ನಾವು ಬೆಳಿಗ್ಗೆ ಎದ್ದ ತಕ್ಷಣ ತೋಟ ಹಾಗೂ ಹೊಲ-ಗದ್ದೆಗಳಿಗೆ ಹೋದ ಸಂದರ್ಭದಲ್ಲಿ ಅಥವಾ ಮನೆಯ ಅಕ್ಕ-ಪಕ್ಕದಲ್ಲಿಯೇ ಹೆಚ್ಚಾಗಿ ನವಿಲುಗಳನ್ನು ನೋಡುತ್ತೇವೆ. ಇದರಿಂದ ನಮಗೆ ಶುಭವೋ ಅಶುಭವೋ ನೋಡೋಣ.
ಕೆಲವು ಪ್ರಾಣಿ ಪಕ್ಷಿಗಳನ್ನು ಕಂಡಾಗ ಏನಾದ್ರೂ ಆಗುತ್ತದೆ, ಇದು ಶುಭ, ಅಶುಭ ಎಂದು ಕೆಲವರು ಹೇಳುವುದುಂಟು. ಆದರೆ ಹೆಚ್ಚಿನವರು ಬೆಳ್ಳಂಬೆಳಗ್ಗೆ ನವಿಲುಗಳನ್ನು ನೋಡುತ್ತಾರೆ ಎಂದು ಹೇಳುವುದುನ್ನು ನಾವು ಕೇಳಿದ್ದೇವೆ. ಇದರಿಂದ ಏನದಾರು ಒಳಿತುಂಟಾಗುವುದೇ ಎಂಬುದು ಹಲವರ ಪ್ರಶ್ನೆ. ಎಸ್ ಖಂಡಿತವಾಗಿಯು ಇದು ನಮಗೆ ಶುಭವನ್ನು ತರುತ್ತದೆ.
ಹಿಂದೂ ಧರ್ಮದಲ್ಲಿ ನವಿಲನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ನವಿಲನ್ನು ನೋಡುವುದು ನಮಗೆ ಅನೇಕ ರೀತಿಯ ಸೂಚನೆಗಳನ್ನ ನೀಡುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅಂತೆಯೇ ಒಬ್ಬ ವ್ಯಕ್ತಿಯು ಬೆಳಿಗ್ಗೆ ಅಚಾನಕ್ ಆಗಿ ನವಿಲನ್ನು ನೋಡಿದರೆ, ಅದನ್ನು ಬಹಳ ಶುಭ ಸಂಕೇತವೆಂದು ಹೇಳಲಾಗುತ್ತೆ. ಆ ದಿನ ನಿಮಗೆ ಎಲ್ಲವೂ ಒಳ್ಳೆಯದೇ ನಡೆಯುತ್ತೆ.
ಮುಂಜಾನೆ ನೀವು ನವಿಲು ನೋಡಿದರೆ ನಿಮ್ಮ ಕೆಲಸದ ಸ್ಥಳದಲ್ಲಿಯೂ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಇಡೀ ದಿನವು ತುಂಬಾ ಮಂಗಳಕರವಾಗಿರುತ್ತದೆ ಎಂದರ್ಥ. ಬೆಳ್ಳಂಬೆಳಗ್ಗೆಯೇ ನವಿಲುಗಳು ಹಾರುವುದನ್ನು ನೋಡಿದರೆ ಸದ್ಯದಲ್ಲೇ ಸಿಹಿ ಸುದ್ದಿ ಕೇಳುತ್ತೀರಿ ಎಂದು ಸೂಚನೆ.
ನವಿಲು ನೃತ್ಯ ಮಾಡುವುದನ್ನು ನೋಡಿದರೆ, ಅದು ಒಳ್ಳೆಯ ಮತ್ತು ಕೆಟ್ಟ ಎರಡೂ ಚಿಹ್ನೆಗಳನ್ನು ನೀಡುತ್ತೆ. ಸಮಸ್ಯೆಗಳ ಆಗಮನವನ್ನು ಇದು ತೋರಿಸುತ್ತೆ. ಅಲ್ಲದೆ ಮುಂಜಾನೆ ನೃತ್ಯ ಮಾಡುವ ನವಿಲನ್ನು ನೋಡುವುದು ನಿಮ್ಮ ಜೀವನದಲ್ಲಿ ಹೊಸದೇನಾದರೂ ಸಂಭವಿಸಲಿದೆ ಎಂಬುದರ ಸಂಕೇತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296