nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ

    October 12, 2026

    ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ

    October 12, 2026

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ
    • ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ
    • ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ
    • ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ತುಂಬಿ ನಾಲೆಗೆ ಎಸೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್– ಆರೋಪಿ ಬಂಧನ
    • ತಿಪಟೂರು: ಬಿ.ಎಚ್. ರಸ್ತೆಯಲ್ಲಿ ಬೃಹತ್ ಮರ ಬಿದ್ದು ನಿವೃತ್ತ ಶಿಕ್ಷಕ ದುರಂತ ಸಾವು
    • ಅಪ್ರಾಪ್ತರ ಕೈಗೆ ವಾಹನ ನೀಡಿದರೆ ಪೋಷಕರಿಗೆ ₹25 ಸಾವಿರ ದಂಡ: ಭಾಲ್ಕಿ ಡಿವೈಎಸ್ಪಿ ಎಚ್ಚರಿಕೆ
    • ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ
    • ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದೇವರ ಲೆಕ್ಕಾಚಾರ…
    ಲೇಖನ January 10, 2025

    ದೇವರ ಲೆಕ್ಕಾಚಾರ…

    By adminJanuary 10, 2025No Comments3 Mins Read
    stoty

    ಬಹಳ ಹಿಂದೆ ಸುರಪುರವೆಂಬ ಊರಿನಲ್ಲಿ ಶಂಭು ಎಂಬ ಬಡವನಿದ್ದ. ಇವನು ಮಹಾನ್ ದೈವ ಭಕ್ತ. ಪ್ರತಿದಿನ ದೇವರನ್ನು ಪ್ರಾರ್ಥಿಸದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಇವನ ಭಕ್ತಿಗೆ ದೇವರೂ ಕೂಡ ಸಂಪ್ರೀತನಾಗಿದ್ದನು. ಶಂಭು ಮೇಕೆಗಳನ್ನು ಸಾಕಿದ್ದ, ಪ್ರತಿದಿನ ಕಾಡಿನ ಸಮೀಪ ಕರೆದುಕೊಂಡು ಹೋಗಿ ಮೇಯಿಸಿಕೊಂಡು, ಹೊಳೆಯಲ್ಲಿ ನೀರು ಕುಡಿಸಿಕೊಂಡು ಬರುತ್ತಿದ್ದ. ಇವನ ಬಳಿ ಮೇಕೆಕೊಳ್ಳಲು ಅಕ್ಕಪಕ್ಕದ ಜನರು ಬರುತ್ತಿದ್ದರು ವ್ಯಾಪಾರದಿಂದ ಬರುವ ಹಣದಿಂದ ತಕ್ಕಮಟ್ಟಿನ ಜೀವನ ನಡೆಸುತ್ತಿದ್ದ.

    ಹೀಗೆಯೇ ಹಲವು ದಿನಗಳು ಕಳೆದವು. ಶಂಭುವಿನ ಹಣೆಬರಹದಂತೆ ಕೆಟ್ಟದಿನಗಳು ಬರಲು ಪ್ರಾರಂಭವಾದವು. ಆಗ ವೈಕುಂಠದಲ್ಲಿ ದೇವಿ ದೇವನಲ್ಲಿ ಕೇಳುತ್ತಾಳೆ ಹೇ ದೇವ ಶಂಭು ನಿಮ್ಮ ಪರಮ ಭಕ್ತ ಅವನಿಗೆ ಕಷ್ಟಗಳನ್ನು ಎದುರಿಸುವ ಶಕ್ತಿ ಇಲ್ಲ, ಅವನನ್ನು ಕಾಪಾಡುವ ಹೊಣೆ ನಿಮ್ಮದಲ್ಲವೇ ಎಂದಾಗ ದೇವನು ಹೌದು ದೇವಿ ನೀನು ಹೇಳುವುದು ಸರಿಯಾಗಿದೆ. ಆದರೆ ಅವನ ಹಣೆ ಬರಹ ಅವನು ಅನುಭವಿಸಲೇ ಬೇಕು ಅಲ್ಲವೇ ಎಂದಾಗ, ದೇವಿಯು ಆದರೂ ಕಡೆಯಪಕ್ಷ ಅವನಿಗೆ ಸಹಾಯ ಮಾಡಬಹುದಲ್ಲವೇ ಎಂದಾಗ ದೇವನು ಹಾಗಾದರೆ ಅವನಿಗೆ ಸಹಾಯ ಮಾಡುತ್ತೇನೆ, ಆದರೆ ಅದರ ಮುಂದಿನ ಘಟನೆಗಳನ್ನು ನೋಡುತ್ತಿರು ಅದು ನಿನಗೇ ತಿಳಿಯುವುದು ಎಂದಾಗ ದೇವಿ ಆಶ್ಚರ್ಯದಿಂದ  ನೋಡುತ್ತಾಳೆ.

