nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ

    May 4, 2026

    ಮೊಬೈಲ್ ರಿಪೇರಿ, ಸರ್ವಿಸ್ ತರಬೇತಿಗೆ ಅರ್ಜಿ ಆಹ್ವಾನ

    May 4, 2026

    ಶೃಂಗೇರಿ ಕ್ಷೇತ್ರದಲ್ಲಿ ಮರು ಎಣಿಕೆ ಬಳಿಕ ಬಿಜೆಪಿಯ ಡಿ.ಎನ್. ಜೀವರಾಜ್‌ ಗೆ ಗೆಲುವು

    May 4, 2026
    Facebook Twitter Instagram
    ಟ್ರೆಂಡಿಂಗ್
    • ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ
    • ಮೊಬೈಲ್ ರಿಪೇರಿ, ಸರ್ವಿಸ್ ತರಬೇತಿಗೆ ಅರ್ಜಿ ಆಹ್ವಾನ
    • ಶೃಂಗೇರಿ ಕ್ಷೇತ್ರದಲ್ಲಿ ಮರು ಎಣಿಕೆ ಬಳಿಕ ಬಿಜೆಪಿಯ ಡಿ.ಎನ್. ಜೀವರಾಜ್‌ ಗೆ ಗೆಲುವು
    • ಬಾಗಲಕೋಟೆ ಉಪಚುನಾವಣೆ: ಬಿಜೆಪಿಗೆ ಶಾಕ್ ನೀಡಿದ ಕಾಂಗ್ರೆಸ್; ವೀರಣ್ಣ ಚರಂತಿಮಠ ವಿರುದ್ಧ ಉಮೇಶ್ ಮೇಟಿಗೆ ಭರ್ಜರಿ ಜಯ!
    • ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ
    • ತಿಪಟೂರು: ರೈತರನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ: ಕೆ.ಟಿ.ಶಾಂತಕುಮಾರ್ ಎಚ್ಚರಿಕೆ
    • ಪಾವಗಡದಲ್ಲಿ ಭೂಮಾಫಿಯಾ ದಂಧೆ: ಗೌಡೆಟಿ ಪ್ರಭಾಕರ್ ಗಂಭೀರ ಆರೋಪ
    • ಮೇ 10ರಂದು ಮೃತ್ಯುಂಜಯ ಶ್ರೀಗಳ ಗುರುವಂದನೆ: ಬೆಳ್ಳಾವಿ ಕಾರದ ವೀರ ಬಸವ ಮಹಾಸ್ವಾಮಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಲೋಕಸಭಾ ಚುನಾವಣಾ ಪ್ರಚಾರ ಸಭೆಗೆ ಚಾಲನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ
    ರಾಜ್ಯ ಸುದ್ದಿ March 14, 2024

    ಲೋಕಸಭಾ ಚುನಾವಣಾ ಪ್ರಚಾರ ಸಭೆಗೆ ಚಾಲನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ

    By adminMarch 14, 2024No Comments2 Mins Read
    korategere

    ಕೊರಟಗೆರೆ: ಪಟ್ಟಣದ ರಾಜೀವ್ ಭವನ ಅವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಪ್ರಚಾರ ಚಾಲನೆ ಕಾರ್ಯಕ್ರಮವನ್ನು ಸಚಿವರುಗಳಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಉದ್ಘಾಟಿಸಿದರು.

    ಕೊರಟಗೆರೆ ರಾಜ್ಯದ ಜನರು ಶೇ. 18 ರಷ್ಟು ಜಿಎಸ್ಟಿ ಮುಖಾಂತರ 4.5 ಲಕ್ಷ ಕೋಟಿ ತೆರಿಗೆ ಹಣವನ್ನು ಕೇಂದ್ರಕ್ಕೆ ಕಟ್ಟಿದರೆ ಅದರಲ್ಲಿ ಕೇಂದ್ರ ಸರ್ಕಾರ ನಮಗೆ ನೀಡುವುದು ಕೇವಲ 50 ಸಾವಿರ ಕೋಟಿ ಮಾತ್ರವಾಗಿದ್ದು ಉಳಿದ ಹಣವನ್ನು ಇತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.


