KPSC ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಾರಿ ಕೆಪಿಎಸ್ಸಿ ತನ್ನ ಪ್ರಕಟಣೆಯಲ್ಲಿ ಒಟ್ಟಾರೆ 384 ಹುದ್ದೆಗಳನ್ನು ಪ್ರಕಟಿಸಿದ್ದು, ಅದರಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಮುಂಚೆ ಅರ್ಜಿ ಸಲ್ಲಿಸಲು ಏಪ್ರಿಲ್ 3 ನ್ನು ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ ಇದೀಗ ವಿವಿಧ ಕಾರಣಗಳಿಂದ ದಿನಾಂಕವನ್ನು ಏಪ್ರಿಲ್ 15ರವರೆಗೆ ವಿಸ್ತರಣೆ ಮಾಡಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಪ್ರಸ್ತುತ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಮತ್ತು ಚುನಾವಣಾ ಸಂಬಂಧಿತ ಕೆಲಸಗಳಿರುವುದರಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಏ.15ರ ವರೆಗೂ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳಿಗೆ ಬೇಕಾಗಿರುವ ವಯೋಮಿತಿ, ಸಂಬಳ, ಅರ್ಜಿ ಶುಲ್ಕ, ವಿದ್ಯಾರ್ಹತೆ, ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ವಯೋಮಿತಿ ನಿಗದಿ:
KPSC ನೇಮಕಾತಿಯ ಅಧಿಸೂಚನೆಯಂತೆ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 38 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ವಯೋಮಿತಿಯಲ್ಲಿ ಸಡಿಲಿಕೆ:
SC-ST, ಪ್ರವರ್ಗ-1ಕ ಅಭ್ಯರ್ಥಿಗಳಿಗೆ : 5 ವರ್ಷಗಳು
2A, 2B, 3A, 3B ಅಭ್ಯರ್ಥಿಗಳಿಗೆ : 3ವರ್ಷಗಳು
PWD ಅಭ್ಯರ್ಥಿಗಳಿಗೆ : 10 ವರ್ಷಗಳು
ಅರ್ಜಿ ಶುಲ್ಕಗಳು :
ಸಾಮಾನ್ಯ ಅಭ್ಯರ್ಥಿಗಳಿಗೆ : ರು. 600/-
ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ : ರು. 2.300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರು. 50/-
SC/ ST, ಪ್ರವರ್ಗ-1, PWD ಅಭ್ಯರ್ಥಿಗಳಿಗೆ : ಉಚಿತ
ಪರೀಕ್ಷಾ ವಿಧಾನ:
ಮೂರು ಹಂತಗಳಲ್ಲಿ ಪರೀಕ್ಷೆ
1-ಪೂರ್ವಭಾವಿ ಪರೀಕ್ಷೆ
2-ಮುಖ್ಯ ಪರೀಕ್ಷೆ
3-ಸಂದರ್ಶನ
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಎರಡು ದಿನಾಂಕಗಳನ್ನು ಮರೆಯದಿರಿ:
1) ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 15, 2024
2) ಪೂರ್ವಭಾವಿ ಪರೀಕ್ಷೆ ನಡೆಯುವ ದಿನ: ಜುಲೈ 7, 2024
ಒಟ್ಟಾರೆ ಗೆಜೆಟೆಡ್ ಹುದ್ದೆಗಳು:
ಗ್ರೂಪ್ ಎ – 159
ಗ್ರೂಪ್ ಬಿ – 225
ಒಟ್ಟು ಹುದ್ದೆಗಳು – 384
ಗ್ರೂಪ್ ಎ ಹುದ್ದೆಗಳು:
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು- ವಾಣಿಜ್ಯ ತೆರಿಗೆ ಇಲಾಖೆ- 41, ಸಹಾಯಕ ಆಯುಕ್ತರು- ಸಿಬ್ಬಂದಿ & ಆಡಳಿತ ಸುಧಾರಣೆ- 40,ಸಹಾಯಕ ನಿರ್ದೇಶಕರು- ಖಜಾನೆ ಇಲಾಖೆ- 2,ಡಿವೈಎಸ್‌ಪಿ- ಒಳಾಡಳಿತ ಇಲಾಖೆ-9, ಸಹಾಯಕ ನಿರ್ದೇಶಕರುಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ- 20, ಕಾರ್ಯ ನಿರ್ವಾಹಕ ಅಧಿಕಾರಿ/ಸಹಾಯ ಕಾರ್ಯದರ್ಶಿ- ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ-40, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ ಪ್ರಾಂಶುಪಾಲರು/PETC- ಹಿಂದುಳಿದ ವರ್ಗಗಳ ಇಲಾಖೆಗೆ-7 ಹುದ್ದೆಗಳಾಗಿವೆ.
ಗ್ರೂಪ್ ಬಿ ದರ್ಜೆ ಹುದ್ದೆಗಳು:
ತಹಶೀಲ್ದಾರ್, ಗ್ರೇಡ್ 2-ಕಂದಾಯ ಇಲಾಖೆ- 51, ಯುವ ಸಬಲೀಕರಣ & ಕ್ರೀಡಾ ಇಲಾಖೆ- 4, ಮುಖ್ಯಾಧಿಕಾರಿ ಗ್ರೇಡ್-1, ನಗರಾಭಿವೃದ್ಧಿ ಇಲಾಖೆ-1,
ಸಹಕಾರ ಸಂಘಗಳ ಸಹಾಯಕ ನಿಬಂಧ- ಸಹಕಾರ ಇಲಾಖೆ 12, ಸಹಾಯಕ ನಿರ್ದೇಶಕರು-ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ-9 ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ(ಅಬಕಾರಿ)- 10,
ಉದ್ಯೋಗಾಧಿಕಾರಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ & ಜೀವನೋಪಾಯ- 3, ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ -9, ಸಹಾಯಕ ನಿರ್ದೇಶಕರು,
ವಾಣಿಜ್ಯ ತೆರಿಗೆ ಅಧಿಕಾರಿ – 59, ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ -2, ಕಾರ್ಮಿಕ ಅಧಿಕಾರಿ- ಕಾರ್ಮಿಕ ಇಲಾಖೆ- 4, ಸಹಾಯಕ ಅಧೀಕ್ಷಕರು- ಒಳಾಡಳಿತ ಇಲಾಖೆ (ಬಂಧೀಖಾನೆ)- 3, ಹುದ್ದೆಗಳಿಗೆ ಕೆಪಿಎಸ್ಸಿ ಅರ್ಜಿ ಆಹ್ವಾನಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296