    ಇತ್ತ ಸುರಪುರಕ್ಕೆ ಪಕ್ಕದ ಹಳ್ಳಿಯಂದ ದೊಡ್ಡ ದೊಡ್ಡ ಸಾಹುಕಾರರು ಬಂದು ಹಳ್ಳಿಯ ಜಾತ್ರೆಯ ನಿಮಿತ್ತ ಶಂಭುವಿನ ಬಳಿ ಇದ್ದ ಎಲ್ಲಾ ಮೇಕೆಗಳನ್ನು ಕೊಂಡುಕೊಂಡು ಹೋಗಿಬಿಟ್ಟರು. ಇದರಿಂದ ಶಂಭುವಿಗೆ ಪರಮಾಶ್ಚರ್ಯವಾಯಿತು. ಹೇ ದೇವ ಎಲ್ಲಿಯೋ ಒಂದೊಂದು ವ್ಯಾಪಾರವಾಗುತ್ತಿದ್ದ ನನಗೆ ನಿನ್ನ ಕರುಣೆಯಿಂದ ನನ್ನ ಬಳಿ ಇದ್ದ ಎಲ್ಲಾ ಮೇಕೆಗಳು ಒಟ್ಟಿಗೆ ವ್ಯಾಪಾರವಾದವು ನಿನಗೆ ಅನಂತ ಕೋಟಿ ನಮನಗಳು ಎಂದು ನಮಿಸುತ್ತಾ ಅತ್ಯಧಿಕ ಲಾಭ ಬಂದ ಸಂತೋಷದಲ್ಲಿ ಮತ್ತಷ್ಟು ಮೇಕೆಮರಿಗಳನ್ನು ಕೊಂಡುಕೊಳ್ಳಲು ಪಟ್ಟಣದ ಸಂತೆಗೆ ಹೋದನು. ಅಲ್ಲಿ ಸಾಕಷ್ಟು ಮೇಕೆಮರಿಗಳನ್ನು ಕೊಂಡುಕೊಂಡು ಊರಿಗೆ ಬಂದನು. ಅವನ ದುರಾದೃಷ್ಟವಶಾತ್ ಕೆಲವೇ ದಿನಗಳಲ್ಲಿ ಮೇಕೆ ಮರಿಗಳಿಗೆ ವಿಚಿತ್ರ ಖಾಯಿಲೆ ಬಂದು ಒಂದೊಂದೇ ಒಂದೊಂದೆ ಪ್ರಾಣ ಬಿಡಲು ಪ್ರಾರಂಭಿಸಿದವು. ಹೀಗೆಯೇ ಅವನು ತಂದಿದ್ದ ಎಲ್ಲಾ ಮರಿಗಳು ಪ್ರಾಣಬಿಟ್ಟವು.  ಇದರಿಂದ ದುಃಖಿತನಾದ ಶಂಭು ಊರ ಹೊರವಲದ ದೇವಾಲಯದ ಮೆಟ್ಟಿಲಮೇಲೆ ಕುಳಿತು ಹೇ ದೇವ ನಾನೇನು ಪಾಪ ಮಾಡಿದ್ದೆ, ಒಳ್ಳೆಯ ವ್ಯಾಪಾರ ಆಗಿತ್ತು, ಆದರೆ ಎಲ್ಲವೂ ಹೋಯಿತು, ಹೀಗೆ ಕೊಟ್ಟೆ ಹಾಗೆ ಕಸಿದುಕೊಂಡೆ, ನನಗೆ ಮಾತ್ರ ಹೀಗೇನಾ? ಚೆನ್ನಾಗಿರುವವರು ಚೆನ್ನಾಗಿಯೇ ಇದ್ದಾರೆ ನನಗೆ ಮಾತ್ರ ಏಕೆ ಹೀಗೆ, ನಾನು ನಿನ್ನ ಭಕ್ತ ನನಗೇಕೆ ಹೀಗೆ ಮಾಡಿದೆ; ಎಂದು ರೋದಿಸುತ್ತಿರುವಾಗ ಇತ್ತ ದೇವಿಯು ಹೌದು ಪ್ರಭು ಅವನು ಹೇಳುತ್ತಿರುವುದು ಸರಿಯಾಗಿಯೇ ಇದೆ ಹೀಗೆ ಕೊಟ್ಟು ಹಾಗೆ ಏಕೆ ಕಸಿದುಕೊಂಡಿರಿ ಎಂದಾಗ ದೇವನು ಮುಗುಳ್ನಕ್ಕು ನೋಡು ದೇವಿ ನೀನು ಹೇಳಿದಂತೆ ನಾನು ಅವನಿಗೆ ಸಹಾಯ ಮಾಡಿರುವೆನು. ಮುಂದಿನ ಕಷ್ಟ ಎದುರಿಸಲು ನಾನು ಅವನಿಗೆ ಮೊದಲೇ ಸಾಕಷ್ಟು ಹಣ ಸಿಗುವ ಹಾಗೆ ಮಾಡಿದೆ.

    ಎಲ್ಲವೂ ಒಟ್ಟಿಗೆ ವ್ಯಾಪಾರ ಆಗುವಂತೆ ಮಾಡಿ ಅವನಿಗೆ ಅತ್ಯಧಿಕ ಹಣ ದೊರಕುವಹಾಗೆ ಮಾಡಿದೆ. ಆದರೆ ಅವನ ಹಣೆಬರಹ ಅನುಭವಿಸಬೇಕಾಗಿತ್ತು ಅದಕ್ಕಾಗೆ ಅವನಿಗೆ ಎರಡನೇ ಬಾರಿ ಮರಿಗಳಿಗೆ ಖಾಯಿಲೆ ಬಂದು ನಷ್ಟವಾಯಿತು. ಆದರೂ ಕೆಲದಿನಗಳವರೆಗೆ ಅವನು ಜೀವನ ನಡೆಸುಷ್ಟು ಹಣ ಅವನಿಗೆ ನೀಡಿರುವೆನು. ಈ ಮೊದಲು ಅವನಿಗೆ ವ್ಯಾಪಾರದಲ್ಲಿ ಲಾಭ ಬರುವ ಹಾಗೆ ಮಾಡದೇ ಕೇವಲ ಅವನ ಬಳಿ ಇದ್ದ ಮೇಕೆಗಳಿಗೆ ಖಾಯಿಲೆ ಬಂದಿದ್ದರೆ, ಅವನಿಗೆ ಮತ್ತಷ್ಟು ಕಷ್ಟಗಳು ಬರುತ್ತಿದ್ದವು, ಜೀವನ ನಡೆಸುವುದೇ ದುಸ್ತರವಾಗುತ್ತಿತ್ತು. ಆದರೆ ಅವನು ಮಾನವ; ಕೇವಲ ನಾನು ಕೊಟ್ಟು ಕಿತ್ತುಕೊಂಡೆ ಎಂದಷ್ಟೇ ಯೋಚಿಸುತ್ತಿದ್ದಾನೆ. ನಾನು ಮೊದಲು ಕೊಡದೇ ಇರುವುದನ್ನೇ ಕಿತ್ತುಕೊಂಡಿದ್ದರೆ ಆಗ ಏನಾಗುತ್ತಿತ್ತು ನೀನೇ ಯೋಚಿಸು ದೇವಿ ಎಂದಾಗ ದೇವಿಗೆ ಎಲ್ಲವೂ ಅರ್ಥವಾಗಿ ಹೌದು ದೇವ ನೀವು ಸರಿಯಾಗಿ ಹೇಳಿದಿರಿ ಎಂದಳು.

    ವೇಣುಗೋಪಾಲ್

     

    ಪ್ರಿಯ ಓದುಗರೆ,

    ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕ್ಷಣವೂ ದೇವರ ಲೆಕ್ಕಾಚಾರದ ಒಂದು ಭಾಗ. ಯಶಸ್ಸು ಹಾಗೂ ವಿಫಲತೆಗಳ ನಡುವೆ ನಂಬಿಕೆ ಮತ್ತು ಧೈರ್ಯವನ್ನು ಕಳೆದುಕೊಳ್ಳದೇ ಮುಂದೆ ಸಾಗುವುದು ತುಂಬಾ ಮುಖ್ಯ. ಸಂಕಷ್ಟಗಳು ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿಸಲು ಬರುವುದೇ ಹೊರತು, ಕುಗ್ಗಿಸಲೆಲ್ಲ.

