ಶಿವಮೊಗ್ಗ: ಬಿಜೆಪಿಯಿಂದ ಎಸ್. ಬಂಗಾರಪ್ಪ ಸಂಸದರಾಗಿ ಗೆದ್ದಿದ್ದು ಅಂತ ಹಾಲಿ ಸಂಸದರು ಹೇಳುತ್ತಾರೆ. ಆದರೆ ಬಿವೈ ರಾಘವೇಂದ್ರರಿಗೆ ಮಾನ, ಮರ್ಯಾದೆ ಇದೆಯಾ? ಬಿಜೆಪಿಗೆ ಶಕ್ತಿ ಕೊಟ್ಟಿದ್ದು ಬಂಗಾರಪ್ಪ. ಕೀಳು ಮಟ್ಟದಲ್ಲಿ ಮಾತಾಡಬೇಡಿ. ಈಗ ಆ ರುಚಿ ನೀವು ಕಾಣಲಿದ್ದೀರಿ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಳು ಪ್ರಚಾರದಿಂದ ಎಲ್ಲವೂ ಹಾಳಾಗುತ್ತದೆ. ನರೇಂದ್ರ ಮೋದಿಯಿಂದ ಇಂಥ ಅನಾಹುತ ನಡೆಯುತ್ತಿದೆ. ಈಗಿನ ಸಂಸದರು ಕೂಡ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಅದರಿಂದ ಕ್ಷೇತ್ರಕ್ಕೆ ಹಾನಿಯಾಗುತ್ತಿದೆ ಎಂದು ದೂರಿದ್ದಾರೆ.
ಯಡಿಯೂರಪ್ಪ ಸೋತಾಗ ಅವರನ್ನು ಗೆಲ್ಲಿಸಿದ್ದೇ ಬಂಗಾರಪ್ಪ. ಯಡಿಯೂರಪ್ಪಗೆ ಶಕ್ತಿ ತುಂಬಿದ್ದೇ ಬಂಗಾರಪ್ಪ. ನಂತರ ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದರಲ್ಲ, ಮೂರನೇ ಸ್ಥಾನಕ್ಕೆ ಆಗ ಬಿಜೆಪಿ ತಳ್ಳಲ್ಪಟ್ಟಿತ್ತಲ್ಲ, ಆಗ ನಿಮಗೆ ಶಕ್ತಿ ಇರಲಿಲ್ವಾ? ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296