nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!

    July 12, 2026

    723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ

    July 12, 2026

    ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ

    July 12, 2026
    Facebook Twitter Instagram
    ಟ್ರೆಂಡಿಂಗ್
    • ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
    • 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
    • ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
    • ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
    • ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
    • ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
    • 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
    • ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರಾಂಶುಪಾಲರು ನನ್ನ ಹಾಸ್ಟೆಲ್, ನನ್ನ ಮಕ್ಕಳು ಎಂದು ಭಾವಿಸಿದಾಗ ಮಾತ್ರ ವಸತಿ ನಿಲಯಗಳು ಉದ್ದಾರವಾಗುತ್ತವೆ: ಶಾಸಕ ಎಚ್.ವಿ.ವೆಂಕಟೇಶ್
    ಪಾವಗಡ December 31, 2023

    ಪ್ರಾಂಶುಪಾಲರು ನನ್ನ ಹಾಸ್ಟೆಲ್, ನನ್ನ ಮಕ್ಕಳು ಎಂದು ಭಾವಿಸಿದಾಗ ಮಾತ್ರ ವಸತಿ ನಿಲಯಗಳು ಉದ್ದಾರವಾಗುತ್ತವೆ: ಶಾಸಕ ಎಚ್.ವಿ.ವೆಂಕಟೇಶ್

    By adminDecember 31, 2023No Comments2 Mins Read
    pavagada

    ಪಾವಗಡ:  ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಂಶುಪಾಲರುಗಳು ವಸತಿ ನಿಲಯ ನನ್ನದು ಮಕ್ಕಳು ನಮ್ಮವರು ಎಂದು ಪರಿಭಾವಿಸಿದಾಗ ಮಾತ್ರ ವಸತಿ ನಿಲಯಗಳಲ್ಲಿ ಇರುವಂತಹ ವಿದ್ಯಾರ್ಥಿಗಳು ಉದ್ಧಾರ ಆಗಲು ಸಾಧ್ಯವಾಗುತ್ತದೆ  ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದ್ದಾರೆ.

    ಶನಿವಾರ ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ದೂರ ತರಂಗ ಶಿಕ್ಷಣ ಉದ್ಘಾಟನೆ ಸಮಾರಂಭ ಹಾಗೂ ಜ್ಞಾನ ಸಿಂಚನ 2023 ನೇ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಶಾಸಕರು ಮಾತನಾಡುತ್ತಿದ್ದರು.

    ಮಕ್ಕಳಿಗೆ ನೀಡುವ ಆಹಾರದಲ್ಲಿ ಕತ್ತರಿ ಹೊಡೆಯುವುದು, ಗುಣಮಟ್ಟ ಆಹಾರವನ್ನು ನೀಡದೆ ಇರುವುದು, ಬೇಕಾಬಿಟ್ಟಿಯಾಗಿ ಕರ್ತವ್ಯ ನಿರ್ವಹಿಸುವುದು ಮಾಡಬಾರದು. ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುವಂತಹ ಮಕ್ಕಳು ನಮ್ಮ ಮಕ್ಕಳು ಎಂದು ಭಾವಿಸಬೇಕು ಎಂದು ಅವರು ತಿಳಿಸಿದರು.