    Provided by
    Provided by

    ಅವರು ಕೊರಟಗೆರೆ ಪಟ್ಟಣದ ರಾಜೀವ ಭವನ ಆವರಣದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಗೆ ಚಾಲನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೊದಲಿನಿಂದಲೂ ಅನ್ಯಾಯ ಮಾಡುತ್ತಿದ್ದು ರಾಜ್ಯದಲ್ಲಿ ಬರವು ಬೀಕರ ಪರಿಸ್ಥಿತಿ ಎದುರಿಸುತ್ತಿದ್ದು 236 ತಾಲೂಕು ಗಳ ಪೈಕಿ 226 ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿದ್ದು ಕೇಂದ್ರವು ಎಸ್.ಡಿ.ಆರ್.ಫೆ ನಿಂದ ಒಂದು ರೂ ಸಹ ರಾಜ್ಯಕ್ಕೆ ನೀಡಿಲ್ಲ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರವು 5 ಗ್ಯಾರಂಟಿಗಳ ಜೋತೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 52 ಸಾವಿರ ರೂಗಳನ್ನು ಹಾಕಿದ್ದೇವೆ, ಇಂದು ಜಿಲ್ಲಾ ಜೆಡಿಎಸ್ ಕಾರ್ಯಾದ್ಯಕ್ಷ ಮಹಾಲಿಂಗಪ್ಪ ಮತ್ತು ಮಾಜಿ ಜಿ.ಪಂ.ಅಧ್ಯಕ್ಷೆ ಪ್ರೇಮಾ ರವರುಗಳು ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವು ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಿದೆ, ಹಿಂದುಳಿದ ವರ್ಗಗಳ ನಾಯಕರಾಗಿದ್ದ ಮಹಾಲಿಂಗಪ್ಪ ಜೆಡಿಎಸ್ ಪಕ್ಷವು ಕೋಮುವಾದಿಗಳ ಜೋತೆ ಕೈ ಜೋಡಿಸಿದಕ್ಕಾಗಿ ಬೇಸರಗೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ, 2023ರ ತುಮಕೂರು ಲೋಕಚಭಾ ಕ್ಷೇತ್ರದ ಅಭ್ಯರ್ಥಿಯಾದ ಎಸ್.ಪಿ.ಮುದ್ದಹನುಮೇಗೌಡರು 2014 ರಿಂದ 2019 ರವರೆಗೆ ತುಮಕೂರು ಲೋಕಸಭಾ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ, ತುಮಕೂರು ಲೋಕಸಭೆಯನ್ನು ತಮ್ಮ ವಾಕ್ ಸಮರ ಮತ್ತು ರೈತರ ಹಾಗೂ ಬಡವರ ಬಗ್ಗೆ ಸಂಸತ್ ನಲ್ಲಿ ಮಾತನಾಡಿ ಇಡೀ ದೇಶಕ್ಕೆ ತೋರಿಸಿದ್ದಾರೆ, ವಿರೋದ ಪಕ್ಷದಲ್ಲಿದ್ದರೂ ಕೇಂದ್ರ ಸರ್ಕಾರವನ್ನು ಯುಎನ್ ಲ್ಲಿ ಪ್ರತಿನಿಧಿಸಿದ್ದಾರೆ, ಕೆಲವು ಕಾರಣಾಂತದಿಂದ ಪಕ್ಷ ತೋರೆದರೂ ಮತ್ತೆ ಗೋಡಿಗೆ ಬಂದು ಅಭ್ಯರ್ಥಿಯಾಗಿದ್ದು ಅವರನ್ನು ಗೆಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.

    ಸಚಿವ ಕೆ.ಎನ್ ರಾಜಣ್ಣ ಮಾತನಾಡಿ ಜೆಡಿಎಸ್ ಪಕ್ಷ ಒಂದು ಮುಳುಗುವ ಹಡಗಿನ ಪಕ್ಷವಾಗಿದೆ, ಅದು ಈಗ ಕೋಮುವಾಗಿಗಳ ಜೊತೆ ಕೈಜೋಡಿಸಿದೆ ಬಿಜೆಪಿ ಪಕ್ಷವು ಸುಳ್ಳು ಹಿಂದುತ್ವದಲ್ಲಿ ಯುವಕರ ದಾರಿ ತಪ್ಪಿಸಿದರೆ ಜೆಡಿಎಸ್ ಪಕ್ಷವು ಅನುಕೂಲಕ್ಕೆ ತಕ್ಕಂತೆರ ತನ್ನ ನೀತಿಗಳನ್ನು ಬದಲಾಯಿಸಿಕೊಳ್ಳುತ್ತದೆ, ದೇವೇಗೌಡರು ಮಹಾನ್ ಸುಳ್ಳಿನ ವ್ಯಕ್ತಿಯಾಗಿದ್ದು ಮುಂದಿನ ಜನ್ಮದಲ್ಲಿ ಮುಸ್ಲಿಂ ನಾಗಿ ಹುಟ್ಟುವೇ, ಮೋದಿ ಪ್ರಧಾನಿ ಯಾದರ ದೇಶವನ್ನೇ ಬಿಟ್ಟು ಹೊರಟುಹೊಗುವೇ ಎಂದು ಜನರಿಗೆ ಸುಳ್ಳು ಹೇಳುತ್ತಾ ಈಗ ಕೋಮುವಾದಿಗಳ ಜೋತೆ ಕೈಜೋಡಿಸಿ ದೇಶಕ್ಕೆ ಟೋಪಿ ಹಾಕುವ ಮಹಾನ್ ಸುಳ್ಳುಗಾರ ಮೋದಿಜೋತೆ ಕೈಜೋಡಿಸಿದ್ದಾರೆ, ಕಾಂಗ್ರೆಸ್ ಪಕ್ಷವು ಬಡವರ ಪಕ್ಷವಾಗಿದ್ದು ಶೋಷಿತ ವರ್ಗದವರ ಪರ ನಿಲ್ಲುವ ಪಕ್ಷವಾಗಿದೆ, ಈ ಬಾರಿ ಜನರು ಕಾಂಗ್ರೆಸ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದು ತುಮಕೂರಿನಲ್ಲಿ ಮುದ್ದಹನುಮೇಗೌಡರ ಗೆಲುವು ಖಚಿತ ಎಂದರು.

    ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ ಪಕ್ಷಾಂತರ ಮಾಡಿ ಮರಳಿ ಪಕ್ಷಕ್ಕೆ ಬಂದಿರುವುದು ಬೇಸರ ತಂದಿದೆ, ನನ್ನ ಮೇಲೆ ತುಮಕೂರು ಜಿಲ್ಲೆಯ ಜನತೆ ಮತ್ತು ವೇದಿಕೆಯ ಮೇಲಿರುವ ನಾಯಕರುಗಳು ಭರವಸೆ ಇಟ್ಟಿದ್ದಾರೆ ಕಳೆದ ಬಾರಿಯ ಲೋಸಭಾ ಸದಸ್ಯನಾಗಿದ್ದ ಕಾಲದಲ್ಲಿ ಶೇ.96 ರಷ್ಟು ಸಂಸತ್ ಕಲಾಪದಲ್ಲಿ ಕಳೆದಿದ್ದೇನೆ 700 ಪ್ರಶ್ನೆಯನ್ನು ಹಾಕಿದ್ದೇನೆ, 100 ಗಂಭೀರ ವಿಚಾರಗಳನ್ನು ಚರ್ಚಿಸಿದ್ದೇನೆ, ರೈತರ, ಬಡವರ, ಶೋಷಿತರ ಪರವಾಗಿ ಹೋರಾಡಿದ್ದೇವೆ ಮುಂದೆಯೂ ಅದೇ ರೀತಿ ಮಾಡುತ್ತೇನೆ ಎಂದರು.

    ಸಮಾರಂಭದಲ್ಲಿ ತುಮಕೂರು ಜಿಲ್ಲೆಯ ಜೆಡಿಎಸ್ ಪಕ್ಷದ ಕಾಯಾಧ್ಯಕ್ಷ ಮಹಾಲಿಂಗಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಪೇಮಾ ಸೇರಿದಂತೆ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

    ಕಾರ್ಯಕ್ರಮದಲ್ಲಿ ಶಾಸಕರುಗಳಾದ ಶ್ರಿನಿವಾಸ್, ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ಮಾಜಿ ಶಾಸಕರುಗಳಾದ ಕಿರಣ್ಕುಮಾರ್, ಗಂಗಹನುಮಯ್ಯ, ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಆದ್ಯಕ್ಷ ಚಂದ್ರಶೇಖರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮುಖಂಡರುಗಳಾದ ವೇಣುಗೋಪಾಲ್, ಸಂತೋಷ್ ಜಯಚಂದ್ರ, ಇಕ್ಬಾಲ್ ಅಹಮದ್ ಸೇರಿದಂತೆ ಇನ್ನಿತರರು ಹಾಜರಿದ್ದರು.

    ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    admin
    • Website

    Related Posts

    ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ

    May 4, 2026

    ಬಾಗಲಕೋಟೆ ಉಪಚುನಾವಣೆ: ಬಿಜೆಪಿಗೆ ಶಾಕ್ ನೀಡಿದ ಕಾಂಗ್ರೆಸ್; ವೀರಣ್ಣ ಚರಂತಿಮಠ ವಿರುದ್ಧ ಉಮೇಶ್ ಮೇಟಿಗೆ ಭರ್ಜರಿ ಜಯ!

    May 4, 2026

    ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು

    April 29, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ

    May 4, 2026

    ಬೆಂಗಳೂರು: ಹಾಸನ ಜಿಲ್ಲೆಯ ಯಸಳೂರು ವಲಯದಲ್ಲಿ 2023 ಡಿಸೆಂಬರ್ 4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ, ಪಶುವೈದ್ಯರ,…

    ಮೊಬೈಲ್ ರಿಪೇರಿ, ಸರ್ವಿಸ್ ತರಬೇತಿಗೆ ಅರ್ಜಿ ಆಹ್ವಾನ

    May 4, 2026

    ಶೃಂಗೇರಿ ಕ್ಷೇತ್ರದಲ್ಲಿ ಮರು ಎಣಿಕೆ ಬಳಿಕ ಬಿಜೆಪಿಯ ಡಿ.ಎನ್. ಜೀವರಾಜ್‌ ಗೆ ಗೆಲುವು

    May 4, 2026

    ಬಾಗಲಕೋಟೆ ಉಪಚುನಾವಣೆ: ಬಿಜೆಪಿಗೆ ಶಾಕ್ ನೀಡಿದ ಕಾಂಗ್ರೆಸ್; ವೀರಣ್ಣ ಚರಂತಿಮಠ ವಿರುದ್ಧ ಉಮೇಶ್ ಮೇಟಿಗೆ ಭರ್ಜರಿ ಜಯ!

    May 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.