Author: Ganesh Tumkuru

ಕೊರಟಗೆರೆ: ಆಧ್ಯಾತ್ಮಿಕತೆ, ವೈಚಾರಿಕತೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಕುಟುಂಬ ಮೌಲ್ಯಗಳು ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತವಾಗಿ ಉಳಿದಿವೆ. ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ಬೊಮ್ಮಲದೇವಿಪುರ ಗ್ರಾಪಂ ವ್ಯಾಪ್ತಿಯ ಚುಂಚನಹಳ್ಳಿಯ ದೊಡ್ಡಮನೆ ಕುಟುಂಬದ ವತಿಯಿಂದ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಕುಟುಂಬದ ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು. ಆಧ್ಯಾತ್ಮಿಕತೆ ಎಂದರೆ ಕೇವಲ ಬಾಹ್ಯ ಆಚರಣೆಗಳಲ್ಲ ಅದು ಮನಸ್ಸನ್ನು ಪರಿಶುದ್ಧಗೊಳಿಸುವ ಮತ್ತು ಆತ್ಮಾವಲೋಕನ ಮಾಡಿಕೊಳ್ಳುವ ಪ್ರಕ್ರಿಯೆ. ಧರ್ಮ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಪ್ರತಿಯೊಬ್ಬರೂ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿಚಾರಶಕ್ತಿ ಮತ್ತು ವಿವೇಕದಿಂದ ಆಲೋಚಿಸಿದಾಗ ಮಾತ್ರ ನಿಜವಾದ ಜ್ಞಾನ ಲಭಿಸಲು ಸಾಧ್ಯ ಎಂದು ಪ್ರತಿಪಾದಿಸಿದರು. ಮೂಢನಂಬಿಕೆಗಳು ಮಾನವನ ಸರ್ವತೋಮುಖ ಪ್ರಗತಿಗೆ ಬಹುದೊಡ್ಡ ಅಡ್ಡಿಯಾಗಿವೆ. ಸತ್ಯ ಮತ್ತು ವೈಚಾರಿಕ ದೃಷ್ಟಿಕೋನವನ್ನು ಒಪ್ಪಿಕೊಳ್ಳುವುದು ಇಂದಿನ ಕಾಲಘಟ್ಟದ ತುರ್ತು ಅಗತ್ಯ. ಮೂಢನಂಬಿಕೆಗಳನ್ನು ಸಂಪೂರ್ಣವಾಗಿ ತೊರೆದು, ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ…

Read More

ಗುಬ್ಬಿ: ಸಮಾಜದಲ್ಲಿ ಶೋಷಣೆಗೆ ಒಳಗಾದ ಅಹಿಂದ ವರ್ಗದ ಮಕ್ಕಳು ಪ್ರಸ್ತುತ ದಿನಮಾನದಲ್ಲಿ ಶೇ.97 ಅಂಕ ಗಳಿಕೆಯಲ್ಲಿ ಕಾಣಿಸಿಕೊಂಡಿದ್ದು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ಎನ್ನಬಹುದು. ಇದರ ಸಾಧನೆ ಶಿಕ್ಷಣ ಇಲಾಖೆಗೆ ಸಲ್ಲುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು. ಗುಬ್ಬಿ ಹೊರ ವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆ ಆಯೋಜನೆ ಮಾಡಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ 139 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಸ್‌ ಸಿ, ಎಸ್‌ ಟಿ ಸಮುದಾಯದ ಮಕ್ಕಳು ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬಂದಿರುವುದು ದೇಶದ ಬದಲಾವಣೆ ಎನ್ನಬಹುದಾಗಿದೆ ಎಂದರು. ಎಲ್ಲಾ ರಂಗವೂ ಭ್ರಷ್ಟಾಚಾರದಿಂದ ತುಂಬಿದೆ. ಇದ್ದಿದ್ದರೆ ಶಿಕ್ಷಣ ಇಲಾಖೆ ಕೊಂಚ ಸಮಾಧಾನ ತರುವ ಲಂಚಮುಕ್ತ ರಂಗವಾಗಿದೆ. ಶಿಕ್ಷಣ ಎನ್ನುವುದು ದೇಶದ ಅಭಿವೃದ್ಧಿ. ಶಿಕ್ಷಕ ವರ್ಗ ಉತ್ತಮ ನಾಗರೀಕ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ. ಹಾದಿ ತಪ್ಪುವ ಮಕ್ಕಳಿಗೆ ಸರಿ ದಾರಿ ತೋರಿ ಸುಂದರ ದೇಶ ಕಟ್ಟುವ ಕೆಲಸ ಶಿಕ್ಷಕರು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗಾಗಿ…

