ಬೆಳಗಾವಿ: ಜನರನ್ನು ಉದ್ದೇಶಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಗೆಲುವು ಹೆಚ್ಚಾಗಿ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ. ಏಕೆಂದರೆ, ಪಕ್ಷವು ಎಂದಿಗೂ ಧರ್ಮ ಮತ್ತು ಜಾತಿ ಅಂಶಗಳ ಮೇಲೆ ಚುನಾವಣೆಗೆ ಹೋಗಲಿಲ್ಲ.
ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಮುಖ ಲಿಂಗಾಯತ ಮತಗಳ ಆಧಾರದ ಮೇಲೆ ಪಕ್ಷಗಳ ಗೆಲುವು ಆಧರಿಸಿದೆ ಎಂಬ ಮಾಧ್ಯಮಗಳಲ್ಲಿನ ಊಹಾಪೋಹಗಳನ್ನು ನಿರಾಕರಿಸಿದ ಅವರು, ಕಾಂಗ್ರೆಸ್ ಗೆ ಲಿಂಗಾಯತರ ಬೆಂಬಲವಿದೆ ಮತ್ತು ಪಕ್ಷದಲ್ಲಿ ಹಲವಾರು ಪ್ರಮುಖ ಲಿಂಗಾಯತ ನಾಯಕರಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲ್ಲಲಿದೆ ಎಂದರು. ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಗೆಲ್ಲುವ ಸಾಧ್ಯತೆ 50-50 ಎಂದು ಅವರು ಹೇಳಿದರು.
ಕೇಂದ್ರದ ಮೋದಿ ಸರ್ಕಾರ ಬೆಳಗಾವಿ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂಬುದನ್ನು ಚಿಂತಿಸಿ ಮತದಾನಕ್ಕೆ ಮುಂದಾಗಬೇಕು. ಬಿಜೆಪಿಗರು ಹೇಳುವ ಸುಳ್ಳು ನಂಬಿ ಮೋಸ ಹೋಗಬಾರದು, ರಾಮದುರ್ಗದಲ್ಲಿ ಬಿಜೆಪಿಯ ಹಳೆಯ ನಾಯಕರು, ಹೊಸ ನಾಯಕರು ಯಾರೂ ಇಲ್ಲ. ಇಲ್ಲಿನ ಮೈದಾನ ಖಾಲಿ ಇದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕುದುರೆಗಳನ್ನು ಓಡಿಸಿ ಕಾಂಗ್ರೆಸ್ಸಿಗೆ ಹೆಚ್ಚಿನ ಮತ ಹಾಕಿ ಗೆಲ್ಲಿಸಬೇಕು ಎಂದರು. ಮಹಿಳೆಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿಗಳನ್ನು ನಿರಂತರವಾಗಿ ನಡೆಸಲು ಈಗಾಗಲೇ 3 ಸಾವಿರ ಬಸ್ ಗಳನ್ನು ಸರ್ಕಾರ ಖರೀದಿಸಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296