    ವಿದ್ಯಾಭ್ಯಾಸಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು, ಜಪಾನಂದ ಸ್ವಾಮೀಜಿ ಅವರು, ಪಾವಗಡ ತಾಲೂಕಿಗೆ ಒಂದು ರೀತಿಯ ವರ ಇದ್ದ ಹಾಗೆ ತಾಲ್ಲೂಕಿನಾದ್ಯಂತ ಅನೇಕ ಆರೋಗ್ಯ ಶಿಬಿರಗಳನ್ನು ನೆರವೇರಿಸಿದ್ದಾರೆ. ಬರಬಂದಂತಹ ಸಮಯದಲ್ಲಿ ಸರ್ಕಾರ ಮುಂದೆ ಬಾರದಿದ್ದರೂ ಸ್ವಾಮೀಜಿಯವರು ಜಾನುವಾರುಗಳ ಹಸಿವು ನೀಗಿಸಲು ಹುಲ್ಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಂತರ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ ಆದರೆ ಸ್ವಯಂ ಸೇವಾ ಸಂಸ್ಥೆಯಾಗಿ ರಾಮಕೃಷ್ಣ ಸೇವಾಶ್ರಮದ ಆಸ್ಪತ್ರೆಯಲ್ಲಿ ವೈದ್ಯರು ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗಳ ಜೊತೆ ಬುಕ್ ಆಗುತ್ತಿದ್ದಾರೆ, ಬಡ ಹೆಣ್ಣು ಮಕ್ಕಳು ಸರ್ಕಾರಿ ಆಸ್ಪತ್ರೆಗೆ ಹೋದರೆ ನಾರ್ಮಲ್ ಡೆಲಿವರಿಯನ್ನು ಸಿಸೇರಿಯನ್ ಮಾಡಿಬಿಡುತ್ತಾರೆ, ಅಂತಹ ನರ್ಸಿಂಗ್ ಹೋಮ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದೇನೆ, ತಾಲೂಕಿನಲ್ಲಿ ವೈದ್ಯರು ಅತ್ಯಂತ ಕೆಳಮಟ್ಟಕ್ಕೆ ಇಳಿದು ಬಡವರ ರಕ್ತ ಹೀರುತ್ತಿದ್ದಾರೆ ಈ ನಿಟ್ಟಿನಲ್ಲಿ ನಾವೆಲ್ಲ ಬದಲಾವಣೆ ಆಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಬಡ ಜನರಿಗೆ ಸೇವೆ ಮಾಡುವಂಥವರಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು,

    ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ಶಾಲೆಗಳು ಉದ್ದಾರ ಆಗಬೇಕಾದರೆ ಪೋಷಕರ ಪಾತ್ರವೂ ಸಹ ಅತ್ಯಂತ ಪ್ರಮುಖವಾಗಿರುತ್ತದೆ, ತಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮತ್ತು ಆಧಾರಿತ ಶಿಕ್ಷಣ ಲಭಿಸುತ್ತಿದೆ, ಮತ್ತು ವಿದ್ಯಾರ್ಥಿಗಳು ಗ್ರಾಮೀಣ ಸಂಸ್ಕೃತಿಯನ್ನ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವವರಾಗಬೇಕು ಈ ದಿನ ಶಾಲೆಯಲ್ಲಿ ಗ್ರಾಮೀಣ ಸೊಬಗಿನ ವಾತಾವರಣವನ್ನು ವಿದ್ಯಾರ್ಥಿಗಳು ನಿರ್ಮಾಣ ಮಾಡಿದ್ದಲ್ಲ ಕಂಡು ಸಂತೋಷವಾಯಿತು, ಇದು ನಮ್ಮ ರಾಮಕೃಷ್ಣ ಸೇವಾಶ್ರಮದಿಂದ ತಮ್ಮ ಶಾಲೆಗೆ ದೂರ ತರಂಗ ಶಿಕ್ಷಣದ ಯೋಜನೆಯನ್ನು ನೀಡಿದ್ದೇವೆ ತಾವೆಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದರು

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಂಶುಪಾಲ ಕಸ್ತೂರಿ ಕುಮಾರ್ ಮಾತನಾಡಿದ ಕಾಲೇಜಿನಲ್ಲಿ ಸದ್ಯ ಪಿಯುಸಿ ವಿಭಾಗವು ಸಹ ಇದು ಪ್ರತ್ಯೇಕವಾದ ಕಟ್ಟಡ ಅಗತ್ಯವಿದೆ, ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ ತರಗತಿಗಳನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದಾಗಿ ಆರು ಎಕರೆ ಸ್ಥಳ ಇದ್ದು ಪ್ರತ್ಯೇಕ ವಿಭಾಗ ಮತ್ತು ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕಟ್ಟಡವನ್ನು ನಿರ್ಮಾಣ ಮಾಡಲು ವಹಿಸುವಂತೆ ಅವರು ಶಾಸಕರಿಗೆ ಮನವಿ ಮಾಡಿದರು ನಂತರ ಕಾಲೇಜಿನಲ್ಲಿ ಸದ್ಯ ಒಂದೇ ಬೋರ್ವೆಲ್ ಇದ್ದು ಬರ ಇರುವುದರಿಂದ ಯಾವ ಸಮಯದಲ್ಲಿ ನೀರಿನ ಕೊರತೆ ಉಂಟಾಗುವ ಸದ್ಯದ ಇದ್ದು ಮತ್ತೊಂದು ಬೋರ್ ವೆಲ್ ಅವಶ್ಯಕತೆ ಇದೇ ಎಂದು ಮನವಿ ಮಾಡಿದರು