Read More

ತುರುವೇಕೆರೆ: ಮುಖ್ಯಮಂತ್ರಿ ಅನುದಾನದ ಬಿಡುಗಡೆಯಾದ 25 ಕೋಟಿ ರೂ. ವೆಚ್ಚದ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆಯಾಗಬೇಕು ಹಾಗೂ ನನೆಗುದಿಗೆ ಬಿದ್ದಿರುವ ಪಟ್ಟಣದ ವಾಣಿಜ್ಯ ಸಂಕೀರ್ಣವನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಸೋಮವಾರ ಪಟ್ಟಣದ ರಾಘವೇಂದ್ರ ಹೋಟೆಲ್ ಮುಂಭಾಗ ಕಾಂಗ್ರೆಸ್ ಮುಖಂಡ ಹಾಗೂ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್. ವಸಂತ್ ಕುಮಾರ್, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಡಗೂಡಿ ಉಪವಾಸ ಸತ್ಯಾಗ್ರಹ ನಡೆಸಿದರು. ಬಿ.ಎಸ್. ವಸಂತ್ ಕುಮಾರ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಶ್ರೀ ಉಡುಸಲಮ್ಮ ದೇವಾಲಯದ ಹಿಂಭಾಗದಲ್ಲಿನ ಕೆರೆ ಒತ್ತುವರಿಯಾಗಿದೆ ಎಂದು ಕೇಳಿ ಬರುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ತನಿಖೆ ಮಾಡಿಸಿ, ಒತ್ತುವರಿ ಸಾಬೀತಾದಲ್ಲಿ ಒತ್ತುವರಿಯನ್ನು ತೆರವುಗೊಳಿಸಬೇಕು. ಕಾಮಗಾರಿ ಮಾಡಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇಷ್ಟೆಲ್ಲಾ ಕಾಮಗಾರಿಗಳ ಕುರಿತು 2 ಬಾರಿ ಪತ್ರಿಕಾ ಗೋಷ್ಠಿ ನಡೆಸಿದರೂ ಸಹ, ಶಾಸಕರು ಯಾಕೆ ಮೌನ ವಹಿಸಿದ್ದಾರೆ? ಇದು ನಿಮ್ಮ ಜವಾಬ್ದಾರಿಯಲ್ಲವೇ? ಬಿಲ್ ಮಾಡುವುದಲಿ ಅಧಿಕಾರಿಗಳಿಗೆ ಬದ್ಧತೆಯಿರಬೇಕು. ಈಗಲೂ ಕಾಲ ಮಿಂಚಿಲ್ಲ ಶಾಸಕರೆ, ತಾವು ದಯಮಾಡಿ ತಾಲೂಕಿನ…

Read More

ಪಾವಗಡ: ಮುಂದಿನ ವರ್ಷದ ಒಳಗೆ ಪಾವಗಡ ತಾಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸಲಾಗುವುದು ಎಂದು ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದರು. ಸೋಮವಾರ ತುಮುಲ್ ಮಾಜಿ ನಿರ್ದೇಶಕ ಬೆಳ್ಳಿ ಬಟ್ಟುಲು ಚಂದ್ರಶೇಖರ ರೆಡ್ಡಿ ಅವರ ಖಾಸಗಿ ಕಾರ್ಯಕ್ರಮ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ ನಂತರ ಅವರು, ಮೊದಲು ಅರಣ್ಯ ಇಲಾಖೆ ವತಿಯಿಂದ ನಿರ್ಮಾಣ ಮಾಡಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನ ವೀಕ್ಷಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಚಂದ್ರಶೇಖರರೆಡ್ಡಿ ಅವರ ಮನೆಯ ಗೃಹಪ್ರವೇಶ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮನೆಯ ಮುಂಭಾಗ ತೆಂಗಿನ ಸಸಿ ನೆಟ್ಟು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿ ನೆಲೆಸಿರುವ ನಾಗಲಮಡಿಕೆಯ ಅಂತಃ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ಬೇಕಾಗುವ ಅನುದಾನವನ್ನು ನನ್ನ ಶಕ್ತಿ ಮೀರಿ ನೀಡಲಾಗುವುದು. ಜೀರ್ಣೋದ್ಧಾರದ ಗುದ್ಲಿ ಪೂಜೆಗೆ ನಾನೇ ಆಗಮಿಸುತ್ತೇನೆ ಎಂದು ತಿಳಿಸಿದರು. ಈ ವೇಳೆ ತುಮುಲ್ ಮಾಜಿ ನಿರ್ದೇಶಕ ಚಂದ್ರಶೇಖರ್ ರೆಡ್ಡಿ ಅವರ ಕುಟುಂಬದಿಂದ ಸನ್ಮಾನಿಸಿ ಗೌರವಿಸಿದರು. ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ…

