nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು: ಅಣ್ಣಪ್ಪ ಸ್ವಾಮಿ — ಮಸಣಿಕಮ್ಮ ದೇವಿ ದೇವಸ್ಥಾನದಲ್ಲಿ ಪವಾಡ !

    November 2, 2026

    ಅಂಗನವಾಡಿ ಕಾರ್ಯಕರ್ತರಿಗೆ ‘ಪೋಷಕತ್ವ ಯೋಜನೆ’ ಕುರಿತು ಅರಿವು ಕಾರ್ಯಕ್ರಮ

    November 2, 2026

    ಮನುಷ್ಯರಿಗಿಂತ ವೇಗವಾಗಿ ಯೋಚಿಸುತ್ತವೆಯೇ ಕಾಗೆಗಳು? ವಿಜ್ಞಾನಿಗಳ ಅಧ್ಯಯನದಲ್ಲಿ ಅಚ್ಚರಿ!

    November 2, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು: ಅಣ್ಣಪ್ಪ ಸ್ವಾಮಿ — ಮಸಣಿಕಮ್ಮ ದೇವಿ ದೇವಸ್ಥಾನದಲ್ಲಿ ಪವಾಡ !
    • ಅಂಗನವಾಡಿ ಕಾರ್ಯಕರ್ತರಿಗೆ ‘ಪೋಷಕತ್ವ ಯೋಜನೆ’ ಕುರಿತು ಅರಿವು ಕಾರ್ಯಕ್ರಮ
    • ಮನುಷ್ಯರಿಗಿಂತ ವೇಗವಾಗಿ ಯೋಚಿಸುತ್ತವೆಯೇ ಕಾಗೆಗಳು? ವಿಜ್ಞಾನಿಗಳ ಅಧ್ಯಯನದಲ್ಲಿ ಅಚ್ಚರಿ!
    • ನೃತ್ಯಕ್ಕೆಂದೇ ಹುಟ್ಟಿದ ಗ್ರಾಮವಿದು! ಮರ, ಮಣ್ಣು, ಕಟ್ಟಡಗಳಲ್ಲೂ ಅಡಗಿದೆ ಲಯ! ಇಲ್ಲಿ ಮರಗಳೂ ನೃತ್ಯ ಮಾಡುತ್ತವೆ!
    • ಜಿರಳೆ ಹಾಲು ಸಾಮಾನ್ಯ ಹಾಲಿಗಿಂತ ಮೂರು ಪಟ್ಟು ಶಕ್ತಿ ಹೊಂದಿದೆಯಂತೆ: ನೋಡಿ ಎಂತಹ ಚರ್ಚೆ ಹುಟ್ಟು ಹಾಕಿದೆ ಜಿರಳೆ!
    • ತುಮಕೂರಿನಲ್ಲಿ ಸಂಭ್ರಮದ 71ನೇ ಕನ್ನಡ ರಾಜ್ಯೋತ್ಸವ: 71 ಸಾಧಕರಿಗೆ ಪ್ರಶಸ್ತಿ ಪ್ರದಾನ
    • ಚೋರನೂರು: ಬಾಲ್ಯವಿವಾಹ ತಡೆ ಹಾಗೂ ಪೋಕ್ಸೊ ಕಾಯ್ದೆ ಜಾಗೃತಿ |  ಶಿಕ್ಷಣಕ್ಕೆ ಆದ್ಯತೆ ನೀಡಲು ವಿದ್ಯಾರ್ಥಿಗಳಿಗೆ ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆ
    • ‘ನಮ್ಮ ತುಮಕೂರು ಡಿಜಿಟಲ್ ಮಾಧ್ಯಮ’ದ 5ನೇ ವಾರ್ಷಿಕೋತ್ಸವ: 5 ಸಾರ್ಥಕ ವರ್ಷಗಳು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡ ಜಯಂತಿ ಆಚರಣೆ ಅರ್ಥಹೀನ: ಸಚಿನ್ ಸರಗೂರು
    ರಾಜ್ಯ ಸುದ್ದಿ June 24, 2022

    ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡ ಜಯಂತಿ ಆಚರಣೆ ಅರ್ಥಹೀನ: ಸಚಿನ್ ಸರಗೂರು

    By adminJune 24, 2022No Comments2 Mins Read
    sachin saraguru

    ಹಾಸನ: ನಾಡ ಪ್ರಭು ಕೆಂಪೇಗೌಡರ ಹೆಸರಿನಿಂದ ಲಾಭ ಪಡೆದುಕೊಳ್ಳುವ ರಾಜಕೀಯ ನಾಯಕರು, ಆ ಬಳಿಕ ಕೆಂಪೇಗೌಡರು ಮಾತ್ರವಲ್ಲದೇ ಒಕ್ಕಲಿಗ ಸಮುದಾಯವನ್ನೂ ಮರೆತು ಬಿಡುವುದು ವಿಪರ್ಯಾಸವಾಗಿದೆ ಎಂದು ಹಾಸನದ ಯುವ ಮುಖಂಡ ಸಚಿನ್ ಸರಗೂರು ಬೇಸರ ವ್ಯಕ್ತಪಡಿಸಿದ್ದಾರೆ.