    ಕಾಲೇಜಿನ ವಿಭಾಗದಲ್ಲಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಶರತ್ ಮತ್ತು ಗಗನ ಎಮ್ ಜಿ ಎನ್ನುವ ವಿದ್ಯಾರ್ಥಿಗೆ ಪಡೆದುಕೊಂಡಿದ್ದು ಅದೇ ರೀತಿ ಉತ್ತಮ ತಂಡವಾಗಿ ಕೆಂಪು ತಂಡ ಆಯ್ಕೆಗೊಂಡಿದ್ದು ಶಾಸಕರು ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು

    ಕಾರ್ಯಕ್ರಮದಲ್ಲಿ ತಾಲೂಕು ಲಂಬಾಣಿ ಸಂಘದ ಅಧ್ಯಕ್ಷರಾದ ರಮೇಶ್ ನಾಯ್ಕ ಮುಖಂಡರಾದ ವೆಂಕಟೇಶ್, ಶಾಲೆಯ ಪ್ರಧಾನ ಪೋಷಕರಾದ ರಾಂಪುರ ನಾಗೇಶ್ ,ರಮೇಶ್ ವಸತಿ ನೆಲೆಗಳ ಜಿಲ್ಲಾ ಸಂಯೋಜಕರಾದ ಶ್ರೀನಿವಾಸ್, ವಿವಿಧ ವಸತಿ ಶಾಲೆಗಳ ಪ್ರಾಂಶುಪಾಲರುಗಳು ಉಪನ್ಯಾಸಕರಗಳು ಶಿಕ್ಷಕರುಗಳು ಪೋಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

    ವರದಿ : ನಂದೀಶ್ ನಾಯ್ಕ,  ಪಾವಗಡ


    Provided by
    Provided by
    admin
    • Website

    Related Posts

    ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು: ಪಾವಗಡ ಶಾಸಕ ಎಚ್.ವಿ. ವೆಂಕಟೇಶ್

    July 7, 2026

    ಪಾವಗಡ: ಶಾಲೆಗಳಲ್ಲಿ ಅಣುಕು ಮತದಾನ: ಪ್ರಜಾಪ್ರಭುತ್ವದ ಅರಿವು ಮೂಡಿಸುವ ಪರಿಣಾಮಕಾರಿ ಪ್ರಯೋಗ

    July 4, 2026

    ಇಂದಿರಾ ಗಾಂಧಿ ವಸತಿ ಶಾಲೆ ದುರವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ ಕಂಡು ವಿದ್ಯಾರ್ಥಿಗಳು, ಪೋಷಕರು ಕಂಗಾಲು

    June 30, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಆರೋಗ್ಯ

    ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!

    July 12, 2026

    ನವದೆಹಲಿ: ಸಾಮಾನ್ಯವಾಗಿ ದಂಪತಿಗಳು ಮಗುವಿಗಾಗಿ ಪ್ರಯತ್ನಿಸುತ್ತಿರುವಾಗ (Trying for a baby) ಅವರ ಸಂಪೂರ್ಣ ಗಮನ ಒತ್ತಡ ಕಡಿಮೆ ಮಾಡಿಕೊಳ್ಳುವುದು,…

    723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ

    July 12, 2026

    ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ

    July 12, 2026

    ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ

    July 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.