Read More

ವಿಟ್ಲ: ಮಕ್ಕಳಲ್ಲಿ ಪ್ರತಿಭೆ, ಶಿಸ್ತು, ಸಂಸ್ಕಾರ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಸದುದ್ದೇಶದಿಂದ ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ಹಾಗೂ ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ‘ಸ್ವರ ಸಿಂಚನ ಸಂಗೀತೋತ್ಸವ–2026’ ಕಾರ್ಯಕ್ರಮವು ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಿಂಹಾಸನದ ವಿಶೇಷ ಪೂಜಾ ಮಂಟಪದಲ್ಲಿ ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮವನ್ನು ಪಶುವೈದ್ಯರಾದ ಡಾ. ಈಶ್ವರ ಭಟ್ ಕಾಶಿಮಠ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಾಂಸ್ಕೃತಿಕ ಸಮಾರಂಭದ ಪ್ರಮುಖ ಘಟ್ಟವಾಗಿ ಡಾ. ಈಶ್ವರ ಭಟ್ ದಂಪತಿಗೆ ‘ಸ್ವರ ಸಿಂಚನ ಪುರಸ್ಕಾರ–2026’ ನೀಡಿ ಗೌರವಿಸಲಾಯಿತು. ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ. ಈಶ್ವರ ಭಟ್ ಅವರು, ಸಂಗೀತಾಭ್ಯಾಸದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗೈಯುವಂತೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ಭಗವತಿ ದೇವಸ್ಥಾನ ವಿಟ್ಲದ ವ್ಯವಸ್ಥಾಪಕ ಕೇಶವ ಆರ್.ವಿ., ವಯಲಿನ್ ವಾದಕ ಪ್ರಭಾಕರ ಕುಂಜಾರು, ಮೃದಂಗ ವಾದಕ ಡಾ. ಬಿ.ಆರ್. ನಾರಾಯಣ ಪ್ರಕಾಶ್,…

Read More

ತುಮಕೂರು: ಕಾಲೇಜು ಶಿಕ್ಷಣ ಇಲಾಖೆ ಹಾಗೂ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ 2026–27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಹೊಸ ದಿಗಂತ’ ಅಭಿವಿನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ ಪಿ.ಸಿ. ಅವರು ವೇದಿಕೆಯ ಮೇಲಿದ್ದ ಗಣ್ಯರೊಂದಿಗೆ ಗಿಡಕ್ಕೆ ನೀರುಣಿಸುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಕಾಲೇಜು ಒದಗಿಸುವ ಎಲ್ಲಾ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಕಾಲೇಜಿನ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ವಸಂತ ಟಿ.ಡಿ., ಶಿಸ್ತು, ನಿರಂತರ ಅಧ್ಯಯನ ಮತ್ತು ಉತ್ತಮ ಚಾರಿತ್ರ್ಯ ರೂಪಿಸಿಕೊಳ್ಳುವುದೇ ವಿದ್ಯಾರ್ಥಿ ಜೀವನದ ಮೂಲ ಗುರಿಯಾಗಬೇಕು ಎಂದು ಹಿತವಚನ ನುಡಿದರು. ನಂತರ ನಡೆದ ವಿವಿಧ…

