ಮಧುಗಿರಿ: ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬೇಡತ್ತೂರು ಇದರ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಕಚೇರಿಯಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು MPCS ಅಧ್ಯಕ್ಷ B.A.ರಾಜೇಂದ್ರ ಪ್ರಸಾದ್ ವಹಿಸಿದ್ದರು. ಕೊಂಡವಾಡಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ತಿಮ್ಮಾರೆಡ್ಡಿ 2020-21ನೇ ಸಾಲಿನ ಆಡಿಟ್ ಆದ ಜಮಾಖರ್ಚುನ್ನು ಸಭೆಯಲ್ಲಿ ಓದಿದರು.
ಸಭೆಯಲ್ಲಿ ವಿಸ್ತರಣಾಧಿಕಾರಿ ಗಿರೀಶ್, ದರ್ಶನ್ ಕೆ.ಟಿ., ವಿಸ್ತರಣಾ ಸಮಾಲೋಚಕ ಧರ್ಮವೀರ, MPCS ಕಾರ್ಯಕಾರಿ ಮಂಡಳಿ ಸದಸ್ಯರಾದ ಬಿ.ವಿ.ರಾಮಕೃಷ್ಣಪ್ಪ, ಅಂಜನ ರೆಡ್ಡಿ, ಶ್ರೀರಾಮರೆಡ್ಡಿ, ಮಂಜುನಾಥ್, ಗೋಪಾಲಯ್ಯ, ಶ್ರೀರಂಗಪ್ಪ, ಭಾಗ್ಯಮ್ಮ ಅರುಣ್, ಅಂಜಿನಮ್ಮ, ಚಿಕ್ಕಓಬಳಯ್ಯ, ನೌಕರರ ಸಿಬ್ಬಂದಿ ತಿಮ್ಮರೆಡ್ಡಿ, ಈಶ್ವರಯ್ಯ, ರವೀಂದ್ರ ರೆಡ್ಡಿ ಉಪಸ್ಥಿತರಿದ್ದರು. ಬಿ.ಎನ್.ಮಲ್ಲಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