ಒಮ್ಮೊಮ್ಮೆ ನಮ್ಮ ಜನ ಹೊಟ್ಟೆಗೆ ಅನ್ನ ತಿಂತಾರಾ..? ಅಥವಾ ಇನ್ನೇನಾದರೂ ತಿಂತಾರಾ ಅನ್ನೋದೇ ಗೊತ್ತಾಗಲ್ಲ. ರಸ್ತೆಯ ಎಲ್ಲೆಂದರಲ್ಲಿ ಕಸ ಬಿಸಾಡೋದು, ಕೊಳತೆ ವಸ್ತುಗಳನ್ನು ರಾತ್ರೋ ರಾತ್ರಿ ಬಿಸಾಕಿ ಓಡೋದನ್ನು ರೂಢಿ ಮಾಡಿಕೊಂಡಿದ್ದಾರೆ.
ಕೆಲವರು ಮಾಡುವ ಈ ಅವಿವೇಕಿತನಕ್ಕೆ ಇಡೀ ಪರಿಸರವೇ ನಾಶವಾಗುತ್ತಿದೆ. ಅದರಲ್ಲೂ ವಿದ್ಯಾವಂತರೇ ರಸ್ತೆ ಬದಿಯಲ್ಲಿ ಕಸಗಳನ್ನು ಎಸೆದು ಹೋಗುತ್ತಿರುವುದು ದೊಡ್ಡ ದುರಂತವೇ ಸರಿ. ಅಂತಹುದೇ ಒಂದು ಅವಿವೇಕಿತನ ಇದೀಗ ಸುಬ್ರಹ್ಮಣ್ಯ -ಜಾಲ್ಸೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಕಾಣಸಿಗುತ್ತಿದೆ.
ಸೋಣಂಗೇರಿಯಿಂದ 1 ಕಿ.ಮೀ. ದೂರದಲ್ಲಿರುವ ಕುಕ್ಕಂದೂರು ತಮಿಳು ಪುನರ್ವಸತಿ ಗೃಹದ ಪಕ್ಕದಲ್ಲಿ ಹಾದು ಹೋಗುವ ಸುಬ್ರಹ್ಮಣ್ಯ -ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಭಾರಿ ಕಸದ ರಾಶಿ ಬಿದ್ದಿದೆ. ಇಷ್ಟೊಂದು ಕಸ ರಾಶಿ ಬಿದ್ದರೂ ಈ ಕಡೆ ಯಾರೂ ಗಮನ ಕೊಡುತ್ತಿಲ್ಲ ಅನ್ನುವ ಕೂಗು ಕೇಳಿ ಬರುತ್ತಿದೆ. ಆದಷ್ಟು ಬೇಗ ಸ್ಥಳೀಯಾಡಳಿತ ಇದನ್ನು ತೆರವುಗೊಳಿಸಬೇಕೆಂದು ಸುತ್ತಮುತ್ತಲಿನ ಜನ ಒತ್ತಾಯಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296