ತುಮಕೂರು: ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಚಾರವನ್ನು ನೀಡಲು ದೇಖೋ ಅಪ್ನಾ ದೇಶ್ ಫೋಟೋ ಸ್ಪರ್ಧೆ–2025ನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಛಾಯಾಗ್ರಾಹಕರು/ ಸಾರ್ವಜನಿಕರು/ಪ್ರವಾಸಿಗರಿಂದ ಛಾಯಾಚಿತ್ರಗಳನ್ನು ಆಹ್ವಾನಿಸಿದೆ.
ಆಸಕ್ತರು ತುಮಕೂರು ಜಿಲ್ಲೆಯ ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ಕರಕುಶಲ, ನೈಸಿರ್ಗಿಕ ಹಾಗೂ ವನ್ಯ ಜೀವಗಳು ಮತ್ತು ಇತರೆ ಪ್ರವಾಸಿ ತಾಣಗಳ ಅತ್ಯಾಕರ್ಷಕ ಛಾಯಚಿತ್ರಗಳನ್ನು ಸೆರೆಹಿಡಿದು, ಪ್ರವಾಸಿ ತಾಣಗಳ ಕಿರು ವಿವರಣೆಯೊಂದಿಗೆ ವಿ–ಅಂಚೆ Dekhoapnadeshphotos@gmail.com ಮೂಲಕ ಏಪ್ರಿಲ್ 7ರೊಳಗೆ ನೇರವಾಗಿ ಕಳುಹಿಸಬಹುದಾಗಿದೆ.
ಆಸಕ್ತರು ಸ್ಮಾರಕ (Monument)), ವನ್ಯಜೀವಿ (Wild life), ಜಿಐ ಟ್ಯಾಗ್ ಹಾಗೂ ಕರಕುಶಲ ವಸ್ತುಗಳು ಮತ್ತು ಕೈಮಗ್ಗಗಳು (GI tag handicraft & handlooms) ಭೂದೃಶ್ಯ ((Landscape) ಹಾಗೂ ಸಾಹಸ (Adventure) ವಿಭಾಗಗಳ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ವರಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4