    ನಮ್ಮ ಜೀವನದಲ್ಲಿ ಏನೇ ಆಗಲಿ, ದೇವರು ನಮ್ಮ ಹಿತಕಾಯಿತಕ್ಕಾಗಿ ಯೋಜನೆಗಳನ್ನು ಹೊಂದಿದ್ದಾನೆ ಎಂಬ ನಂಬಿಕೆಯನ್ನು ಪೋಷಿಸೋಣ. ಪ್ರತಿಯೊಂದು ಸವಾಲು ಕೂಡ ಒಂದು ಹೊಸ ಅವಕಾಶವಾಗಿದೆ ಎಂಬ ದೃಢ ನಿಲುವು ಹೊಂದೋಣ.

    ನಂಬಿಕೆಯಿಂದ ಸಾಗಿದರೆ ಜೀವನ ಸಾರ್ಥಕವಾಗುತ್ತದೆ.

    ನಮ್ಮ ಕಥೆ ಓದಿ ಪ್ರೇರಣೆಯನ್ನು ಪಡೆದು, ಮುನ್ನಡೆಯಿರಿ!


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಹಾಳಾದ ದೇವರ ಫೋಟೋಗಳನ್ನು ಏನು ಮಾಡಬೇಕು? ಮರದ ಕೆಳಗೆ, ದೇವಸ್ಥಾನದ ಬಳಿ ಇಡುವ ಮುನ್ನ ಈ ವಿಷಯ ತಿಳಿಯಿರಿ!

    October 9, 2026

    ತೆರಿಗೆ ಸುಧಾರಣೆಯ ನವಯುಗ: ವ್ಯಾಪಾರಿಗಳ ಹೆಗಲ ಮೇಲಿನ ನೊಗ ಇಳಿಸಿದ ಜಿಎಸ್‌ ಟಿ ಕೌನ್ಸಿಲ್

    October 9, 2026

    ಅಕ್ಟೋಬರ್ ತಿಂಗಳ ಮಹತ್ವದ ತೆರಿಗೆ ಗಡುವುಗಳು: ತೆರಿಗೆದಾರರು ಹಾಗೂ ವೃತ್ತಿಪರರು ಗಮನಿಸಬೇಕಾದ ಶಾಸನಬದ್ಧ ನಿಯಮಾವಳಿಗಳು

    October 6, 2026

    Comments are closed.

    Our Picks

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ದಸರಾ ಹೆಲಿರೈಡ್ ಗೆ ವಿಶ್ವವಿದ್ಯಾಲಯ ಕ್ಯಾಂಪಸ್ ನ ಜಾಗ ನೀಡಲು ಆಡಳಿತ ಮಂಡಳಿ ನಕಾರ: ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿ ನಿರ್ಧಾರ

    October 12, 2026

    ತುಮಕೂರು: ತುಮಕೂರು ದಸರಾ–2026 ಉತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಲು ಉದ್ದೇಶಿಸಲಾಗಿದ್ದ ಹೆಲಿಕ್ಯಾಪ್ಟರ್ ರೈಡ್ ಗೆ (Helicopter Ride) ತುಮಕೂರು ವಿಶ್ವವಿದ್ಯಾನಿಲಯವು…

    ತುಮಕೂರು: ವಿದ್ಯಾರ್ಥಿ ಹಿತಾಸಕ್ತಿಗಿಂತ ವಾಣಿಜ್ಯ ಲಾಭ ಮುಖ್ಯವೇ?: ತುಮಕೂರು ವಿವಿಯಲ್ಲಿ ಹೆಲಿರೈಡ್‌ ಗೆ AIDSO ತೀವ್ರ ಆಕ್ಷೇಪ

    October 12, 2026

    ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರಿಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ

    October 12, 2026

    ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ತುಂಬಿ ನಾಲೆಗೆ ಎಸೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್– ಆರೋಪಿ ಬಂಧನ

    October 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.