Read More

ಪಾವಗಡ : SCSP/TSP ನಿಧಿಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ SCSP/TSP ನಿಧಿ ಸದ್ಬಳಕೆ ಜನಾಂದೋಲನ — ಕರ್ನಾಟಕ ವತಿಯಿಂದ ಭಾನುವಾರ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾಗೃತಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ವಕೀಲರು ಹಾಗೂ ಭಾರತೀಯ ಪರಿವರ್ತನ ಸಂಘ (BPS) ರಾಜ್ಯಾಧ್ಯಕ್ಷರಾದ ಹರಿರಾಮ್ ಎ. ಅವರು SCSP/TSP ನಿಧಿಯ ಉದ್ದೇಶ, ಬಳಕೆ ಹಾಗೂ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆ ಯುವ ಘಟಕದ ರಾಜ್ಯಾಧ್ಯಕ್ಷ ದೊಡ್ಡಹಳ್ಳಿ ಅಂಜಿನಾಯಕ, ಕರ್ನಾಟಕ ಭೀಮಸೇನೆ ತಾಲ್ಲೂಕು ಅಧ್ಯಕ್ಷ ಬೆಳ್ಳಿಬಟ್ಟಲು ಗ್ರಾಮದ ಹಾಲೇಶ್ ಕುಮಾರ್, ಅಲೆಮಾರಿ ಸಮುದಾಯದ ಮುಖಂಡ ವೀರಭದ್ರಪ್ಪ, ತುಮಕೂರು ಜಿಲ್ಲಾ ಲಿಡ್ಕರ್ ನಾಮನಿರ್ದೇಶಿತ ಸದಸ್ಯ ಕರೆಕ್ಯಾತನಹಳ್ಳಿ ಗ್ರಾಮದ ನಾಗರಾಜ ಕೆ.ಟಿ., BPS ತುಮಕೂರು ಜಿಲ್ಲಾಧ್ಯಕ್ಷ ಚಿಕ್ಕತಿಮ್ಮನಹಟ್ಟಿ ಗ್ರಾಮದ ಹೆಚ್.ಕೆಂಚರಾಯ, ಮುಖಂಡರಾದ ಹನುಮಂತರಾಯಪ್ಪ ಸೇರಿದಂತೆ ಎಸ್ಸಿ–ಎಸ್ಟಿ ಸಮುದಾಯದ ಮುಖಂಡರು, ಯುವಕರು, ನೌಕರರು ಹಾಗೂ ವಕೀಲರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ…

Read More

ಪಾವಗಡ: ವಿಶ್ವದಾದ್ಯಂತ ಭಕ್ತಿಭಾವದಿಂದ ಆಚರಿಸಲ್ಪಡುವ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ತಾಲ್ಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಯುವಕರು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಭಾನುವಾರ ಬೆಳಿಗ್ಗೆ ಗ್ರಾಮದ ಯುವಕರು ಗೋವುಗಳಿಗೆ ನೀರಿನಿಂದ ಸ್ನಾನ ಮಾಡಿಸಿ, ಶ್ರೀಕೃಷ್ಣನ ಫೋಟೋ ಹಾಗೂ ವಿಗ್ರಹಕ್ಕೆ ವಿಧಿ-ವಿಧಾನದೊಂದಿಗೆ ಗಂಗಾಪೂಜೆ ನೆರವೇರಿಸಿದರು. ಬಳಿಕ ಶ್ರೀಕೃಷ್ಣನ ಫೋಟೋವನ್ನು ಗ್ರಾಮದ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯುವಕರ ಉತ್ಸಾಹದ ಪ್ರತೀಕವಾದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಯುವಕರ ಈ ಹುಮ್ಮಸ್ಸಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಜೆ ಗ್ರಾಮದ ವತಿಯಿಂದ ಅಚ್ಚುಕಟ್ಟಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಿ, ಆಗಮಿಸಿದ ಭಕ್ತರು ಹಾಗೂ ಗ್ರಾಮಸ್ಥರಿಗೆ ಪ್ರಸಾದ ವಿತರಿಸಲಾಯಿತು. ದಿನವಿಡೀ ಗ್ರಾಮದಲ್ಲಿ ಭಕ್ತಿಭಾವ ಹಾಗೂ ಹಬ್ಬದ ಕಳೆ ಕಂಗೊಳಿಸುತ್ತಿತ್ತು. ಈ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗಾಗಿ ಆಯೋಜಕರಾದ ಹಿಮಾಚಲ, ಕರಿಯಣ್ಣ, ಚಿತ್ತಯ್ಯ, ವಿಜೀ, ಸತೀಶ್, ಶಿವರಾಜ್, ನಾಗರಾಜ್, ಮಾರುತಿ, ನಾಗೇಶ್, ದಿನೇಶ್ ಹಾಗೂ ನವೀನ್ ಮುಂತಾದವರು ಶ್ರಮಿಸಿದರು.…

