ವಾಹಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರಿನಿಂದ ಕಡೂರು ಕಡೆಗೆ ಸರಕು ಲೋಡ್ ಮಾಡಿಕೊಂಡು ಸಾಗುತ್ತಿದ್ದ 10 ವೀಲ್ ಲಾರಿ, ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಕಣಿವೆ ಕ್ರಾಸ್ ಬಳಿ ತಲುಪುತ್ತಿದ್ದಂತೆ ಬ್ರೇಕ್ ಫೇಲ್ ಆಗಿದೆ. ಪರಿಣಾಮವಾಗಿ ಚಾಲಕನಿಗೆ ಲಾರಿಯ ನಿಯಂತ್ರಣ ತಪ್ಪಿದೆ. ವೇಗವಾಗಿ ಚಲಿಸಿದ ಲಾರಿಯು ರಸ್ತೆ ಪಕ್ಕದಲ್ಲಿದ್ದ ತಡೆ ಬೇಲಿಯನ್ನು ಮುರಿದುಕೊಂಡು, ಮರಕ್ಕೆ ಡಿಕ್ಕಿ ಹೊಡೆದು ನೇರವಾಗಿ 100 ಅಡಿ ಆಳದ ಪ್ರಪಾತಕ್ಕೆ ಹಾರಿ ಬಿದ್ದಿದೆ. ಪ್ರಪಾತಕ್ಕೆ ಬಿದ್ದ ತೀವ್ರತೆಗೆ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ಶಬ್ದ ಕೇಳುತ್ತಿದ್ದಂತೆ ವಿಷಯ ತಿಳಿದ ನೂರಾರು ಸಾರ್ವಜನಿಕರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಕ್ಕೆ ನೆರವಾದರು. ಲಾರಿ ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಚಾಲಕ…
ಮೈಸೂರು / ಬೆಂಗಳೂರು: ರಾಜ್ಯದಲ್ಲಿ ನನ್ನನ್ನು ಕೊಂಡುಕೊಳ್ಳುವವರು ಅಥವಾ ನನ್ನ ಧ್ವನಿಯನ್ನು ಅಡಗಿಸುವವರು ಇನ್ನೂ ಹುಟ್ಟಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರಕ್ಕೆ ಖಾರವಾಗಿ ತಿರುಗೇಟು ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡಲು ಹೊರಟಿದೆ. ಬಿಡದಿ ಭೂಮಿ ಫಲವತ್ತಾದ ಭೂಮಿ ಎಂದು ಕಾಂಗ್ರೆಸ್‌ನ ಸದನ ಸಮಿತಿ ವರದಿಯಲ್ಲೇ ಇದೆ. ಬಿಡದಿ ಟೌನ್ ಶಿಪ್ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಡಿಎಲ್ ಎಫ್ (DLF) ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, “ಕೇರಳದ ಕಾಂಗ್ರೆಸ್ ನಾಯಕರಿಗೂ, ದೆಹಲಿಯ ವ್ಯಕ್ತಿಗೂ ಮತ್ತು ಡಿಎಲ್ ಎಫ್ ಗೂ ಏನು ಸಂಬಂಧ ಎಂಬುದನ್ನು ಬಹಿರಂಗಪಡಿಸಲಿ. ರಾಜ್ಯದಲ್ಲಿ ಸರ್ಕಾರ ನಿಮ್ಮದೇ ಇದೆಯಲ್ಲವೇ, ಧೈರ್ಯವಿದ್ದರೆ ತನಿಖೆ ಮಾಡಿಸಿ” ಎಂದು ಸವಾಲೆಸೆದರು. ನೈಸ್…
