ಪಾವಗಡ: ವಿಶ್ವದಾದ್ಯಂತ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣ ಅವರು ಸರ್ವ ಜನಾಂಗಗಳ ನಾಯಕರಾಗಿದ್ದರು ಎಂದು ತಹಶೀಲ್ದಾರ್ ಡಿ.ಎನ್. ವರದರಾಜು ತಿಳಿಸಿದರು,
ಬುಧವಾರ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಜಗದ್ಗುರು ಬಸವಣ್ಣನವರ ಜಯಂತಿಯನ್ನು ಸರಳವಾಗಿ ಆಚರಿಸುವುದರ ಜೊತೆಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪ್ರಪಂಚದಾದ್ಯಂತ ಸಮಾಜದ ಒಳಿತಿಗಾಗಿ ವಚನಗಳ ಮೂಲಕ ಸಮಾನತೆಯನ್ನು ತಿಳಿ ಹೇಳಿದ ಬಸವಣ್ಣನವರು ನಮ್ಮೆಲ್ಲರಿಗೂ ಆದರ್ಶವಾಗಿದ್ದರು. ಜೊತೆಗೆ ತಮ್ಮ ಅನುಯಾಯಿಗಳ ಮೂಲಕವೂ ಸಹ ಮನೆಮನೆಗಳಿಗೆ ತೆರಳಿ ಸಮಾನತೆಯ ಬಗ್ಗೆ ತಿಳಿ ಹೇಳುವ ಕೆಲಸ ಮಾಡಿದ್ದರು ಎಂದರು.
ಜಗದ್ಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ್, ಆರ್ಐ ರಾಜಗೋಪಾಲ್, ಗ್ರಾಮ ಆಡಳಿತ ಅಧಿಕಾರಿಗಳಾದ ಈರಣ್ಣ ಗೋರ್ನಾಳ್, ರಾಜೇಶ್, ರವಿಕುಮಾರ್, ಸಿಬ್ಬಂದಿ ಪದ್ಮಾ, ಬಲರಾಂ,ಅಸ್ಲಾಂ, ಲಿಂಗಾಯತ ಸಮಾಜದ ಮುಖಂಡರಾದ ಕಾರ್ತಿಕ್ ರಾಜನ್, ಪ್ರೇಸ್ ನಾಗಭೂಷಣ್, ಶ್ರೇಯಸ್, ಹೆಚ್ ಕೃಷ್ಣಮೂರ್ತಿ, ವಕೀಲರಾದ ಆರ್ ಹನುಮಂತರಾಯ, ಎಂ.ಜಿ.ಮಂಜುನಾಥ್, ರೈತ ಸಂಘದ ಗೋಪಾಲ್ ಸೇರಿದಂತೆ ಕಚೇರಿಯ ಸಿಬ್ಬಂದಿ ಹಾಜರಿದ್ದರು.
ವರದಿ : ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW