ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ಉದ್ದಿಮೆ ಮಾಲೀಕರು ತಮ್ಮ ಉದ್ದಿಮೆಗೆ ಉದ್ದಿಮೆ ರಹದಾರಿ/ಪರವಾನಿಗೆಯನ್ನು ಪಡೆಯಲು ಆನ್ ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಮಹಾನಗರಪಾಲಿಕೆಯು OASIS ತಂತ್ರಾಂಶವನ್ನು ರದ್ದುಗೊಳಿಸಿ ವ್ಯಾಪಾರ ತಂತ್ರಾಂಶದ ಮೂಲಕ ಉದ್ದಿಮೆ ರಹದಾರಿ/ಪರವಾನಿಗೆಯನ್ನು ವಿತರಿಸಲು ಕ್ರಮ ವಹಿಸಿದ್ದು, ಆಸಕ್ತ ಉದ್ದಿಮೆದಾರರು ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಪಾಸ್ಪೋರ್ಟ್/ ವೋಟರ್ ಐಡಿ/ ಪಡಿತರ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯೊಂದಿಗೆ ಆನ್ ಲೈನ್ http://www.tumakurucity.mrc.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವಲಯ ಕಚೇರಿಯ ವಲಯ ಆಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4