    ಕೆಂಪೇಗೌಡರ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಒಕ್ಕಲಿಗ ಮುಖಂಡರು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜಕೀಯದಲ್ಲಿಯೂ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಮುಖಂಡರು, ತಮ್ಮ ಸಮುದಾಯದ ಅಭಿವೃದ್ಧಿಗೆ ಎಷ್ಟು ಒತ್ತನ್ನು ನೀಡುತ್ತಿದ್ದಾರೆ ಎನ್ನುವುದನ್ನು ಯೋಚಿಸಬೇಕಿದೆ ಎಂದು ಅವರು ಹೇಳಿದರು.

    ಕೆಂಪೇಗೌಡರನ್ನು ಕೇವಲ ಬೆಂಗಳೂರಿಗೆ ಮಾತ್ರವೇ ಸೀಮಿತಗೊಳಿಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಒಕ್ಕಲಿಗ ಸಮುದಾಯದ ಓಲೈಕೆಗೆ ಕೆಂಪೇಗೌಡರ ಬಗ್ಗೆ ಮಾತನಾಡುವ ನಾಯಕರು, ಈವರೆಗೆ ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಿದ್ದಾರೆ. ಹಾಸನ ಜಿಲ್ಲೆ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಯಾಗಿದ್ದು, ಇಲ್ಲಿ ಕೆಂಪೇಗೌಡರ ಪುತ್ಥಳಿಯೇ ಇಲ್ಲ. ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಫೋಟೋಗೆ ಹಾರಾರ್ಪಣೆ ಮಾಡಿ ಆಚರಿಸುವಂತಹ ಸ್ಥಿತಿ ಇಂದಿಗೂ ಹಾಸನದಲ್ಲಿದೆ ಎಂದು ಸಚಿನ್ ಸರಗೂರು ಆಕ್ರೋಶ ವ್ಯಕ್ತಪಡಿಸಿದರು.

    ಒಕ್ಕಲಿಗ ಸಮುದಾಯವು ಕೃಷಿಯನ್ನು ಅವಲಂಬಿಸಿರುವ ಸಮುದಾಯವಾಗಿದೆ. ಸಮುದಾಯದ ಯುವಕರು ಉತ್ತಮ ಶಿಕ್ಷಣವನ್ನು ಪಡೆದುಕೊಂಡರೂ,  ಉದ್ಯೋಗ ಸಿಗದೇ ಕೂಲಿ ಕೆಲಸಗಳನ್ನು ಆಶ್ರಯಿಸುವಂತಹ ಸ್ಥಿತಿ ಇಂದಿಗೂ ಇದೆ. ಒಕ್ಕಲಿಗರ ಸಂಘದಲ್ಲಿ ಚುನಾವಣೆಯಲ್ಲಿ ಗೆದ್ದವರು ಸಮುದಾಯದ ಯುವಕರಿಗೆ ಉದ್ಯೋಗ ಭದ್ರತೆ ಒದಗಿಸಲು ಏನು ಕ್ರಮಕೈಗೊಂಡಿದ್ದಾರೆ? ನಮ್ಮ ಯುವಕರಿಗೆ ಉದ್ಯೋಗ ಇಲ್ಲ ಎಂದು ಸರ್ಕಾರಕ್ಕೆ ಎಷ್ಟು ಮನವಿ ನೀಡಿದ್ದಾರೆ? ಎಷ್ಟು ಪ್ರತಿಭಟನೆ ಮಾಡಿದ್ದಾರೆ? ಯುವಕರಿಗೆ ಉದ್ಯೋಗ ಕೊಡಿಸಲು ಯಾಕೆ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

    ಹಾಸನದಲ್ಲಿ ಒಕ್ಕಲಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ  ಸರಿಯಾದ ಹಾಸ್ಟೆಲ್ ಸೌಲಭ್ಯಗಳು ಕೂಡ ಇಲ್ಲವಾಗಿದೆ. ಇದರಿಂದಾಗಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು 40ರಿಂದ 45 ಕಿ.ಮೀ. ದೂರದಿಂದ ದಿನ ನಿತ್ಯ ಪ್ರಯಾಣಿಸುತ್ತಿದ್ದಾರೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗುತ್ತಿದ್ದರೂ, ಬಸ್ ವ್ಯವಸ್ಥೆ ಮಾಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿಲ್ಲ. ಸಮುದಾಯದ ಸಂಘಟನೆಯ ಮುಖಂಡರುಗಳಾಗಿ, ಮಕ್ಕಳ ಶಿಕ್ಷಣದ ಅಭಿವೃದ್ಧಿಯ ಬಗ್ಗೆ ಕಾಳಜಿವಹಿಸುತ್ತಿಲ್ಲ. ಅವರ ಶೈಕ್ಷಣಿಕ ಏಳಿಗೆಗಾಗಿ ಪ್ರೋತ್ಸಾಹಿಸುತ್ತಿಲ್ಲ ಒಕ್ಕಲಿಗರ ಸಂಘಕ್ಕೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಚುನಾವಣೆಯ ಸಂದರ್ಭ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸಿದರೂ, ಗೆದ್ದ ಬಳಿಕ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕೆ ಕೆಲಸ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು.

