ತಿಪಟೂರು: ಕಿಬ್ಬನಹಳ್ಳಿ ಹೋಬಳಿಯ ಹಟ್ನಾ ಗ್ರಾಮದ ದೇವತೆಗಳ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವಕ್ಕೆ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಅವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು.
ಈ ಬಾರಿ ಹೆಚ್ಚು ಮಳೆಗಾಲವಾಗಿದ್ದು ಒಂದು ಕಡೆ ರಾಗಿ ಬೆಳೆದ ರೈತರು ನೆಲಕ್ಕುರುಳಿದ್ದಾರೆ. ಮುಂದಿನ ದಿನಗಳಲ್ಲಿ ದೇವರು ಒಳ್ಳೆಯ ಬೆಳೆ ಕೊಟ್ಟು ಅನ್ನದಾತರ ಕಷ್ಟ ಕಳೆಯಬೇಕಾಗಿದೆ ಎಂದು ದೇವರಲ್ಲಿ ಇದೇ ವೇಳೆ ಅವರು ಪ್ರಾರ್ಥನೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಗೊರಗೊಂಡನಹಳ್ಳಿ ಸುದರ್ಶನ್ ಸೇರಿದಂತೆ ಗ್ರಾಮಸ್ಥರು ಮುಖಂಡರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