ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ನೃತ್ಯ ಶಿಕ್ಷಕನನ್ನು ಬಂಧಿಸಲಾಗಿದೆ
ಮೇ 24 ರಂದು ಕಾಡುಗೋಡಿ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಭಾರತಿ ಕಣ್ಣನ್ ಬಂಧಿತ ಆರೋಪಿಯಾಗಿದ್ದಾನೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತ್ರಸ್ತೆಯ ಬಳಿ ಕಾರು ನಿಲ್ಲಿಸಿದ್ದಾನೆ, ನಂತರ ತಾನು ನೃತ್ಯ ಶಿಕ್ಷಕ ಎಂದು ಪರಿಚಯಿಸಿಕೊಂಡು ನೃತ್ಯ ತರಗತಿಗಳ ಬಗ್ಗೆ ವಿವರಗಳನ್ನು ವಿವರಿಸುವ ನೆಪದಲ್ಲಿ ಆಕೆಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ.
ಸಂತ್ರಸ್ತೆ ಕಾರು ಹತ್ತುತ್ತಿದ್ದಂತೆ, ಆರೋಪಿ ಬಾಗಿಲುಗಳನ್ನು ಲಾಕ್ ಮಾಡಿ ಸ್ವಲ್ಪ ದೂರ ಹೋಗಿದ್ದಾನೆ. ಈ ಸಮಯದಲ್ಲಿ, ಅವನು ಹುಡುಗಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಕಣ್ಣನ್, ಸಂತ್ರಸ್ತೆಯನ್ನು ತಾನು ಕರೆದುಕೊಂಡು ಹೋದ ಸ್ಥಳದಲ್ಲೇ ಇಳಿಸಿದ್ದಾನೆ. ಸಂತ್ರಸ್ತೆ ಮನೆಗೆ ತಲುಪಿದ ನಂತರ, ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಅದಾದ ಮೇಲೆ ಅವರು ದೂರು ದಾಖಲಿಸಿದ್ದರು, ನಂತರ, ಕಣ್ಣನ್ ನನ್ನು ಬಂಧಿಸಲಾಯಿತು ಎಂದು ವಿವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW