nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಡದಿ ಟೌನ್‌ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

    July 16, 2026

    ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!

    July 16, 2026

    ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ

    July 16, 2026
    Facebook Twitter Instagram
    ಟ್ರೆಂಡಿಂಗ್
    • ಬಿಡದಿ ಟೌನ್‌ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
    • ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
    • ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
    • ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
    • ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
    • ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
    • ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
    • ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿಶ್ವಮಟ್ಟದಲ್ಲಿ ಭಾರತದ ವೈದ್ಯರಿಗೆ ಬೇಡಿಕೆ: ಜಾಗತಿಕ ಪೈಪೋಟಿ ಎದುರಿಸಲು ಸನ್ನದ್ದರಾಗುವುದು ಇಂದಿನ ಅಗತ್ಯ: ಡಾ.ಜಿ.ಪರಮೇಶ್ವರ್
    ರಾಜ್ಯ ಸುದ್ದಿ November 9, 2024

    ವಿಶ್ವಮಟ್ಟದಲ್ಲಿ ಭಾರತದ ವೈದ್ಯರಿಗೆ ಬೇಡಿಕೆ: ಜಾಗತಿಕ ಪೈಪೋಟಿ ಎದುರಿಸಲು ಸನ್ನದ್ದರಾಗುವುದು ಇಂದಿನ ಅಗತ್ಯ: ಡಾ.ಜಿ.ಪರಮೇಶ್ವರ್

    By adminNovember 9, 2024No Comments3 Mins Read
    dr g parameshwar

    ತುಮಕೂರು:  ವಿಶ್ವಮಟ್ಟದಲ್ಲಿ ಭಾರತದ ವೈದ್ಯರಿಗೆ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ತಂತ್ರಜ್ಞಾನ ಅಳವಡಿಕೆ, ಪರಸ್ಪರ ಶೈಕ್ಷಣಿಕ ಅಧ್ಯಯನ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಪಟ್ಟಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರ ಮೂಲಕ ಜಾಗತಿಕ ಪೈಪೋಟಿಯನ್ನು ಎದುರಿಸಲು ಸನ್ನದ್ದರಾಗುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾಹೇ ವಿವಿ ಕೂಡ ಅಂತಾರಾಷ್ಟ್ರೀಯ ವಿವಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಸಾಹೇ ವಿವಿಯ ಕುಲಾಧಿಪತಿ  ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.

    ನಗರದ ಹೊರವಲಯದ ಅಗಳಕೋಟೆಯ ಡಾ.ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರ  ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವವಿದ್ಯಾಯಲದ ವ್ಯಾಪ್ತಿಯ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,  ಡೆಂಟಲ್ ಕಾಲೇಜು ಹಾಗೂ  ನೆಲಮಂಗಲದ ಶ್ರೀ ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್‌ ನ  2024—25 ನೇ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ‘ವೈಟ್ ಕೋಟ್ ಧಾರಣೆ ಮತ್ತು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    ಈ ಹಿಂದೆ ಇದ್ದ ಕಲಿಕಾ ಪದ್ದತಿ ಹಾಗೂ ಇಂದಿನ ಕಲಿಕಾ ಪದ್ದತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಆಧುನಿಕ ತಂತ್ರಜ್ಷಾನದೊಂದಿಗೆ ಕಲಿಕೆ ಸರಳವಾಗಿದೆ. ಅದೇ ರೀತಿ ಪೈಪೋಟಿ ಎದುರಾಗಿದೆ. ವಿಶ್ವ ಮಟ್ಟದಲ್ಲಿ ಫ್ಲೋರಿಡಾ ವಿವಿ, ಆವಲಾನ್  ವಿವಿಗಳೊಂದಿಗೆ ವಿದ್ಯಾರ್ಥಿ, ಪ್ರಾಧ್ಯಾಪಕರ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ವಿವಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದು ಇಂದು ಸಿದ್ದಾರ್ಥ ಸಂಸ್ಥೆಯು ತನ್ನ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಸಾಧ್ಯವಾಗಿಸಿದೆ. ಇದು ವಿಶ್ವ ಮಟ್ಟದಲ್ಲಿ ತನ್ನ ಉಪಸ್ಥಿತಿಯನ್ನು ಸಾರಿ ಹೇಳಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

    ವಿದ್ಯಾರ್ಥಿಗಳು ಕೂಡ ಆತ್ಮವಿಶ್ವಾಸದೊಂದಿಗೆ ತಮ್ಮ ಶೈಕ್ಷಣಿಕ ಬೆಳವಣಿಗೆ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಗನುಗುಣವಾಗಿ ಗಂಭೀರವಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಾಹಿತ್ಯ ಚಟುವಟಿಕೆಗಲ್ಲೂ ತೊಡಗಿಸಿಕೊಂಡು ಉನ್ನತ ಮಟ್ಟದಲ್ಲಿ ಭಾಗವಹಿಸಿ ಬೆಳೆಯಬೇಕು. ತಾವು ಕೂಡ ಶೈಕ್ಷಣಿಕ ಆಧ್ಯಯನಕ್ಕೆ ತೊಂದರೆ ಮಾಡಿಕೊಳ್ಳದ ಹಾಗೆ ರಾಷ್ಟ್ರಮಟ್ಟದ ಅಂತರ್ ವಿವಿ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆಗಳನ್ನು ಮಾಡಿರುವುದನ್ನು ಈ ಸಂದರ್ಭದಲ್ಲಿ ಡಾ.ಪರಮೇಶ್ವರ ಸ್ಮರಿಸಿದರು.