Read More

ತುಮಕೂರು: ತಾಲ್ಲೂಕಿನ ಹಿರೇಹಳ್ಳಿ ಕೆರೆಯ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗಮಧ್ಯೆ ಹಿರೇಹಳ್ಳಿ ಗ್ರಾಮ ಪಂಚಾಯತಿಗೆ ದಿಢೀರ್ ಭೇಟಿ ನೀಡಿದ ಸಚಿವರು, ಸ್ಥಳೀಯ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಒಟ್ಟು 18 ಎಕರೆ ವಿಸ್ತೀರ್ಣವಿರುವ ಹಿರೇಹಳ್ಳಿ ಕೆರೆಯಲ್ಲಿ ಅರ್ಧದಷ್ಟು ಭಾಗ ಒತ್ತುವರಿಯಾಗಿರುವುದನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಕಾನೂನುರೀತಿ ಒತ್ತುವರಿ ತೆರವುಗೊಳಿಸಿ ಕೆರೆ ಪುನಶ್ಚೇತನಗೊಳಿಸಲು ಸಿ.ಇ.ಒ ಅವರಿಗೆ ಆದೇಶಿಸಿದರು. ಕೆರೆ ಪಕ್ಕದ ಕೈಗಾರಿಕೆಯಿಂದ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವುದರಿಂದ ನೀರು ಕಲುಷಿತಗೊಂಡು ಜಾನುವಾರುಗಳು ಸಾಯುತ್ತಿವೆ ಹಾಗೂ ಜನರಿಗೆ ಚರ್ಮವ್ಯಾಧಿ ಬರುತ್ತಿದೆ ಎಂದು ಗ್ರಾಮಸ್ಥರು ದೂರಿಕೊಂಡರು. ಕೂಡಲೇ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಪಂಚಾಯತಿ…

Read More

ಕೊರಟಗೆರೆ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೋರಬೇಕಿತ್ತು. ಆದರೆ, ಆಶ್ಚರ್ಯವೆಂಬಂತೆ ಮಳೆಗಾಲದಲ್ಲೇ ಕೊರಟಗೆರೆ ಪುರಸಭೆ ವ್ಯಾಪ್ತಿಯ ಕಲ್ಲುಗುಟ್ಟರಹಳ್ಳಿ ಹಾಗೂ ಕೃಷ್ಣರಾಜಪುರ-2 ಗ್ರಾಮಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಿದೆ. ನೀರಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು ಆಕ್ರೋಶಗೊಂಡು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಒಂದೇ ಬೋರ್‌ ವೆಲ್ ಆಶ್ರಯ: ಎರಡೂ ಗ್ರಾಮಗಳಲ್ಲಿ ಸುಮಾರು 165 ಮನೆಗಳಿದ್ದು, 700ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಆದರೆ ಇಡೀ ಜನಸಂಖ್ಯೆಗೆ ಕೇವಲ ಒಂದೇ ಒಂದು ಕೊಳವೆಬಾವಿ (ಬೋರ್‌ವೆಲ್) ಆಧಾರವಾಗಿದೆ.  ಬೋರ್‌ ವೆಲ್‌ ನಲ್ಲಿ ಅಂತರ್ಜಲ ಕುಸಿದು ನೀರಿನ ಮಟ್ಟ ಸಂಪೂರ್ಣವಾಗಿ ಕಡಿಮೆಯಾಗಿರುವುದರಿಂದ ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಜಲಜೀವನ್ ಮಿಷನ್ ಎಡವಟ್ಟು: ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಹೊಸ ಬೋರ್‌ ವೆಲ್ ಕೊರೆಸಲಾಗಿದ್ದರೂ, ಅದಕ್ಕೆ ಅಳವಡಿಸಬೇಕಿದ್ದ ಪಂಪ್ ಮತ್ತು ಮೋಟರ್ ಅನ್ನು ಗ್ರಾಮದ ಸದಸ್ಯರೊಬ್ಬರ ಮನೆಯಲ್ಲಿ ಇರಿಸಲಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕುಡಿಯುವ ನೀರಿಗಾಗಿ ಮಹಿಳೆಯರು ಮಳೆಗಾಲದಲ್ಲೂ ಮೈಲುಗಟ್ಟಲೆ…

Read More