ಲಖನೌ: ನಕಲಿ ಗುರುತಿನ ಚೀಟಿಗಳನ್ನು (Fake IDs) ಬಳಸಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಕೋಟ್ಯಂತರ ರೂಪಾಯಿ ವಂಚಿಸಿರುವ ವ್ಯಕ್ತಿಯೊಬ್ಬನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿ ಮೋಸಹೋಗಿರುವುದಾಗಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ಜ್ಞಾನ್ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಶಾಸಕರು ನೀಡಿದ ದೂರಿನನ್ವಯ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು, ಆರೋಪಿ ಪ್ರಖರ್ ತ್ರಿವೇದಿ ಹಾಗೂ ಆತನ ತಂದೆ ಅನುಜ್ ತ್ರಿವೇದಿಯನ್ನು ಬಂಧಿಸಿದ್ದಾರೆ. ಸೀತಾಪುರ ಜಿಲ್ಲೆಯ ರೇವುಸಾ ಪೊಲೀಸ್ ಠಾಣೆಯಲ್ಲಿ ಶಾಸಕ ಜ್ಞಾನ್ ತಿವಾರಿ ದೂರು ದಾಖಲಿಸಿದ್ದಾರೆ. 2024ರಲ್ಲಿ ತಮ್ಮ ಮಗಳು ಪ್ರಗ್ಯಾ ಅವರನ್ನು ಮಿಶ್ರಿಖ್‌ನ ಚಂದ್ರವಾಲ್ ನಿವಾಸಿ ಅನುಜ್ ತ್ರಿವೇದಿ ಅವರ ಮಗ ಪ್ರಖರ್ ತ್ರಿವೇದಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮದುವೆಗೂ ಮುನ್ನ ಅನುಜ್ ತ್ರಿವೇದಿ ತಾನು ಮುಂಬೈ ಮೂಲದ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಿಕೊಂಡಿದ್ದನು. ಅಲ್ಲದೆ, ತನ್ನ ಹಾಗೂ ಮಗನ ಮೇಲಿದ್ದ ಅಪರಾಧ ಹಿನ್ನೆಲೆ ಮತ್ತು ಹಳೆಯ ಪ್ರಕರಣಗಳನ್ನು ಮರೆಮಾಚಿ…
ಕೋಲ್ಕತ್ತಾ: ಪ್ರೇಮದ ಹೆಸರಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ವಂಚಿಸಿ, ಕೋಲ್ಕತ್ತಾದ ಪ್ರಸಿದ್ಧ ರೆಡ್ ಲೈಟ್ ಪ್ರದೇಶವಾದ ಸೋನಾಗಾಚಿಯ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದ ಘಟನೆ ಬೆಳಕಿಗೆ ಬಂದಿದೆ. ಚೈಲ್ಡ್ ಲೈನ್ ಗೆ ಸಿಕ್ಕ ತುರ್ತು ಮಾಹಿತಿಯ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೋಲ್ಕತ್ತಾ ಪೊಲೀಸರು, ಮಾಹಿತಿ ದೊರೆತ ಕೇವಲ ಒಂದೇ ಗಂಟೆಯಲ್ಲಿ ಬಾಲಕಿಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪ್ರಿಯಕರ ಹಾಗೂ ಆಕೆಯನ್ನು ವೇಶ್ಯಾವಾಟಿಕೆಗೆ ಖರೀದಿಸಿದ್ದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಗರುಲಿಯಾ ನಿವಾಸಿ, ಬಾಲಕಿಯ ಪ್ರಿಯಕರ ಬಾಬುಲ್ ಅಲಿಯಾಸ್ ಶಫಿಕುಲ್ ಮೊಲ್ಲಾ (20) ಮತ್ತು ಆಕೆಯನ್ನು ಖರೀದಿಸಿದ ಶಾರುಖ್ ಅಲಿಯಾಸ್ ಶಹರುಲ್ ಲಸ್ಕರ್ (39) ಬಂಧಿತ ಆರೋಪಿಗಳಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಸುಮಾರು 3:50ಕ್ಕೆ ಉತ್ತರ 24 ಪರಗಣದಿಂದ ಬಾಲಕಿಯನ್ನು ಕರೆತಂದು ಸೋನಾಗಾಚಿಯಲ್ಲಿ ಮಾರಾಟ ಮಾಡಲಾಗಿದೆ ಎಂದು ಚೈಲ್ಡ್ ಲೈನ್ ನಿಂದ ಕೋಲ್ಕತ್ತಾ ಪೊಲೀಸರಿಗೆ ಕರೆ ಹಾಗೂ ಇಮೇಲ್ ಮೂಲಕ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ED) ತನಿಖೆ ಎದುರಿಸುತ್ತಿರುವ ಬಿ. ನಾಗೇಂದ್ರ ಅವರು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ಕೋರ್ಟ್ ಅನುಮತಿ ಪಡೆಯದೇ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಜುಲೈ 15 ಮತ್ತು ಜುಲೈ 26 ರಂದು ಬಿ. ನಾಗೇಂದ್ರ ಅವರು ನ್ಯಾಯಾಲಯದ ಯಾವುದೇ ಪೂರ್ವಾನುಮತಿ ಪಡೆಯದೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ದೆಹಲಿ ಪ್ರವಾಸಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿಮಾನ ನಿಲ್ದಾಣದ ಪ್ರಮುಖ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿಗೆ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ ಎಂದು ಕಾಂಗ್ರೆಸ್…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇಬ್ಬರು ಯುವಕರನ್ನು “ನೀವು ಭಯೋತ್ಪಾದಕರಾ?” ಎಂದು ಪ್ರಚೋದನಾತ್ಮಕವಾಗಿ ಪ್ರಶ್ನಿಸಿ, ಬೇಸ್‌ಬಾಲ್ ಬ್ಯಾಟ್ ನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 6ರಂದು ಮುಂಜಾನೆ ಸುಮಾರು 4:30ರ ವೇಳೆಗೆ ಎಚ್‌ಎಎಲ್ (HAL) ಪೊಲೀಸ್ ಠಾಣೆ ವ್ಯಾಪ್ತಿಯ ಎಇಸಿಎಸ್ (AECS) ಲೇಔಟ್‌ನಲ್ಲಿರುವ ‘ಪೋಲಾರ್ ಬಿಯರ್’ ಐಸ್‌ಕ್ರೀಮ್ ಅಂಗಡಿಯ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕರನ್ನು ಸಂದೀಪ್ ಕುಮಾರ್ (27) ಹಾಗೂ ರೋಹಿತ್ ಕುಮಾರ್ (26) ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಮ್ಮ ಸ್ನೇಹಿತನಿಗಾಗಿ ಅಲ್ಲಿ ಕಾಯುತ್ತಿದ್ದರು. ಈ ಸಮಯದಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ (ಮದ್ಯದ ಅಮಲಿನಲ್ಲಿರುವಂತೆ ಕಂಡುಬಂದಿದ್ದ) ಯುವಕರ ಬಳಿ ಬಂದು ಪ್ರಚೋದನಾತ್ಮಕವಾಗಿ “ನೀವು ಭಯೋತ್ಪಾದಕರಾ?” ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ರೋಹಿತ್ ಕುಮಾರ್ “ಇಲ್ಲ, ನಾವು ಭಾರತೀಯ ನಾಗರಿಕರು” ಎಂದು ಉತ್ತರಿಸಿದ್ದಾರೆ. ಬಳಿಕ ಆ ವ್ಯಕ್ತಿ ಐಡಿ ಕಾರ್ಡ್ ತೋರಿಸುವಂತೆ ಬೆದರಿಕೆ ಹಾಕಿದ್ದಾನೆ. “ಯಾವ ಅಧಿಕಾರದ ಮೇರೆಗೆ ಐಡಿ ಕಾರ್ಡ್ ಕೇಳುತ್ತಿದ್ದೀರಾ?” ಎಂದು…