    ಕೆಂಪೇಗೌಡರ ಹೆಸರಿನಲ್ಲಿ ರಾಜಕೀಯ ಮಾಡುವ ಮುಖಂಡರಾಗಲಿ, ರಾಜಕಾರಣಿಗಳಾಗಲಿ, ಒಕ್ಕಲಿಗ ಸಂಘದ ನಾಯಕರಾಗಲಿ, ಹಾಸನದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಿಸಲು ವಿಫಲರಾಗಿದ್ದಾರೆ. ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಹಾರಾರ್ಪಣೆ ಮಾಡಲು ಕೂಡ ಒಂದೇ ಒಂದು ಪುತ್ಥಳಿ ಇಲ್ಲ. ಕೆಂಪೇಗೌಡರ ಹೆಸರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವವರು ಮೊದಲು ಸಮುದಾಯದ ಬಗ್ಗೆ ಕಾಳಜಿ ವಹಿಸಬೇಕು. ಸಮುದಾಯದ ಅಭಿವೃದ್ಧಿಯ ಮಾಡುವ ಮೂಲಕ ನಿಜ ಅರ್ಥದಲ್ಲಿ ಕೆಂಪೇಗೌಡರ ಜಯಂತಿ ಆಚರಿಸಬೇಕಿದೆ. ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡರ ಜಯಂತಿ ಮಾಡಿದರೆ ಅದು ಕೇವಲ ಕಾಟಾಚಾರದ ಕಾರ್ಯಕ್ರಮವಾಗಬಹುದಷ್ಟೆ ಎಂದು ಸಚಿನ್ ಸರಗೂರು ಅಭಿಪ್ರಾಯಪಟ್ಟರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ದೀಪಾವಳಿ ಪಟಾಕಿ ಇಷ್ಟವೇ? ಆದ್ರೆ ನಿಯಮಗಳು ಕಷ್ಟ | ಉಲ್ಲಂಘಿಸಿದರೆ ಕಠಿಣ ಕ್ರಮ

    October 30, 2026

    ಹೆಚ್ಚಳದ ಮೊತ್ತ ರೈತರಿಗೇ ಸಿಗಲಿದೆ: ಹಾಲಿನ ದರ ಏರಿಕೆ ಪ್ರಶ್ನೆಗೆ ಸಿಎಂ ಡಿಕೆಶಿ ಉತ್ತರ

    October 30, 2026

    ‘ಐ ಲವ್ ಯೂ ಚಿನ್ನು’ ಎಂದು ಮೆಸೇಜ್ ಮಾಡುತ್ತಿದ್ದ ಉಪನ್ಯಾಸಕನ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರು!

    October 30, 2026

    Leave A Reply Cancel Reply

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು: ಅಣ್ಣಪ್ಪ ಸ್ವಾಮಿ — ಮಸಣಿಕಮ್ಮ ದೇವಿ ದೇವಸ್ಥಾನದಲ್ಲಿ ಪವಾಡ !

    November 2, 2026

    ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೂಲಿಹಳ್ಳಿ ಗ್ರಾಮದ ಅಣ್ಣಪ್ಪ ಸ್ವಾಮಿ ಹಾಗೂ ಮಸಣಿಕಮ್ಮ ದೇವಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಅತ್ಯಂತ…

    ಅಂಗನವಾಡಿ ಕಾರ್ಯಕರ್ತರಿಗೆ ‘ಪೋಷಕತ್ವ ಯೋಜನೆ’ ಕುರಿತು ಅರಿವು ಕಾರ್ಯಕ್ರಮ

    November 2, 2026

    ಮನುಷ್ಯರಿಗಿಂತ ವೇಗವಾಗಿ ಯೋಚಿಸುತ್ತವೆಯೇ ಕಾಗೆಗಳು? ವಿಜ್ಞಾನಿಗಳ ಅಧ್ಯಯನದಲ್ಲಿ ಅಚ್ಚರಿ!

    November 2, 2026

    ನೃತ್ಯಕ್ಕೆಂದೇ ಹುಟ್ಟಿದ ಗ್ರಾಮವಿದು! ಮರ, ಮಣ್ಣು, ಕಟ್ಟಡಗಳಲ್ಲೂ ಅಡಗಿದೆ ಲಯ! ಇಲ್ಲಿ ಮರಗಳೂ ನೃತ್ಯ ಮಾಡುತ್ತವೆ!

    November 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.