ತುಮಕೂರು: ತುಮಕೂರು ತಾಲ್ಲೂಕು, ಕಸಬಾ ಹೋಬಳಿ, ಸ್ವಾಂದೇನಹಳ್ಳಿ ಬೆಟ್ಟದ ಮೇಲಿರುವ (ದೇವರಾಯನ ದುರ್ಗದ ಅರಣ್ಯ ಪ್ರದೇಶ) ಶ್ರೀ ರಂಗನಾಥಸ್ವಾಮಿಯವರ ಬ್ರಹ್ಮರಥೋತ್ಸವನ್ನು ಸ್ವಾಂದೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 6ರಂದು ಮಧ್ಯಾಹ್ನ 1.58 ರಿಂದ 2.50 ಗಂಟೆಯೊಳಗೆ ನಡೆಸಲಾಗುವುದು.
ರಥೋತ್ಸವದ ದಿನದಂದು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಏಪ್ರಿಲ್ 5 ರಿಂದ 9ರವರೆಗೆ ಶ್ರೀ ರಂಗನಾಥಸ್ವಾಮಿಯವರ ಜಾತ್ರೆ ನಡೆಯಲಿದ್ದು, ಜಾತ್ರೆಯ ಪ್ರಯುಕ್ತ ಏ.5ರಂದು ವಿಷ್ಣುಕ್ಷೇನ ದೇವತಾರಾಧನ ಪೂರ್ವಕ ಸ್ವಸ್ತಿ ಪುಣ್ಯಾಹವಾಚನ, ಅಂಕುರಾರೋಹಣ ಬೆಟ್ಟದ ಮೇಲೆ ಧ್ವಜಾರೋಹಣ, ಕಲ್ಯಾಣೋತ್ಸವ, ಶ್ರೀ ದೊಡ್ಡಯ್ಯಸ್ವಾಮಿ ಮತ್ತು ಶ್ರೀರಂಗನಾಥಸ್ವಾಮಿಯವರಿಗೆ ಪಂಚಾಮೃತಾಭಿಷೇಕ ಸೇವೆಗಳು ಜರುಗಲಿವೆ. ಏ.6ರಂದು ರಾತ್ರಿ ರಥೋತ್ಸವ, ಗರುಡೋತ್ಸವ, ಶೇಷವಾಹನೋತ್ಸವ, ಧವನೋತ್ಸವ; ಏ.7ರಂದು ಉತ್ಸವ ಹಾಗೂ ರಾತ್ರಿ 8 ಗಂಟೆಗೆ ಸ್ವಾಂದೇನಹಳ್ಳಿ ಶ್ರೀ ರಂಗನಾಥಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಭಗವದ್ಗೀತೆ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕ ನಡೆಯಲಿದೆ. ಏ.8ರಂದು ಉತ್ಸವ ಹಾಗೂ ಏ.9ರಂದು ಧ್ವಜಾರೋಹಣ, ಕಂಕಣ ವಿಸರ್ಜನೆ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಬ್ರಹ್ಮರಥೋತ್ಸವದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಅನುಪಮ, ಉಪವಿಭಾಗಾಧಿಕಾರಿ ಗೌರವ್ಕುಮಾರ್ ಶೆಟ್ಟಿ, ತಹಶೀಲ್ದಾರ್ ರಾಜೇಶ್ವರಿ, ವಿವಿಧ ಜನಪ್ರತಿನಿಧಿಗಳು ಹಾಗೂ ಸ್ವಾಂದೇನಹಳ್ಳಿ ಗ್ರಾಮಸ್ಥರು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮತ್ತಿತರರು ಭಾಗವಹಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4