    ಗ್ರಾಮಾಂತರ ಪ್ರದೇಶದವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ತಲುಪಿಸುವುದಾಗಿದೆ. ಇದರಲ್ಲಿ ಸಂಸ್ಥೆ ಗರಿಷ್ಠ ಮಟ್ಟದ ಸಾಧನೆ ಮಾಡಿರುವುದು ಸಂತೋಷದ ವಿಷಯವಾಗಿದೆ. ವೈದ್ಯಕೀಯ ಮಹಾವಿದ್ಯಾಲಯದಿಂದ 40 ಸಾವಿರ ವೈದ್ಯರು ಹಾಗೂ 30 ಸಾವಿರ ಇಂಜಿನಿಯರ್‌ ಗಳನ್ನು ಸಮಾಜಕ್ಕೆ  ಸಿದ್ದಾರ್ಥ ಸಂಸ್ಥೆ ನೀಡಿದೆ ಎಂದು ಡಾ.ಜಿ.ಪರಮೇಶ್ವರ್ ಅವರು, ಪ್ರಾಧ್ಯಾಪಕ ವೃಂದದವರು ಅಂತರಾಷ್ಟ್ರೀಯ ವಿವಿ ಒಪ್ಪಂದಗಳ ಷರತ್ತಿಗೆ ಒಳಪಟ್ಟು ಹೊರದೇಶಕ್ಕೆ ಹೋಗಿ ಅಧ್ಯಯನ ಮಾಡಿ, ಮರಳಿ ಬಂದು ಸಂಸ್ಥೆಯ ವಿದ್ಯಾರ್ಥಿಗಳಿಗೆ ಕಲಿಸುವ ಗುಣಧರ್ಮ ಬೆಳೆಸಿಕೊಳ್ಳಿ ಎಂದು ಅವರು ಹೇಳಿದರು.

    ರ‍್ಯಾಗಿಂಗ್‌ ಗೆ ಅವಕಾಶವಿಲ್ಲ:

    ಮುಖ್ಯ ಅಥಿತಿಗಳಾಗಿ ಮಾತನಾಡಿದ ಉನ್ನತ ಶಿಕ್ಷಣರಾದ ಡಾ.ಎಂ.ಸಿ.ಸುಧಾಕರ್, ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್‌ ಗಳಲ್ಲಿ ರ‍್ಯಾಗಿಂಗ್ ನಡೆಯುವುದು ಕಡಿಮೆಯಾಗಿದೆ. ಹಾಗಂತ ಕಾನೂನು ವ್ಯಾಪ್ತಿ ಮೀರಿ ರ‍್ಯಾಗಿಂಗ್ ನಂತಹ ಚಟುವಟಿಗಳನ್ನು ನಡೆಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಖಿಲ ಭಾರತ ವೈದ್ಯಕೀಯ ಪರಿಷತ್ತು ನಿಬಂಧನಗಳನ್ನು ವಿಧಿಸಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.

    ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕಾದರೆ ನಿರಂತರ ಅಧ್ಯಯನ ಮಾಡಿ. ಕಾಲೇಜು ದಿನಗಳನ್ನು ಆಸ್ವಾದಿಸಿ. ಆದರೆ ಸುಮ್ಮನೆ ಸುತ್ತಾಡಿ ಕಾಲಹರಣ ಮಾಡಬೇಡಿ. ಕ್ರಿಯಾತ್ಮಕವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕಾಲ ಕಳೆಯಿರಿ. ಬಿಳಿಸಮವಸ್ತ್ರ ಧರಿಸಿದ ನಂತರ ನಿಮ್ಮಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.

    ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಡಾ.ಬಿ.ಎಲ್.ಸುಜಾತ ರಾಥೋಡ್ ಅವರು ಮಾತನಾಡಿ, ಸಮಾಜದಲ್ಲಿ ವೈದ್ಯಕೀಯ ವೃತ್ತಿಗೆ ಜವಾಬ್ದಾರಿಯುತ ಸ್ಥಾನವಿದೆ. ಅದರ ಸ್ಥಾನ–ಮಾನಗಳನ್ನು ಅರಿತು ಕಾರ್ಯನಿರ್ವಹಣೆಗೆ ನಿಮ್ಮ ಮನೋಸ್ಥಿತಿಗಳನ್ನು ಸಜ್ಜುಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಸಾಹೇ ವಿವಿಯ ಉಪ ಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝೆಡ್. ಕುರಿಯನ್, ಪರಿಕ್ಷಾಂಗ ನಿಯಂತ್ರಕರಾದ ಡಾ.ಜಿ.ಗುರುಶಂಕರ್, ಪ್ರಾಂಶುಪಾಲರಾದ ಡಾ. ಸಾಣಿಕೊಪ್ಪ, ಡಾ.ದಿವಾಕರ್, ಡಾ.ಪ್ರವೀಣ್ ಕುಡುವಾ, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಸೇರಿದಂತೆ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಸಾಹೇ ಕುಲಾಧಿಪತಿಗಳು ವೈದ್ಯಕೀಯ ಸಮವಸ್ತ್ರ ‘ವೈಟ್ ಕೋಟ್’ ಗಳನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರು ನೂತನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


    Provided by
    Provided by
    admin
    • Website

    Related Posts

    ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ

    July 16, 2026

    ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ

    July 14, 2026

    14 ವರ್ಷದ ಬಾಲಕಿ ತಾಯಿಯಾದ ಪ್ರಕರಣ; ಪೋಕ್ಸೋ ಕೇಸ್ ದಾಖಲು: ನಾಲ್ವರು ವೈದ್ಯರ ವಿರುದ್ಧವೂ FIR

    July 13, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬಿಡದಿ ಟೌನ್‌ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

    July 16, 2026

    ಬಾಗಲಕೋಟೆ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್…

    ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!

    July 16, 2026

    ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ

    July 16, 2026

    ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ

    July 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.