ತುಮಕೂರು: ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿಗೆ ಸಚಿವ ಡಾ.ಜಿ.ಪರಮೇಶ್ವರ್ ಕ್ಲಾಸ್ ತೆಗೆದುಕೊಂಡು ಹೊರ ಕಳುಹಿಸಿದ ಘಟನೆ ತುಮಕೂರಿನ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯಿತು.
ಫೈಲ್ ಹಿಡಿದು ಸಭೆಗೆ ತಡವಾಗಿ ಆಗಮಿಸಿದ ಎಸ್ ಟಿ ನಿಗಮ ಅಧಿಕಾರಿಯನ್ನು ಕಂಡು ಪರಂ ಗರಂ ಆದರು. ನಿಗಮದ ಅಧಿಕಾರಿಯನ್ನ ಡೋಂಟ್ ಸ್ಟ್ಯಾಂಡ್ ಇಯರ್.. ಗೆಟ್ ಔಟ್ ಎಂದ ಹೋಂ ಮಿನಿಸ್ಟರ್ ತಡವಾಗಿ ಬಂದಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹೊರ ಕಳುಹಿಸಿದರು.
ಸಭೆ ಆರಂಭವಾಗಿ ಮುಕ್ಕಾಲು ಗಂಟೆ ತಡವಾಗಿ ಅಧಿಕಾರಿ ಬಂದಿದ್ದು, ಇದರಿಂದ ಸಚಿವ ಪರಮೇಶ್ವರ್ ಕೆಂಡಾಮಂಡಲವಾದರು. ತಡವಾಗಿ ಬರುವ ಯಾವುದೇ ಅಧಿಕಾರಿಗಳನ್ನ ಒಳಗೆ ಬಿಡದಂತೆ ಭದ್ರತಾ ಸಿಬ್ಬಂದಿಗೆ ಸಚಿವರು ಸೂಚನೆ ನೀಡಿದರು.
ಆದರೆ ತಡವಾಗಿಜನಪ್ರತಿನಿಧಿಗಳು ಬಂದರೆ ಮಾತ್ರ ಒಳಗೆ ಬಿಡುವಂತೆ ಪರಮೇಶ್ವರ್ ಸಲಹೆ ನೀಡಿದರು. ತುಮಕೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಕೆಡಿಪಿ ಸಭೆ ನಡೆಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4